2024ರಲ್ಲಿ ನಡೆಯಲಿರುವ ಅಮೆರಿಕದ ನೂತನ ಅಧ್ಯಕ್ಷರ ಆಯ್ಕೆ ರೇಸ್‌ಗೆ ಇದೀಗ ಮತ್ತೊಬ್ಬ ಭಾರತೀಯ ಸೇರ್ಪಡೆಯಾಗಿದ್ದಾರೆ. ಭಾರತೀಯ ಮೂಲದ ಹಿರ್ಷವರ್ಧನ್‌ ಸಿಂಗ್‌, ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಆಕಾಂಕ್ಷಿಯಾಗಿ ಗುರುವಾರ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.

ವಾಷಿಂಗ್ಟನ್‌: 2024ರಲ್ಲಿ ನಡೆಯಲಿರುವ ಅಮೆರಿಕದ ನೂತನ ಅಧ್ಯಕ್ಷರ ಆಯ್ಕೆ ರೇಸ್‌ಗೆ ಇದೀಗ ಮತ್ತೊಬ್ಬ ಭಾರತೀಯ ಸೇರ್ಪಡೆಯಾಗಿದ್ದಾರೆ. ಭಾರತೀಯ ಮೂಲದ ಹಿರ್ಷವರ್ಧನ್‌ ಸಿಂಗ್‌, ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಆಕಾಂಕ್ಷಿಯಾಗಿ ಗುರುವಾರ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ರಿಪಬ್ಲಿಕನ್‌ ಪಕ್ಷದಿಂದ ಈಗಾಗಲೇ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಮ್ಮ ಉಮೇದುವಾರಿಕೆ ಘೋಷಿಸಿದ್ದು, ಮುಂಚೂಣಿಯಲ್ಲಿದ್ದಾರೆ. ಅವರ ಜೊತೆಗೆ ಭಾರತೀಯ ಮೂಲದ ನಿಕ್ಕಿ ಹ್ಯಾಲೆ ಮತ್ತು ವಿವೇಕ್‌ ರಾಮಸ್ವಾಮಿ ಕೂಡಾ ಕಣಕ್ಕೆ ಇಳಿದಿದ್ದಾರೆ. ಇವರ ಪೈಕಿ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದು 2024ರ ಜು.15ರಿಂದ 18ರೊಳಗೆ ನಡೆಯಲಿರುವ ಪಕ್ಷದ ಆಂತರಿಕ ಚುನಾವಣೆಯಲ್ಲಿ ನಿರ್ಧಾರವಾಗಲಿದೆ. ಹೀಗೆ ಆಯ್ಕೆಯಾದವರು ಡೆಮಾಕ್ರಟ್‌ ಪಕ್ಷದ ಅಭ್ಯರ್ಥಿಗಳನ್ನು ಎದುರಿಸಲಿದ್ದಾರೆ.

ತಮ್ಮ ಉಮೇದುವಾರಿಕೆ ಬಗ್ಗೆ ಟ್ವೀಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಹರ್ಷವರ್ಧನ್‌, ನಾನು ಆಜೀವ ರಿಪಬ್ಲಿಕನ್‌ ಮತ್ತು ಅಮೆರಿಕ ಮೊದಲು ಎಂಬ ನಂಬಿಕೆ ಹೊಂದಿದವ. ಕಳೆದ ಕೆಲ ವರ್ಷಗಳಿಂದ ಕಳೆದುಹೋಗಿರುವ ಅಮೆರಿಕದ ಮೌಲ್ಯಗಳನ್ನು ಪುನರ್‌ ಸ್ಥಾಪಿಸಲು ದೇಶಕ್ಕೆ ಶಕ್ತಿಶಾಲಿ ನಾಯಕತ್ವದ ಅವಶ್ಯಕತೆ ಇದೆ. ಹೀಗಾಗಿ ನಾನು ಕಣಕ್ಕೆ ಇಳಿಯುತ್ತಿದ್ದೇನೆ. ಮೇಲಾಗಿ ನಾನು ಶುದ್ಧ ರಕ್ತದ ಏಕೈಕ ಅಭ್ಯರ್ಥಿ. ಏಕೆಂದರೆ ನಾನು ಕೋವಿಡ್‌ ಲಸಿಕೆ ಪಡೆದುಕೊಂಡಿಲ್ಲ ಎಂದು ಹೇಳಿದ್ದಾರೆ.

ಭಾರತದಿಂದ ಅಕ್ಕಿ ರಫ್ತು ನಿಷೇಧ: ಅಮೆರಿಕದಲ್ಲಿ 3 ಪಟ್ಟು ಬೆಲೆ ಏರಿಕೆ; ಸ್ಟಾಕ್‌ ಮಾಡ್ಕೊಳ್ಳಲು ಅನಿವಾಸಿ ಭಾರತೀಯರ ಕ್ಯೂ!

ಪ್ರೇಮ ವೈಫಲ್ಯ: ಭಾರತೀಯ ಮೂಲದ ವಿದ್ಯಾರ್ಥಿನಿ ಕೈ ಕಾಲು ಕಟ್ಟಿ ಜೀವಂತವಾಗಿ ಹೂತು ಹಾಕಿದ NRI