ಶೂ ಒಳಗಿದ್ದ ವಿಷಕಾರಿ ಚೇಳೊಂದು ಕಚ್ಚಿದ ಬಳಿಕ ಏಳು ವರ್ಷದ ಬಾಲಕನಿಗೆ ಏಳು ಬಾರಿ ಹೃದಯಾಘಾತವಾಗಿದ್ದು, ಬಳಿಕ ಬಾಲಕ ಸಾವನ್ನಪ್ಪಿದ್ದ ಆಘಾತಕಾರಿ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ.
ಶೂ ಒಳಗಿದ್ದ ವಿಷಕಾರಿ ಚೇಳೊಂದು ಕಚ್ಚಿದ ಬಳಿಕ ಏಳು ವರ್ಷದ ಬಾಲಕನಿಗೆ ಏಳು ಬಾರಿ ಹೃದಯಾಘಾತವಾಗಿದ್ದು, ಬಳಿಕ ಬಾಲಕ ಸಾವನ್ನಪ್ಪಿದ್ದ ಆಘಾತಕಾರಿ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ. ಬ್ರೆಜಿಲ್ ಮೂಲದ (ಲೂಯಿಜ್ ಮಿಗುಯೆಲ್ ಫುರ್ಟಾಡೊ ಬಾರ್ಬೋಸಾ) Luiz Miguel Furtado Barbosa ಚೇಳು ಕಚ್ಚಿ ಮೃತಪಟ್ಟ ಬಾಲಕ. ಶೂ ಧರಿಸುತ್ತಿದ್ದ ವೇಳೆ ಈ ಅನಾಹುತ ಸಂಭವಿಸಿದೆ.
ಈ ಬಾಲಕ ತನ್ನ ಪೋಷಕರೊಂದಿಗೆ ಆಕ್ಟೋಬರ್ 23 ರಂದು ಹೊರಗೆ ಹೋಗಲು ಸಿದ್ಧಗೊಳ್ಳುತ್ತಿದ್ದ ವೇಳೆ ಈತನಿಗೆ ಶೂ ಒಳಗಿದ್ದ ಚೇಳೊಂದು ಕಚ್ಚಿದೆ. ಮೃತ ಲೂಯಿಜ್ ಮಿಗುಯೆಲ್ ಫುರ್ಟಾಡೊ ಬಾರ್ಬೋಸಾ, ಬ್ರೆಜಿಲ್‌ನ ಸಾವೊ ಪೌಲೋ (Sao Paulo state) ರಾಜ್ಯದ ಅನ್ಹೆಬಿ (Anhembi) ನಗರದ ನಿವಾಸಿ. ಈತ ಶೂ ಧರಿಸಿ ಕ್ಷಣದಲ್ಲಿಯೇ ಈತನ ಕಾಲಿಗೆ ಏನೋ ಕಚ್ಚಿದ ಅನುಭವವಾಗಿದ್ದು, ಬಾಲಕ ನೋವಿನಿಂದ ಚೀರಿಕೊಂಡಿದ್ದಾನೆ. ಆದರೆ ಮಗುವಿಗೆ ಕಚ್ಚಿದ್ದೇನು ಎಂಬುದರ ಬಗ್ಗೆ ಪೋಷಕರಿಗೆ ಆ ಕ್ಷಣದಲ್ಲಿ ಗೊತ್ತಾಗಿಲ್ಲ. ಆದರೆ ಚೇಳು ಕಚ್ಚಿದ ಸ್ವಲ್ಪ ಸಮಯದಲ್ಲೇ ಆತನ ಕಾಲು ಕೆಂಪು ಬಣ್ಣಕ್ಕೆ ತಿರುಗಿದೆ. ಮಗು ನೋವು ಸಮಯದಿಂದ ಸಮಯಕ್ಕೆ ಹೆಚ್ಚುತ್ತಿದೆ ಎಂದು ಅಳುತ್ತಿದ್ದ ಈ ವೇಳೆ ಬಾಲಕನಿಗೆ ಕಚ್ಚಿದ್ದು ಚೇಳು ಎಂದು ನಾವು ಭಾವಿಸಿದೆವು.
ಮಹಿಳೆ ಸೂಟ್‌ಕೇಸ್‌ನಲ್ಲಿ ವಿದೇಶಕ್ಕೆ ಹಾರಿದ 18 ಚೇಳು, ಹಿಂತಿರುಗಿಸಲು ವಿಮಾನ ಬುಕ್ !
ನ್ಯೂಸ್‌ಫ್ಲಾಶ್ ವರದಿಯ ಪ್ರಕಾರ, ದಕ್ಷಿಣ ಅಮೆರಿಕಾದಲ್ಲಿ ಅತಿ ಹೆಚ್ಚು ಸಂಖ್ಯೆಯ ಮಾರಣಾಂತಿಕ ದಾಳಿಗೆ ಕಾರಣವಾದ ಬ್ರೆಜಿಲಿಯನ್ ಹಳದಿ ಚೇಳು ಅಥವಾ ಟೈಟ್ಯೂಸ್ ಸೆರ್ರುಲಾಟಸ್ ಎಂಬುದನ್ನು ಕುಟುಂಬ ನಂತರದಲ್ಲಿ ಪತ್ತೆ ಮಾಡಿದೆ. ಈ ಬಾಲಕ ಚೇಳು ಕಚ್ಚುವುದಕ್ಕೂ ಮೊದಲು ತಂದೆ ತಾಯಿ ಹಾಗೂ ತನ್ನ ಐದು ವರ್ಷದ ತಮ್ಮನ ಜೊತೆ ಟ್ರಿಪ್ ಹೊರಟಿದ್ದರು.
ನಂತರ ಬಾಲಕನ ಏಂಜೆಲಿಟಾ ( Angelita Proenca Furtado) ಮತ್ತು ಆಕೆಯ ಪತಿ ಎರಾಲ್ಡೊ ಬಾರ್ಬೋಸಾ, ಮಗ ಲೂಯಿಜ್‌ನನ್ನು ಸಾವೊ ಪಾಲೊ ವಿಶ್ವವಿದ್ಯಾಲಯದ ವೈದ್ಯಕೀಯ ಚಿಕಿತ್ಸಾಲಯಗಳ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಬಾಲಕನ ಸ್ಥಿತಿ ಆರಂಭದಲ್ಲಿ ಸುಧಾರಿಸಿತು. ಅಲ್ಲದೇ ಆರೋಗ್ಯ ಸುಧಾರಿಸಿದ ಹಿನ್ನೆಲೆ ವೈದ್ಯರು ಆತನಿಗೆ ಕೊಡಬೇಕಾಗಿದ್ದ ಕೆಲ ಔಷಧಿಗಳನ್ನು ನಿಲ್ಲಿಸಿದ್ದರು. ಆತನೂ ಚೇತರಿಸಿಕೊಂಡು ಕಣ್ಣುಗಳನ್ನು ತೆರೆದು ತಾಯಿಯೊಂದಿಗೆ ಮಾತನಾಡಲು ಪ್ರಯತ್ನಿಸಿದ್ದ. ತಾಯಿಯೂ ಬಾಲಕನ ತಲೆ ನೆವರಿಸಿ ಮುತ್ತಿಕ್ಕಿದ್ದರು. ಆದರೆ ಮತ್ತೆ ಸ್ವಲ್ಪ ಸಮಯದಲ್ಲಿ ಆತ ಚಡಪಡಿಸುತ್ತಿದ್ದ ಅಲ್ಲದೇ ಸ್ವಲ್ಪ ಸಮಯದಲ್ಲೇ ನಿದ್ದೆಗೆ ಜಾರಿದ್ದ.
ಏಂಜೆಲಿನಾ ಜೋಲಿ ಜೇಡ, ಚೇಳು ಹಸಿಹಸಿಯಾಗಿ ತಿಂತಾಳಾ!
ಇದಾದ ಬಳಿಕ ಬಾಲಕನಿಗೆ ಸುಮಾರು ಏಳು ಬಾರಿ ನಿರಂತರ ಹೃದಯಾಘಾತವಾಗಿದ್ದು ಎರಡು ದಿನಗಳ ಬಳಿಕ ಬಾಲಕ ಸಾವನ್ನಪ್ಪಿದ್ದಾನೆ. ಚೇಳು ಕಚ್ಚಿದ ದಿನ ಆತ ಪೂರ್ತಿ ಆತಂಕದಲ್ಲೇ ಇದ್ದ. ನನ್ನ ಪುತ್ರ ನೀರಿನಲ್ಲಿ ಆಟವಾಡುವುದನ್ನು ಹೆಚ್ಚು ಇಷ್ಟಪಡುತ್ತಿದ್ದ ಈ ಕಾರಣಕ್ಕೆ ನಾವು ಟ್ರಿಪ್ ಹೋಗಲು ಸಿದ್ಧಗೊಳ್ಳುತ್ತಿದ್ದೆವು. ಆದರೆ ಆತ ಮಾತ್ರ ತುಂಬಾ ಆತಂಕದಲ್ಲಿದ್ದು, ಒಂದೇ ದಿನದಲ್ಲಿ ತನ್ನ ಬದುಕಿನ ಎಲ್ಲವನ್ನು ಬದುಕಬೇಕು ಎಂಬಂತೆ ಆತ ತೋರುತ್ತಿದ್ದ ಎಂದು ಬಾಲಕನ ತಾಯಿ ಏಂಜೆಲಿಟಾ ಹೇಳಿದ್ದಾರೆ. ಈ ಪ್ರದೇಶದಲ್ಲಿ ಹೀಗೆ ವಿಷಕಾರಿ ಚೇಳು ಕಚ್ಚಿದಂತಹ 54 ಪ್ರಕರಣಗಳು ಈ ಹಿಂದೆ ನಡೆದಿವೆ.
ಇಲ್ಲಿ ಚೇಳುಗಳ ಕಡಿತಕ್ಕೊಳಗಾಗಿ ಸಾಯುವ ಪ್ರಕರಣ ಹೊಸದೇನು ಅಲ್ಲ. ಅನ್ಹೆಂಬಿ ಪುರಸಭೆಯ ಸಮೀಪ ಹರಿಯುವ ಟೈಟೆ ನದಿಯ (Tiete River) ದಡದಲ್ಲಿ ದೊಡ್ಡ ಅರಣ್ಯ ಪ್ರದೇಶವಿದ್ದು ಇಲ್ಲಿ ಸಾಕಷ್ಟು ಚೇಳುಗಳಿವೆ.
