Asianet Suvarna News Asianet Suvarna News

ಅಪರಿಚಿತನ ಹುಟ್ಟುಹಬ್ಬವನ್ನು ಸೆಲೆಬ್ರೆಟ್‌ ಮಾಡಿದ ಆಟಿಸಂ ಪುಟಾಣಿ: ವಿಡಿಯೋ ವೈರಲ್

ಆಟಿಸಂ ಹೊಂದಿರುವ ಬಾಲಕಿಯೊಬ್ಬಳು ತನಗೆ ಯಾರು ಎಂದೇ ತಿಳಿಯದ ಯುವಕನೋರ್ವನ ಹುಟ್ಟುಹಬ್ಬದಲ್ಲಿ ತಾನು ಎಂಜಾಯ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Autism toddler celebrates strangers birthday Video goes viral akb
Author
First Published Apr 13, 2023, 4:11 PM IST

ಆಟಿಸಂ ಹೊಂದಿರುವ ಬಾಲಕಿಯೊಬ್ಬಳು ತನಗೆ ಯಾರು ಎಂದೇ ತಿಳಿಯದ ಯುವಕನೋರ್ವನ ಹುಟ್ಟುಹಬ್ಬದಲ್ಲಿ ತಾನು ಎಂಜಾಯ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಮಕ್ಕಳು ದೇವರ ಸಮಾನ ಯಾವುದೇ ಚಿಂತೆ ಇಲ್ಲದೇ ಮಕ್ಕಳು  ಆ ಕ್ಷಣವನ್ನು ಎಂಜಾಯ್ ಮಾಡುತ್ತಿರುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಆಟಿಸಂ ಪೀಡಿತ ಪುಟಾಣಿ ಬಾಲಕಿಯೊಬ್ಬಳು ಯಾರದೋ ಹುಟ್ಟುಹಬ್ಬವನ್ನು ತನ್ನ ಹುಟ್ಟುಹಬ್ಬವೆಂಬಂತೆ ಎಂಜಾಯ್ ಮಾಡುತ್ತಿದ್ದು,  ಹುಟ್ಟುಹಬ್ಬ ಇರುವ ವ್ಯಕ್ತಿ ಕೂಡ ಅಷ್ಟೇ ಸಂಭ್ರಮದಿಂದ ಬಾಲಕಿಯನ್ನು ಸ್ವಾಗತಿಸಿದ್ದಾರೆ.  ಗುಡ್ ಮೂವ್‌ಮೆಂಟ್ಸ್‌  ಎಂಬ ಪೇಜ್‌ನಿಂದ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ.

ವಿಡಿಯೋದಲ್ಲಿ ಕಾಣಿಸುವಂತೆ ಬಾಲಕಿಯೊಬ್ಬಳು ತನ್ನ ಸಂಬಂಧಿಗಳ ಜೊತೆ ರೆಸ್ಟೋರೆಂಟ್‌ಗೆ ಬಂದಿದ್ದು, ಇದೇ ವೇಳೆ ಅದೇ ಹೊಟೇಲ್‌ನಲ್ಲಿ  ಯುವಕನೋರ್ವ ತನ್ನ ಸ್ನೇಹಿತರೊಡಗೂಡಿ ಹುಟ್ಟುಹಬ್ಬ ಆಚರಿಸುತ್ತಿದ್ದಾನೆ.  ಎಲ್ಲರೂ ಟೇಬಲ್ ಮೇಲೆ ಕೇಕ್‌ ಇರಿಸಿ ಹುಟ್ಟು ಹಬ್ಬ ಆಚರಿಸಲು ಬರ್ತ್‌ಡೇ ಸಾಂಗ್ ಹೇಳುತ್ತಾ ಚಪ್ಪಾಳೆ ತಟ್ಟುತ್ತಿದ್ದಾರೆ. ಕೇಕ್‌ನ ಮೇಲೆ ಕ್ಯಾಂಡಲ್ ಉರಿಸಿ ಇಡಲಾಗಿದೆ. ಇದನ್ನು ನೋಡಿ ಪುಟಾಣಿ ಬಾಲಕಿ ಓಡಿ ಬಂದು ಕೇಕ್‌ ಮೇಲಿದ್ದ ಕ್ಯಾಂಡಲ್‌ ಆರಿಸಲು ನೋಡುವುದಲ್ಲದೇ ತನ್ನದೇ ಹುಟ್ಟುಹಬ್ಬವೆಂಬಂತೆ ಆ ಕ್ಷಣವನ್ನು ಸಂಭ್ರಮಿಸುತ್ತಾಳೆ. ಆದರೆ ಕ್ಯಾಂಡಲ್ ಆರಿಸಲು ಓಡಿದ ಆಕೆಯನ್ನು ಆಕೆಯ ಸಂಬಂಧಿಗಳು ತಡೆಯುತ್ತಾರೆ.  

ಮಗುವಿಗೆ 2-3 ವರ್ಷವಾದ್ರೂ ಮಾತನಾಡುತ್ತಿಲ್ವಾ? ತಲೆ ಕೆಡಿಸಿಕೊಳ್ಬೇಡಿ, ಕಾರಣ ಇವಿರಬಹುದು!

ಈ ವೇಳೆ ಹುಟ್ಟುಹಬ್ಬ ಆಚರಿಸುತ್ತಿದ್ದ ಯುವಕ ಆಕೆಯನ್ನು ಹತ್ತಿರ ಕರೆದುಕೊಂಡು ಆಕೆಯ ಕೈಯಿಂದಲೇ  ಕ್ಯಾಂಡಲ್ ಆರಿಸುತ್ತಾನೆ.  ಈ ಹುಡುಗ ತನ್ನ 29ನೇ ಹುಟ್ಟುಹಬ್ಬವನ್ನು ಆಚರಿಸುವ ಸಲುವಾಗಿ ತನ್ನ ಕುಟುಂಬದವರು ಹಾಗೂ ಸ್ನೇಹಿತರ ಜೊತೆ ಹೊಟೇಲ್‌ಗೆ ಬಂದಿದ್ದ. ಆದರೆ ಬಾಲಕಿ ಅವರ ಸಂತೊಷದ ಕ್ಷಣಕ್ಕೆ ಹೆಚ್ಚಿನ ರಂಗು ನೀಡಿದ್ದಾಳೆ. ಜೊತೆಗೆ ಯುವಕ ಕುಟುಂಬ ಹಾಗೂ ಸ್ನೇಹಿತರು ಕೂಡ ಬಾಲಕಿ ಅಪರಿಚಿತಳು ಎಂಬುದನ್ನು ಕೂಡ ಗಣನೆಗೆ ತೆಗೆದುಕೊಳ್ಳದೇ ಆಕೆ ಕ್ಷಣವನ್ನು ಸಂಭ್ರಮಿಸಲು ಬಿಟ್ಟಿದ್ದಾರೆ. 

ವಿಡಿಯೋ ನೋಡಿದ ಅನೇಕರು  ಬರ್ತ್‌ಡೇ ಬಾಯ್ ಹಾಗೂ ಆತನ ಕುಟುಂಬ ಹಾಗೂ ಬಾಲಕಿ ಇಬ್ಬರನ್ನು ಕೂಡ ಶ್ಲಾಘಿಸಿದ್ದಾರೆ.   ಈ ವ್ಯಕ್ತಿಯ 29ನೇ ಹುಟ್ಟುಹಬ್ಬದ ವೇಳೆ  ಆಚರಣೆ ಆಟಿಸಂ ಹೊಂದಿರುವ ಬಾಲಕಿಯನ್ನು ಅವರ ಟೇಬಲ್‌ಗೆ ಎಳೆದು ತಂದಿದ್ದು, ಕೂಡಲೇ ಬಿಂದಾಸ್ ಆಗಿ ಟೇಬಲ್ ಸಮೀಪ ಬಂದ ಬಾಲಕಿ ತನ್ನದೇ ಬರ್ತ್‌ಡೇ ಎಂಬಂತೆ ಸಂಭ್ರಮಿಸಿದ್ದಾಳೆ. ಈ ವೇಳೆ ಯುವಕನೂ ಕೂಡ ಆ ಪುಟಾಣಿಯನ್ನು ಬಹಳ ಆತ್ಮೀಯವಾಗಿ ಬರಮಾಡಿಕೊಂಡಿದ್ದಾನೆ. ಬಾಲಕಿಯ ತಂದೆ ಬೇರೆಯವರ ಹುಟ್ಟುಹಬ್ಬಕ್ಕೆ ತೊಂದರೆ ಮಾಡದಂತೆ ಆಕೆಯನ್ನು ಅಲ್ಲಿಂದ ಎಳೆದೊಯ್ಯಲು ಪ್ರಯತ್ನಿಸುತ್ತಿದ್ದರೆ ಈ ಯುವಕ ಮಗುವನ್ನು ಕರೆದು ಆಕೆಯ ಕೈಯಿಂದಲೇ ಹುಟ್ಟುಹಬ್ಬದ ಕ್ಯಾಂಡಲ್‌ ಅನ್ನು ಆರಿಸಿ ಆಕೆಯನ್ನು ಪ್ರೀತಿಯಿಂದ ನಡೆಸಿಕೊಂಡಿದ್ದಾನೆ ಎಂದು ಈ ವೀಡಿಯೋ ಪೋಸ್ಟ್ ಮಾಡಿದ ಬಳಿ ಗುಡ್‌ ಟೈಮ್ಸ್‌ ಮೂವ್‌ಮೆಂಟ್ ಬರೆದುಕೊಂಡಿದೆ. 

Cow Therapy: ಭಾರತೀಯ ಗೋವುಗಳನ್ನು ಬಳಸಿ ಆಟಿಸಂ ರೋಗಿಗಳಿಗೆ ಆಸ್ಟ್ರೇಲಿಯಾದಲ್ಲಿ ಚಿಕಿತ್ಸೆ!

ವಿಡಿಯೋ ನೊಡಿದ ಅನೇಕರು ಹಲವು ಕಾಮೆಂಟ್‌ಗಳನ್ನು ಮಾಡಿದ್ದು, ಇಂತಹ ಹೃದಯವಂತಿಕೆ ಎಲ್ಲರಿಗೂ ಬೇಕು ಎಂದು ಕಾಮೆಂಟ್ ಮಾಡಿದ್ದಾರೆ.  ಬರ್ತ್‌ಡೇ ಬಾಯ್‌ನಂತಹ ಹೃದಯವನ್ನು ಎಲ್ಲರೂ ಹೊಂದಿರಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

 

Follow Us:
Download App:
  • android
  • ios