ಗಡೀಪಾರದ ತಾರೀಖ್ ಬಾಂಗ್ಲಾಗೆ ಮರಳಿದ ದಿನವೇ ಮತ್ತೊಬ್ಬ ಹಿಂದೂ ಹತ್ಯೈಗೆದ ಉದ್ರಿಕ್ತರ ಗುಂಪು, ದೀಪು ಚಂದ್ರದಾಸ್ ಬಳಿಕ ಇದೀಗ ಅಮೃತ್ ಮೊಂಡಾಲ್ ಹತ್ಯೆಯಾಗಿದೆ. ದಾಳಿ ನಡೆಸಿ ಹಿಂದೂ ಹತ್ಯೆಗೈದ ಗುಂಪು ದೇಹಕ್ಕೆ ಬೆಂಕಿ ಹಚ್ಚಿ ಸುಟ್ಟು ಹಾಕಿದೆ. 

ಢಾಕಾ (ಡಿ.25) ಬಾಂಗ್ಲಾದೇಶದ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಬಾಂಗ್ಲಾದೇಶ ಯುವ ನಾಯಕ ಶರೀಫ್ ಹದಿ ಹತ್ಯೆಯಿಂದ ಬಾಂಗ್ಲಾದೇಶದಲ್ಲಿ ಭಾರಿ ಹಿಂಸಾಚಾರ ಭುಗಿಲೆದ್ದಿದೆ. ಭಾರತ ವಿರೋಧಿ ಧೋರಣೆ ಹೊಂದಿದ್ದ ಶರೀಫ್ ಹದಿ, ಶೇಕ್ ಹಸೀನಾ ಸರ್ಕಾರ ಉರುಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ. ಆದರೆ ಹದಿ ಹತ್ಯೆ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಹಿಂದೂಗಳು ಬಲಿಯಾಗುತ್ತಿದ್ದಾರೆ. ಹಿಂದೂಗಳ ಟಾರ್ಗೆಟ್ ಮಾಡಿ ದಾಳಿ ಮಾಡಲಾಗುತ್ತಿದೆ. ದೀಪು ಚಂದ್ರದಾಸ್ ಹತ್ಯೆಗೈದ ಉದ್ರಿಕ್ತರ ಗುಂಪು ಇದೀಗ ಮತ್ತೊಬ್ಬ ಹಿಂದೂ ಮೇಲೆ ದಾಳಿ ಮಾಡಿ ಹತ್ಯೆ ಮಾಡಲಾಗಿದೆ. ಬಳಿಕ ಹಿಂದೂವಿನ ದೇಹವನ್ನೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟಿದ್ದಾರೆ.

ಬಾಂಗ್ಲಾದೇಶದಿಂದ ಗಡೀಪಾರಾಗಿದ್ದ ತಾರೀಖ್ ರಹೆಮಾನ್ 16 ವರ್ಷ ಬಳಿಕ ಬಾಂಗ್ಲಾದೇಶಕ್ಕೆ ಮರಳಿದ್ದಾರೆ. ಇದರ ನಡುವೆ ಈ ಘಟನೆ ನಡೆದಿದೆ. ಪಂಗ್‌ಸಾ ಜಿಲ್ಲೆಯ ರಾಜ್‌ಬಾರಿಯಲ್ಲಿ ಈ ದಾಳಿ ನಡೆದಿದೆ. 29 ವರ್ಷದ ಹಿಂದೂ ಅಮೃತ್ ಮೊಂಡಾಲ್ ಅಲಿಯಾಸ್ ಸಾಮ್ರಾಟ್ ಈ ದಾಳಿಯಲ್ಲಿ ಮೃತಪಟ್ಟಿದ್ದಾನೆ. ಉದ್ರಿಕ್ತರ ಗುಂಪು ಅಮೃತ ಮೊಂಡಾಲ್ ಮೇಲೆ ದಾಳಿ ಮಾಡಿದ್ದಾರೆ. ದೀಪು ಚಂದ್ರದಾಸ್ ಮೇಲೆ ನಡೆಸಿದ ದಾಳಿ ರೀತಿಯಲ್ಲೇ ಉದ್ರಿಕ್ಕರು ಸಿಕ್ಕ ಸಿಕ್ಕ ಬಡಿಗೆ, ಕಲ್ಲುಗಳ ಮೂಲಕ ದಾಳಿ ಮಾಡಿದ್ದಾರೆ. ಹಲವರು ಖಾಸಗಿ ಅಂಗಗಳಿಗೆ ತುಳಿದು ಅಮೃತ್ ಮೊಂಡಾಲ್ ಹತ್ಯೆ ಮಾಡಿದ್ದಾರೆ. ಬಳಿಕ ಮೊಂಡಾಲ್‌ನ ದಾರಿಯಲ್ಲಿ ಏಳೆದುಕೊಂಡು ಹೋದ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ.

ಮೊಂಡಾಲ್ ಮೇಲೆ ಸುಲಿಗೆ ಆರೋಪ ಮಾಡಿದ ಪೊಲೀಸ್

ಅಮೃತ್ ಮೊಂಡಾಲ್ ಸುಲಿಗೆ ಮಾಡುತ್ತಿದ್ದಾನೆ ಅನ್ನೋ ಆರೋಪದದ ಮೇಲೆ ಉದ್ರಿಕ್ತರ ಗುಂಪು ದಾಳಿ ಮಾಡಿದೆ ಎಂದು ಬಾಂಗ್ಲಾದೇಶ ಪೊಲೀಸರು ಹೇಳಿದ್ದಾರೆ. ಅಮೃತ್ ಮೊಂಡಾಲ್ ಹಲವರಿಂದ ಸುಲಿಗೆ ಮಾಡುತ್ತಿದ್ದಾನೆ ಅನ್ನೋ ಅರೋಪದಿಂದ ಉದ್ರಿಕ್ತರು ದಾಳಿ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಶೇಕ್ ಹಸೀನಾ ಸರ್ಕಾರ ಪತನದ ಬೆನ್ನಲ್ಲೇ ಅಮೃತ್ ಮೊಂಡಾಲ್ ದೇಶ ತೊರೆದಿದ್ದ. ಬಳಿಕ ಬಾಂಗ್ಲಾದೇಶಕ್ಕೆ ಮರಳಿದ ಅಮೃತ್ ಮೊಂಡಾಲ್ ಸುಲಿಗೆ ಕಾರ್ಯದಲ್ಲಿ ತೊಡಗಿದ್ದ. ಗ್ಯಾಂಗ್ ಕಟ್ಟಿಕೊಂಡು ಹಲವರಿಂದ ಸುಲಿಗೆ ಮಾಡತ್ತಿದ್ದ ಎಂದು ಬಾಂಗ್ಲಾದೇಶ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ರಾತ್ರಿ ವೇಳೆ ಗ್ಯಾಂಗ್ ಜೊತೆ ಮನೆಗೆ ತೆರಳಿ ಸುಲಿಗೆ ಮಾಡುವ ಪ್ರಯತ್ನದಲ್ಲಿದ್ದ ವೇಳೆ ಗ್ರಾಮಸ್ಥರು ಅಮೃತ್ ಮೊಂಡಾಲ್ ಹಿಡಿದು ಥಳಿಸಿದ್ದಾರೆ. ಇದೇ ವೇಳೆ ಉದ್ರಿಕ್ತರ ಗುಂಪು ಅಮೃತ್ ಮೊಂಡಾಲ್ ಮೇಲೆ ದಾಳಿ ಮಾಡಿ ಹತ್ಯೆ ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ದೀಪು ಚಂದ್ರದಾಸ್ ಹತ್ಯೆಗೂ ನೆಪ ಹೇಳಿದ ಪೊಲೀಸ್, ಗುಂಪು

ಶರೀಫ್ ಹದಿ ಹತ್ಯೆಗೆ ಪ್ರತೀಕಾರವಾಗಿ ಬಾಂಗ್ಲಾದೇಶದ ಹಿಂದೂ ದೀಪು ಚಂದ್ರದಾಸ್ ಮೇಲೆ ಉದ್ರಿಕರು ದಾಳಿ ಮಾಡಿದ್ದರು. ಅಮಾನುಷವಾಗಿ ದೀಪು ಚಂದ್ರದಾಸ್ ಮೇಲೆ ದಾಳಿ ನಡೆದಿತ್ತು. ಇತ್ತ ಸ್ಥಳಕ್ಕೆ ಆಗಮಿಸಿದ ಪೊಲೀಸರು ದೀಪು ಚಂದ್ರದಾಸ್‌ಗೆ ರಕ್ಷಣೆ ನೀಡುವ ಕೆಲಸ ಮಾಡಲಿಲ್ಲ. ದೀಪು ಚಂದ್ರದಾಸ್ ಹತ್ಯೆಗೂ ಬಾಂಗ್ಲಾದೇಶ ಪೊಲೀಸರು ಹಲವು ನೆಪ ಹೇಳಿದ್ದರು.