Asianet Suvarna News Asianet Suvarna News

ಇದು ಬಮ್ ಬಮ್ ಸ್ಕಿಪ್ಪಿಂಗ್... ಗಿನ್ನೆಸ್ ವಿಶ್ವದಾಖಲೆ ಮಾಡಿದ ಬಾಂಗ್ಲಾದೇಶಿ

ದಾಖಲೆ ಮಾಡುವುದಕ್ಕೋಸ್ಕರ ಜನ ಏನೇನೋ ಕಸರತ್ತುಗಳನ್ನು ಮಾಡುತ್ತಾರೆ. ಹಾಗೆಯೇ ಬಾಂಗ್ಲಾದೇಶದ ವ್ಯಕ್ತಿಯೊಬ್ಬ ವಿಚಿತ್ರವಾಗಿ ಸ್ಕಿಪ್ಪಿಂಗ್ ಮಾಡುವ ಮೂಲಕ ದಾಖಲೆ ಮಾಡಿದ್ದಾನೆ.

bangladesh man Rasel Islam Sets Guinness World Record, doing 117 Bum skip in 30 seconds akb
Author
First Published Oct 4, 2022, 2:46 PM IST

ಢಾಕಾ: ದಾಖಲೆ ಮಾಡುವುದಕ್ಕೋಸ್ಕರ ಜನ ಏನೇನೋ ಕಸರತ್ತುಗಳನ್ನು ಮಾಡುತ್ತಾರೆ. ಹಾಗೆಯೇ ಬಾಂಗ್ಲಾದೇಶದ ವ್ಯಕ್ತಿಯೊಬ್ಬ ವಿಚಿತ್ರವಾಗಿ ಸ್ಕಿಪ್ಪಿಂಗ್ ಮಾಡುವ ಮೂಲಕ ದಾಖಲೆ ಮಾಡಿದ್ದಾನೆ. ಹೌದು ಬಾಂಗ್ಲಾದೇಶದ ವ್ಯಕ್ತಿಯೊಬ್ಬ ವಿಚಿತ್ರವಾಗಿ ಸ್ಕಿಪ್ ಮಾಡುವ ಮೂಲಕ ದಾಖಲೆ ಮಾಡಿದ್ದಾನೆ. ನೀವು ಸ್ಕಿಪ್ಪಿಂಗ್ ಆಡಿರಬಹುದು. ಅಥವಾ ಬೇರೆಯವರು ಮಾಡುವುದನ್ನು ನೋಡಿರಬಹುದು. ಕೈಯಲ್ಲೊಂದು ಹಗ್ಗ ಹಿಡಿದು ಅದನ್ನು ತಲೆಯಿಂದ ಕಾಲಿನ ಭಾಗಕ್ಕಾಗಿ ದೇಹದ ಸುತ್ತ ತಿರುಗಿಸುತ್ತಾ, ಕಾಲಿನ ಬಳಿ ತಲುಪುತ್ತಿದ್ದಂತೆ ಎರಡು ಕಾಲುಗಳನ್ನು ಮೇಲೆತ್ತುತ್ತ ಆಡುವುದು ಸ್ಕಿಪ್ಪಿಂಗ್, ಇದನ್ನು ಲೆಗ್ ಸ್ಕಿಪ್ಪಿಂಗ್ ಅಂತನೂ ಹೇಳ್ತಾರೆ. ಆದರೆ ಈಗ ಇಲ್ಲಿ ಬಾಂಗ್ಲಾದ ಯುವಕ ಮಾಡಿರುವ ಸ್ಕಿಪ್ಪಿಂಗ್  ಸ್ಟೈಲ್‌ ನೋಡಿದರೆ ನಿಮಗೆ ಅಚ್ಚರಿ ಆಗಬಹುದು. ಇದಕ್ಕೆ ಬಮ್ ಸ್ಕಿಪ್ ಅಂತ ಹೆಸರಿಡಲಾಗಿದೆ.

ಇದೇನು ಬಮ್ ಸ್ಕಿಪ್ (Bum Skips) ಎಂದು ನಿಮಗೆ ಅಚ್ಚರಿ ಆಗಬಹುದು. ಅದೇನೆಂದು ತಿಳಿಯಲು ನೀವು ಈ ವಿಡಿಯೋವನ್ನೇ ನೋಡಬೇಕು. 

 

ಬಾಂಗ್ಲಾದೇಶದ ರಸೀಲ್ ಇಸ್ಲಾಂ ಎಂಬುವವರೇ ಹೀಗೆ ಬಮ್ ಸ್ಕಿಪ್ ಮಾಡಿ ಗಿನ್ನೆಸ್ ವಿಶ್ವ ದಾಖಲೆ ಪುಟ ಸೇರಿದವರು. ಇವರು 30 ಸೆಕೆಂಡುಗಳಲ್ಲಿ 117 ಬಾರಿ ಬಮ್ ಸ್ಕಿಪ್ ಮಾಡುವ ಮೂಲಕ ದಾಖಲೆ ಬರೆದಿದ್ದಾರೆ. ಕಳೆದ ಮಾರ್ಚ್ 13 ರಂದು ರಸೀಲ್ ಇಸ್ಲಾಂ ಈ ವಿಶ್ವ ದಾಖಲೆ ನಿರ್ಮಿಸಿದ್ದು, ಗಿನ್ನೆಸ್ ವಿಶ್ವದಾಖಲೆ ತಂಡ ಈಗ ಆ ಸ್ಪರ್ಧೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಈ ವಿಡಿಯೋ ಈಗ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿದ್ದು, ಜನ ಫನ್ನಿ ಫನ್ನಿಯಾಗಿ ಕಾಮೆಂಟ್ ಮಾಡ್ತಿದ್ದಾರೆ.

ಏಕಕಾಲಕ್ಕೆ 900 ಜನರಿಂದ ಜಾನಪದ ನೃತ್ಯ: ಗಿನ್ನೆಸ್‌ ಪುಟ ಸೇರಿದ ದಾಖಲೆ

'30 ಸೆಕೆಂಡ್‌ನಲ್ಲಿ ಅತೀ ಹೆಚ್ಚು ಬಮ್ ಸ್ಕಿಪ್ 117, ರಸೀಲ್ ಇಸ್ಲಾಂ ಅವರಿಂದ' ಎಂದು ಬರೆದು ಗಿನ್ನೆಸ್ ವಿಶ್ವ ದಾಖಲೆ ಸಂಸ್ಥೆ ವಿಡಿಯೋವನ್ನು ಪೋಸ್ಟ್ ಮಾಡಿದೆ. ಈ ವಿಡಿಯೋವನ್ನು ಏಳು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದು, 60 ಸಾವಿರ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೀಗೆ ದಾಖಲೆ ನಿರ್ಮಿಸಿದ ರಸೀಲ್ ಇಸ್ಲಾಂ (Rasel Islam), ಬಾಂಗ್ಲಾದೇಶದ (Bangladesh) ಟಾಕೂರ್‌ಗಾವ್ (Thakurgaon) ನಿವಾಸಿಯಾಗಿದ್ದು, ಬಾಲ್ಯದಿಂದಲೇ ಸ್ಕಿಪ್ಪಿಂಗ್ ಅಭ್ಯಾಸ ಮಾಡಿಕೊಂಡು ಬಂದಿದ್ದರು. ಅವರು ಈ ಹಿಂದೆಯೂ ಇದೇ ರೀತಿಯ ಹಲವು ದಾಖಲೆಗಳನ್ನು ಮಾಡಿದ್ದಾರೆ. ಒಂದು ನಿಮಿಷದಲ್ಲಿ ಅತ್ಯಧಿಕ ಒಂದು ಕಾಲಿನ ಸ್ಕಿಪ್ಪಿಂಗ್ ಹಾಗೂ ಮೂರು ನಿಮಿಷದಲ್ಲಿ ಅತೀಹೆಚ್ಚು ಸ್ಕಿಪ್ಪಿಂಗ್ ದಾಖಲೆಗಳನ್ನು ಅವರು ನಿರ್ಮಿಸಿದ್ದಾರೆ ಎಂದು ಗಿನ್ನೆಸ್ ವಿಶ್ವ ದಾಖಲೆ ಸಮಿತಿ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. 

ಪುಸ್ತಕ ಪ್ರಕಟಿಸಿ ಗಿನ್ನೆಸ್ ರೆಕಾರ್ಡ್ ಸೇರಿಸಿದ ಬ್ರಿಟನ್ 5ರ ಬಾಲೆ!

ಈ ರೀತಿ ವಿಚಿತ್ರವೆನಿಸುವ ಗಿನ್ನೆಸ್ ವಿಶ್ವ ದಾಖಲೆಗಳನ್ನು (world record) ಈ ಹಿಂದೆಯೂ ಜನ ಮಾಡಿದ್ದಾರೆ.  30 ಸೆಕೆಂಡ್‌ನಲ್ಲಿ ಅತೀ ಹೆಚ್ಚು ಮೊಟ್ಟೆಗಳನ್ನು ಒಡೆಯುವ ಮೂಲಕ ಅಮೆರಿಕಾದ ಕ್ರಿಸ್ಟೋಪರ್ ಸ್ಯಾಂಡರ್ ವಿಶ್ವ ದಾಖಲೆ ನಿರ್ಮಿಸಿದ್ದರು. ಅವರು ಒಂದೇ ಕೈಯಿಂದ ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ 18 ಮೊಟ್ಟೆಗಳನ್ನು ಒಡೆದಿದ್ದರು. ಕೇವಲ ತಮ್ಮ ಬಲಗೈಯೊಂದನ್ನು ಬಳಸಿ ಅವರು ಇಷ್ಟು ಮೊಟ್ಟೆಗಳನ್ನು ಒಡೆದಿದ್ದರು. ಈ ದಾಖಲೆಯ ವಿಡಿಯೋವನ್ನು ಕೂಡ ವಿಶ್ವ ದಾಖಲೆ ಸಂಸ್ಥೆ ತನ್ನ ಇನ್ಸ್ಟಾಗ್ರಾಮ್(Instagram) ಖಾತೆಯಲ್ಲಿ ಹಂಚಿಕೊಂಡಿತ್ತು.

ಇನ್ನು ಈ ವಿಡಿಯೋ ನೋಡಿದವರು, ಇದನ್ನು ನೋಡಿಯೇ ನನ್ನ ಬೆನ್ನು ಮೂಳೆ ನೋಯುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ನೋಡಲು ಸುಲಭ ಅನುಸುತ್ತಿದೆ ಆದರೆ ಮಾಡಲು ಕಷ್ಟ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ತರವೂ ಸ್ಕಿಪ್ಪಿಂಗ್ ಮಾಡಬಹುದು ಎಂಬುದನ್ನು ಇವರು ತೋರಿಸಿಕೊಟ್ಟಿರೊದಂತು ಸುಳ್ಳಲ್ಲ.
 

Follow Us:
Download App:
  • android
  • ios