Asianet Suvarna News Asianet Suvarna News

ಪಾಕಿಸ್ತಾನದ ಪ್ರಖ್ಯಾತ ಗ್ವಾದರ್ ಬಂದರಿನ ಮೇಲೆ ಬಲೂಚಿಸ್ತಾನ ಪ್ರತ್ಯೇಕತಾವಾದಿಗಳ ದಾಳಿ!

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.

Baloch separatist group attacks Gwadar port in Pakistan san
Author
First Published Mar 20, 2024, 7:17 PM IST

ನವದೆಹಲಿ (ಮಾ.20): ಪಾಕಿಸ್ತಾನ ಅತ್ಯಂತ ಪ್ರಖ್ಯಾತ ಬಂದರುಗಳ ಪೈಕಿ ಒಂದಾಗಿರುವ ಗ್ವಾದರ್ ಬಂದರು ಪ್ರಾಧಿಕಾರದ ಸಂಕೀರ್ಣದಲ್ಲಿ ಬುಧವಾರ ಅಪರಿಚಿತ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ವರದಿಗಳ ಪ್ರಕಾರ, ದಾಳಿಕೋರರು ಮತ್ತು ಭದ್ರತಾ ಅಧಿಕಾರಿಗಳ ನಡುವೆ ಗುಂಡಿನ ದಾಳಿ ನಡೆಯುವ ಮೊದಲು ಬಾಂಬ್‌ಗಳನ್ನು ಇಟ್ಟು ಸ್ಪೋಟವನ್ನೂ ಮಾಡಿದ್ದಾರೆ. ಜಿಯೋ ನ್ಯೂಸ್ ಪ್ರಕಾರ, ಭದ್ರತಾ ಪಡೆಗಳ ಪ್ರತೀಕಾರದ ಗುಂಡಿನ ದಾಳಿಯಲ್ಲಿ ಒಟ್ಟು ಏಳು ಮಂದಿ ದಾಳಿಕೋರರು ಸಾವನ್ನಪ್ಪಿದ್ದಾರೆ. ಗ್ವಾದರ್ ಬಂದರು ಮಹತ್ವಾಕಾಂಕ್ಷೆಯ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ನ ಒಂದು ಭಾಗವಾಗಿದೆ. ಈ ಪ್ರದೇಶದಲ್ಲಿ ದಶಕಗಳ ಕಾಲದ ಪ್ರತ್ಯೇಕತಾವಾದಿ ದಂಗೆಯ ಹೊರತಾಗಿಯೂ, ಗ್ವಾದರ್ ಅನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ಖನಿಜ-ಸಮೃದ್ಧ ಬಲೂಚಿಸ್ತಾನ್‌ನಲ್ಲಿ ಚೀನಾ ತನ್ನ ಬೆಲ್ಟ್ ಮತ್ತು ರೋಡ್ ಉಪಕ್ರಮದ ಅಡಿಯಲ್ಲಿ ಹೆಚ್ಚು ಹೂಡಿಕೆ ಮಾಡಿದೆ.

ಬಲೂಚಿಸ್ತಾನ್ ಪ್ರಾಂತ್ಯವು ನೈಸರ್ಗಿಕ ಅನಿಲ, ಕಲ್ಲಿದ್ದಲು ಮತ್ತು ಖನಿಜಗಳಂತಹ ನೈಸರ್ಗಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿದ್ದರೂ, ಕಡಿಮೆ ಜನಸಂಖ್ಯಾ ಸಾಂದ್ರತೆ, ಸಾಕಷ್ಟು ನೀರು ಮತ್ತು ಮಾನವ ಸಂಪನ್ಮೂಲಗಳು ಮತ್ತು ಅತ್ಯಂತ ಕಳಪೆ ಮೂಲಭೂತ ಶಿಕ್ಷಣದೊಂದಿಗೆ ಪಾಕಿಸ್ತಾನದ ಅತ್ಯಂತ ವಂಚಿತ ಪ್ರದೇಶವಾಗಿ ಉಳಿದಿದೆ.

ಸ್ಥಳೀಯರು ಗ್ವಾದರ್‌ನ ಅಭಿವೃದ್ಧಿಯನ್ನು ತಮ್ಮ ಸಂಪನ್ಮೂಲಗಳ ಶೋಷಣೆ ಎಂದೇ ಪರಿಗಣಿಸಿದ್ದಾರೆ. ಸೂಕ್ತ ಪ್ರಯೋಜನಗಳಿಲ್ಲದೆ ತಮ್ಮನ್ನು ಸ್ಥಳಾಂತರ ಮಾಡಬಹುದು ಎಂದು ಹೆದರಿದ್ದಾರೆ. ಈ ಭಾವನೆಯು ಪೂರ್ವ ತುರ್ಕಿಸ್ತಾನ್ ಇಸ್ಲಾಮಿಕ್ ಮೂವ್‌ಮೆಂಟ್ (ETIM), ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (TTP), ಲಷ್ಕರ್ ಇ-ತಯ್ಯಿಬಾ, ಲಷ್ಕರ್ ಇ-ಜಾಂಗ್ವಿ, ದೇಶ್, ಬಲೂಚಿಸ್ತಾನ್ ಲಿಬರೇಶನ್ ಫ್ರಂಟ್. ಸೇರಿದಂತೆ ವಿವಿಧ ಜನಾಂಗೀಯ-ಪ್ರತ್ಯೇಕತಾವಾದಿ ಮತ್ತು ಮೂಲಭೂತ ಧಾರ್ಮಿಕ ಭಯೋತ್ಪಾದಕ ಸಂಘಟನೆಗಳ ನೆಲೆಗಳಿಗೆ ಕಾರಣವಾಗಿದೆ.

ಪಾಕ್‌ನಲ್ಲಿ ಚೀನಾ ಎಂಜಿನಿಯರ್‌ಗಳ ಮೇಲೆ ಬಲೂಚಿ ಉಗ್ರರ ದಾಳಿ

ಈ ಗುಂಪುಗಳು CPEC ಯೋಜನೆಯನ್ನು ಅಡ್ಡಿಪಡಿಸಲು ಸಕ್ರಿಯವಾಗಿ ಪ್ರಯತ್ನಿಸುತ್ತಿವೆ, ಮೂಲಸೌಕರ್ಯ ಯೋಜನೆಗಳು ಮತ್ತು ವಿದೇಶಿ ಹೂಡಿಕೆದಾರರ ಮೇಲೆ ನೇರ ದಾಳಿಯ ಮೂಲಕ ದೊಡ್ಡ ಮಟ್ಟದ ಆಂತರಿಕ ಭದ್ರತೆಯ ಬೆದರಿಕೆಯನ್ನು ಉಂಟು ಮಾಡುತ್ತಿದ್ದಾರೆ., ಗಮನಾರ್ಹವಾಗಿ ಚೀನಾದ ಪ್ರಜೆಗಳು ಮತ್ತು ಗ್ವಾದರ್ ಅಭಿವೃದ್ಧಿಯಲ್ಲಿ ತೊಡಗಿರುವ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗುತ್ತಿದೆ.

ಎಕನಾಮಿಕ್ ಕಾರಿಡಾರ್; ಪಾಕಿಸ್ತಾನ ಭದ್ರತೆ ಕುರಿತು ಚೀನಾ ಅಸಮಧಾನ!

Follow Us:
Download App:
  • android
  • ios