Asianet Suvarna News Asianet Suvarna News

Russia Ukraine Crisis: ಅಮೆರಿಕ ಮೂಗು ತೂರಿಸೋದು ಬಿಟ್ರೆ ಎಲ್ಲಾ ಸರಿಯಾಗುತ್ತೆ ಎಂದ North Korea

ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ಉತ್ತರ ಕೊರಿಯಾ ಮೊದಲ ಪ್ರತಿಕ್ರಿಯೆ

ಇವೆಲ್ಲಾ ಸಮಸ್ಯೆಗಳಿಗೆ ಅಮೆರಿಕವೇ ಮೂಲ ಕಾರಣ ಎಂದ ಕಿಮ್ ಜಾಂಗ್ ಸರ್ಕಾರ

ರಷ್ಯಾ ಪರವಾಗಿ ಮಾತನಾಡಿದ ಉತ್ತರ ಕೊರಿಯಾ
 

Russia Ukraine Crisis North Korea says United States is root cause of Ukraine invasion san
Author
Bengaluru, First Published Feb 27, 2022, 9:22 PM IST

ಸಿಯೋಲ್ (ಫೆ.27): ಜಗತ್ತಿನ ಯಾವ ವಿಚಾರಗಳಿಗೂ ತಲೆಹಾಕದ, ತನ್ನ ತಂಟೆಗೆ ಬಂದರೆ ಯಾರನ್ನೂ ಬಿಡದ ಉತ್ತರ ಕೊರಿಯಾ (North Korea) ಇದೇ ಮೊದಲ ಬಾರಿಗೆ ರಷ್ಯಾ ಹಾಗೂ ಉಕ್ರೇನ್ ಬಿಕ್ಕಟ್ಟಿನ ಪರಿಸ್ಥಿತಿಯ ಬಗ್ಗೆ ತನ್ನ ಹೇಳಿಕೆಯನ್ನು ನೀಡಿದೆ. ತನ್ನ ಇಡೀ ಹೇಳಿಕೆಯಲ್ಲಿ ಬದ್ಧವೈರಿ ಅಮೆರಿಕವನ್ನು (United States) ತೆಗಳಿರುವ ಉತ್ತರ ಕೊರಿಯಾ ಸರ್ಕಾರ, "ಅಮೆರಿಕ ಮೂಗು ತೂರಿಸೋದು ಬಿಟ್ರೆ ಎಲ್ಲಾ ಸಮಸ್ಯೆಗಳು ತನ್ನಿಂದ ತಾನೇ ಸರಿಯಾಗುತ್ತದೆ' ಎನ್ನುವ ಅರ್ಥದ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಉಕ್ರೇನ್ ಮೇಲಿನ ಆಕ್ರಮಣದ ಕುರಿತಾಗಿ ಪ್ಯೋಂಗ್ಯಾಂಗ್ (Pyongyang) ಮೊದಲ ಅಧಿಕೃತ ಪ್ರಕಟಣೆ ನೀಡಿದ್ದು, ರಷ್ಯಾದ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಇಡೀ ಉಕ್ರೇನ್ (Ukraine) ಬಿಕ್ಕಟ್ಟಿಗೆ ಅಮೆರಿಕವೇ ಮೂಲ ಕಾರಣ ಎಂದು ಆರೋಪ ಮಾಡಿದೆ. ಕಳೆದ ಗುರುವಾರ ನೆರೆಯ ಉಕ್ರೇನ್ ನ ಮೇಲೆ ವಿಶೇಷ ಮಿಲಿಟರಿ ಕಾರ್ಯಾಚರಣೆಗೆ ರಷ್ಯಾ ಅಧ್ಯಕ್ಚ ವ್ಲಾಡಿಮಿರ್ ಪುಟಿನ್ ಆದೇಶ ನೀಡಿದ್ದರು. ಇದರ ಬೆನ್ನಲ್ಲಿಯೇ ಜಾಗತಿಕವಾಗಿ ರಷ್ಯಾದ (Russia) ಕ್ರಮವನ್ನು ಟೀಕೆ ಮಾಡಲಾಗಿತ್ತಲ್ಲದೆ, ಅಮೆರಿಕ ಸೇರಿದಂತೆ ಯುರೋಪಿಯನ್ ಯೂನಿಯನ್ ಗಳು ರಷ್ಯಾದ ಮೇಲೆ ಅನೇಕ ರೀತಿಯ ನಿರ್ಬಂಧಗಳನ್ನು ಹೇರಿದ್ದವು. ವ್ಲಾಡಿಮಿರ್ ಪುಟಿನ್ ಮೇಲೂ ಕೆಲ ದೇಶಗಳು ದಿಗ್ಭಂದನ ವಿಧಿಸಿದ್ದವು. ಇಡೀ ವಿಚಾರದಲ್ಲಿ ಉತ್ತರ ಕೊರಿಯಾವು ವಿದೇಶಾಂಗ ಇಲಾಖೆಯ ವೆಬ್ ಸೈಟ್ ನಲ್ಲಿ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿ ಸುಮ್ಮನಾಗಿದೆ. ಒಟ್ಟಾರೆ ಈ ಅನಾಹುತಕ್ಕೆ ಅಮೆರಿಕವೇ ಮೂಲ ಕಾರಣ ಎಂದು ಆರೋಪ ಮಾಡಿದೆ.

ನಾರ್ತ್ ಸೊಸೈಟಿ ಫಾರ್ ಇಂಟರ್‌ನ್ಯಾಶನಲ್ ಪಾಲಿಟಿಕ್ಸ್ ಸ್ಟಡಿಯಲ್ಲಿ (North's Society for International Politics Study) ಸಂಶೋಧಕರಾದ ರಿ ಜಿ ಸಾಂಗ್‌ ( Ri Ji Song) ನೀಡಿರುವ ವ್ಯಾಖ್ಯಾನದ ಪ್ರಕಾರ, ವಾಷಿಂಗ್ಟನ್ "ತನ್ನ ಭದ್ರತೆಗಾಗಿ ರಷ್ಯಾದ ಕಾನೂನುಬದ್ಧ ಬೇಡಿಕೆಯನ್ನು ಕಡೆಗಣಿಸಿ ಮಿಲಿಟರಿ ಪ್ರಾಬಲ್ಯವನ್ನು" ಅನುಸರಿಸಿದೆ ಎಂದು ಹೇಳಿದೆ. ಉಕ್ರೇನ್ ಬಿಕ್ಕಟ್ಟಿನ ಮೂಲ ಕಾರಣವು ಅಮೆರಿಕದ ನಿರಂಕುಶ ಪ್ರಭುತ್ವದ ಆಸೆಯದ್ದಾಗಿದೆ ಎಂದು ವೆಬ್ ಸೈಟ್ ನಲ್ಲಿ ಶನಿವಾರ ಪ್ರಕಟವಾಗಿರುವ ಹೇಳಿಕೆಯಲ್ಲಿ ವಿವರಿಸಲಾಗಿದೆ. ಅಮೆರಿಕದ ಗೋಸುಂಬೆ ವರ್ತನೆಯನ್ನು ರಿ ಅವರು ಟೀಕೆ ಮಾಡಿದ್ದಾರೆ.  ಶಾಂತಿ ಹಾಗೂ ಸ್ಥಿರತೆಯ ಹೆಸರಿನಲ್ಲಿ ಅಮೆರಿಕವು ಬೇರೆ ದೇಶಗಳ ಆಂತರರಿಕ ವ್ಯವಹಾರದಲ್ಲಿ ಮೂಗು ತೂರಿಸುತ್ತದೆ. ಆದರೆ, ಯಾವುದೇ ಕಾರಣವಿಲ್ಲದೆ, ಇತರ ದೇಶಗಳು ಕೈಗೊಂಡ ಸ್ವಯಂ ರಕ್ಷಣಾ ಕ್ರಮವನ್ನು ಖಂಡನೆ ಮಾಡುತ್ತದೆ. ಅಮೆರಿಕವು ಬೇರೆ ದೇಶಕ್ಕಿಂತ ತನ್ನ ರಾಷ್ಟ್ರೀಯ ಭದ್ರತೆಯನ್ನು ಮೊದಲು ಖಚಿತಪಡಿಸಿಕೊಳ್ಳಲಿ ಎಂದು ಹೇಳಿದ್ದಾರೆ.

Russia Ukraine Crisis: ಬೆಲಾರಸ್ ಗಡಿಯಲ್ಲಿ ಮಾತುಕತೆಗೆ ಉಕ್ರೇನ್ ಒಪ್ಪಿಗೆ!
"ಯುಎಸ್ ಸರ್ವೋಚ್ಚ ಆಳ್ವಿಕೆ ನಡೆಸುತ್ತಿದ್ದ ದಿನಗಳು ಕಳೆದುಹೋಗಿವೆ" ಎಂದು ಬರೆಯಲಾಗಿದೆ. ಪ್ರತಿಕ್ರಿಯೆಯು ಹೆಚ್ಚು ಪ್ರಖ್ಯಾತವಾಗದ ಅಧಿಕೃತ ಪ್ರತಿಕ್ರಿಯೆಯಾಗಿದೆ ಏಕೆಂದರೆ ಇದನ್ನು ವೈಯಕ್ತಿಕ ಹೆಸರಿನಲ್ಲಿ ಪ್ರಕಟಿಸಲಾಗಿದೆ ಎಂದು ಇವಾ ವುಮನ್ಸ್ ವಿಶ್ವವಿದ್ಯಾಲಯದ (Ewha Womans University) ಉತ್ತರ ಕೊರಿಯಾದ ಅಧ್ಯಯನಗಳ (North Korean Studies ) ಪ್ರಾಧ್ಯಾಪಕ ಪಾರ್ಕ್ ವಾನ್-ಗೊನ್ ಹೇಳಿದ್ದಾರೆ. "ಅದೆಲ್ಲವೂ ಯುಎಸ್‌ನಿಂದಾಗಿ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಮುಖ್ಯ ಅಂಶವೆಂದರೆ ನಿಮಗೆ ಅಧಿಕಾರವಿಲ್ಲದಿದ್ದರೆ ನೀವು ಕಷ್ಟಗಳನ್ನು ಅನುಭವಿಸುತ್ತೀರಿ" ಎಂದು ಅವರು ತಿಳಿಸಿದ್ದಾರೆ.

Mann Ki baat ಮನ್ ಕಿ ಬಾತ್‌ನಲ್ಲಿ ತಾಂಜಾನಿಯಾದ ಕಿಲಿ, ನೀಮಾ ಪೌಲ್ ಸೃಜನಶೀಲತೆಗೆ ಮೋದಿ ಶಹಬ್ಬಾಸ್!
ಚೀನಾದೊಂದಿಗೆ ಉತ್ತರ ಕೊರಿಯಾ ಕೂಡ ರಷ್ಯಾದ ಸ್ನೇಹಿತ ರಾಷ್ಟ್ರಗಳಲ್ಲಿ ಒಂದಾಗಿದೆ. ಉತ್ತರ ಕೊರಿಯಾದ ಪ್ರಮುಖ ಮಿತ್ರರಾಷ್ಟ್ರವಾದ ಚೀನಾ, ಇತ್ತೀಚಿನ ವಾರಗಳಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ಅದರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಉಕ್ರೇನ್ ಬಿಕ್ಕಟ್ಟನ್ನು ಹೆಚ್ಚು ಪ್ರಚಾರ ಮಾಡಿದೆ ಎಂದು ಆರೋಪಿಸಿದೆ.

Follow Us:
Download App:
  • android
  • ios