Asianet Suvarna News Asianet Suvarna News

4 ಬಾರಿ ಹಾವು ಕಚ್ಚಿದ್ರೂ "ಐಯಾಮ್‌ ಸ್ಟೆಡಿ" ಎಂದು ಗಟ್ಟಿ ನಿಂತ ವ್ಯಕ್ತಿ; ಕುಡುಕರ ಶಕ್ತಿ ಅಂದ್ರೆ ಏನಂದುಕೊಂಡ್ರಿ!

Belgaum News: ಒಂದು ಬಾರಿ ಹಾವು ಕಚ್ಚಿದರೇ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದಿದ್ದರೆ ಬದುಕೋದು ಕಷ್ಟ. ಆದರೆ ನಾಲ್ಕು ಬಾರಿ ಹಾವು ಕಚ್ಚಿದರೂ ಏನೂ ಆಗದೆ ಅರಾಮಾಗಿದ್ದಾನೆ ಬೆಳಗಾವಿಯ ವ್ಯಕ್ತಿ. ಹಿಗ್ಗಾಮುಗ್ಗಾ ಕುಡಿದು ಹಾವು ಹಿಡಿಯಲು ಬಂದವನಿಗೆ ಬೈ ತುಂಬಾ ಹಾವು ಕಚ್ಚಿದ್ದರೂ ಐ ಯಾಮ್‌ ಸ್ಟಡಿ ಎಂದು ನಿಂತಿದ್ದಾನೆ.

man under the influence of alcohol was bitten by snake four times yet he survives in Belgaum
Author
First Published Sep 14, 2022, 3:22 PM IST

ಬೆಳಗಾವಿ: ಕುಡಿತದಿಂದ ಸಾವು ಸಂಭವಿಸಬಹುದು ಎಂಬ ಎಚ್ಚರಿಕೆ ಎಲ್ಲರಿಗೂ ತಿಳಿದ ವಿಚಾರ. ಕುಡಿತ ಲಿಮಿಟ್‌ ಮೀರಿದರೆ ಆರೋಗ್ಯ ಸ್ಥಿತಿ ಹದಗೆಡುತ್ತದೆ. ಕರುಳು ಕೆಲಸ ನಿಲ್ಲಿಸಿದರೆ ಸಾವಿನ ಮನೆಗೆ ಒಂದು ಹೆಜ್ಜೆ ಬಾಕಿಯಷ್ಟೆ. ಆದರೆ ನಿಯಮಿತವಾಗಿ ಕುಡಿಯುವುದು ಒಳ್ಳೆಯದು ಎಂದೂ ಕೆಲ ಅಧ್ಯಯನಗಳು ಹೇಳುತ್ತವೆ. ಅಳತೆ ಮೀರಿದರೆ ಅಮೃತವೂ ವಿಷವೇ ಎಂಬ ಮಾತಿದೆ. ಅದು ಎಲ್ಲ ರೀತಿಯ ಚಟಗಳಿಗೂ ಅನ್ವಯವಾಗುತ್ತವೆ. ಈ ಪೀಠಿಕೆಗೆ ಕಾರಣ ಬೆಳಗಾವಿಯಲ್ಲಿ ನಡೆದ ಒಂದು ಘಟನೆ. ನಾಲ್ಕು ಬಾರಿ ಹಾವು ಕಚ್ಚಿದರೂ ವ್ಯಕ್ತಿಯೊಬ್ಬ ಅರಾಮಾಗಿದ್ದಾನೆ. ಯಾವ ವೈದ್ಯರಿಗೂ ತೋರಿಸಿಲ್ಲ, ಮೈಯಲ್ಲಿ ವಿಷವೂ ಕೆಲಸ ಮಾಡಿಲ್ಲ. ಅದೂ ಹಾವು ಕಚ್ಚಿದಾಗ ಆತ ವಿಪರೀತ ಕುಡಿದಿದ್ದ. ಅದೇ ಅಮಲಿನಲ್ಲಿ ಹಾವು ಕಚ್ಚಿದರೂ ಜಗ್ಗಲಿಲ್ಲ, ಕಡೆಗೂ ಹಾವನ್ನು ಹಿಡಿದೇ ಬಿಟ್ಟ. 

ಸರ್ವರೋಗಕ್ಕೂ ಸಾರಾಯಿ ಮದ್ದು ಎಂದು ಮಧ್ಯಪ್ರಿಯರ ಮಾತು ಆದರೆ ಮಧ್ಯದ ಅಮಲಿನಲ್ಲಿಯೇ ಎಂಟು ಅಡಿಯಷ್ಟು ಉದ್ದದ ಹಾವನ್ನು ಹಿಡಿದಿರುವ ಘಟನೆ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಪಾಲಭಾವಿ ಸೊನ್ನದ್ ತೋಟದ ಅಂಗನವಾಡಿಯಲ್ಲಿ ಕಾಣಿಸಿಕೊಂಡ ಹಾವನ್ನು ರಮೇಶ್ ಬಾಗಡೆ ಎಂಬುವರು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. 

ಇದನ್ನೂ ಓದಿ: ನಡು ರಸ್ತೆಯಲ್ಲೇ ಗಲಾಟೆ... ಕುಡುಕಿಯ ರಂಪಾಟಕ್ಕೆ ಪೊಲೀಸರೇ ಸುಸ್ತು

ಆದರೆ ಸುರೇಶ್ ಬಾಗಡೆ ಮಧ್ಯದ ಅಮಲಿನಲ್ಲಿಯೇ ಹಾವನ್ನು ಹಿಡಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯಾವುದೇ ಮುಂಜಾಗ್ರತ ಕ್ರಮ ಅನುಸರಿಸದೇ ಇರುವುದರಿಂದ ರಮೇಶ್‌ಗೆ ಮುಖ, ಗಲ್ಲ, ತುಟಿಗೆ ಮತ್ತು ಕಾಲಿಗೆ ನಾಲ್ಕು ಬಾರಿ ಹಾವು ಕಚ್ಚಿದೆ. ಅದೃಷ್ಟಾಚಾರ ರಮೇಶ್‌ಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಕಳೆದ 20 ವರ್ಷಗಳಿಂದ ಹಾವುಗಳನ್ನು ಹಿಡಿಯುತ್ತೇನೆ ಎಂದು ಹೇಳಿದ್ದಲ್ಲದೆ ಬೆಳ್ಳುಳ್ಳಿ ಹಾಗೂ ನೀರನ್ನು ಸೇವಿಸುತ್ತೇನೆ ಇದರಿಂದ ನನಗೆ ಹಾವು ಕಚ್ಚಿದರೂ ಏನು ಆಗೋದಿಲ್ಲವೆಂದು ತಿಳಿಸಿದ್ದಾರೆ. ಇವರ ಧೈರ್ಯವನ್ನು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದಲ್ಲದೆ ಅರಣ್ಯ ಇಲಾಖೆ ವತಿಯಿಂದ ರಮೆಶಗೆ ಪುರಸ್ಕಾರ ನೀಡಬೇಕೆಂದು ಕೋರಿದ್ದಾರೆ.

ಇದನ್ನೂ ಓದಿ: ಕುಡುಕನ ಆರ್ಭಟಕ್ಕೆ ಮಾಂಸ ತಿಂತಿದ್ದ ಸಿಂಹಗಳೇ ದಿಕ್ಕಾಪಾಲು!

ಆದರೆ ಅಸಲಿಗೆ ಕುಡಿದು ಹಾವು ಹಿಡಿಯಲು ಹೋಗಿದ್ದಾನೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗೊತ್ತಾದರೆ ಫೈನ್‌ ಜೊತೆಗೆ ಜೈಲು ಶಿಕ್ಷೆ ವಿಧಿಸಲೂ ಬಹುದು. ವನ್ಯ ಜೀವಿಗಳನ್ನು ರಕ್ಷಣೆ ಮಾಡುವಾಗ ಕೆಲವೊಂದು ಮಾರ್ಗಸೂಚಿಗಳನ್ನು ಪಾಲಿಸಬೇಕು. ಕುಡಿದ ಮತ್ತಿನಲ್ಲಿ ಹಾವು ಹಿಡಿದರೆ ಅರಣ್ಯ ಇಲಾಖೆಯವರು ಬಿಡುತ್ತಾರೆಯೇ. ಇನ್ನೊಂದು ವಿಚಾರವೆಂದರೆ ಯಾವುದೇ ಹಾವಾದರೂ ಒಂದು ಬಾರಿ ಕಚ್ಚಿದಾಗ ಮಾತ್ರ ಅದರಿಂದ ವಿಷ ಬರುತ್ತದೆ. ನಂತರ ಮತ್ತೆ ವಿಷ ಉತ್ಪಾದನೆಯಾಗಲು ಕೆಲ ದಿನಗಳು ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದರೂ ಮೊದಲ ಬಾರಿ ರಮೇಶ್‌ಗೆ ಹಾವು ಕಚ್ಚಿದಾಗ ವಿಷ ತಡೆದುಕೊಂಡಿದ್ದು ನಿಜವೇ. ಎಣ್ಣೆ ಮತ್ತಿನಲ್ಲಿದ್ದ ರಮೇಶ್‌ಗೆ ವಿಷದಿಂದ ಇನ್ನೊಂದಿಷ್ಟು ಕಿಕ್‌ ಹೊಡೆದಿರಬಹುದೇನೋ. ಮತ್ತೆ ಸ್ವಲ್ಪ ಎಣ್ಣೆಹಾಕುವ ಖರ್ಚು ಉಳಿದಿರಬಹುದು ಎಂದು ಸ್ಥಳೀಯರು ಕೆಲವರು ತಮಾಷೆ ಮಾಡಿದ್ದಾರೆ. 

ಇದನ್ನೂ ಓದಿ: ನಶೆ ಏರುತ್ತಿಲ್ಲ ಎಂದು ಕುಡುಕನ ದೂರು: ತನಿಖೆಗೆ ಆದೇಶ

Follow Us:
Download App:
  • android
  • ios