ಮೆಕ್ಸಿಕೋದ ಮೈಕೋಕಾನ್ ರಾಜ್ಯವೂ ಹೊಸ ಗಿನ್ನೆಸ್ ವಿಶ್ವ ದಾಖಲೆಗೆ ಸಾಕ್ಷಿಯಾಗಿದೆ. 900ಕ್ಕೂ ಹೆಚ್ಚು ನರ್ತಕರು ಅತಿದೊಡ್ಡ ಮೆಕ್ಸಿಕನ್ ಜಾನಪದ ನೃತ್ಯವನ್ನು ಒಟ್ಟಾಗಿ ಮಾಡುವ ಮೂಲಕ ಗಿನ್ನೆಸ್ ದಾಖಲೆ ಬರೆದರು ಎಂದು ಎಂದು ಮೆಕ್ಸಿಕೋ ನ್ಯೂಸ್ ಡೈಲಿ ವರದಿ ಮಾಡಿದೆ

ಮೆಕ್ಸಿಕೋ: ಮೆಕ್ಸಿಕೋದ ಮೈಕೋಕಾನ್ ರಾಜ್ಯವೂ ಹೊಸ ಗಿನ್ನೆಸ್ ವಿಶ್ವ ದಾಖಲೆಗೆ ಸಾಕ್ಷಿಯಾಗಿದೆ. 900ಕ್ಕೂ ಹೆಚ್ಚು ನರ್ತಕರು ಅತಿದೊಡ್ಡ ಮೆಕ್ಸಿಕನ್ ಜಾನಪದ ನೃತ್ಯವನ್ನು ಒಟ್ಟಾಗಿ ಮಾಡುವ ಮೂಲಕ ಗಿನ್ನೆಸ್ ದಾಖಲೆ ಬರೆದರು ಎಂದು ಎಂದು ಮೆಕ್ಸಿಕೋ ನ್ಯೂಸ್ ಡೈಲಿ ವರದಿ ಮಾಡಿದೆ. ಜುವಾನ್ ಕೊಲೊರಾಡೋ ಹಾಡಿಗೆ 900ಕ್ಕೂ ಹೆಚ್ಚು ಕಲಾವಿದರು ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ. ಈ ಹಾಡನ್ನು ತಮ್ಮ ರಾಜ್ಯ ಗೀತೆ ಎಂದು ಪರಿಗಣಿಸುವ ರಾಜ್ಯದ ಜನರಿಗೆ ಇದು ಬಹಳ ಮಹತ್ವದ ವಿಚಾರವಾಗಿದೆ. ಮೈಕೋಕಾನ್ ರಾಜ್ಯದ ಮೊರೆಲಿಯಾ ಐತಿಹಾಸಿಕ ಕೇಂದ್ರದಲ್ಲಿ ಈ ಹೊಸ ದಾಖಲೆ ನಿರ್ಮಿಸಿದ ಕಾರ್ಯಕ್ರಮ ನಡೆಯಿತು.

ಇದನ್ನು ಕಲಾತ್ಮಕ,ಪ್ರವಾಸಿ ಹಾಗೂ ಸಾಂಸ್ಕೃತಿಕ ಆಗ್ರೋ-ಇಂಡಸ್ಟ್ರಿಯಲ್ ಗ್ರೂಪ್ ಆಫ್ ಬ್ಯೂಟಿಫುಲ್ ಮೈಕೋಕಾನ್ ಆಯೋಜಿಸಿದೆ. ಇದರ ಜೊತೆಗೆ, ಮೊರೆಲಿಯಾ ಪುರಸಭೆಯ ಆಡಳಿತವು ಭವ್ಯವಾದ ಸಮಾರಂಭ ಆಯೋಜಿಸಿ ಈ ನರ್ತಕರಿಗೆ ಸಹಾಯ ಮಾಡಿತು.

Scroll to load tweet…

ಮೆಕ್ಸಿಕನ್ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿದ ಸುಮಾರು 954 ನೃತ್ಯಗಾರರು ತಮ್ಮ ಪ್ರತಿಭೆ ಪ್ರದರ್ಶಿಸಲು ಸ್ಥಳದಲ್ಲಿ ನೆರೆದಿದ್ದರು. ರಾಜ್ಯದ 20 ಕ್ಕೂ ಹೆಚ್ಚು ಪುರಸಭೆಗಳಿಂದ ಆಗಮಿಸಿದ ಅವರು ಹೊಸ ದಾಖಲೆ ನಿರ್ಮಿಸಲು ಜೊತೆಯಾಗಿ ನೃತ್ಯ ಮಾಡಿದರು. ಇದಕ್ಕೂ ಮೊದಲು ಆಗಸ್ಟ್ 24, 2019 ರಂದು ಮೆಕ್ಸಿಕೋದ ಗ್ವಾಡಲಜಾರಾದ (Guadalajara) ಪ್ಲಾಜಾ ಡೆ ಲಾ (Plaza de la) ಲಿಬರೇಸಿಯಾನ್‌ನಲ್ಲಿ (Plaza de la Liberación) 882 ಜನರು ಒಟ್ಟಿಗೆ ನೃತ್ಯ ಮಾಡಿದ್ದು ಈ ಹಿಂದಿನ ದಾಖಲೆಯಾಗಿತ್ತು.

ಈ ನೃತ್ಯ ಸಂಗಮದಲ್ಲಿ ಭಾಗವಹಿಸಿದವರು ವಿಶಿಷ್ಟವಾದ ಸಂಪ್ರದಾಯಿಕ ಚಾರ್ರೋ ಮತ್ತು ಕಪೋರಲ್ ವೇಷಭೂಷಣಗಳನ್ನು ಧರಿಸಿ ಜಾನಪದ ಗೀತೆ ಎಲ್ ಜರಾಬೆ ಟಪಾಟಿಯೊಗೆ 6 ನಿಮಿಷ 50 ಸೆಕೆಂಡುಗಳ ಕಾಲ ನೃತ್ಯ ಮಾಡಿದರು. ಈ ಹೊಸ ದಾಖಲೆಗೆ ಕಾರಣರಾದ ಪ್ರತಿಯೊಬ್ಬರನ್ನು ರಾಜ್ಯ ರಾಜಧಾನಿಯ ಸಂಸ್ಕೃತಿ ಸಚಿವೆ ಫಾತಿಮಾ ಚಾವೆಜ್ ಅಲ್ಕರಾಜ್ (Fátima Chávez Alcaraz) ಅವರು ಅಭಿನಂದಿಸಿದರು. ಎಲ್ಲರಿಗೂ ಧನ್ಯವಾದಗಳು, ನಿಮ್ಮ ಭಾಗವಹಿಸುವಿಕೆಯೊಂದಿಗೆ ನೀವು ನಮ್ಮ ರಾಜ್ಯವನ್ನು ನಿರೂಪಿಸುವ ಸಂಪ್ರದಾಯಗಳಲ್ಲಿ ಒಂದನ್ನು ಎತ್ತಿ ತೋರಿಸುತ್ತೀರಿ ಎಂದು ಸಚಿವರು ಟ್ವಿಟ್ ಮಾಡಿದ್ದಾರೆ.

ಟೊಮೆಟೊ ಬೆಳೆದು ಗಿನ್ನೆಸ್ ದಾಖಲೆ : ಒಂದೇ ಗಿಡದಲ್ಲಿ 1200 ಹೆಚ್ಚು ಟೊಮೆಟೋ

ಈ ಕಾರ್ಯಕ್ರಮದಲ್ಲಿ ರೋಸಿಯೊ ವೆಗಾ (Rocío Vega) ನೇರ ಪ್ರದರ್ಶನವನ್ನು ನೀಡಿದರು. ಅವರು ಜುವಾನ್ ಕೊಲೊರಾಡೂ ಹಾಡನ್ನು ಹಾಡಿದರು. ಎರಡು ಸ್ಥಳೀಯ ಬ್ಯಾಂಡ್‌ಗಳು ಅವರ ಹಾಡಿಗೆ ಮತ್ತಷ್ಟು ಕಳೆ ನೀಡಿದವು. ಈ ಸಾಧನೆಯ ಬಗ್ಗೆ ಮಾತನಾಡಿದ ವೇಗಾ, ಈ ಕಾರ್ಯಕ್ರಮ ಕೇವಲ ದಾಖಲೆಯನ್ನು ಮುರಿಯುವುದಕ್ಕಲ್ಲ ಜೊತೆಗೆ ಶಾಂತಿಯ ಸಂದೇಶವನ್ನು ಕಳುಹಿಸುವುದಕ್ಕೆ ಹಾಗೂ ಮೈಕೋಕಾನ್ ಬೈಲರಿನ್ ಅಮೂಲ್ಯ ಜನರನ್ನು ಹೊಂದಿದ್ದಾರೆಂದು ಜಗತ್ತಿಗೆ ತೋರಿಸುವುದಕ್ಕೆ ಆಯೋಜಿಸಲಾಗಿದೆ ಎಂದು ಹೇಳಿದರು.

ಅಂಬಾನಿ ಭಾವಿ ಸೊಸೆ Radhika Merchant ನೃತ್ಯ ಕಾರ್ಯಕ್ರಮದಲ್ಲಿ Salman Khan - Aamir Khan

ಇದು ಅತಿದೊಡ್ಡ ಮೆಕ್ಸಿಕನ್ ಜಾನಪದ ನೃತ್ಯವಾಗಿದ್ದರೂ, ಬೇರೆ ದೇಶಗಳ ಜನರು ತಮ್ಮ ಜಾನಪದ ಹಾಡುಗಳಿಗೆ ದೊಡ್ಡ ಗುಂಪುಗಳಲ್ಲಿ ನೃತ್ಯ ಮಾಡುವ ಮೂಲಕ ಇದೇ ರೀತಿಯ ದಾಖಲೆಗಳನ್ನು ಈಗಾಗಲೇ ಸ್ಥಾಪಿಸಿದ್ದಾರೆ.