ಮುಗಿಲು ನೋಡ್ತಾ ಹಾಡು ಕೇಳ್ತಾ ಮಲಗಿದ್ದ ಯುವತಿಯ ಇಯರ್ ಬಡ್ ಹೊತ್ತೊಯ್ದ ಹಕ್ಕಿ
ಹಕ್ಕಿಯೊಂದು ಮಹಿಳೆಯೊಬ್ಬರ ಇಯರ್ ಬಡ್ ಎತ್ತಿಕೊಂಡು ಪರಾರಿಯಾಗಿದೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೆಲ ದಿನಗಳ ಹಿಂದೆ ಗಿಳಿಯೊಂದು ಪ್ರವಾಸಿಗರ ಕೈಯಲ್ಲಿದ್ದ ಗೋ ಪ್ರೋ ಕ್ಯಾಮರಾವನ್ನು ಹೊತ್ತೊಯ್ದ ವಿಚಾರ ಸಾಕಷ್ಟು ಚರ್ಚೆಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಹಕ್ಕಿಯೊಂದು ಮಹಿಳೆಯೊಬ್ಬರ ಇಯರ್ ಬಡ್ ಎತ್ತಿಕೊಂಡು ಪರಾರಿಯಾಗಿದೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ರೆಡಿಟ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, scavillion ಎಂಬುವವರು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ವಿಡಿಯೋದಲ್ಲಿ ಕಾಣಿಸುವಂತೆ ಮಹಿಳೆಯೊಬ್ಬರು ತಮ್ಮೆರಡು ಕಿವಿಗಳಿಗೆ ಇಯರ್ ಬಡ್ ಸಿಕ್ಕಿಸಿಕೊಂಡು ಮುಗಿಲು ನೋಡುತ್ತಾ ಹಾಡು ಕೇಳುತ್ತಾ ಮನೆಯ ಹೊರಭಾಗದ ಆವರಣದಲ್ಲಿ ಮಲಗಿದ್ದು, ಇದನ್ನು ನೋಡಿದ ಹಳದಿ ಬಣ್ಣದ ಹಕ್ಕಿಯೊಂದಕ್ಕೆ ಏನನಿಸಿತೋ ಏನೋ ಸೀದಾ ಆಕೆ ಮಲಗಿದ್ದಲ್ಲಿಗೆ ಬಂದು ಆಕೆಯ ಕಿವಿಯಲ್ಲಿ ಸಿಕ್ಕಿಸಿಕೊಂಡಿದ್ದ ಇಯರ್ ಬಡ್‌ನ್ನು ಕೊಕ್ಕಲ್ಲಿ ಎತ್ತಿಕೊಂಡು ಪರಾರಿಯಾಗಿದೆ. ಮಹಿಳೆಗೆ ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲಿ ಹಕ್ಕಿ ಇಯರ್ ಬಡ್ (Ear Bud) ಹೊತ್ತುಕೊಂಡು ಸಮೀಪದ ಮರವೇರಿ ಬಳಿಕ ಮೇಲೆ ತೂಗುತ್ತಿದ್ದ ವಯರೊಂದರ ಮೇಲೆ ಕುಳಿತಿದೆ.
ಟ್ರೆಂಡ್ ಫಾಲೋವರ್ ಈ ಪಾರಿವಾಳ: ಹಕ್ಕಿಯ ಸುಂದರ ಬ್ಯಾಕ್‌ಫ್ಲಿಪ್ ವೈರಲ್
ನಂತರ ಮಹಿಳೆ ಈ ಹಳದಿ ಬಣ್ಣದ (Yellow colour) ಹಕ್ಕಿಯ ಬಾಯಿಯಿಂದ ಇಯರ್ ಬಡ್ ಪಡೆಯಲು ಸಾಕಷ್ಟು ಸಾಹಸ ಮಾಡಿದರು ವಾಪಸ್ ಸಿಕ್ಕಿಲ್ಲ. ಮಹಿಳೆಯ ಕಿವಿಯಿಂದ ಇಯರ್ ಬಡ್ ತೆಗೆದ ಗಿಳಿ ಬಳಿಕ ಅದನ್ನು ತೆಗೆದುಕೊಂಡು ಮರವೇರಿದೆ, ನಂತರ ಆ ಜಾಗದಿಂದ ಹಾರಿ ವಯರೊಂದರ ಮೇಲೆ ಕುಳಿತಿದೆ. ಬಳಿಕ ಮಹಿಳೆ ವಾಸವಿರುವ ಮಳೆಯ ಸಮೀಪ ಇಯರ್ ಬಡ್ ಜೊತೆ ಬಂದಿದ್ದು, ಈ ವೇಳೆ ಮಹಿಳೆ ಅದಕ್ಕೆ ಬಾಳೆಹಣ್ಣು ನೀಡಿ ಅದರ ಬಾಯಲ್ಲಿದ್ದ ಇಯರ್ ಫೋನ್ ಕಸಿದುಕೊಳ್ಳಲು ಯತ್ನಿಸಿದ್ದಾರೆ. ಬಾಳೆಹಣ್ಣಿಗೆ ಪ್ರತಿಯಾಗಿ ಇಯರ್ ಬಡ್ ಕೊಡಲೊಪ್ಪದ ಹಕ್ಕಿ (bird) ಸೀದಾ ದೂರ ಹಾರಿದೆ.
ಬಡವನಾದರೇನು ಪ್ರಿಯೆ.... ಬಾನಡಿಗಳ ಹೊಟ್ಟೆ ತುಂಬಿಸುವ ಸಹೃದಯಿ: ವಿಡಿಯೋ ವೈರಲ್
ಈ ವಿಡಿಯೋ ನೋಡಿದ ಅನೇಕರು, ಹಲವು ಕಾಮೆಂಟ್ ಮಾಡಿದ್ದಾರೆ. ಬಾಳೆಹಣ್ಣು ನೀಡಿದ ಮಾತ್ರಕ್ಕೆ ಅದು ಇಯರ್ ಫೋನ್ ವಾಪಸ್ ಕೊಡುವುದೇ ಎಂದು ಒಬ್ಬರು ಪ್ರಶ್ನಿಸಿದರೆ ಮತ್ತೊಬ್ಬರು ಇಯರ್ ಫೋನ್‌ಗೆ ಒಂದು ಬಾಳೆಹಣ್ಣು ಸಾಕೇ ಎಂದು ಪ್ರಶ್ನಿಸಿದ್ದಾರೆ. ಹಕ್ಕಿಗೇಕೆ ಇಯರ್ ಬಡ್, ಹಕ್ಕಿಯೂ ಹಾಡು ಕೇಳುವುದೇ ಎಂದು ಮತ್ತೆ ಕೆಲವರು ಕೇಳಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗಂತ ಹಕ್ಕಿಗಳು ಇಲೆಕ್ಟ್ರಾನಿಕ್ ಐಟಂಗಳನ್ನು ಹೊತ್ತೊಯ್ಯುವುದು ಇದೇ ಮೊದಲೇನಲ್ಲಾ. ಕೆಲ ದಿನಗಳ ಹಿಂದೆ ಹಕ್ಕಿಯೊಂದು ಪ್ರವಾಸಿಗರ ಗೋ ಪ್ರೋ ಕ್ಯಾಮರಾ ಕಸಿದು ಪರಾರಿಯಾಗಿದೆ.