ಬಡವನಾದರೇನು ಪ್ರಿಯೆ.... ಬಾನಡಿಗಳ ಹೊಟ್ಟೆ ತುಂಬಿಸುವ ಸಹೃದಯಿ: ವಿಡಿಯೋ ವೈರಲ್

ತಾವೇನೂ ಭಾರೀ ಸಿರಿವಂತರಲ್ಲದಿದ್ದರೂ ತಮ್ಮ ಸುತ್ತ ಆಹಾರ ಅರಸಿ ಬರುವ ಪುಟ್ಟ ಹಕ್ಕಿಗಳಿಗೆ ಕಾಳುಗಳನ್ನು ನೀಡುವ ಮೂಲಕಬೀದಿ ಬದಿ ಚಪ್ಪಲಿ ಹೊಲಿಯುವ ವ್ಯಕ್ತಿಯೊಬ್ಬರು ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ. ಇವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ(Social Media) ಸಾಕಷ್ಟು ವೈರಲ್ ಆಗಿದ್ದು, ನೆಟ್ಟಿಗರು ಅವರನ್ನು ಹಾಡಿ ಹೊಗಳಿದ್ದಾರೆ. 

cobbler feeding birds, heart warming humanity video goes viral akb

ಒಳ್ಳೆಯತನ ಮಾನವೀಯತೆಯನ್ನು ತೋರ್ಪಡಿಸಲು ಬಡವ ಬಲ್ಲಿದ ಎಂಬ ಬೇಧವಿಲ್ಲ. ದುಡ್ಡಿಲ್ಲದಿದ್ದರೂ ತಾವು ಹೃದಯವಂತಿಕೆಯಲ್ಲಿ ಬಲು ಸಿರಿವಂತರು ಎಂದು ತೋರಿಸಿಕೊಟ್ಟ ಅನೇಕರು ನಮ್ಮ ನಡುವೆ ಇದ್ದಾರೆ. ಪ್ರವಾಹ ಭೂಕಂಪನದ ಸಂದರ್ಭದಲ್ಲಿ ದೇಣಿಗೆ ಸಂಗ್ರಹದ ವೇಳೆ ಭಿಕ್ಷಕರು ಕೂಡ ತಮ್ಮ ಕೈಲಾದುದನ್ನು ನೀಡಿದ ನಿದರ್ಶನಗಳಿವೆ. ಹಾಗೆಯೇ ತಾವೇನೂ ಭಾರೀ ಸಿರಿವಂತರಲ್ಲದಿದ್ದರೂ ತಮ್ಮ ಸುತ್ತ ಆಹಾರ ಅರಸಿ ಬರುವ ಪುಟ್ಟ ಹಕ್ಕಿಗಳಿಗೆ ಕಾಳುಗಳನ್ನು ನೀಡುವ ಮೂಲಕಬೀದಿ ಬದಿ ಚಪ್ಪಲಿ ಹೊಲಿಯುವ ವ್ಯಕ್ತಿಯೊಬ್ಬರು ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ. ಇವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ(Social Media) ಸಾಕಷ್ಟು ವೈರಲ್ ಆಗಿದ್ದು, ನೆಟ್ಟಿಗರು ಅವರನ್ನು ಹಾಡಿ ಹೊಗಳಿದ್ದಾರೆ. 

ವಿಡಿಯೋದಲ್ಲಿ ಕಾಣಿಸುವಂತೆ ವ್ಯಕ್ತಿಯೊಬ್ಬರು ಎಂದಿನಂತೆ ತಮ್ಮ ಚಪ್ಪಲಿ ಹೊಲಿಯುವ ಕಸುಬು ಆರಂಭಿಸುವ ಸಲುವಾಗಿ ಬೀದಿ ಬದಿ ದೊಡ್ಡದಾದ ಕೊಡೆಯೊಂದರ ಕೆಳಗೆ ರಟ್ಟುಗಳನ್ನು ಹಾಸಿ ಕುಳಿತಿರುತ್ತಾರೆ. ಇವರನ್ನು ಕಂಡ ಕೂಡಲೇ ಪಕ್ಷಿಗಳು ಅಲ್ಲಿ ಸೇರಿದ್ದು, ಇವರು ನೀಡುವ ಆಹಾರಕ್ಕಾಗಿ ಕಾದು ಕುಳಿತಿರುವಂತೆ ಸುತ್ತಮುತ್ತ ನೋಡುತ್ತಿರುತ್ತವೆ. ಈ ವೇಳೆ ಕಾಳುಗಳು ತುಂಬಿದ ದೊಡ್ಡದಾದ ಪ್ಲಾಸ್ಟಿಕ್ ಕವರ್‌ನ್ನು ಹಕ್ಕಿಗಳ ಮುಂದೆ ಇಡುತ್ತಿದ್ದಂತೆ ಹಕ್ಕಿಗಳೆಲ್ಲ(Birds) ಗುಂಪಾಗಿ ಬಂದು ಕಾಳುಗಳನ್ನು ತಿನ್ನಲು ಶುರು ಮಾಡುತ್ತವೆ. 

 

ಇದು ಈ ಚಪ್ಪಲಿ ಹೊಲಿಯುವ ವ್ಯಕ್ತಿಯ ದೈನಂದಿನ ಚಟುವಟಿಕೆ ಎಂಬುದನ್ನು ನಾವು ಊಹಿಸಬಹುದು. ಏಕೆಂದರೆ ಆತ ಆಹಾರ ನೀಡುವ ಮೊದಲೇ ಹಕ್ಕಿಗಳು ಅಲ್ಲಿ ಆತ ನೀಡುವ ಆಹಾರಕ್ಕಾಗಿ ಕಾಯುತ್ತಾ ಕುಳಿತಿವೆ. ಈ ವಿಡಿಯೋ ಹಲವು ಮಾನವೀಯ ಮೌಲ್ಯಗಳನ್ನು ತಿಳಿಸುತ್ತದೆ. ಮಾನವೀಯತೆ ಕರುಣೆ ತೋರಲು ನೀವು ಮಿಲಿಯನೇರ್ ಆಗಿರಬೇಕಾಗಿಲ್ಲ ಎಂಬುದನ್ನು ಹೇಳುತ್ತದೆ.

ಗದಗ: ಶೆಟ್ಟಿಕೇರಿ ಕೆರೆಗೆ ವಲಸೆ ಬಂದ ವಿದೇಶಿ ಹಕ್ಕಿಗಳು

ಈ ವಿಡಿಯೋಗೆ ನೆಟ್ಟಿಗರು ಕೂಡ ಬಹಳ ಭಾವುಕರಾಗಿದ್ದು, ಚಪ್ಪಲಿ ಹೊಲಿಯುವ (cobbler) ವ್ಯಕ್ತಿಯ ದೊಡ್ಡತನಕ್ಕೆ ಶಹಭಾಷ್ ಎಂದಿದ್ದಾರೆ. ಒಬ್ಬ ಸಾಮಾನ್ಯ ವ್ಯಕ್ತಿ ಇಷ್ಟು ಶ್ರೀಮಂತ ಆಗಲು ಹೇಗೆ ಸಾಧ್ಯ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ನಮ್ಮ ಸುತ್ತಲೂ ಈ ಹಕ್ಕಿಗಳು ಈಗ ಕಾಣಲೇ ಸಿಗುತ್ತಿಲ್ಲ.ಕನಿಷ್ಠ ಇಲ್ಲಾದರೂ ಈ ಹಕ್ಕಿಗಳು ಕಾಣ ಸಿಗುತ್ತಿವೆಯಲ್ಲ ದೇವರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇವನು ನಿಜವಾದ ಶ್ರೀಮಂತ ಎಂದು ಒಬ್ಬರು ಹೇಳಿದರೆ ಮತ್ತೊಬ್ಬರು ಮಾನವೀಯತೆಯ ಅಪೂರ್ವ ಕ್ಷಣ ಎಂದು ಪ್ರತಿಕ್ರಿಯಿಸಿದ್ದಾರೆ. 

ಅವನತಿ ಅಂಚಿನ ಗುಬ್ಬಿಗಳಿಗೆ ಆಸರೆಯಾದ ಪಕ್ಷಿ ಪ್ರೇಮಿ ಚಂದ್ರು

ಇನ್ಸ್ಟಾಗ್ರಾಮ್‌ನಲ್ಲಿ ಎಂಡಿ ಉಮ್ಮರ್ ಹುಸೇನ್ ಎಂಬುವವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿ ಪಕ್ಷಿಗಳ ಸಾಕಷ್ಟು ವಿಡಿಯೋಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಅನೇಕ ವಿಡಿಯೋಗಳು ಮನಸ್ಸಿಗೆ ಮುದ ನೀಡುವ ಜೊತೆ ನಕ್ಕು ನಗಿಸುವಂತೆ ಮಾಡುತ್ತವೆ. ಕೆಲ ದಿನಗಳ ಹಿಂದೆ ಪ್ರತಿಮೆಯ ಮೇಲಿಂದ ಹುಲ್ಲಿಗೆ ಶ್ವೇತ ವರ್ಣದ ನವಿಲೊಂದು ಹಾರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇಟಲಿಯ (Italy) ಸ್ಟ್ರೆಸಾ (Stresa) ಬಳಿಯ ಮ್ಯಾಗಿಯೋರ್ (Maggiore Lake) ಸರೋವರದಲ್ಲಿರುವ ಬೊರೊಮಿಯನ್ ದ್ವೀಪಗಳಲ್ಲಿ (Borromean islands) ಒಂದಾದ ಐಸೊಲಾ ಬೆಲ್ಲಾದ (Isola Bella) ಸುಂದರವಾದ ಉದ್ಯಾನದಲ್ಲಿ ಈ ವೀಡಿಯೊ ಸೆರೆ ಆಗಿದೆ. ಇಲ್ಲಿನ ತೋಟಗಳಲ್ಲಿ ಬಿಳಿ ಮತ್ತು ಬಣ್ಣದ ನವಿಲುಗಳು ಮುಕ್ತವಾಗಿ ವಾಸಿಸುತ್ತವೆ. ಬೊರೊಮಿಯೊ ದ್ವೀಪಗಳು ತಮ್ಮ ಮನಮೋಹಕ ಸೌಂದರ್ಯದಿಂದ ಎಲ್ಲರನ್ನು ಸೆಳೆಯುವ ಸರೋವರದ ಮಧ್ಯಭಾಗದಲ್ಲಿರುವ ಪುಟ್ಟ ಸ್ವರ್ಗವಾಗಿದೆ.

 

Latest Videos
Follow Us:
Download App:
  • android
  • ios