ಬಾಂಗ್ಲಾದೇಶದಲ್ಲಿ ಕ್ಷಿಪ್ರ ಕ್ರಾಂತಿ ನಡೆಯುತ್ತಿದೆಯಾ? ಹೌದು ಎನ್ನುತ್ತಿದೆ ಬಾಂಗ್ಲಾದೇಶದ ಅವಾಮಿ ಲೀಗ್ ಪಕ್ಷ. ಶೇಕ್ ಹಸೀನಾ ಪ್ರಧಾನಿಯಾಗಿ ಬಾಂಗ್ಲಾದೇಶಕ್ಕೆ ಮರಳುತ್ತಿದ್ದಾರೆ. ಸುರಕ್ಷಿತವಾಗಿ ನೋಡಿಕೊಂಡ ಭಾರತಕ್ಕೆ ಅವಾಮಿ ಲೀಗ್ ಧನ್ಯವಾದ ಹೇಳಿದೆ. ಏನಿದು ಬೆಳವಣಿಗೆ. 

ಢಾಕ(ಮಾ.12) ಪ್ರತಿಭಟನಾ ಕಿಚ್ಚು, ಡೀಪ್ ಸ್ಟೇಟ್ ತಾಳಕ್ಕೆ ತಕ್ಕಂತೆ ಕುಣಿದ ಬಾಂಗ್ಲಾ ಯುವ ಸಮೂಹ, ಶೇಕ್ ಹಸೀನಾ ಸರ್ಕಾರವನ್ನು ಉರುಳಿಸಿ, ಮೊಹಮ್ಮದ್ ಯೂನಸ್ ಕೈಗೆ ಅಧಿಕಾರ ನೀಡಿದೆ. ಶೇಕ್ ಹಸೀನಾ ಪ್ರಾಣ ಉಳಿಸಿಕೊಳ್ಳಳು ಭಾರತಕ್ಕೆ ಓಡಿ ಬಂದರೆ, ಅತ್ತ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಿರಂತರ ದಾಳಿ ನಡೆಯಿತು. ಪಾಕಿಸ್ತಾನ ಜೊತೆ ಸಖ್ಯ ಬೆಳೆಸಿದ ಬಾಂಗ್ಲಾದೇಶ ಇದೀಗ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ. ಇದರ ನಡುವೆ ಬಾಂಗ್ಲಾದೇಶದಲ್ಲಿ ಮತ್ತೊಂದು ಕ್ಷಿಪ್ರ ಕ್ರಾಂತಿಯಾಗುವ ಸಾಧ್ಯತೆ ಕಾಣಿಸುತ್ತಿದೆ. ಇದರ ಬೆನ್ನಲ್ಲೇ ಅವಾಮಿ ಲೀಗ್ ಪಕ್ಷ ನೀಡಿದ ಹೇಳಿಕೆ ಕೋಲಾಹಲ ಸೃಷ್ಟಿಸಿದೆ. ಶೇಕ್ ಹಸೀನಾ ಪ್ರಧಾನಿಯಾಗಿ ಬಾಂಗ್ಲಾದೇಶಕ್ಕೆ ಮರಳುತ್ತಿದ್ದಾರೆ.ಶೇಕ್ ಹಸೀನಾ ಅವರನ್ನು ಸುರಕ್ಷಿತವಾಗಿ ನೋಡಿಕೊಂಡ ಭಾರತಕ್ಕೆ ಅವಾಮಿ ಲೀಗ್ ಧನ್ಯವಾದ ಹೇಳಿದೆ.

ಅವಾಮಿ ಲೀಗ್ ಬಾಂಗ್ಲಾದೇಶ ಪಕ್ಷದ ಹಿರಿಯ ಮುಖಂಡ ರಬ್ಬಿ ಅಲಾಮ್ ಹೇಳಿಕೆ ಬಾಂಗ್ಲಾದೇಶದಲ್ಲಿ ಕೋಲಾಹಲ ಸೃಷ್ಟಿಸಿದೆ. ರಬ್ಬಿ ಅಲಾಮ್ ಅವಾಮಿ ಲೀಗ್ ಪಕ್ಷದ ಪ್ರಮುಖ ನಾಯಕ, ಇಷ್ಟೇ ಅಲ್ಲ ಶೇಕ್ ಹಸೀನಾ ಅವರ ಆಪ್ತ. ಬಾಂಗ್ಲಾದೇಶದಲ್ಲಿ ಯುವ ಸಮೂಹ ಅತೀ ದೊಡ್ಡ ತಪ್ಪು ಮಾಡಿದೆ. ಆದರೆ ಇದು ಅವರ ತಪ್ಪಲ್ಲ, ಯುವ ಸಮೂಹದ ದಾರಿ ತಪ್ಪಿಸಲಾಗಿದೆ. ವಿದ್ಯಾರ್ಥಿಗಳ ಪ್ರತಿಭಟನೆ ಒಂದು ಚುನಾಯಿತ ಸರ್ಕಾರವನ್ನು ಬುಡ ಮೇಲು ಮಾಡಿದೆ ಎಂದರೆ ಇದರ ಹಿಂದಿನ ಶಕ್ತಿಯನ್ನು ಊಹಿಸಲು ಹೆಚ್ಚುು ಹೊತ್ತು ಬೇಕಾಗಿಲ್ಲ ಎಂದು ರಬ್ಬಿ ಅಲಾಮ್ ಹೇಳಿದ್ದಾರೆ.

ಪಾಕಿಸ್ತಾನಕ್ಕೆ ಆಪ್ತನಾದ ಬಾಂಗ್ಲಾ ಸೇನಾಧಿಕಾರಿಯಿಂದ ಬಾಂಗ್ಲಾದೇಶದಲ್ಲಿ ದಂಗೆಗೆ ಸಂಚು!

ರಾಜಕೀಯ ಬದಲಾವಣಗಳು, ಆಡಳಿತ ಬದಲಾವಣೆ ಇವೆಲ್ಲಾ ಚುನಾವಣೆಯಲ್ಲಿ ಸಹಜ. ಶೇಕ್ ಹಸೀನಾ ಸರ್ಕಾರದ ಆಡಳಿತ ಸರಿ ಇಲ್ಲದಿದ್ದರೆ ಜನರೇ ಸೋಲಿಸುತ್ತಾರೆ. ಆದರೆ ಇಲ್ಲಿ ಆಗಿದ್ದು ಹಾಗಲ್ಲ, ಚುನಾಯಿತಿ ಸರ್ಕಾರವನ್ನು ಬುಡಮೇಲು ಮಾಡಲು ವ್ಯವಸ್ಥಿತಿ ಯೋಜನೆ ನಡೆದಿತ್ತು.ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಶೇಕ್ ಹಸೀನಾ ಜೀವ ಉಳಿಯುವುದೇ ಅನುಮಾನವಾಗಿತ್ತು. ಆದರೆ ಭಾರತ ಈ ವೇಳೆ ನೆರವು ನೀಡಿತು. ಸುರಕ್ಷಿತ ಪ್ರಯಾಣಕ್ಕೆ ಅನುವು ಮಾಡಿತು. ಇಷ್ಟೇ ಅಲ್ಲ ಶೇಕ್ ಹಸೀನಾಗೆ ಭದ್ರತೆಯನ್ನು ಒದಗಿಸಿತು. ಹಲವು ನಾಯಕರು ಭಾರತದಲ್ಲಿ ಆಶ್ರಯ ಪಡೆದರು ಎಂದು ರಬ್ಬಿ ಅಲಾಮ್ ಹೇಳಿದ್ದಾರೆ.

ಕಳೆದ ವರ್ಷ ಶೇಕ್ ಹಸೀನಾ ಬಾಂಗ್ಲಾದೇಶದಿಂದ ಭಾರತಕ್ಕೆ ಹೋಗಿದ್ದಾರೆ. ಆದರೆ ಸಮಯ ಬಂದಿದೆ. ಮೊಹಮ್ಮದ್ ಯೂಸುಫ್ ಶೀಘ್ರದಲ್ಲೇ ರಾಜೀನಾಮೆ ನೀಡಬೇಕು. ಕಾರಣ ಶೇಕ್ ಹಸೀನಾ ಪ್ರಧಾನಿಯಾಗಿ ಬಾಂಗ್ಲಾದೇಶಕ್ಕೆ ಮರಳುತ್ತಿದ್ದಾರೆ ಎಂದು ರಬ್ಬಿ ಅಲಾಮ್ ಹೇಳಿದ್ದಾರೆ. ಬಾಂಗ್ಲಾದೇಶ ಇದೇ ರೀತಿ ಮುಂದುವರಿದರೆ ನಿರ್ಮಾವಾಗಲಿದೆ. ಬಾಂಗ್ಲಾದೇಶ ಅಸ್ತಿತ್ವವೇ ಇರುವುದಿಲ್ಲ ಎಂದು ರಬ್ಬಿ ಅಲಾಮ್ ಹೇಳಿದ್ದಾರೆ.

ಭಾರತದಿಂದ ಬಾಂಗ್ಲಾದೇಶಕ್ಕೆ ಹಿಂದಿರುಗುವ ಇಂಗಿತ ವ್ಯಕ್ತಪಡಿಸಿದ ಮಾಜಿ ಪ್ರಧಾನಿ ಶೇಖ್ ಹಸೀನಾ