ಕಾಂಗ್ರೆಸ್ ಸಭೆಯಲ್ಲಿ ಮೊಳಗಿದ ಬಾಂಗ್ಲಾದೇಶ ರಾಷ್ಟ್ರಗೀತೆ, ಭುಗಿಲೆದ್ದ ಆಕ್ರೋಶ, ಈಶಾನ್ಯ ರಾಜ್ಯ ತಮ್ಮದು ಎಂದು ಇತ್ತೀಚೆಗಷ್ಟೆ ಪಾಕಿಸ್ತಾನಕ್ಕೆ ಮ್ಯಾಪ್ ನೀಡಿದ್ದ ಬಾಂಗ್ಲಾದೇಶವನ್ನು ಕಾಂಗ್ರೆಸ್ ತಲೆ ಮೇಲೆ ಹೊತ್ತು, ಭಾರತದಿಂದ ಈಶಾನ್ಯ ಪ್ರತ್ಯೇಕಗೊಳಿಸಲು ಸಂಚು ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಗುವ್ಹಾಟಿ (ಅ.29)ದೇಶ ಇಬ್ಬಾಗ ಮಾಡಿದ ಅಪಕೀರ್ತಿ ಕಾಂಗ್ರೆಸ್ ಸಲ್ಲಲಿದೆ ಎಂದು ಬಿಜೆಪಿ ಪದೇ ಪದೇ ಆರೋಪ ಮಾಡಿರುವುದು ಎಲ್ಲರೂ ಕೇಳಿರುತ್ತೀರಿ. ಈಶಾನ್ಯ ರಾಜ್ಯಗಳನ್ನು ಭಾರತದಿಂದ ಪ್ರ್ಯತೇಕಗೊಳಿಸಿ ಬಾಂಗ್ಲಾದೇಶಕ್ಕೆ ಸೇರಿಸುವ ಹುನ್ನಾರ ಮೊಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶ ಮಾಡುತ್ತಿದೆ ಅನ್ನೋದರಲ್ಲಿ ಅನುಮಾನವಿಲ್ಲ. ಆದರೆ ಈ ರಣತಂತ್ರಕ್ಕೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಅನ್ನೋ ಬಿಜೆಪಿ ಆರೋಪಗಳಿಗೆ ಇದೀಗ ಪುಷ್ಠಿ ನೀಡುವಂತ ಘಟನೆ ಅಸ್ಸಾಂನಲ್ಲಿ ನಡೆದಿದೆ. ಅಸ್ಸಾಂ ಕರೀಂಗಂಜ್ ಜಿಲ್ಲೆಯಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಬಾಂಗ್ಲಾದೇಶ ರಾಷ್ಟ್ರಗೀತೆ ಹಾಡಲಾಗಿದೆ. ಇದು ತಪ್ಪಿ ಪ್ಲೇ ಆದ ಗೀತೆಯಲ್ಲಿ, ಮೈಕ್ ಹಿಡಿದು ಹಾಡಿದ ಗೀತೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಮಾತ್ರವಲ್ಲ, ಕಾಂಗ್ರೆಸ್ ಅಜೆಂಡ್ ಬಹಿರಂಗಪಡಿಸಿದೆ.
ಕಾಂಗ್ರೆಸ್ ಸೇವಾದಳ ಸಭೆಯಲ್ಲಿ ಬಾಂಗ್ಲಾದೇಶ ರಾಷ್ಟ್ರಗೀತೆ
ಶ್ರೀಭೂಮಿ ಟೌನ್‌ನಲ್ಲಿ ನಡೆದ ಕಾಂಗ್ರೆಸ್ ಸೇವಾದಳ ಸಭೆಯಲ್ಲಿ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಬಾಂಗ್ಲಾದೇಶದ ಅಮರ್ ಸೋನಾರ್ ಬಾಂಗ್ಲಾ ರಾಷ್ಟ್ರಗೀತೆಯನ್ನು ಹಾಡಲಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಲಭ್ಯವಿದೆ. ಸಾರ್ವಜನಿಕರು ಕಾಂಗ್ರೆಸ್ ವಿರುದ್ಧ ಆಕ್ರೋಶಹೊರಹಾಕಿದ್ದಾರೆ.
ಕಾಂಗ್ರೆಸ್ ಅಸಲಿ ಅಜೆಂಡಾ ಬಹಿರಂಗ ಎಂದ ಬಿಜೆಪಿ
ಅಸ್ಸಾಂ ಸಚಿವ ಅಶೋಕ್ ಸಿಂಘಾಲ್ ಈ ವಿಡಿಯೋ ಹಂಚಿಕೊಂಡು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈಶಾನ್ಯ ರಾಜ್ಯಗಳನ್ನು ಭಾರತದಿಂದ ಬೇರ್ಪಡಿಸಬೇಕು, ಈಶಾನ್ಯ ರಾಜ್ಯಗಳು ಬಾಂಗ್ಲಾದೇಶದ ಭಾಗ ಎಂದು ಹೇಳುತ್ತಿರುವ ಬಾಂಗ್ಲಾದೇಶದ ರಾಷ್ಟ್ರಗೀತೆಯಾದ ಅಮರ್ ಸೋನಾರ್ ಬಾಂಗ್ಲಾ ಗೀತೆಯನ್ನು ಶ್ರೀಭೂಮಿಯಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಹಾಡಲಾಗಿದೆ. ಕಳೆದ ಹಲವು ದಶಕಗಳಿಂದ ಆಡಳಿತ ಮಾಡಿದ ಕಾಂಗ್ರೆಸ್ ಯಾಕೆ ಅಸ್ಸಾಂಗೆ ಅಕ್ರಮವಾಗಿ ನುಸುಳುವ ಮಿಯಾ ಮುಸ್ಲಿಮರನ್ನು ಸಾಕಿ ಸಲಹಿದೆ ಅನ್ನೋದು ಸ್ಪಷ್ಟವಾಗುತ್ತಿದೆ. ಮತ ಬ್ಯಾಂಕ್‌ಗಾಗಿ ಅಸ್ಸಾಂ ಡೆಮಾಗ್ರಫಿಕ್‌ನಲ್ಲಿ ಬದಲಾವಣೆ ಮಾಡಿ ಗ್ರೇಟರ್ ಬಾಂಗ್ಲಾದೇಶ ಮಾಡಲು ಕಾಂಗ್ರೆಸ್ ಹೊರಟಿದೆ ಎಂದು ಅಶೋಕ್ ಸಿಂಘಾಲ್ ಹೇಳಿದ್ದಾರೆ.
ಸಾರ್ವಜನಿಕ ವಲಯದಲ್ಲಿ ಆಕ್ರೋಶ
ಈ ವಿಡಿಯೋ ನಿಜವಾಗಿದ್ದರೆ, ಕಾಂಗ್ರೆಸ್ ಹಾಗೂ ನಾಯಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು. ಇದು ಅತ್ಯಂತ ಗಂಭೀರ ವಿಷಯ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಭಾರತದ ರಾಷ್ಟ್ರಗೀತೆ ಹಾಡಬಹುದಿತ್ತು. ಆದರೆ ಅಸ್ಸಾಂನಲ್ಲಿ ಬಾಂಗ್ಲಾದೇಶ ರಾಷ್ಟ್ರಗೀತೆ ಯಾಕೆ ಎಂದು ಹಲವರು ಪ್ರಶ್ನಸಿದ್ದಾರೆ. ಸಿದ್ದಾಂತಗಳು ಬೇರೆ ಇರುವುದು ತಪ್ಪಲ್ಲ, ಬಿಜೆಪಿಯ ಎಲ್ಲಾ ವಿಚಾರಗಳನ್ನು ವಿರೋಧಿಸಿದರೂ ತಪ್ಪಲ್ಲ, ಆದರೆ ಕಾಂಗ್ರೆಸ್ ಪಕ್ಷದ ಈ ನಡೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಪಾಕಿಸ್ತಾನಕ್ಕೆ ಮ್ಯಾಪ್ ಗಿಫ್ಟ್ ಮಾಡಿದ್ದ ಯೂನಸ್
ಬಾಂಗ್ಲಾದೇಶ ಹಂಗಾಮಿ ಅಧ್ಯಕ್ಷ ಮೊಹಮ್ಮದ್ ಯೂನಸ್ ಆಡಳಿತದಲ್ಲಿ ಭಾರತ ವಿರೋಧಿ ನೀಲುವು, ಪಾಕಿಸ್ತಾನ ಹಾಗೂ ಚೀನಾ ಪರವಾಗಿ ತೆಗೆದುಕೊಂಡ ನಿಲುವು ಜಗಜ್ಜಾಹೀರಾಗಿದೆ. ಇತ್ತೀಚೆಗೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಭೇಟಿಯಾದ ಯೂನಸ್, ಬಾಂಗ್ಲಾದೇಶದ ಭೂಪಟ ಉಡುಗೊರೆಯಾಗಿ ನೀಡಿದ್ದರು. ಈ ಮ್ಯಾಪ್‌ನಲ್ಲಿ ಭಾರತದ ಈಶಾನ್ಯ ರಾಜ್ಯಗಳನ್ನು ತಮ್ಮ ಭಾಗ ಎಂದು ಬಂಬಿಸಿದ ಮ್ಯಾಪ್ ಇದಾಗಿತ್ತು. ಈ ಮ್ಯಾಪ್ ಪಾಕಿಸ್ತಾನಕ್ಕೆ ಉಡುಗೊರೆಯಾಗಿ ನೀಡುವ ಮೂಲಕ ಭಾರತ ಕೆಣಕುವ ಪ್ರಯತ್ನ ಮಾಡಿತ್ತು.
