ಟ್ರೆಂಡ್ ಫಾಲೋವರ್‌ ಈ ಪಾರಿವಾಳ: ಹಕ್ಕಿಯ ಸುಂದರ ಬ್ಯಾಕ್‌ಫ್ಲಿಪ್‌ ವೈರಲ್

ಯುವಕ ಯುವತಿಯರು ಹುಡುಗರು ಬ್ಯಾಕ್‌ಫ್ಲಿಪ್‌ ಮಾಡುವುದನ್ನು ನೋಡಿರಬಹುದು. ಆದರೆ ಪಾರಿವಾಳವೊಂದು ಬ್ಲಾಕ್‌ಫ್ಲಿಪ್ ಮಾಡುವುದನ್ನು ನೋಡಿದ್ದೀರಾ. ಇಲ್ಲ ಎಂದಾದಲ್ಲಿ ಈಗ ನೋಡಿ.

pigeon doing backflip watch viral video akb

ಯುವಕ ಯುವತಿಯರು ಹುಡುಗರು ಬ್ಯಾಕ್‌ಫ್ಲಿಪ್‌ ಮಾಡುವುದನ್ನು ನೋಡಿರಬಹುದು. ಆದರೆ ಪಾರಿವಾಳವೊಂದು ಬ್ಲಾಕ್‌ಫ್ಲಿಪ್ ಮಾಡುವುದನ್ನು ನೋಡಿದ್ದೀರಾ. ಇಲ್ಲ ಎಂದಾದಲ್ಲಿ ಈಗ ನೋಡಿ. ನಾವು ಈಗ ತೋರಿಸುತ್ತಿರುವ ವಿಡಿಯೋವೊಂದರಲ್ಲಿ ಪಾರಿವಾಳವೊಂದು ಸೊಗಸಾಗಿ ಬ್ಲಾಕ್‌ಫ್ಲಿಪ್ ಮಾಡುತ್ತಿದೆ. ಬ್ಲಾಕ್‌ಫ್ಲಿಪ್ ಎಂದರೆ ಹಿಂಭಾಗಕ್ಕೆ ಸೊಗಸಾಗಿ ಜಿಗಿಯುವುದು. ನೀವು ಸೋಶಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಇರುವವರಾದರೆ ಬ್ಲಾಕ್‌ಫ್ಲಿಪ್‌ನ ಹಲವು ವಿಡಿಯೋಗಳನ್ನು ನೀವು ನೋಡಿರಬಹುದು. ಯುವಕ ಯುವತಿಯರು ಬ್ಲಾಕ್‌ಫ್ಲಿಪ್ ಮಾಡಿ ಸಾಹಸ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ವೈರಲ್ ಮಾಡುತ್ತಿರುತ್ತಾರೆ. ಆದರೆ ಈಗ ಈ ಬ್ಲಾಕ್‌ಫ್ಲಿಪ್ ಟ್ರೆಂಡ್ ಅನ್ನು ಪರಿವಾಳವೊಂದು ಫಾಲೋ ಮಾಡಲು ಹೊರಟಿದ್ದು, ಪರಿವಾಳದ ಸುಂದರ ಬ್ಲಾಕ್‌ಫ್ಲಿಪ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಫಿಜೆನ್ ಎಂಬ ಟ್ವಿಟ್ಟರ್ ಖಾತೆಯಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. 3.8 ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಪಾರಿವಾಳದ ಈ ಸುಂದರ ಬ್ಲಾಕ್‌ಫ್ಲಿಪ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಬ್ಲಾಕ್‌ಫ್ಲಿಪ್ ಸುಲಭದ ಸಾಹಸವೇನಲ್ಲ. ಯಾವುದೇ ಸಲಹೆ ಸೂಚನೆಗಳಿಲ್ಲದೇ ಒಬ್ಬರೇ ಈ ಸಾಹಸ ಮಾಡಲು ಹೋದಲ್ಲಿ ಅಪಾಯ ಎದುರಿಸಬೇಕಾಗುವುದು. ಕಳೆದ ವರ್ಷ ತುಮಕೂರಿನ ಯುವಕನೋರ್ವ ಹೀಗೆ ಬ್ಲಾಕ್‌ಫ್ಲಿಪ್ ಮಾಡಲು ಹೋಗಿ ತನ್ನ ಬೆನ್ನುಮೂಳೆಯನ್ನೇ ಮುರಿದುಕೊಂಡು ಪ್ರಾಣ ಬಿಟ್ಟಿದ್ದ.

ಹೊಳೆದಾಟಿದ ಮೇಕೆ
ಇತ್ತೀಚೆಗೆ ಪ್ರಾಣಿಗಳು ಕೂಡ ಮನುಷ್ಯರಂತೆ ಸ್ಮಾರ್ಟ್ ಆಗಿವೆ. ಕೆಲ ದಿನಗಳ ಹಿಂದೆ ತುಂಬಿ ಹರಿಯುತ್ತಿರುವ ನದಿಯೊಂದನ್ನು ಮೇಕೆಗಳು ದಾಟುತ್ತಿರುವ ವಿಡಿಯೋ ವೈರಲ್ ಆಗಿತ್ತು. ಹೊಳೆಯ ಮಧ್ಯೆ ಚೆಕ್‌ ಡ್ಯಾಂಗಳ ಫಿಲ್ಲರ್‌ಗಳಂತೆ ಕಾಣುವ ಕಂಬಗಳು ಕಾಣುತ್ತಿದ್ದು, ಒಂದು ಕಂಬದಿಂದ ಮತ್ತೊಂದು ಕಂಬಕ್ಕೆ ಒಂದೊಂದೆ ಮೇಕೆಗಳು ಹಾರುವ ಮೂಲಕ ದೊಡ್ಡದಾದ ಹೊಳೆಯನ್ನು ಅನಾಯಾಸವಾಗಿ ದಾಟುತ್ತಿರುವ ವಿಡಿಯೋ ಇದಾಗಿತ್ತು. ಐಎಎಸ್‌ ಅಧಿಕಾರಿ ದೀಪಾಂಶು ಕಬ್ರಾ ಅವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿದ್ದರು. 

ಸ್ಮಾರ್ಟ್ ಬೆಕ್ಕುಗಳ ವಿಡಿಯೋ 
ಬೆಕ್ಕುಗಳು ಆಟವಾಡುವುದರಲ್ಲಿ ತುಂಬಾ ಸ್ಮಾರ್ಟ್, ಬೆಕ್ಕೊಂದು ಮನೆಯಲ್ಲಿದ್ದರೆ, ಮನೆಯವರ ಹಿಂದೆ ಮುಂದೆ ಸುತ್ತಾಡುತ್ತಾ ನೀವು ಎಲ್ಲಿ ಹೋಗುತ್ತಿರೋ ಅಲ್ಲೆಲ್ಲಾ ಬರುತ್ತಿರುತ್ತದೆ. ಕೂತರೆ ತೊಡೆ ಮೇಲೆ ಬಂದು ಮಲಗಿ ಬೆಚ್ಚನೆ ನಿದ್ದೆ ಮಾಡಲು ಬಯಸುವ ಬೆಕ್ಕು ಮನೆಯವರ ಅಚ್ಚುಮೆಚ್ಚಿನ ಪ್ರಾಣಿಯಾಗಿದೆ. ಹಾಗೆಯೇ ಇಲ್ಲೊಂದು ಬೆಕ್ಕು ತನ್ನ ಮಾಲೀಕರಿಗೆ ಸಹಾಯ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಪಾರಿವಾಳಗಳೂ ಇಲ್ಲಿ ಕೋಟ್ಯಧಿಪತಿಗಳು: ಮೂಕ ಪಕ್ಷಿಗಳಿಗಾಗಿ ದೇಣಿಗೆ ಸಂಗ್ರಹ!

ಮನೆಯವರ ಬೀಗದ ಕೀಯೊಂದು ಅಂಗಳ ಪಕ್ಕದಲ್ಲಿರುವ ಕಾಂಪೌಂಡ್‌ನಲ್ಲಿರುವ ತೂತಿನೊಳಗೆ ಅಚಾನಕ್ ಆಗಿ ಬಿದ್ದು, ಹೋಗುತ್ತದೆ. ಮಹಿಳೆ ಎಷ್ಟೇ ಪ್ರಯತ್ನ ಮಾಡಿದರು ಈ ಕೀಯನ್ನು ಆ ತೂತಿನಿಂದ ಹೊರ ತರಲು ಸಾಧ್ಯವಾಗುವುದಿಲ್ಲ. ಈ ವೇಳೆ ಸಹಾಯ ಮಾಡುವ ಕರಿ ಬಣ್ಣದ ಬೆಕ್ಕು ಆ ತೂತಿನೊಳಗೆ ತನ್ನ ಕೈಯನ್ನು ಹಾಕಿ ಹಲವು ಬಾರಿ ಕೀಯನ್ನು ಹೊರಗೆ ತೆಗೆಯಲು ಪ್ರಯತ್ನಿಸುತ್ತದೆ. ಕೊನೆಯದಾಗಿ ಕೀಯನ್ನು ಮೇಲೆತ್ತುವಲ್ಲಿ ಬೆಕ್ಕು ಯಶಸ್ವಿಯಾಗುತ್ತದೆ. ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣ ರೆಡಿಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಅನೇಕರು ಬೆಕ್ಕಿನ ಚಾಣಾಕ್ಷತನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಕೋಲಾರ: ವೇಣುಗೋಪಾಲ ಸ್ವಾಮಿ ದೇವಾಲಯದ ಗೋಪುರದಲ್ಲಿದೆ ಪಾರಿವಾಳ ಲೋಕ..!

ಮಗು ಅಮ್ಮನ ಕೀಯನ್ನು ಬೀಳಿಸಿತ್ತು, ಆದರೆ ಬೆಕ್ಕು ಅದರ ರಕ್ಷಣೆಗೆ ಬಂತು ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಆರಂಭದಲ್ಲಿ ಮಹಿಳೆ ಕೀಯನ್ನು ಹೊರತರಲು ಸಾಕಷ್ಟು ಪ್ರಯತ್ನ ಪಡುತ್ತಾರೆ. ಆದರೆ ಸಾಧ್ಯವಾಗುವುದಿಲ್ಲ. ಆದರೆ ಅಲ್ಲೇ ಇದ್ದ ಬೆಕ್ಕು, ತನ್ನ ಕೈಯನ್ನು ಕೆಳಗಿಳಿಸಿ ನಿಧಾನವಾಗಿ ಕೀಯನ್ನು ಮೇಲೆತ್ತುತ್ತದೆ. ಈ ವಿಡಿಯೋ ಪೋಸ್ಟ್ ಆದಾಗಿನಿಂದ 20,000 ಸಾವಿರಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಅಲ್ಲದೇ ಬೆಕ್ಕಿಗೆ ಸ್ಪೆಷಲ್‌ ಟ್ರಿಟ್ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಒಂದು ವೇಳೆ ಈ ವಿಡಿಯೋವನ್ನು ರೆಕಾರ್ಡ್‌ ಮಾಡದೇ ಇದ್ದಲ್ಲಿ ಯಾರೊಬ್ಬರು ನಂಬುತ್ತಿರಲಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 

Latest Videos
Follow Us:
Download App:
  • android
  • ios