ಬಾಸ್‌ನಿಂದ ಕಿರುಕುಳ, ಬ್ರಿಟನ್‌ನ ರಾಯಲ್ ಮೇಲ್‌ನಿಂದ 25 ಕೋಟಿ ರೂ ಪರಿಹಾರ ಪಡೆದ ಭಾರತೀಯ ಉದ್ಯೋಗಿ!
ಬ್ರಿಟನ್‌ನ ರಾಯಲ್ ಮೇಲ್‌ನ ಭಾರತೀಯ ಮೂಲದ ಮಹಿಳಾ ಉದ್ಯೋಗಿಯೊಬ್ಬರು, ತನ್ನ ಬಾಸ್‌ನಿಂದ ತನಗೆ ಹಿಂಸೆಯಾಗಿದೆ ಎಂದು ನ್ಯಾಯಾಲಯದ ಮುಂದೆ ಹೇಳಿಕೊಂಡಿದ್ದು 25 ಕೋಟಿ ರೂ ಪರಿಹಾರವನ್ನು ಗೆದ್ದಿದ್ದಾರೆ.
ಬ್ರಿಟನ್‌ನ ರಾಯಲ್ ಮೇಲ್‌ನ (ಅಂಚೆ ಸೇವೆ) ಭಾರತೀಯ ಮೂಲದ ಮಹಿಳಾ ಉದ್ಯೋಗಿಯೊಬ್ಬರು, ತನ್ನ ಬಾಸ್‌ನಿಂದ ತನಗೆ ಹಿಂಸೆಯಾಗಿದೆ ಎಂದು ಹೇಳಿಕೊಂಡಿದ್ದು 25 ಕೋಟಿ ರೂ ಪರಿಹಾರವನ್ನು ಗೆದ್ದಿದ್ದಾರೆ. ಸಹೋದ್ಯೋಗಿಯೊಬ್ಬರು ತಮ್ಮ ಬೋನಸ್ ಅನ್ನು ಕಾನೂನುಬಾಹಿರವಾಗಿ ಪಡೆದುಕೊಂಡಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ ನಂತರ ತನ್ನ ಬಾಸ್ ತನ್ನನ್ನು ಬೆದರಿಸಿದ್ದಾನೆ ಮತ್ತು ಕಿರುಕುಳ ನೀಡಿದ್ದಾನೆ ಎಂದು ಕಾಮ್ ಜೂತಿ ಆರೋಪಿಸಿದ್ದಾರೆ. ಇದು ರಾಯಲ್ ಮೇಲ್‌ನಿಂದ ಇದುವರೆಗಿನ ಅತಿದೊಡ್ಡ ಪಾವತಿಯಾಗಿದೆ ಎಂದು ಹೇಳಲಾಗುತ್ತದೆ.
ಭಾರತೀಯ ಮೂಲದ ಉದ್ಯೋಗಿ ಕಾಮ್ ಜೂತಿ ಎಂಬವರು ಬರೋಬ್ಬರಿ ಎಂಟು ವರ್ಷಗಳ ಬಳಿಕ ಉದ್ಯೋಗ ನ್ಯಾಯಮಂಡಳಿಯಲ್ಲಿ ಹೋರಾಡಿ ಈ ಬೃಹತ್ ಮೊತ್ತದ ಪರಿಹಾರವನ್ನು ಪಡೆದುಕೊಂಡಿದ್ದಾರೆ.
ಭಾರತದ ಮೊದಲ ಮಹಿಳಾ ಸರಣಿ ಹಂತಕಿ ಬೆಂಗಳೂರಿನ ಸೈನೈಡ್ ಮಲ್ಲಿಕಾ!
2013ರಲ್ಲಿ ಲಂಡನ್‌ನಲ್ಲಿರುವ ತನ್ನ ಮಾರ್ಕೆಟ್‌ರೀಚ್ ಘಟಕದಲ್ಲಿ ಮಾಧ್ಯಮ ತಜ್ಞರಾಗಿ ಜೂತಿ 50,000 ಪೌಂಡ್‌ಗಳಿಗೆ ಕೆಲಸ ಮಾಡಲು ಪ್ರಾರಂಭಿಸಿದರು. 2019 ರಲ್ಲಿ, ಸುಪ್ರೀಂ ಕೋರ್ಟ್ ವಿಚಾರಣೆಯೊಂದರಲ್ಲಿ ಜೂತಿ ಸೇರಿಕೊಂಡ ನಂತರ ಸಹದ್ಯೋಗಿಯೊಬ್ಬರು ಇನ್ಸೆಂಟಿವ್ ವಿಚಾರದಲ್ಲಿ ಸಂಸ್ಥೆಯ ನೀತಿಯನ್ನು ಉಲ್ಲಂಘಿಸಿದ್ದಾರೆ ಎಂದು ಜೂತಿ ಗಮನಕ್ಕೆ ಬಂತು. ಇದು ಸಹೋದ್ಯೋಗಿಗೆ ಫರ್ಪಾಮೆನ್ಸ್ ಗುರಿಗಳನ್ನು ಪೂರೈಸಲು ಮತ್ತು ಬೋನಸ್ ಅನ್ನು ಪಡೆದುಕೊಳ್ಳಲು ಸಹಾಯ ಮಾಡಿದೆ. ಮಾತ್ರವಲ್ಲ ಕಂಪೆನಿಯನ್ನು ವಂಚಿಸಿದಂತೆ ಎಂದು ತಿಳಿಯಿತು.
ಜೂತಿ ಅವರ ಅನುಮಾನ ಮತ್ತು ಕಾಳಜಿಯನ್ನು ಬಳಿಕ TMI ತಜ್ಞರು ಕೂಡ ದೃಢಪಡಿಸಿದರು. ಇದು ತಿಳಿದ ತಕ್ಷಣ ಜೂತಿಗೆ ಒತ್ತಡಗಳು ಬರಲಾರಂಭಿಸಿದವು. ರಾಯಲ್ ಮೇಲ್‌ನಲ್ಲಿ ತನ್ನ ಬಾಸ್‌ನ ನಡವಳಿಕೆಯ ಬಗ್ಗೆ ಆಕೆ ಕಳವಳವನ್ನು ವ್ಯಕ್ತಪಡಿಸಿದಾಗ, ಆಕೆಗೆ ಹೊಸ ಲೈನ್ ಮ್ಯಾನೇಜರ್ ಅನ್ನು ನೀಡಲಾಯಿತು ಮತ್ತು ಅವಳು ನಿರೀಕ್ಷಿತ ಪ್ರಗತಿ ಕಾಣುತ್ತಿಲ್ಲ ಎಂದು ಹೇಳಲಾಯಿತು. ಮಾರ್ಚ್ 2014 ರಲ್ಲಿ ಜೂತಿ ಕೆಲಸಕ್ಕೆ ಸಂಬಂಧಿಸಿದ ಒತ್ತಡ, ಆತಂಕ ಮತ್ತು ಖಿನ್ನತೆಯೊಂದಿಗೆ ರಾಜೀನಾಮೆ ನೀಡಿದರು.
ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ 377 ಕೋಟಿ ಕಾರ್ಪಸ್ ಫಂಡ್ ಪೊಲಿಟಿಕ್ಸ್, ಏನಿದು ಗಲಾಟೆ?
ವರದಿಯ ಪ್ರಕಾರ ಬಾಸ್‌ನ ವರ್ತನೆಯಿಂದ ಜೂತಿ ಮೇಲೆ ದುರಂತ ಪರಿಣಾಮ ಬೀರಿದೆ ಎಂದು ನ್ಯಾಯಮಂಡಳಿ ಗಮನಿಸಿದೆ. ನ್ಯಾಯಾಧಿಕರಣದ ಆದೇಶದಂತೆ ರಾಯಲ್ ಮೇಲ್ ಜೂತಿಗೆ ಪಾವತಿಸಬೇಕಾದ ಒಟ್ಟು 2,365,614.13 ಪೌಂಡ್‌ಗಳನ್ನು ಪಾವತಿಸಿದೆ ಎಂದು ಹೇಳಿದೆ.
ಒಟ್ಟು ರಾಯಲ್ ಮೇಲ್ 250,000 ಪೌಂಡ್‌ಗಳನ್ನು (ರೂ. 24 ಕೋಟಿಗಿಂತ ಹೆಚ್ಚು) ಜೂತಿಗೆ ಪಾವತಿಸಲಿದೆ ಎಂದು ನ್ಯಾಯಮಂಡಳಿಯ ಹೇಳಿದ್ದು, ಈ ನಿರ್ದಿಷ್ಟ ಮೊತ್ತಕ್ಕೆ ತಡೆಯಾಜ್ಞೆ ಅನ್ವಯಿಸುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ. ವಿಚಾರಣೆಯ ದಿನಾಂಕದ 14 ದಿನಗಳಲ್ಲಿ ರಾಯಲ್ ಮೇಲ್ ಮೊತ್ತವನ್ನು ಪಾವತಿಸಲು ತಿಳಿಸಲಾಗಿದೆ.
ರಾಯಲ್ ಮೇಲ್ ಅಂಚೆ ಸೇವೆಯು ತನ್ನ ನಡವಳಿಕೆಯಲ್ಲಿ ದುರುದ್ದೇಶಪೂರಿತ, ಅವಮಾನಕರ ಮತ್ತು ದಬ್ಬಾಳಿಕೆಯ ಕೆಲಸ ಮಾಡುತ್ತಿದೆ ಎಂದು ನ್ಯಾಯಮಂಡಳಿಯು ಈ ಹಿಂದೆ ತೀರ್ಮಾನಿಸಿತ್ತು.