Asianet Suvarna News Asianet Suvarna News

ಪಾಕ್‌ನಲ್ಲಿ ಚೀನಾ ಎಂಜಿನಿಯರ್‌ಗಳ ಮೇಲೆ ಬಲೂಚಿ ಉಗ್ರರ ದಾಳಿ

ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಗ್ವಾದಾರ್‌ ಬಂದರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಚೀನಾ ಎಂಜಿನಿಯರ್‌ಗಳ ಮೇಲೆ ಭಾನುವಾರ ಬಲೂಚಿ ಬಂಡುಕೋರರ ಗುಂಪು ಗುಂಡಿನ ದಾಳಿ ನಡೆಸಿದೆ.

Balochi militants attacks on Chinese engineers who working in Gwadar port in Balochistan province of Pakistan akb
Author
First Published Aug 14, 2023, 7:10 AM IST

ಇಸ್ಲಾಮಾಬಾದ್‌: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಗ್ವಾದಾರ್‌ ಬಂದರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಚೀನಾ ಎಂಜಿನಿಯರ್‌ಗಳ ಮೇಲೆ ಭಾನುವಾರ ಬಲೂಚಿ ಬಂಡುಕೋರರ ಗುಂಪು ಗುಂಡಿನ ದಾಳಿ ನಡೆಸಿದೆ. ಈ ವೇಳೆ ಭದ್ರತಾ ಪಡೆಗಳು ನಡೆಸಿದ ಪ್ರತಿದಾಳಿಯಲ್ಲಿ ಇಬ್ಬರು ಬಂಡುಕೋರರು ಸಾವನ್ನಪ್ಪಿದ್ದಾರೆ. ಚೀನಾ ಸರ್ಕಾರವು ಅಂದಾಜು 5 ಲಕ್ಷ ಕೋಟಿ ರು. ವೆಚ್ಚದಲ್ಲಿ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ (ಸಿಪಿಇಸಿ) ಯೋಜನೆ ಜಾರಿಗೊಳಿಸುತ್ತಿದೆ. ಇದರ ಭಾಗವಾಗಿ ಆಯಕಟ್ಟಿನ ಗ್ವಾದಾರ್‌ ಬಂದರನ್ನು ಅಭಿವೃದ್ಧಿಪಡಿಸುತ್ತಿದೆ. ಇದರ ಸಂಪೂರ್ಣ ಹೊಣೆಯನ್ನು ಚೀನಾ ಕಂಪನಿಗಳೇ ನೋಡಿಕೊಳ್ಳುತ್ತಿದ್ದು, ಇದು ಸ್ಥಳೀಯರ ತೀವ್ರ ವಿರೋಧಕ್ಕೆ ಕಾರಣವಾಗಿದೆ.

ಅದರ ಬೆನ್ನಲ್ಲೇ ಭಾನುವಾರ ಬಲೂಚಿ ಬಂಡುಕೋರರ ಗುಂಪು ಬಂದರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚೀನಾ ಎಂಜಿನಿಯರ್‌ (China engineer) ವಾಹನದಲ್ಲಿ ತೆರಳುತ್ತಿದ್ದ ವೇಳೆ ಅವರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದೆ. ಘಟನೆಯ ಹೊಣೆಯನ್ನು ಬಲೂಚಿಸ್ತಾನ್‌ ಲಿಬರೇಷನ್‌ ಆರ್ಮಿ (Balochistan libaration Army) ಹೊತ್ತುಕೊಂಡಿದೆ. ಈ ಯೋಜನೆಯಿಂದ ಸ್ಥಳೀಯರಿಗೆ ಯಾವುದೇ ಲಾಭ ಇಲ್ಲ ಎಂದು ವಾದಿಸುತ್ತಿರುವ ಈ ಸಂಘಟನೆ, ಈ ಹಿಂದೆಯೂ ಯೋಜನಾ ಪ್ರದೇಶದಲ್ಲಿ ದಾಳಿ ನಡೆಸಿತ್ತು.  ದಾಳಿ ನಡೆದ ಸ್ಥಳವನ್ನು ಪಾಕಿಸ್ತಾನದ ಭದ್ರತಾ ಪಡೆಗಳು ಸುತ್ತುವರೆದಿದ್ದು, ಇಬ್ಬರು ಉಗ್ರರನ್ನು ಸಾಯಿಸಿವೆ. ಅಡಗಿರಬಹುದಾದ ಇನ್ನಷ್ಟು ಬಂಡುಕೋರರಿಗಾಗಿ ಹುಡುಕಾಟ ನಡೆಸಿವೆ.

ಬಲೂಚಿಸ್ತಾನದಲ್ಲಿ Virat Kohli ಮರಳು ಕಲಾಕೃತಿ: ಸಾಮಾಜಿಕ ಜಾಲತಾಣದಲ್ಲಿ ವೈರಲ್‌

ಇದರ ಬೆನ್ನಲ್ಲೇ ಚೀನೀಯರು ಪಾಕಿಸ್ತಾನದಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದು ಚೀನಾ ಸರ್ಕಾರ ಸೂಚಿಸಿದೆ.

 

ಪಾಕ್‌ನ ಬಲೋಚಿಸ್ತಾನ ಪ್ರಾಂತ್ಯದಲ್ಲಿ ಸುಸೈಡ್ ಬಾಂಬರ್ ದಾಳಿಗೆ 9 ಪೊಲೀಸರ ಬಲಿ

Follow Us:
Download App:
  • android
  • ios