ಉಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿ ಭೇಟಿ ಮಾಡಿದ ಬ್ರಿಟನ್ ಪ್ರಧಾನಿ ಬೋರಿಸ್

  • ಉಕ್ರೇನಿಯನ್ ಜನರಿಗೆ ಧೈರ್ಯ ತುಂಬುವ ಸಲುವಾಗಿ ಭೇಟಿ
  • ಕೈವ್‌ನಲ್ಲಿ ಉಭಯ ನಾಯಕರ ಭೇಟಿ
  • ಉಕ್ರೇನ್‌ನ ರಕ್ಷಣಾ ಬೆಂಬಲಕ್ಕೆ ಯುಕೆ ನಾಯಕ
British PM Boris Johnson meets Ukrainian President Volodymyr Zelensky in Kyiv akb

ಕೈವ್(ಏ.10): ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಮಧ್ಯೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಕೈವ್‌ನಲ್ಲಿ ಶನಿವಾರ ಭೇಟಿಯಾಗಿದ್ದಾರೆ. ಡೌನಿಂಗ್ ಸ್ಟ್ರೀಟ್ ವರದಿ ಪ್ರಕಾರ, 'ಉಕ್ರೇನಿಯನ್ ಜನರಿಗೆ ಧೈರ್ಯ ತುಂಬುವ ಒಗ್ಗಟ್ಟಿನ ಪ್ರದರ್ಶನ'ದ ಭಾಗವಾಗಿ ಬ್ರಿಟೀಷ್ ಪ್ರಧಾನಿ ಬೋರಿಸ್ ಜಾನ್ಸನ್ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಕೈವ್‌ನಲ್ಲಿ ಮುಖಾಮುಖಿಯಾಗಿ ಭೇಟಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಕೈವ್‌ನಲ್ಲಿ ಬ್ರಿಟೀಷ್‌ ಪ್ರಧಾನಿ ಬೋರಿಸ್ ಜಾನ್ಸನ್  (British Prime Minister Boris Johnson) ಹಾಗೂ ಉಕ್ರೇನ್‌ ಅಧ್ಯಕ್ಷ ಝೆಲೆನ್ಸ್‌ಕಿ (Ukrainian President Volodymyr Zelensky )ಭೇಟಿ, ಟೆಟೆ-ಎ-ಟೆಟೆ (tete-a-tete) ಸಭೆಯೊಂದಿಗೆ ಇದೀಗ ಪ್ರಾರಂಭವಾಯಿತು ಎಂದು ಅಧ್ಯಕ್ಷೀಯ ಸಹಾಯಕ ಆಂಡ್ರಿ ಸೈಬಿಹಾ (Andriy Sybiha) ಫೇಸ್‌ಬುಕ್‌ನಲ್ಲಿ ಈ ನಾಯಕರು ಜೊತೆಗೆ ಕುಳಿತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. 'ಉಕ್ರೇನ್‌ನ ರಕ್ಷಣಾ ಬೆಂಬಲಕ್ಕೆ ಯುಕೆ ನಾಯಕ' ಎಂದು ಸೈಬಿಹಾ ಬರೆದಿದ್ದಾರೆ.

 

ಡೌನಿಂಗ್ ಸ್ಟ್ರೀಟ್  ವರದಿ ಪ್ರಕಾರ, 'ಉಕ್ರೇನಿಯನ್ ಜನರಿಗೆ ಆತ್ಮಸ್ಥೈರ್ಯ ತುಂಬಲು ಒಗ್ಗಟ್ಟಿನ ಪ್ರದರ್ಶನ' ದ ಭಾಗವಾಗಿ ಬೋರಿಸ್‌ ಜಾನ್ಸನ್ ಕೈವ್‌ನಲ್ಲಿ ಝೆಲೆನ್ಸ್ಕಿಯನ್ನು ಮುಖಾಮುಖಿ ಭೇಟಿಯಾದರು. 'ಅವರು ಉಕ್ರೇನ್‌ಗೆ ಬ್ರಿಟನ್‌ನಿಂದ ದೀರ್ಘಾವಧಿಯ ಬೆಂಬಲವನ್ನು ಚರ್ಚಿಸುತ್ತಾರೆ ಮತ್ತು ಪ್ರಧಾನಿ ಆರ್ಥಿಕ ಮತ್ತು ಮಿಲಿಟರಿ ನೆರವಿನ ಹೊಸ ಪ್ಯಾಕೇಜ್ ಅನ್ನು ಹೊಂದಿಸುತ್ತಾರೆ ಎಂದು ವಕ್ತಾರರನ್ನು ಉಲ್ಲೇಖಿಸಿ ಹೇಳಿದೆ.

Russia Ukraine Crisis: ಅಮೆರಿಕ ಮೂಗು ತೂರಿಸೋದು ಬಿಟ್ರೆ ಎಲ್ಲಾ ಸರಿಯಾಗುತ್ತೆ ಎಂದ North Korea

ಏತನ್ಮಧ್ಯೆ, ಯುರೋಪಿಯನ್ ಕಮಿಷನ್ ಮುಖ್ಯಸ್ಥೆ  (European Commission chief Ursula von der Leyen) ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ಉಕ್ರೇನಿಯನ್ ನಿರಾಶ್ರಿತರಿಗಾಗಿ ಸ್ಟ್ಯಾಂಡ್ ಅಪ್ ಫಾರ್ ಉಕ್ರೇನ್ (Stand Up for Ukraine) ಎಂಬ ಜಾಗತಿಕ ಅಭಿಯಾನ ಕಾರ್ಯಕ್ರಮದ ಮೂಲಕ 10.1 ಬಿಲಿಯನ್ ಯುರೋಗಳನ್ನು ($ 11 ಬಿಲಿಯನ್) ಸಂಗ್ರಹಿಸಲಾಗಿದೆ ಎಂದು ಹೇಳಿದ್ದಾರೆ. ಉಕ್ರೇನ್‌ಗಾಗಿ ಸ್ಟ್ಯಾಂಡ್ ಅಪ್ ಅಭಿಯಾನವು ಉಕ್ರೇನ್ ಒಳಗೆ ಮತ್ತು ಹೊರಗೆ ಬಾಂಬ್‌ಗಳಿಗೆ ಹೆದರಿ ಪಲಾಯನ ಮಾಡುವ ಜನರಿಗೆ 9.1 ಶತಕೋಟಿ ಯುರೋಗಳನ್ನು ಸಂಗ್ರಹಿಸಿದೆ. ಇದಕ್ಕೆ ಹೆಚ್ಚುವರಿ ಶತಕೋಟಿಯನ್ನು EBRD (ಯುರೋಪಿಯನ್ ಬ್ಯಾಂಕ್ ಫಾರ್ ರೀಕನ್‌ಸ್ಟ್ರಕ್ಷನ್ ಅಂಡ್ ಡೆವಲಪ್‌ಮೆಂಟ್) ವಾಗ್ದಾನ ಮಾಡಿದೆ ಎಂದು ವಾನ್ ಡೆರ್ ಲೇಯೆನ್ ಹೇಳಿದರು.

Suvarna Focus ಉಕ್ರೇನ್‌ ವಿರುದ್ಧದ ರಣಭೀಕರ ಯುದ್ಧದ ಸೂತ್ರಧಾರಿಯಾಗಿರುವ ಪುಟಿನ್ 5 ಮ್ಯಾನ್ ಆರ್ಮಿ ರಹಸ್ಯ

ಶುಕ್ರವಾರದಂದು, ಯುರೋಪಿಯನ್ ಕಮಿಷನ್ ಮುಖ್ಯಸ್ಥೆ ಉರ್ಸುಲಾ ವಾನ್ ಡೆರ್ ಲೇಯೆನ್,  ಯುರೋಪಿಯನ್ ಕಮಿಷನ್‌ನ ಉನ್ನತ ರಾಜತಾಂತ್ರಿಕರೊಂದಿಗೆ ಕೈವ್‌ಗೆ (Kyiv) ಭೇಟಿ ನೀಡಿದರು ಮತ್ತು ಉಕ್ರೇನಿಯನ್ ಅಧ್ಯಕ್ಷರನ್ನು ಭೇಟಿಯಾದರು. ಅವರು ಕೈವ್‌ನ ವಾಯುವ್ಯದಲ್ಲಿರುವ ಬುಚಾ ಹತ್ಯಾಕಾಂಡದ ಸ್ಥಳಕ್ಕೆ ಭೇಟಿ ನೀಡಿದ್ದರು. ಐರೋಪ್ಯ ಒಕ್ಕೂಟವು ಕೈವ್‌ಗೆ ತನ್ನ ರಾಯಭಾರಿಯನ್ನು  (ambassador)ಮತ್ತೆ ನಿಯೋಜಿಸಿದ್ದರಿಂದ ಈ ಭೇಟಿ ಮಾಡಲಾಯಿತು., ಸುಧಾರಿತ ಭದ್ರತಾ ಪರಿಸ್ಥಿತಿ ಮತ್ತು ತೊಂದರೆಗೊಳಗಾದ ಉಕ್ರೇನ್‌ ದೇಶಕ್ಕೆ ಐರೋಪ್ಯ ಒಕ್ಕೂಟವು EU-27ನ ಬದ್ಧತೆಯನ್ನು ಒತ್ತಿಹೇಳುತ್ತದೆ.

ಬುಚಾ ಹತ್ಯಾಕಾಂಡ
ಉಕ್ರೇನ್‌ನ ವಾಯುವ್ಯ ನಗರವಾದ ಬುಚಾದಲ್ಲಿ (Bucha) ನಡೆದ ಸಾಮೂಹಿಕ ಹತ್ಯೆಗಳ (mass killing) ಭಯಾನಕ ದೃಶ್ಯಗಳು ಪ್ರಪಂಚದಾದ್ಯಂತ ಆಘಾತ  ಉಂಟು ಮಾಡಿವೆ. ಯುದ್ಧದ ಸಮಯದಲ್ಲಿ ರಷ್ಯಾದ ಪಡೆಗಳಿಂದ ಈ ನಗರದಲ್ಲಿ ಕನಿಷ್ಠ 300 ನಾಗರಿಕರು ಕೊಲ್ಲಲ್ಪಟ್ಟರು ಎಂದು ಉಕ್ರೇನಿಯನ್ ಅಧಿಕಾರಿಗಳು ಹೇಳಿದ್ದಾರೆ. ರಷ್ಯಾದ ಪಡೆಗಳು ಭೀಕರ ಯುದ್ಧಾಪರಾಧಗಳನ್ನು ನಡೆಸಿವೆ ಎಂದು ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದಾರೆ. ಉಕ್ರೇನ್‌  ನಾಗರಿಕರನ್ನು ಪಾಯಿಂಟ್-ಬ್ಲಾಂಕ್‌ನಲ್ಲಿ ರಷ್ಯನ್‌ ಯೋಧರು ಶೂಟ್ ಮಾಡಿದ್ದಾರೆ ಆದಾಗ್ಯೂ, ರಷ್ಯಾ ಈ ಆರೋಪವನ್ನು ನಿರಾಕರಿಸಿದೆ ಮತ್ತು ಬದಲಿಗೆ ಉಕ್ರೇನ್ ತೋರಿಸುತ್ತಿರುವ ದೃಶ್ಯ ನಕಲಿ  ಎಂದು ಹೇಳಿದೆ.
 

Latest Videos
Follow Us:
Download App:
  • android
  • ios