ಬಾಂಗ್ಲಾದೇಶದಲ್ಲಿನ ಪರಿಸ್ಥಿತಿ ಸುಧಾರಣೆಯ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ದೇಶಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹಲ್ಲೆಗೊಳಗಾದ ಪೊಲೀಸ್ ಅಧಿಕಾರಿಯ ಕುಟುಂಬಕ್ಕೆ ಸಹಾಯ ಹಸ್ತ ಚಾಚುವ ಭರವಸೆ ನೀಡಿದ್ದಾರೆ. ಕೊಲೆಗಾರರಿಗೆ ಶಿಕ್ಷೆಯಾಗುವುದು ಖಚಿತ ಎಂದಿರುವ ಅವರು, ಮಧ್ಯಂತರ ಸರ್ಕಾರದ "ಆಪರೇಷನ್ ಡೆವಿಲ್ ಹಂಟ್" ಅನ್ನು ಪ್ರಶ್ನಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಸುಧಾರಿಸಿದೆ. ದೀರ್ಘಕಾಲದಿಂದ ಸಮಸ್ಯೆಗಳು ನಡೆಯುತ್ತಿವೆ. ಈ ನಡುವೆ ಮಾಜಿ ಪ್ರಧಾನಿ ಶೇಖ್ ಹಸೀನಾ ದೇಶಕ್ಕೆ ವಾಪಸ್ ಬರಲು ಬಯಸಿದ್ದಾರೆ. ಸೋಮವಾರ ರಾತ್ರಿ ಬಾಂಗ್ಲಾದೇಶಕ್ಕೆ ವರ್ಚುವಲ್ ಸಂದೇಶದ ಮೂಲಕ ಅವರು ಆ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.

ಅವಾಮಿ ಲೀಗ್‌ನ ಸಾಮಾಜಿಕ ಮಾಧ್ಯಮ ಖಾತೆಯಿಂದ ಹಸೀನಾ ಅವರ ಭಾಷಣವನ್ನು ನೇರಪ್ರಸಾರ ಮಾಡಲಾಯಿತು. ಭಾಷಣದ ನಂತರ, ಹಲ್ಲೆಗೊಳಗಾದ ಪೊಲೀಸ್ ಅಧಿಕಾರಿಯ ಪತ್ನಿಯೊಂದಿಗೆ ಮಾತನಾಡಿದರು. ತನ್ನ ಪತಿ ಕುಟುಂಬಕ್ಕೆ ಏನನ್ನೂ ಬಿಟ್ಟಿಲ್ಲ ಎಂದು ಆಕೆ ಹೇಳಿದರು. ಮನೆಯಲ್ಲಿ ಮಕ್ಕಳಿದ್ದಾರೆ. ಈ ಪರಿಸ್ಥಿತಿಯಲ್ಲಿ ಹಸೀನಾ ಅವರ ಸಹಾಯ ಕೋರಿದರು.

ಬಾಂಗ್ಲಾದಿಂದ ಶೇಖ್ ಹಸೀನಾ ಎಸ್ಕೇಪ್‌ ಆಗಿರದಿದ್ದರೆ, 25 ನಿಮಿಷದಲ್ಲಿ ಹತ್ಯೆಯಾಗುತ್ತಿತ್ತು!

ಇದಕ್ಕೆ ಪ್ರತಿಕ್ರಿಯಿಸಿದ ಹಸೀನಾ, ಖಂಡಿತ ನಾನು ಸಹಾಯ ಮಾಡ್ತೀನಿ. ನಾನು ಬರ್ತೀನಿ. ಎಂದು ಹೇಳಿದರು. ಯಾವುದೇ ಕಾರಣಕ್ಕೂ ಕೊಲೆಗಾರರಿಗೆ ತಪ್ಪಿಸಿಕೊಳ್ಳಲು ಬಿಡುವುದಿಲ್ಲ. ನನ್ನ ತಂದೆ-ತಾಯಿ, ಮೂವರು ಸಹೋದರರನ್ನು ಕೊಂದಾಗಲೂ ಅವರಿಗೆ ಕ್ಷಮಾದಾನ ನೀಡಲಾಗಿತ್ತು. ಆದರೆ ನಾನು ಅವರಿಗೆ ಶಿಕ್ಷೆ ವಿಧಿಸಿದೆ. ಈ ಪೊಲೀಸ್ ಹತ್ಯೆಯನ್ನೂ ನಾನು ಒಂದು ದಿನ ನ್ಯಾಯ ನೀಡುತ್ತೇನೆ.

ಸೋಮವಾರ ರಾತ್ರಿ ನಡೆದ ವರ್ಚುವಲ್ ಚರ್ಚೆಯಲ್ಲಿ ಹಸೀನಾ ಪೊಲೀಸ್ ಕುಟುಂಬಗಳಿಗೆ ಅಗತ್ಯವಿರುವ ಎಲ್ಲಾ ಸಹಾಯವನ್ನು ಒದಗಿಸುವ ಭರವಸೆ ನೀಡಿದರು. ಆದರೆ, ಇದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ ಎಂದರು. “ಧೈರ್ಯ ಗೆಡಿರಿ, ಕಾಯಿರಿ. ನಾನು ದೇಶಕ್ಕೆ ವಾಪಸ್ ಬಂದಾಗ, ಪ್ರತಿ ಕುಟುಂಬಕ್ಕೂ ಸಹಾಯ ಮಾಡ್ತೀನಿ. ಕೊಲೆಗಾರರಿಗೆ ಶಿಕ್ಷೆಯಾಗುವುದು ಖಚಿತ” ಎಂದರು.

ಶೇಖ್ ಹಸೀನಾ ವಿಚಾರಣೆಗೆ ಭಾರತಕ್ಕೆ ಬರಲು ತುದಿಗಾಲಲ್ಲಿ ನಿಂತಿದೆ ಬಾಂಗ್ಲಾ ತನಿಖಾ ತಂಡ

ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಗೃಹ ಸಚಿವಾಲಯವು ಅಪರಾಧಿಗಳನ್ನು ಹಿಡಿಯಲು ವಿಶೇಷ ಕಾರ್ಯಾಚರಣೆ ನಡೆಸುತ್ತಿದೆ. “ಆಪರೇಷನ್ ಡೆವಿಲ್ ಹಂಟ್” ಎಂಬ ಹೆಸರಿನಲ್ಲಿ ದೇಶಾದ್ಯಂತ ಸಾವಿರಾರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಬಗ್ಗೆ ಶೇಖ್ ಹಸೀನಾ, ಈಗ “ಆಪರೇಷನ್ ಡೆವಿಲ್ ಹಂಟ್” ಶುರುವಾಗಿದೆ. ಯಾರು ಡೆವಿಲ್, ಯಾರನ್ನು ಹುಡುಕುತ್ತಿದ್ದಾರೆ? ಎಂದು ಪ್ರಶ್ನಿಸಿದರು. ಮೃತ ಪೊಲೀಸ್ ಅಧಿಕಾರಿಯ ಕುಟುಂಬದ ಪರಿಸ್ಥಿತಿಯನ್ನು ಉಲ್ಲೇಖಿಸಿ, ಮಧ್ಯಂತರ ಸರ್ಕಾರ ದೇಶವನ್ನು ಆಳಲು ವಿಫಲವಾಗಿದೆ ಎಂದು ಹೇಳಿದರು.