ಅಮೆರಿಕಾ ಚುನಾವಣೆಗೂ ಮೊದಲು ಭಾರತೀಯ ಮೂಲದ ಅಜ್ಜ ಅಜ್ಜಿಯ ನೆನೆದ ಕಮಲಾ ಹ್ಯಾರಿಸ್
ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದಿಂದ ಡೋನಾಲ್ಡ್ ಟ್ರಂಪ್ ವಿರುದ್ಧ ಸ್ಪರ್ಧೆ ಮಾಡುತ್ತಿರುವ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಭರ್ಜರಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ಪ್ರಚಾರದ ವೇಳೆ ತನ್ನ ಭಾರತೀಯ ಮೂಲದ ಅಜ್ಜ ಅಜ್ಜಿಯನ್ನು ನೆನಪು ಮಾಡಿಕೊಂಡು ಅವರಿಗೆ ಗೌರವ ನಮನವನ್ನು ಸಲ್ಲಿಸಿದರು
ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದಿಂದ ಡೋನಾಲ್ಡ್ ಟ್ರಂಪ್ ವಿರುದ್ಧ ಸ್ಪರ್ಧೆ ಮಾಡುತ್ತಿರುವ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಭರ್ಜರಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ಇತ್ತೀಚೆಗೆ ಅವರು ಚುನಾವಣಾ ಪ್ರಚಾರದ ವೇಳೆ ತನ್ನ ಭಾರತೀಯ ಮೂಲದ ಅಜ್ಜ ಅಜ್ಜಿಯನ್ನು ನೆನಪು ಮಾಡಿಕೊಂಡು ಅವರಿಗೆ ಗೌರವ ನಮನವನ್ನು ಸಲ್ಲಿಸಿದರು. ಕಮಲಾ ಹ್ಯಾರಿಸ್ ಅವರ ತಾಯಿ ಭಾರತದ ತಮಿಳುನಾಡಿನ ಚೆನ್ನೈನವರಾಗಿದ್ದಾರೆ. ಸಾರ್ವಜನಿಕ ಸೇವೆ ಮತ್ತು ಉತ್ತಮ ಭವಿಷ್ಯಕ್ಕಾಗಿ ಹೋರಾಡುವ ತನ್ನ ಅಜ್ಜ ಅಜ್ಜಿಯ ಬದ್ಧತೆಯೇ ತನ್ನನ್ನು ಇಂದಿಗೂ ಮುನ್ನಡೆಸುತ್ತಿದೆ ಎಂದು ಕಮಲಾ ಹ್ಯಾರಿಸ್ ಹೇಳಿದ್ದಾರೆ.
ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್, ತಮ್ಮ ಅಜ್ಜ ಅಜ್ಜಿಯ ಫೋಟೋವನ್ನು ಹಂಚಿಕೊಂಡಿದ್ದು, ಸಣ್ಣ ಹುಡುಗಿಯಾಗಿದ್ದಾಗ ನಾನು ನನ್ನ ಭಾರತದಲ್ಲಿರುವ ಅಜ್ಜ ಅಜ್ಜಿಯ ಮನೆಗೆ ಬರುತ್ತಿದೆ. ನನ್ನ ಅಜ್ಜ ನನ್ನನ್ನು ಮುಂಜಾನೆ ವಾಕ್ ಮಾಡಲು ಹೋಗುವ ವೇಳೆ ಜೊತೆಗೆ ಕರೆದೊಯ್ಯುತ್ತಿದ್ದರು. ಅಲ್ಲಿ ಅವರು ಸಮಾನತೆಗಾಗಿ ಹೋರಾಡುವ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಅಗತ್ಯಗಳ ಬಗ್ಗೆ ಚರ್ಚಿಸುತ್ತಿದ್ದರು. ಅವರೊಬ್ಬ ರಿಟೈರ್ ಆಗಿದ್ದ ನಾಗರಿಕ ಸೇವಕರಾಗಿದ್ದರು(civil servant) ಅಲ್ಲದೇ ಅವರು ಭಾರತ ಸ್ವಾತಂತ್ರ್ಯ ಸಂಗ್ರಾಮದ ಭಾಗವಾಗಿದ್ದರು.
ಈ ಚುನಾವಣೆಗೆ ಟ್ರಂಪ್ V/S ಕಮಲಾ ಹ್ಯಾರಿಸ್ ಫೈಟ್..? ಸ್ಪರ್ಧೆಯಿಂದ ಹಿಂದೆ ಸರಿಯುತ್ತಾರಾ ಜೋ ಬೈಡನ್..?
ಅಲ್ಲದೇ ಜನನ ನಿಯಂತ್ರಣ ಯೋಜನೆಯ ಬಗ್ಗೆ ಮಹಿಳೆಯರಲ್ಲಿ ಅರಿವು ಮೂಡಿಸುವುದಕ್ಕಾಗಿ ಅವರು ಕೈಯಲ್ಲಿ ಸಣ್ಣ ಧ್ವನಿವರ್ಧಕವನ್ನು ಹಿಡಿದು ದೇಶಾದ್ಯತ ಸುತ್ತಾಡಿದರು. ಅವರ ಈ ಸಾರ್ವಜನಿಕ ಸೇವೆಯ ಬದ್ಧತೆ ಹಾಗೂ ಉತ್ತಮ ಭವಿಷ್ಯಕ್ಕಾಗಿ ಹೋರಾಟ ನನ್ನಲ್ಲಿ ಇಂದಿಗೂ ಜೀವಂತವಾಗಿದೆ.
2020 ರಲ್ಲಿ ನಡೆದ ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೂ ಮೊದಲು ಕೂಡ ಕಮಲಾ ಹ್ಯಾರಿಸ್ ಇದೇ ಮಾತನ್ನು ಹೇಳಿದ್ದರು. ತಾವು ಅಜ್ಜಅಜ್ಜಿಯ ಹೋರಾಟದ ಗುಣದಿಂದ ಪ್ರಭಾವಿತರಾಗಿದ್ದೇವೆ, ಪ್ರತಿವರ್ಷ ನಾವು ಭಾರತಕ್ಕೆ ಭೇಟಿ ನೀಡುತ್ತೇವೆ. ಭಾರತದ ಸ್ವಾತಂತ್ರಕ್ಕಾಗಿ ನನ್ನ ಅಜ್ಜ ಹೋರಾಡಿದ್ದರು, ಚಿಕ್ಕ ಹುಡುಗಿಯಾಗಿದ್ದ ನನ್ನನ್ನು ಅಜ್ಜ ವಾಕ್ ಕರೆದುಕೊಂಡು ಹೋಗುತ್ತಿದ್ದರು ಎಂದು ಕಮಲಾ ಹ್ಯಾರಿಸ್ 2020 ರಲ್ಲಿ ಹೇಳಿದ್ದರು. ಅದನ್ನೇ ಈಗ ಚುನಾವಣೆಗೂ ಮೊದಲು ಮತ್ತೆ ಪುನರುಚ್ಚರಿಸಿದ್ದಾರೆ ಕಮಲಾ ಹ್ಯಾರಿಸ್. ನನ್ನ ಅಜ್ಜನ ಜೊತೆಗಾರರೆಲ್ಲರೂ ಮಹಾನ್ ನಾಯಕರಾಗಿದ್ದರು. ಅವರು ಯಾವಾಗಲೂ ಪ್ರಜಾಪ್ರಭುತ್ವಕ್ಕಾಗಿ ಹೋರಾಡುವ ಅಗತ್ಯದ ಬಗ್ಗೆ ಮಾತನಾಡುತ್ತಿದ್ದರು. ಅಲ್ಲದೇ ಜನರ ನಾಗರಿಕ ಹಕ್ಕುಗಳು ಹಾಗೂ ಸಾಮಾನತೆಯ ಹಕ್ಕುಗಳಿಗಾಗಿ ಹೋರಾಡುವ ಅಗತ್ಯವನ್ನು ಅವರು ಹೇಳಿದ್ದರು ಎಂದು ಹ್ಯಾರಿಸ್ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಹುದ್ದೆ ರೇಸ್‌ಗೆ ಮತ್ತೊಬ್ಬ ಭಾರತೀಯ: ರಿಪಬ್ಲಿಕ್‌ನಿಂದ ಹಿರ್ಷವರ್ಧನ್ ಸ್ಪರ್ಧೆ