ಯುವತಿಯ ಕಿತಾಪತಿಗೆ ಹಾಳಾಗೋ ಕುಟುಂಬಗಳೆಷ್ಟು? ಪುರುಷರಿಗೆ ತಿಳಿಯದಂತೆ ಟೀಶರ್ಟ್‌ ಮೇಲೆ ಕಿಸ್ ಆಸ್ಟ್ರೇಲಿಯಾದ ನೈಟ್‌ಕ್ಲಬ್‌ನಲ್ಲಿ ಯುವತಿಯ ಕಿತಾಪತಿ

ನೈಟ್ ಕ್ಲಬ್‌ನಲ್ಲಿ ಅಪರಿಚಿತ ಯುವತಿಯೊಬ್ಬಳು ಬಿಳಿ ಬಣ್ಣದ ಟೀ ಶರ್ಟ್‌ ಧರಿಸಿದ್ದ ಅಪರಿಚಿತ ವ್ಯಕ್ತಿಯ ಟೀ ಶರ್ಟ್‌ ಮೇಲೆ ಆತನಿಗೆ ಗೊತ್ತಿಲ್ಲದಂತೆ ಸಾಕಷ್ಟು ಭಾರಿ ಚುಂಬಿಸಿದ್ದಾಳೆ.ಯುವತಿ ಗಾಢ ಕೆಂಪು ಬಣ್ಣದ ಲಿಪ್‌ಸ್ಟಿಕ್‌ನ್ನು ತನ್ನ ತುಟಿಗಳಿಗೆ ಹಾಕಿ ವ್ಯಕ್ತಿಯ ಬಿಳಿ ಬಣ್ಣದ ಟೀ ಶರ್ಟ್‌ಗಳಿಗೆ ಹಲವು ಬಾರಿ ಚುಂಬಿಸುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನ ಫನ್‌ ಮಾಡುವುದರ ಜೊತೆಗೆ ಆ ವ್ಯಕ್ತಿಯ ಮುಂದಿನ ಕತೆ ಏನು ಎಂಬಂತೆ ಚಿಂತೆ ಮಾಡುತ್ತಿದ್ದಾರೆ. 

ಆಸ್ಟ್ರೇಲಿಯನ್ (Australia) ನೈಟ್‌ಕ್ಲಬ್‌ನಲ್ಲಿ (Nightclub) ನಡೆದ ಘಟನೆ ಇದಾಗಿದ್ದು, ಪುರುಷರನ್ನು ಇಕ್ಕಟ್ಟಿಗೆ ಸಿಲುಕಿಸುವ ಸಲುವಾಗಿಯೇ ಯುವತಿ ಈ ಕೆಲಸ ಮಾಡಿ ಜಾಲಿ ಮಾಡಿರುವುದಂತು ನಿಜ. ಇನ್ನು ಈ ವಿಡಿಯೋ ನೋಡಿದ ನೆಟ್ಟಿಗರು ಈಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಈಕೆ ಎಷ್ಟು ಮನೆಗಳನ್ನು, ಕುಟುಂಬಗಳನ್ನು ಹಾಳು ಮಾಡುತ್ತಾಳೋ ಏನೋ ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ಮೂಲತಃ ಟಿಕ್‌ಟಾಕ್‌ನಲ್ಲಿ (TikTok) ಹಂಚಿಕೊಳ್ಳಲಾಗಿತ್ತು. ಸೇಂಟ್ ಪ್ಯಾಟ್ರಿಕ್ಸ್ ಡೇಯಂದು (St Patrick’s Day) ಸಿಡ್ನಿಯ (Sydney) ಕ್ಲಬ್‌ನಲ್ಲಿ ಮಹಿಳೆ ಪುರುಷರ ಶರ್ಟ್‌ಗಳ ಮೇಲೆ ಹೀಗೆ ಚುಂಬಿಸಿದ್ದಾಳೆ.

View post on Instagram

ನೈಟ್‌ ಕ್ಲಬ್‌ನಲ್ಲಿ ಯುವಕರು ಒಂದೊಂದು ಪೆಗ್‌ ಹಾಕಿ ಮೈ ಮರೆತು ಜನ ಜಂಗುಳಿ ಮಧ್ಯೆ ಡಾನ್ಸ್ ಮಾಡುತ್ತಿದ್ದಾರೆ. ಈ ವೇಳೆ ಕಳ್ಳರಂತೆ ಹೋಗಿ ಯುವಕರಿಗೆ ತಿಳಿಯದಂತೆ ಅವರ ಟೀ ಶರ್ಟ್‌ಗೆ ಹಿಂದಿನಿಂದ ಚುಂಬಿಸಿ ಬರುವ ಆಕೆ ಕ್ಯಾಮರಾ ಮುಂದೆ ತಡೆಕೊಳ್ಳಲಾಗದಷ್ಟು ನಗುತ್ತಾಳೆ. ಈ ವಿಡಿಯೋ ನೋಡುಗರಿಗೆ ಸಖತ್ ಮಜಾ ನೀಡುತ್ತಿದೆ. ಇನ್ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಮತ್ತೆ ಪೋಸ್ಟ್‌ ಮಾಡಲಾಗಿದ್ದು, ಮೂರು ಮಿಲಿಯನ್‌ಗೂ ಅಧಿಕ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 

ಮೊದಲ ಡೇಟ್‌ನಲ್ಲೇ ಚುಂಬನ.. ಸೈಫ್ ಮೇಲೆ ಸಿಟ್ಟಿಗೆದ್ದಿದ್ದರು ಅಮೃತಾ ಸಿಂಗ್‌!

ಒಂದು ವೇಳೆ ಆತ ಅವಿವಾಹಿತನಾಗಿದ್ದು, ಯಾರು ಪ್ರೇಮಿಗಳಿಲ್ಲದೇ ಒಬ್ಬಂಟಿ ಜೀವನ ಮಾಡುತ್ತಿದ್ದರೆ ದೊಡ್ಡ ಸಮಸ್ಯೆಯಾಗದು. ತನ್ನನ್ನು ತನಗೆ ತಿಳಿಯದೇ ಇಷ್ಟೊಂದು ಬಾರಿ ಕಿಸ್‌ ಮಾಡಿದ್ದು ಯಾರು ಎಂದು ಆತ ಯೋಚಿಸಲು ಶುರು ಮಾಡಬಹುದು. ಆದರೆ ಒಂದು ವೇಳೆ ಆತನಿಗೆ ಸಂಸಾರವಿದ್ದು, ಹೆಂಡತಿ ಮಕ್ಕಳಿದ್ದಲ್ಲಿ, ಅಥವಾ ಲವರ್‌ ಅಥವಾ ಗೆಳತಿ ಇದ್ದಲ್ಲಿ ಕತೆ ಏನಾಗಬಹುದು ನೀವೇ ಯೋಚಿಸಿ. ವಿಚ್ಛೇದನ ಅಥವಾ ಬ್ರೇಕ್‌ಅಪ್‌ ಕಟ್ಟಿಟ್ಟ ಬುತ್ತಿಯಾಗುವುದಂತು ಸುಳ್ಳಲ್ಲ. ಗಂಡ ಹೆಂಡತಿ, ಪ್ರೇಮಿಗಳು, ನವಜೋಡಿಗಳ ಸಂಬಂಧ ತುಂಬಾ ಸೂಕ್ಷ್ಮವಾದುದು. ಆ ಸಂಬಂಧದಲ್ಲಿ ಬರುವ ಸಣ್ಣ ಸಂಶಯವೂ ಇಡೀ ಸಂಬಂಧವನ್ನು ಹಾಳು ಮಾಡುವುದು. ಅಂತಹದರಲ್ಲಿ ಇಲ್ಲಿ ಪ್ರೇಮಕ್ಕೆ ಸಾಕ್ಷಿ ಎಂಬಂತೆ ಈತ ಧರಿಸಿದ ಟೀ ಶರ್ಟ್ (T-Shirt) ಪೂರ್ತಿ ಮುತ್ತಿನ ಸುರಿಮಳೆಯೇ ಇದೆ. ಒಟ್ಟಿನಲ್ಲಿ ಕಿಸ್ ಮಾಡಿದ ಯುವತಿ ಸಖತ್ ಆಗಿ ಮಜಾ ತೆಗೆದುಕೊಂಡಿರುವುದಂತು ನಿಜ. ಆದರೆ ಏನು ತಿಳಿಯದ ಆ ಯುವಕನ ಸ್ಥಿತಿ ಬೆಕ್ಕಿಗೆ ಆಟ ಇಲ್ಲಿಗೆ ಪ್ರಾಣ ಸಂಕಟ ಎಂಬಂತೆ ಆಗುವುದಂತೂ ನಿಜ.

ಪತ್ನಿ ಪುಸ್ತಕ ಓದುತ್ತಿದ್ದರೆ ನಟ ಗಣೇಶ್ ಮಾಡೋ ತುಂಟಾಟ ನೋಡಿ...

ಒಂದು ವೇಳೆ ಆತ ಬ್ಯಾಚುಲರ್ ಜೀವನ ಮಾಡುತ್ತಿದ್ದರೆ, ಮನೆಯಲ್ಲಿರುವ ಅಮ್ಮನಿಗೆ ಮಗ ಪ್ರೀತಿಯಲ್ಲಿ ಬಿದ್ದಿದ್ದಾನೋ ಏನೋ ಎಂಬ ಸಂಶಯ ಮೂಡಬಹುದು. ಈತನಿಗೆ ಇಷ್ಟೊಂದು ಕಿಸ್ ಮಾಡಿದ್ದು ಯಾರಿರಬಹುದು ಎಂಬ ಕುತೂಹಲದ ಜೊತೆ ತನ್ನ ಮಗನ ಹಿಂದೆ ಬಿದ್ದಿರುವ ಹೆಣ್ಣು ಯಾರೆಂದು ತಿಳಿಯುವ ಕುತೂಹಲದ ಹುಡುಕಾಟದಲ್ಲಿ ಆಕೆ ತಲೆಗೆ ಹುಳ ಬಿಟ್ಟುಕೊಳ್ಳಬಹುದು. ಒಟ್ಟಿನಲ್ಲಿ ಆತನ ಕತೆ ಏನೇ ಆಗಿರಲಿ. ಇತ್ತ ಆತನಿಗೆ ತಿಳಿಯದಂತೆ ಮುತ್ತಿನ ಮಳೆಗೆರೆದ ಯುವತಿ ಮಾತ್ರ ಸಖತ್‌ ಎಂಜಾಯ್ ಮಾಡಿದ್ದಾಳೆ. ಇದು ವಿಡಿಯೋದಲ್ಲಿ ಕಾಣಿಸುತ್ತಿರುವುದಂತು ನಿಜ.