ಅಯ್ಯೋ ಅರ್ಜೆಂಟ್ ಅಂತ ಓಡೋಗಿ ಕೂರೋ ಮುನ್ನ ಜೋಪಾನ: ಬೇಸಿನ್ ಅಲ್ಲಿ ಬುಸ್‌ ಬುಸ್‌

ನೇಚರ್ ಕಾಲ್ ಅಥವಾ ಒಂದು ಎರಡು, ಅಥವಾ ನೈಸರ್ಗಿಕ ಕರೆ ಬಂದಾಗ ಎಲ್ಲರೂ ಟಾಯ್ಲೆಟ್‌ನತ್ತ ಓಡೋಗಿ ಬಾಗಿಲು ಹಾಕಿಕೊಂಡು ಕೂತು ಬಿಡ್ತಾರೆ. ಆದರೆ ಅವಸರದಲ್ಲಿ ಹೀಗೆ ಓಡೋಗಿ ಕೂರುವ ಮೊದಲು ನಿಮ್ಮ ಟಾಯ್ಲೆಟ್ ಬೇಸಿನ್ ಅನ್ನ ಸೂಕ್ಷ್ಮವಾಗಿ ಗಮನಿಸುವುದೊಳಿತು ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ. ಯಾಕೆ ಅಂತೀರಾ ಈ ಸ್ಟೋರಿ ನೋಡಿ.

Before sitting to pee must watch your toilet commode, Police remove gray rat snake from toilet in Us akb

ನೇಚರ್ ಕಾಲ್ ಅಥವಾ ಒಂದು ಎರಡು, ಅಥವಾ ನೈಸರ್ಗಿಕ ಕರೆ ಬಂದಾಗ ಎಲ್ಲರೂ ಟಾಯ್ಲೆಟ್‌ನತ್ತ ಓಡೋಗಿ ಬಾಗಿಲು ಹಾಕಿಕೊಂಡು ಕೂತು ಬಿಡ್ತಾರೆ. ಆದರೆ ಅವಸರದಲ್ಲಿ ಹೀಗೆ ಓಡೋಗಿ ಕೂರುವ ಮೊದಲು ನಿಮ್ಮ ಟಾಯ್ಲೆಟ್ ಬೇಸಿನ್ ಅನ್ನ ಸೂಕ್ಷ್ಮವಾಗಿ ಗಮನಿಸುವುದೊಳಿತು ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ. ಯಾಕೆ ಅಂತೀರಾ ಈ ಸ್ಟೋರಿ ನೋಡಿ. ಇಲ್ಲೊಂದು ಕಡೆ ಟಾಯ್ಲೆಟ್ ಕಮೋಡ್‌ನಲ್ಲಿ ಹಾವೊಂದು ಕಾಣಿಸಿಕೊಂಡಿದ್ದು ಮನೆ ಮಂದಿಯನ್ನು ಬೆಚ್ಚಿ ಬೀಳಿಸಿದೆ. ಅಮೆರಿಕಾದ ಯುಫೌಲಾ ಅಲಬಾಮಾದಲ್ಲಿ ಈ ಘಟನೆ ನಡೆದಿದೆ.

ಟಾಯ್ಲೆಟ್‌ನಲ್ಲಿ ಅದರಲ್ಲೂ ವೆಸ್ಟರ್ನ್ ಟಾಯ್ಲೆಟ್‌ನಲ್ಲಿ ಕುಳಿತಿದ್ದಾಗ ಹಾವು ಬಂದು ಕಚ್ಚಿಬಿಟ್ರೆ ಅಂತ ಯೋಚಿಸಿದ್ರೆನೇ ಒಂದು ಕ್ಷಣ ಭಯ ಆಗುತ್ತೆ. ಅಂತದ್ರಲ್ಲಿ ಇಲ್ಲಿ ನಿಜವಾಗಿಯೂ ಅಂತಹ ಘಟನೆಯೊಂದು ನಡೆದಿದೆ. ಟಾಯ್ಲೆಟ್‌ನಲ್ಲಿ ಸಿಗುವ ನೆಮ್ಮದಿ ಬೇರಲ್ಲೂ ಸಿಗಲ್ಲ ಅಂತ ಅನೇಕರು ಹೇಳುವುದನ್ನು ಕೇಳಿದ್ದೇವೆ. ಆದರೆ ಇಲ್ಲಿ ಹಾವು ಅಲ್ಲಿ  ನೆಮ್ಮದಿ ಕೆಡಿಸಿದೆ.

ಅಮೆರಿಕಾದ ಅಲಬಾಮಾದ (Alabama) ಯುಫೌಲಾದಲ್ಲಿ (Eufaula) ಇರುವ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಅಲಬಾಮಾದ ಯುಫೌಲಾ ಪೊಲೀಸರು ಸಾಮಾಜಿಕ ಜಾಲತಾಣ (social media) ಫೇಸ್‌ಬುಕ್‌ನಲ್ಲಿ ಫೋಟೋದೊಂದಿಗೆ ಈ ವಿಚಾರ ಹಂಚಿಕೊಂಡಿದ್ದಾರೆ. ಮನೆಯ ಟಾಯ್ಲೆಟ್‌ನಲ್ಲಿ ಹಾವಿರುವ ಬಗ್ಗೆ ಪೊಲೀಸರಿಗೆ ಕರೆ ಬಂದಿದೆ. ಬಳಿಕ ಅವರು ಕರೆ ಬಂದ ಮನೆಗೆ ಧಾವಿಸಿ ಹಾವನ್ನು ಹಿಡಿದು ಅವುಗಳ ಆವಾಸ ಸ್ಥಾನಕ್ಕೆ ಬಿಟ್ಟಿದ್ದಾರೆ. ಇದನ್ನು ಗ್ರೇ ರಾಟ್ ಹಾವು ಎಂದು ಪೊಲೀಸರು ಗುರುತಿಸಿದ್ದಾರೆ.

4 ಬಾರಿ ಹಾವು ಕಚ್ಚಿದ್ರೂ "ಐಯಾಮ್‌ ಸ್ಟೆಡಿ" ಎಂದು ಗಟ್ಟಿ ನಿಂತ ವ್ಯಕ್ತಿ; ಕುಡುಕರ ಶಕ್ತಿ ಅಂದ್ರೆ ಏನಂದುಕೊಂಡ್ರಿ!

ನಾವು ಕರ್ತವ್ಯದಲ್ಲಿದ್ದಾಗ ಎಂತಹ ಕರೆ ಸ್ವೀಕರಿಸುತ್ತೇವೆ ಎಂದು ಮೊದಲೇ ಹೇಳಲಾಗದು. ಹಾಗೆಯೇ ಈ ಕರೆಯೂ ನಮಗೆ ವಿಭಿನ್ನವಾಗಿತ್ತು. ಟಾಯ್ಲೆಟ್‌ನಲ್ಲಿ ಹಾವಿರುವ ಬಗ್ಗೆ ನಮಗೆ ಕರೆ ಬಂದಿತು. ನಂತರ ಆ ಮನೆಗೆ ತೆರಳಿ ಕರೆಯದೆ ಬಂದ ಅತಿಥಿಯನ್ನು ಮನೆಯಿಂದ ಹೊರ ತಂದು ಅದು ಇರಬೇಕಾದ ಜಾಗದಲ್ಲಿ ಬಿಡಲಾಯಿತು. ಈ ಹಾವು ಅಪಾಯಕಾರಿಯಲ್ಲ. ಇದೊಂದು ನಿರುಪದ್ರವಿ ಬೂದು ಬಣ್ಣದ ರಾಟ್ ಹಾವು (Gray Rat) ಆಗಿತ್ತು ಎಂದು ಪೊಲೀಸರು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ(Facebook post)  ಬರೆದುಕೊಂಡಿದ್ದಾರೆ. 

Viral Video: ಮಹಿಳೆಯ ಕಿವಿಯಲ್ಲಿ ಸಿಕ್ಕಿಹಾಕಿಕೊಂಡ ಹಾವು: ಹೊರತೆಗೆಯೋಕೆ ವೈದ್ಯರ ಪ್ರಯತ್ನ ಹೇಗಿದೆ ನೋಡಿ..!

ಬರಹದ ಜೊತೆ ಟಾಯ್ಲೆಟ್ ಕಮೋಡ್‌ನಲ್ಲಿರುವ (commode) ಹಾವಿನ ಫೋಟೋವನ್ನು (photograph) ಕೂಡ ಪೊಲೀಸರು ಶೇರ್ ಮಾಡಿದ್ದಾರೆ. ಈ ಫೋಟೋ (Photo) ನೋಡಿದ ಅನೇಕರು ಗಾಬರಿಯಾಗಿದ್ದಾರೆ. ಹೀಗಾಗಿ ರಾತ್ರಿ ವೇಳೆಯಲ್ಲಿ ಟಾಯ್ಲೆಟ್‌ಗೆ ಹೋಗುವ ಮುನ್ನ ಲೈಟ್‌ ಆನ್ ಮಾಡುತ್ತೇವೆ ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಮತ್ತೊಬ್ಬರು ಇದೇ ಕಾರಣಕ್ಕೆ ನಾನು ಕೂಡ ಟಾಯ್ಲೆಟ್ ಹೋಗುವ ಮೊದಲು ಲೈಟ್ ಬೆಳಗಿ ಕಮೋಡ್ ನೋಡುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಒಂದು ವೇಳೆ ನಾನು ಈ ಸಂದರ್ಭದಲ್ಲಿ ಅಲ್ಲಿರುತ್ತಿದ್ದರೆ ತಲೆ ತಿರುಗಿ ಬೀಳುತ್ತಿದ್ದೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನು ನೋಡಿದ ಬಳಿಕ ಯಾರೂ ಕೂಡ ಟಾಯ್ಲೆಟ್‌ಗೆ ಲೈಟ್ ಹಾಕದೇ ಹೋಗಲು ಸಾಧ್ಯವಿಲ್ಲ ಎಂದು ಮಗದೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದಕ್ಕೂ ಮೊದಲು ಕೆಲ ದಿನಗಳ ಹಿಂದೆ ಥಾಯ್ಲೆಂಡ್‌ನ (Thailand) ಶೌಚಾಲಯದಲ್ಲಿ (washroom) ಹಾವೊಂದು ಕಾಣಿಸಿಕೊಂಡ ವಿಡಿಯೋ ವೈರಲ್ ಆಗಿತ್ತು. 

Latest Videos
Follow Us:
Download App:
  • android
  • ios