Asianet Suvarna News Asianet Suvarna News

Cow Therapy: ಭಾರತೀಯ ಗೋವುಗಳನ್ನು ಬಳಸಿ ಆಟಿಸಂ ರೋಗಿಗಳಿಗೆ ಆಸ್ಟ್ರೇಲಿಯಾದಲ್ಲಿ ಚಿಕಿತ್ಸೆ!

ಗೋಹತ್ಯೆ ನಿಷೇಧ, ಗೋಮಾಂಸ ಮಾರಾಟ ಭಾರತದಲ್ಲಿ ಎಂದಿಗೂ ವಿವಾದಿತ ವಿಚಾರ. ಆದರೆ, ಭಾರತದ ಗೋವುಗಳ ಮಹತ್ವ ಆಸ್ಟ್ರೇಲಿಯಾಕ್ಕೆ ಗೊತ್ತಾಗಿದೆ. ಆಸ್ಟ್ರೇಲಿಯಾದಲ್ಲಿ ಮಾನಸಿಕ ಸಮಸ್ಯೆ ಹಾಗೂ ಆಟಿಸಂಗೆ ತುತ್ತಾದ ಮಕ್ಕಳಿಗೆ ಭಾರತೀಯ ಮೂಲದ ಗೋವುಗಳನ್ನು ಬಳಸಿ ಚಿಕಿತ್ಸೆ ನೀಡಲಾಗುತ್ತದೆ. ಇದಕ್ಕೆ 'ಕೌ ಥೆರಪಿ' ಎಂದೂ ಕರೆಯಲಾಗುತ್ತಿದೆ.

Cow Cuddling Therapy Mental Patients Treatment In Australia With Indian Cows san
Author
First Published Aug 30, 2022, 5:02 PM IST

ನವದೆಹಲಿ (ಆ.30): ಆಸ್ಟ್ರೇಲಿಯಾದಲ್ಲಿ ಭಾರತೀಯ ಹಸುಗಳ ಮೂಲಕ ಮಾನಸಿಕ ಅಸ್ವಸ್ಥರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಉತ್ತರ ಕ್ವೀನ್ಸ್‌ಲ್ಯಾಂಡ್‌ನಲ್ಲಿ ಇಲ್ಲಿ ಹಸುಗಳನ್ನು ಮುದ್ದಾಡುವ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮನಸ್ಸಿಗೆ ಶಾಂತಿ ಬೇಕೆಂದಾಗ, ಬಂದು ಹಸುಗಳನ್ನು ಅಪ್ಪಿಕೊಳ್ಳುತ್ತಿದ್ದಾರೆ. ಹಸುಗಳೊಂದಿಗೆ ಸಮಯ ಕಳೆಯುವುದು, ಅವುಗಳಿಗೆ ಆಹಾರ ನೀಡುವುದು, ಮುದ್ದಾಡುವುದು ಮಾನಸಿಕ ಅಸ್ವಸ್ಥರು ಹಾಗೂ ಆಟಿಸಂಗೆ ಒಳಗಾದ ಮಕ್ಕಳಿಗೆ ನೆಮ್ಮದಿಯನ್ನು ನೀಡುತ್ತಿದೆ. ಇದನ್ನು ಆಸ್ಟ್ರೇಲಿಯಾದಲ್ಲಿ 'ಕೌ ಥೆರಪಿ' ಎಂದೂ ಕರೆಯಲಾಗುತ್ತಿದ್ದು, ಅದಕ್ಕಾಗಿ ಶುಲ್ಕವನ್ನೂ ವಿಧಿಸಲಾಗುತ್ತಿದೆ. ಈ ವರ್ಷದಿಂದ 4 ಎನ್‌ಡಿಐಎಸ್ ಕಂಪನಿಗಳು (ರಾಷ್ಟ್ರೀಯ ಅಂಗವೈಕಲ್ಯ ವಿಮಾ ಯೋಜನೆ) ತಮ್ಮ ಹೊಸ ಯೋಜನೆಯಲ್ಲಿಯೂ ಸಹ ಅದನ್ನು ಸೇರಿಸಿಕೊಳ್ಳಲು ಯೋಚನೆ ಮಾಡುತ್ತಿದೆ. ಭಾರತೀಯ ತಳಿಯ ಹಸುಗಳು ಶಾಂತ ಸ್ವಭಾವದವು. ಆ ಕಾರಣದಿಂದಾಗಿ 'ಕೌ ಥೆರಪಿ'ಗೆ ಭಾರತೀಯ ಮೂಲದ ಹಸುಗಳನ್ನು ಮಾತ್ರವೇ ಆಯ್ಕೆ ಮಾಡಲಾಗುತ್ತಿದೆ. ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಡೊನ್ನಾ ಎಸ್ಟಿಲ್, ಕೌ ಕಡ್ಲಿಂಗ್ ಫಾರ್ಮ್‌ನಲ್ಲಿ ಹಸುಗಳ ಸೇವೆ ಮಾಡುತ್ತಿದ್ದಾಳೆ. ಮಾನಸಿಕ ಅಸ್ವಸ್ಥಳಾಗಿದ್ದರೂ ಇಲ್ಲಿಯೇ ಕೆಲಸ ಸಿಕ್ಕಿತು. ಮಾನಸಿಕ ಅಸ್ವಸ್ಥತೆ, ಆತಂಕ ಮತ್ತು ಖಿನ್ನತೆಯಿಂದ ಬಳಲುತ್ತಿದ್ದಾರೆ. ನಿಧಾನವಾಗಿ ನಾನು ಚೇತರಿಕೆ ಕಾಣುತ್ತಿದ್ದೇನೆ. ಈ ಭಾರತೀಯ ಹಸುಗಳು ನನ್ನ ಜೀವವನ್ನು ಉಳಿಸಿವೆ. 
ಒಂದು ವರ್ಷದ ಹಿಂದೆ, ಯಾರಾದರೂ ನನಗೆ ಹಸು ಚಿಕಿತ್ಸೆಯ ಬಗ್ಗೆ ಹೇಳಿದರೆ, ನಾನು ಅದನ್ನು ತಮಾಷೆ ಮಾಡುತ್ತಿದ್ದಾರೆ ಎನ್ನುತ್ತಿದ್ದೆ. ಆದರೆ ಒಂದು ವರ್ಷದಲ್ಲಿ ನಾನು ಎಂದಿಗಿಂತಲೂ ಉತ್ತಮವಾಗಿದ್ದೇನೆ ಎನ್ನುತ್ತಾರೆ.
ನನ್ನ ಅವಳಿ ಮಕ್ಕಳೂ ಇದನ್ನು ಹಸುವಿನ ಥೆರಪಿ ಪಡೆಯುತ್ತಿದ್ದಾರೆ ಎಂದು ಎಸ್ಟಿಲ್ ಹೇಳುತ್ತಾರೆ. ಪ್ರತಿಯೊಂದು ಹಸು ತನ್ನದೇ ಆದ ವೈಯಕ್ತಿಕ ವ್ಯಕ್ತಿತ್ವವನ್ನು ಹೊಂದಿದೆ. ಈ ಹಸುಗನ್ನು ನಮ್ಮನ್ನು ಆಂತರಿಕವಾಗಿ ಗುಣಪಡಿಸುತ್ತವೆ. ಇಲ್ಲಿ ಹಸುಗಳು ಆಟಿಸಂ ಸ್ಪೆಕ್ಟ್ರಮ್‌ನಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸಕರಾಗಿ ಮಾರ್ಪಟ್ಟಿವೆ. ಅವರಿಗೂ ಹಸುಗಳೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೊದಲು ಕುದುರೆಗಳನ್ನು ಈ ರೀತಿಯ ಥೆರಪಿಗಳಿಗೆ ಬಳಸಿಕೊಳ್ಳಲುತ್ತಿದ್ದರು. ಅದನ್ನು ಈಕ್ವೈನ್‌ ಥೆರಪಿ ಎಂದು ಕರೆಯಲಾಗುತ್ತಿತ್ತು ಎಂದಿದ್ದಾರೆ.

ವಿದೇಶಿ ಗೋವುಗಳು ತಾಯಿಯಲ್ಲ, ಆಂಟಿಗಳು: ಬಂಗಾಳ ಬಿಜೆಪಿ ಮುಖ್ಯಸ್ಥ!

ಆಟಿಸಂ ಮಕ್ಕಳಿಗೆ ಹಸುವೇ ಔಷಧಿ: ಆಟಿಸಂ ಕಾರ್ಯಕರ್ತ ಮತ್ತು ವಿಜ್ಞಾನಿ ಟೆಂಪಲ್ ಗ್ರ್ಯಾಂಡಿನ್ ಅವರ ಪ್ರಕಾರ, ಹಸುಗಳು ಆಟಿಸಂ ಹೊಂದಿರುವ ಮಕ್ಕಳಿಗೆ ದಿವ್ಯ ಔಷಧಿಯ ರೀತಿ ಕೆಲಸ ಮಾಡುತ್ತದೆ.  ಈ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯು ಇತರ ಮನುಷ್ಯರೊಂದಿಗೆ ಎಂದಿನಂತೆ ವ್ಯವಹರಿಸಲು ಸಾಧ್ಯವಾಗುವುದಿಲ್ಲ ಅಂಥ ಪರಿಸ್ಥಿತಿಯಲ್ಲಿ ಪ್ರಾಣಿಗಳೊಂದಿಗೆ ಅವರು ಬಹಳ ಆರಾಮವಾಗಿ ಇರುತ್ತಾರೆ. ಇದಕ್ಕೆ ಭಾರತೀಯ ಹಸುಗಳಿಗಿಂತ ಉತ್ತಮ ಆಯ್ಕೆ ಇನ್ನೊಂದಿಲ್ಲ. ಕ್ರಮೇಣ ಅವರು ಮನುಷ್ಯರ ಜೊತೆಗೂ ಆರಾಮವಾಗಿ ವ್ಯವಹರಿಸಲು ಆರಂಭ ಮಾಡುತ್ತಾರೆ. ಹಸು ಚಿಕಿತ್ಸೆಯು ಈಗ ಆಸ್ಟ್ರೇಲಿಯಾದಲ್ಲಿ ಈಕ್ವೈನ್‌ ಥೆರಪಿಗೆ ಪರ್ಯಾಯವಾಗಿ ಜನಪ್ರಿಯವಾಗುತ್ತಿದೆ. ಬ್ರಿಸ್ಬೇನ್‌ನಲ್ಲಿ ವಾಸಿಸುವ 10 ವರ್ಷದ ಪ್ಯಾಟ್ರಿಕ್ ಆಟಿಸಂನಿಂದ ಬಳಲುತ್ತಿದ್ದಾರೆ. ಇಲ್ಲಿ ಆತ ಹಸುಗಳೊಂದಿಗೆ ಆಟವಾಡುತ್ತಾನೆ. ಅವನ ಪೋಷಕರು ಕೂಡ ಆತನನ್ನು ಇಲ್ಲಿಗೆ ನಿಯಮಿತವಾಗಿ ಕರೆತರುತ್ತಾರೆ ಎಂದು ಹೇಳಿದ್ದಾರೆ.

33 ಗೋವುಗಳನ್ನು ರಕ್ಷಿಸಿದ ಪಿಎಸ್ ಐ ಮುರಳಿ ನೇತೃತ್ವದ ತಂಡ!

ಚೇತರಿಕೆ ಕಾಣುತ್ತಿರುವ ಮಕ್ಕಳು: ಸಂಸ್ಥೆಯನ್ನು ಪ್ರಾರಂಭ ಮಾಡಿರುವ 34 ವರ್ಷದ ಲಾರೆನ್ಸ್ ಫಾಕ್ಸ್ ಪ್ರಕಾರ, "ಕೌ ಥೆರಪಿಯಿಂದ ಆಟಿಸಂ ಮಕ್ಕಳು ಚೇತರಿಕೆ ಕಾಣುತ್ತಿರುವುದನ್ನು ನೋಡಿದ್ದೇನೆ. ವಿವಿಧ ರೀತಿಯ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವ ಜನರು ಇಲ್ಲಿಗೆ ಬರುತ್ತಿದ್ದಾರೆ. ನಾನು ರೇಸ್ ಕುದುರೆಗಳೊಂದಿಗೆ ದೀರ್ಘಕಾಲ ಕಳೆದಿದ್ದೇನೆ. ಅವುಗಳು ಆಕ್ರಮಣಕಾರಿ, ನಮ್ಮ ಮೇಲೆ ದಾಳಿ ಕೂಡ ಮಾಡುತ್ತವೆ. ಆದರೆ, ಹಸುವಿನೊಂದಿಗೆ ಅದರಲ್ಲೂ ಭಾರತೀಯ ತಳಿಯ ಹಸುಗಳ ಜೊತೆ ಕಾಲ ಕಳೆಯುವ ಮೂಲಕ ನಾನು ಶಾಂತಿ ಮತ್ತು ಸಂತೋಷವನ್ನು ಕಂಡುಕೊಂಡಿದ್ದೇನೆ.  ಲಾರೆನ್ಸ್ ಫಾಕ್ಸ್ ಈ ಎಲ್ಲಾ ಹಸುಗಳನ್ನು ಕ್ರಿಪ್ಟೋಕರೆನ್ಸಿಯೊಂದಿಗೆ ಖರೀದಿಸಿದರು. ಅವರು ಸೆಂಟ್ರಲ್ ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಎಂಬಿಎ ಮಾಡುತ್ತಿರುವಾಗ, ಅವರಿಗೆ ಕೌ ಥೆರಪಿ ವ್ಯವಹಾರದ ಕಲ್ಪನೆ ಬಂದಿತು. ಅದರ ಶುಲ್ಕ ಮತ್ತು ಅದರಿಂದ ಬರುವ ಆದಾಯದ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

Follow Us:
Download App:
  • android
  • ios