ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ 377 ಕೋಟಿ ಕಾರ್ಪಸ್ ಫಂಡ್ ಪೊಲಿಟಿಕ್ಸ್, ಏನಿದು ಗಲಾಟೆ?

ಬಾಗಲಕೋಟೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಮಧ್ಯೆ ಕಾರ್ಪಸ್ ಫಂಡ್ ಪೊಲಿಟಿಕ್ಸ್ ಆರಂಭವಾಗಿದೆ. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ 377 ಕೋಟಿ ಸಂಚಿತ ನಿಧಿಯನ್ನ ಸರ್ಕಾರ ಪಡೆದಿದ್ದು, ಯಾವ ಸರಕಾರಕ್ಕೆ ಹಣ ಹೋಗಿದೆ ಎಂಬ ವಾದ ಆರಂಭವಾಗಿದೆ.

Bagalkot Town Development Authority 377 crore corpus fund politics between BJP and Congress  gow

ಬಾಗಲಕೋಟೆ (ಜು.9): ಬಾಗಲಕೋಟೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಮಧ್ಯೆ ಕಾರ್ಪಸ್ ಫಂಡ್ ಪೊಲಿಟಿಕ್ಸ್ ಆರಂಭವಾಗಿದೆ. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ (Bagalkot Town Development Authority ) 377 ಕೋಟಿ ಸಂಚಿತ ನಿಧಿಯನ್ನ ರಾಜ್ಯ ಸರ್ಕಾರ ಪಡೆದಿದ್ದು, ಸರ್ಕಾರ ಬಿಟಿಡಿಎಯಿಂದ ಹಣ ಪಡೆದಿದ್ದಕ್ಕೆ ಕಾರಣ ನಾವಲ್ಲ, ನೀವಲ್ಲ ಅಂತಿರೋ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಕಚ್ಚಾಟ ಆರಂಭವಾಗಿದೆ. 

ಗ್ಯಾರಂಟಿಗಳ ಅನುಷ್ಠಾನಕ್ಕೆ  ರಾಜ್ಯ ಸರ್ಕಾರ 377 ಕೋಟಿ ಕಾರ್ಪಸ್ ಫಂಡ್ ಹಣ ಪಡೆದಿದೆ ಎಂದು ಬಿಜೆಪಿಯ ಮಾಜಿ ಶಾಸಕ ವೀರಣ್ಣ ಚರಂತಿಮಠ  ಆರೋಪಿಸಿದ್ದಾರೆ. ಗ್ಯಾರಂಟಿಗೆ ಹಣ ಹೊಂದಿಸೋಕೆ ಸಿದ್ದರಾಮಯ್ಯ ಸರಕಾರ ಬಿಟಿಡಿಎ ಸಂಚಿತ ನಿಧಿಯ 377 ಕೋಟಿ ಹಣ ಎತ್ತೊಯ್ದದಿದೆ ಎಂದು ಚರಂತಿಮಠ ಆರೋಪವಾಗಿದೆ.

ಬೆಂಗಳೂರು ಐಟಿ ಕಂಪನಿಗಳಿಂದ ವರ್ಕ್ ಫ್ರಮ್ ಹೋಮ್ ವಾಪಸ್, ಔಟರ್ ರಿಂಗ್ ರೋಡ್ ಫುಲ್ ರಶ್!

ಇದಕ್ಕೆ ಪ್ರತ್ಯುತ್ತರ ನೀಡಿರುವ ಕಾಂಗ್ರೆಸ್​​ ನಾಯಕರು 377 ಕೋಟಿ ಹಣ ಸಂಚಿತ ನಿಧಿ ಪಡೆಯಲು ಅವಕಾಶ ನೀಡಿ ಸರ್ಕಾರಕ್ಕೆ ಪತ್ರ ಬರೆದಿದ್ದೇ ಬೊಮ್ಮಾಯಿ ಅವರ ನೇತೃತ್ವದ  ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಂದಿದ್ದಾರೆ. ಮಾತ್ರವಲ್ಲ ಬಿಜೆಪಿಗರ ಆರೋಪಕ್ಕೆ ದಾಖಲೆ ನೀಡಿ ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ದಾರೆ.

ಬಿಜೆಪಿ ಅಧಿಕಾರದ ಅವಧಿಯಲ್ಲಿ ಕೆಬಿಜೆಎನ್ಎಲ್ ಎಂಡಿ ಹಣ ಪಡೆಯಲು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದರು ಎಂಬುದ ಕಾಂಗ್ರೆಸ್‌ ಆರೋಪವಾಗಿದೆ.

ಅರುಣ್‌ ಕುಮಾರ್‌ ಪುತ್ತಿಲರನ್ನು ದೆಹಲಿಗೆ ಕರೆಸಿಕೊಂಡ ಬಿಎಲ್‌ ಸಂತೋಷ್‌, ರಾಜಕೀಯದಲ್ಲಿ ತೀವ್ರ

ಎಂಡಿ ಪತ್ರ ಬರೆದಿದ್ದರೂ ಸಹ ನಾವು ಸರ್ಕಾರಕ್ಕೆ ಅಂದು ಹಣ ಕೊಟ್ಟಿರಲಿಲ್ಲ ಆದ್ರೆ ಈಗ ಕಾಂಗ್ರೆಸ್ ಸರ್ಕಾರ ಸಂಚಿತ ನಿಧಿಯ 377 ಕೋಟಿ ಹಣ ಪಡೆದಿದೆ ಎಂದು ಬಿಜೆಪಿಗರ ವಾದವಾಗಿದೆ.

Latest Videos
Follow Us:
Download App:
  • android
  • ios