ಬಾಂಗ್ಲಾದೇಶದಲ್ಲಿ ಕಟ್ಟರ್ ಮುಸ್ಲಿಂ ಯುವನಾಯಕ ಶರೀಫ್ ಉಸ್ಮಾನ್ ಹದಿ ಹತ್ಯೆಯ ಬೆನ್ನಲ್ಲೇ ಸಂಭವಿಸಿದ್ದ ಹಿಂದು ವ್ಯಕ್ತಿ ದೀಪು ಚಂದ್ರ ದಾಸ್ ಅಮಾನುಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನರನ್ನು ಬಂಧಿಸಲಾಗಿದೆ.
ಢಾಕಾ : ಬಾಂಗ್ಲಾದೇಶದಲ್ಲಿ ಕಟ್ಟರ್ ಮುಸ್ಲಿಂ ಯುವನಾಯಕ ಶರೀಫ್ ಉಸ್ಮಾನ್ ಹದಿ ಹತ್ಯೆಯ ಬೆನ್ನಲ್ಲೇ ಸಂಭವಿಸಿದ್ದ ಹಿಂದು ವ್ಯಕ್ತಿ ದೀಪು ಚಂದ್ರ ದಾಸ್ ಅಮಾನುಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನರನ್ನು ಬಂಧಿಸಲಾಗಿದೆ.
ಇಸ್ಲಾಂ ಧರ್ಮನಿಂದನೆ ಮಾಡಿದ್ದಾನೆ ಎಂದು ಹತ್ಯೆ
ಗುರುವಾರ ಮೈಮೆನ್ಸಿಂಗ್ ನಗರದಲ್ಲಿ ಇಸ್ಲಾಂ ಧರ್ಮನಿಂದನೆ ಮಾಡಿದ್ದಾನೆ ಎಂದು ಆರೋಪಿಸಿ ಗುಂಪೊಂದು ಆತನನ್ನು ಹೊಡೆದು ಕೊಂದಿತ್ತು ಹಾಗೂ ಅವರ ದೇಹಕ್ಕೆ ಬೆಂಕಿ ಹಾಕಿತ್ತು. ಇದರ ಬೆನ್ನಲ್ಲೇ ಕ್ಷಿಪ್ರ ಕಾರ್ಯ ಬೆಟಾಲಿಯನ್, ಈ ಪ್ರಕರಣದಲ್ಲಿ ಏಳು ವ್ಯಕ್ತಿಗಳನ್ನು ವಿವಿಧ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದೆ ಎಂದು ಯೂನಸ್ ಸರ್ಕಾರ ಹೇಳಿದೆ.
ಪತ್ರಿಕಾ ಕಚೇರಿಯ 150 ಕಂಪ್ಯೂಟರ್ ಲೂಟಿ:
ಬಾಂಗ್ಲಾದೇಶದ ಉದ್ರಿಕ್ತ ಗುಂಪುಗಳು ಶುಕ್ರವಾರ ರಾತ್ರಿ ಢಾಕಾದಲ್ಲಿರುವ ದಿ ಡೈಲಿ ಸ್ಟಾರ್ ಮತ್ತು ಪ್ರೋಥೋಮ್ ಅಲೋ ಪತ್ರಿಕಾ ಕಚೇರಿಗಳ ಮೇಲೆ ದಾಳಿ ನಡೆಸಿದ ವೇಳೆ, ಕನಿಷ್ಠ 150 ಕಂಪ್ಯೂಟರ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಉಪಕರಣಗ ಕಳವು ಮಾಡಿವೆ. ಫೈಲ್‌ಗಳನ್ನೂ ದೋಚಿವೆ ಎಂದು ಗೊತ್ತಾಗಿದೆ.

