ಬೀಜಿಂಗ್(ಆ.14): ಚೀನಾ ಹಾಗೂ ಪಾಕಿಸ್ತಾನದ ಎಕನಾಮಿಕ್ ಕಾರಿಡಾರ್ ಯೋಜನೆಗೆ  ಭಾರತದ ವಿರೋಧವಿದ್ದರೂ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಚೀನಾ ಹಾಗೂ ಪಾಕಿಸ್ತಾನ ಸೇರಿದಂತೆ ಹಲವು ರಾಷ್ಟ್ರಗಳಿಗೆ ನೇರವಾಗಿ ಸಂಪರ್ಕ ಕಲ್ಪಿಸುವ ಹಾಗೂ ಸುಲಭ ಸಂಪರ್ಕವಾಗಿರುವ ಈ ಎಕಾನಾಮಿಕ್ ಕಾರಿಡಾರ್ ಯೋಜನೆ ಪಾಕಿಸ್ತಾನ ಆಕ್ರಮಿತ ಪ್ರದೇಶದಲ್ಲಿ ಹಾಗು ಹೋಗುತ್ತಿದೆ. ಭಾರತ ವಿರೋಧವನ್ನು ಧಿಕ್ಕರಿಸಿ ಚೀನಾ ಹಾಗೂ ಪಾಕಿಸ್ತಾನ ನಿರ್ಮಾಣ ಕಾರ್ಯ ಆರಂಭಿಸಿದೆ. ಇದೀಗ ಕುಚುಕು ಗೆಳೆಯರ ನಡುವೆಯೇ ಅಸಮಾಧಾನದ ಹೊಗೆಯಾಗುತ್ತಿದೆ.

ಮಸೂದ್ ಅಜರ್ ಬೂಟು ನೆಕ್ಕುತ್ತಿದೆ ಚೀನಾ: ಹಣದ ಮೋಹ ಅಂದ್ರೆ ಇದೆನಾ?

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಎಕನಾಮಿಕ್ ಕಾರಿಡಾರ್ ಯೋಜನೆ ನಿರ್ಮಾಣ ಕಾರ್ಯಗಳು ನಡೆಯುತ್ತಿದೆ. ಆದರೆ ಚೀನಾ ಕಾರ್ಮಿಕರಿಗೆ, ಕಾರಿಡಾರ್ ಯೋಜನೆ ಅಧಿಕಾರಿಗಳಿಗೆ ಪಾಕಿಸ್ತಾನ ಸೂಕ್ತ ಭದ್ರತೆ ನೀಡುವಲ್ಲಿ ವಿಫಲವಾಗಿದೆ. ಈ ಕುರಿತು ಚೀನಾ ಅಸಮಾಧಾನ ವ್ಯಕ್ತಪಡಿಸಿದೆ. ಪಾಕ್ ಆಕ್ರಮಿತ ಕಾಶ್ಮೀರ, ಭಾರತ -ಪಾಕ್ ಗಡಿ ಪ್ರದೇಶ ಬಳಿ ಹಾದು ಹೋಗುವ ಕಾರಿಡಾರ್‌ ನಿರ್ಮಾಣಕ್ಕೆ ಹೆಚ್ಚಿನ ಭದ್ರತೆ ಅಗತ್ಯವಿದೆ ಎಂದು ಚೀನಾ ಆಗ್ರಹಿಸಿತ್ತು.

ಚೀನಾ-ಪಾಕ್ ಎಕನಾಮಿಕ್ ಕಾರಿಡಾರ್ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ: ವಿದೇಶಾಂಗ ಕಾರ್ಯದರ್ಶಿ.

ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದ ಪಾಕಿಸ್ತಾನ ಇದೀಗ  ಗಡಿ ನಿಯಂತ್ರಣ ರೇಖೆ ಬಳಿ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭದ್ರತೆ ನೀಡಲು ಪಾಕಿಸ್ತಾನ ಸೇನೆ ವಿಫಲವಾಗುತ್ತಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹಾಗೂ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಸೇನೆ ಗಸ್ತು ತಿರುಗಿದರೆ ಭಾರತದಿಂದ ಪ್ರತಿರೋಧ ಎದುರಿಸಬೇಕಾದಿತು ಅನ್ನೋ ಆತಂಕ ಪಾಕಿಸ್ತಾನ ಸೇನೆಗೆ ಇದೆ. ಹೀಗಾಗಿ ಭದ್ರತೆಯನ್ನು ಕಡಿಮೆ ಮಾಡಿದೆ.

ಚೀನಾ ಕಾರ್ಮಿಕರಿಗೆ ಸೂಕ್ತ ಭದ್ರತೆ ನೀಡದ ಕಾರಣ ಇದೀಗ ಚೀನಾ ಹಾಗೂ ಪಾಕಿಸ್ತಾನ ನಡುವಿನ ಕಾರಿಡಾರ್ ನಿರ್ಮಾಣಕ್ಕೆ ಅಡ್ಡಿಯಾಗಿದೆ. ಈ ಕುರಿತು ಪಾಕಿಸ್ತಾನ ಸೇನೆ ಜೊತೆ ಪ್ರಧಾನಿ ಇಮ್ರಾನ್ ಖಾನ್ ಮಾತುಕತೆ ನಡೆಸಿದ್ದಾರೆ.