ಬಂಧಿಸಲ್ಪಟ್ಟ ಚಿನ್ಮೊಯ್ ಕೃಷ್ಣದಾಸ್ ಅವರನ್ನೇ ಉಚ್ಚಾಟಿಸಿದ ಬಾಂಗ್ಲಾದೇಶದ ಇಸ್ಕಾನ್
ದೇಶದ್ರೋಹದ ಆರೋಪದ ಮೇಲೆ ಬಂಧಿತರಾಗಿರುವ ಚಿನ್ಮೊಯ್ ಕೃಷ್ಣದಾಸ್ ಅವರನ್ನು ಬಾಂಗ್ಲಾದೇಶದ ಇಸ್ಕಾನ್ ಸಂಸ್ಥೆಯು ಉಚ್ಚಾಟಿಸಿದೆ. ಇಸ್ಕಾನ್‌ನ ಬಾಂಗ್ಲಾದೇಶದ ಜನರಲ್ ಸೆಕ್ರಟರಿ ಚಾರು ಚಂದ್ರ ದಾಸ್ ಈ ವಿಚಾರ ತಿಳಿಸಿದ್ದಾರೆ.
ದೇಶದ್ರೋಹದ ಆರೋಪದ ಮೇಲೆ ಬಾಂಗ್ಲಾದೇಶದಲ್ಲಿ ಬಂಧನಕ್ಕೊಳಗಾಗಿರುವ ಇಸ್ಕಾನ್‌ನ ಧಾರ್ಮಿಕ ಗುರು ಚಿನ್ಮೊಯ್ ಕೃಷ್ಣದಾಸ್ ಅವರನ್ನು ಬಾಂಗ್ಲಾದೇಶದ ಇಸ್ಕಾನ್ ಸಂಸ್ಥೆಯೂ ಅಲ್ಲಿನ ಇಸ್ಕಾನ್‌ನ ಹುದ್ದೆಗಳಿಂದ ಉಚ್ಚಾಟನೆ ಮಾಡಿದೆ. ಇಸ್ಕಾನ್‌ನ ಬಾಂಗ್ಲಾದೇಶದ ಜನರಲ್ ಸೆಕ್ರಟರಿ ಚಾರು ಚಂದ್ರ ದಾಸ್ ಅವರು ಇಂದು ಸುದ್ದಿಗೋಷ್ಠಿ ನಡೆಸಿ ಈ ವಿಚಾರ ತಿಳಿಸಿದ್ದು, ಹಿಂದೂ ಮುಖಂಡ ಧಾರ್ಮಿಕ ಗುರು ಚಿನ್ಮೊಯ್ ಕೃಷ್ಣದಾಸ್ ಅವರ ಮಾತುಗಳಿಗೆ ಹಾಗೂ ಅವರು ನಡೆಸಿದ ಚಟುವಟಿಕೆಗಳಿಗೆ ಇಸ್ಕಾನ್ ಯಾವುದೇ ಕಾರಣಕ್ಕೂ ಜವಾಬ್ದಾರಿ ಹೊರುವುದರಿಲ್ಲ ಎಂದು ಚಾರು ಚಂದ್ರದಾಸ್ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾ ಟ್ವಿಟ್ಟರ್‌ನಲ್ಲಿ ಅಂಗ್ಲ ಮಾಧ್ಯಮವೊಂದರ ಪತ್ರಕರ್ತ Indrajit Kundu ಅವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. 23 ಸೆಕೆಂಡ್‌ಗಳ ಈ ವೀಡಿಯೋ ಬೆಂಗಾಲಿ ಭಾಷೆಯಲ್ಲಿದ್ದು, ಬಾಂಗ್ಲಾದೇಶದ ನೂತನ ಸರ್ಕಾರದ ಆದೇಶದಿಂದ ಬಂಧಿಸಲ್ಪಟ್ಟಿರುವ ಚಿನ್ಮೊಯ್ ಕೃಷ್ಣದಾಸ್ ಅವರಿಗೂ ಬಾಂಗ್ಲಾದೇಶದ ಇಸ್ಕಾನ್ ಸಂಸ್ಥೆಗೂ ಇನ್ನುಮುಂದೆ ಯಾವುದೇ ಸಂಬಂಧ ಇರುವುದಿಲ್ಲ, ಅವರ ಮಾತುಗಳಿಗೆ ಇಸ್ಕಾನ್ ಸಂಸ್ಥೆ ಜವಾಬ್ದಾರಿಯಾಗುವುದಿಲ್ಲ ಎಂದು ಹೇಳಿದ್ದಾರೆ.
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಬಾಂಗ್ಲಾದೇಶದ ಇಸ್ಕಾನ್ ಸಮುದಾಯದ ವಿರುದ್ಧ ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚಿನ್ಮೊಯಿ ಕೃಷ್ಣ ದಾಸ್ ಪ್ರಭು ಅವರನ್ನು ನೂಪುರ್ ಶರ್ಮಾಗೆ ಹೋಲಿಸಿದ್ದು, ಅವರು ಬಾಂಗ್ಲಾದ ನೂಪುರ್ ಶರ್ಮಾ 2.0 ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇಸ್ಕಾನ್‌ನಲ್ಲಿಯೂ ಭಿನ್ನಾಭಿಪ್ರಾಯಗಳಿವೆ. ಚಾರು ಚಂದನ್ ದಾಸ್ ಬಂಗಾಳದೇಶಿ ಇಸ್ಕಾನ್ ಪ್ರಧಾನ ಕಾರ್ಯದರ್ಶಿ ಪ್ರಭು ಜಿ ಬಂಧನದಿಂದ ದೂರವಾಗುವುದು ಹೇಗೆ ಅವರ ಕೆಲವು ಹೇಳಿಕೆಗಳು ಸಂಪೂರ್ಣವಾಗಿ ಧಾರ್ಮಿಕವಾಗಿವೆ ಎಂದು ಕಾಮೆಂಟ್ ಮಾಡಿದ್ದಾರೆ.
ಇತಿಹಾಸ ಪುನರಾವರ್ತನೆಯಾಗುತ್ತಿದೆ. ಹಿಂದೂಗಳ ಶತ್ರುಗಳು ಹಿಂದೂಗಳೇ ಎಂಬುದು ಮತ್ತೊಮ್ಮೆ ಸಾಬೀತಾಗುತ್ತಿದೆ. ಚಿನ್ಮೋಯ್ ಪ್ರಭುವನ್ನು ಹೊರಹಾಕಲು ಇಸ್ಕಾನ್ ಇತ್ತೀಚೆಗೆ ತೆಗೆದುಕೊಂಡ ನಿರ್ಧಾರವು ಈ ಸ್ವಯಂ ವಿನಾಶಕಾರಿ ನಡವಳಿಕೆಗೆ ಒಂದು ಜ್ವಲಂತ ಉದಾಹರಣೆಯಾಗಿದೆ. ಸನಾತನ ಧರ್ಮವನ್ನು ಎತ್ತಿಹಿಡಿಯುವ ಉದ್ದೇಶ ಹೊಂದಿರುವ ಸಂಸ್ಥೆಯು ತುಷ್ಟೀಕರಣಕ್ಕೆ ತಲೆಬಾಗುವುದು ಮತ್ತು ತನ್ನತನವನ್ನೇ ತ್ಯಜಿಸುವುದನ್ನು ನೋಡುವುದು ನಾಚಿಕೆಗೇಡಿನ ಮತ್ತು ವಿಷಾದದಾಯಕ ವಿಚಾರವಾಗಿದೆ.
ಇಸ್ಕಾನ್ ಬಾಂಗ್ಲಾದೇಶದ ಕ್ರಮಗಳು ಇನ್ನಷ್ಟು ಅವಮಾನಕರವಾಗಿವೆ. ನಿರಂತರ ಸವಾಲುಗಳನ್ನು ಎದುರಿಸುತ್ತಿರುವ ಪ್ರದೇಶದಲ್ಲಿ ಹಿಂದೂ ಸಮುದಾಯವನ್ನು ರಕ್ಷಿಸುವ ಮತ್ತು ಅವರೊಂದಿಗೆ ನಿಲ್ಲುವ ಬದಲು ಅವರು ಬಾಂಗ್ಲಾದೇಶಿ ಜಿಹಾದಿಗಳತ್ತ ಹೆಚ್ಚು ಗಮನಹರಿಸಿದ್ದಾರೆ. ಈ ರೀತಿಯ ಕುರುಡು ಜಾತ್ಯತೀತತೆ ಮತ್ತು ನಕಲಿ ಸದ್ಗುಣದ ಸಂಕೇತದಿಂದ ಕೇವಲ ಹಾನಿಯಲ್ಲ, ಅದು ನಮ್ಮ ಸಾಮೂಹಿಕ ಗುರುತಿಗೆ ದೊಡ್ಡ ತೊಂದರೆಯಾಗಿದೆ. ಹಿಂದೂಗಳಾದ ನಾವು ಈ ತಪ್ಪುಗಳ ಬಗ್ಗೆ ಯೋಚಿಸಿ ಇಂತಹ ಆಂತರಿಕ ದ್ರೋಹಗಳ ವಿರುದ್ಧ ಒಗ್ಗಟ್ಟಾಗಿ ನಿಲ್ಲುವ ಸಮಯ ಬಂದಿದೆ. ಕೈಯಲ್ಲಿರುವ ನೈಜ ಸಮಸ್ಯೆಗಳನ್ನು ಪರಿಹರಿಸುವ ಬದಲು ಚಿನ್ಮೋಯ್ ಪ್ರಭು ಅವರಂತಹವರನ್ನು ನಿರಾಕರಿಸಿದ್ದಕ್ಕಾಗಿ ಇಸ್ಕಾನ್ ಬಾಂಗ್ಲಾದೇಶಕ್ಕೆ ನಾಚಿಕೆಪಡಬೇಕು ಹಾಗೂ ಅಲ್ಲಿ ಅವರಿಗೆ ಆಹಾರವನ್ನು ನೀಡುವುದನ್ನು ಮುಂದುವರಿಸಿ ಎಂದು ನೆಟ್ಟಿಗರೊಬ್ಬರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಂಗ್ಲಾದೇಶದ ಯೂನಸ್ ಸರ್ಕಾರ ಬಂದ ಬಳಿಕ ಹಿಂದೂಗಳ ಮೇಲೆ ನಡೆದ ಸತತ ದಾಳಿ ವಿರುದ್ಧ ಭಾರಿ ಪ್ರತಿಭಟನೆಗಳು ನಡೆದಿತ್ತು. ಹಿಂದೂಗಳನ್ನು ಸಂಘಟಿಸಿ ಪ್ರತಿಭಟಿಸಿದ ಆರೋಪದಡಿ ನವಂಬರ್ 25ರಂದು ಬಾಂಗ್ಲಾದೇಶದ ಇಸ್ಕಾನ್ ಸ್ವಾಮಿಜಿ ಚಿನ್ಮೋಯ್ ಕೃಷ್ಣ ದಾಸ್ ಅವರನ್ನು ದೇಶದ್ರೋಹ ಆರೋಪ ಹೊರಿಸಿ ಬಂಧಿಸಲಾಗಿದೆ.
ಇದನ್ನೂ ಓದಿ:ಹಿಂದೂಗಳ ಮೇಲಿನ ದಾಳಿ ವಿರುದ್ಧ ಪ್ರತಿಭಟಿಸಿದ ಆರೋಪ, ಬಾಂಗ್ಲಾ ಇಸ್ಕಾನ್ ಸ್ವಾಮೀಜಿ ಅರೆಸ್ಟ್!
ಇದನ್ನೂ ಓದಿ: ಅನ್ನ ನೀಡಿದ ಇಸ್ಕಾನ್ ಮೇಲೇ ಬಾಂಗ್ಲಾದೇಶದಲ್ಲೀಗ ದೌರ್ಜನ್ಯ: ದೇಗುಲ ಮುಚ್ಚದಿದ್ದರೆ ಭಕ್ತರ ಬರ್ಬರ ಹತ್ಯೆ: ಬೆದರಿಕೆ