ಬಿಕಿನಿ ಧರಿಸಿ ಬಿಂದಾಸ್ ಆಗಿ ಬೀಚ್‌ನಲ್ಲಿ ಮಲಗಿದ್ದ ಯುವತಿ ಮೇಲೆ ನಾಯಿ ದಾಳಿ: ವೀಡಿಯೋ ವೈರಲ್

ಅನೇಕರು ಬಿಕಿನಿ ತೊಟ್ಟು  ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿ ಕಡಲ ತಡಿಯ ಮರಳಿನ ಮೇಲೆ  ಬಿಂದಾಸ್ ಆಗಿ ಮಲಗಿ ನಿರಾಳಗಾಗುತ್ತಿರುತ್ತಾರೆ. ಆದರೆ ಹೀಗೆ ಮಲಗಿದ್ದ ಮಹಿಳೆಯೊಬ್ಬರ ಮೇಲೆ  ಆಸ್ಟ್ರೇಲಿಯಾದ ಕಾಡು ನಾಯಿಯೊಂದು ದಾಳಿ ಮಾಡಿದೆ. ಈ ಘಟನೆಯೂ ಕ್ಯಾಮರಾದಲ್ಲಿ ಸೆರೆ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Australian Wild Dog Dingo Attacks a young woman who was sleeping on the beach wearing bikini Video goes viral akb

ಸಿಡ್ನಿ: ವಿದೇಶಗಳ ಬೀಚ್‌ಗಳಲ್ಲಿ ಒಳ ಉಡುಪು ಧರಿಸಿ ಮಲಗುವುದು ಅಲ್ಲಿನ ದೈನಂದಿನ ಲೈಫ್‌ಸ್ಟೈಲ್ ಆಗಿದ್ದು, ಯಾರೂ ಕೂಡ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ಯಾರೂ ಕೂಡ ನಿಮ್ಮ ಖಾಸಗಿತನಕ್ಕೆ ಭಂಗ ತರುವುದಿಲ್ಲ. ಇದೇ ಕಾರಣಕ್ಕೆ ನಮ್ಮ ದೇಶದ  ಶ್ರೀಮಂತರು, ಸೆಲೆಬ್ರಿಟಿಗಳೂ, ಸಿನಿಮಾ ನಟನಟಿಯರು ರಜಾ ದಿನಗಳಲ್ಲಿ ವಿದೇಶಕ್ಕೆ ಹಾರುತ್ತಾರೆ.  ಅಲ್ಲಿನ ಬೀಚ್‌ಗಳಲ್ಲಿ ಬಿಕಿನಿ ತೊಟ್ಟು ಎಂಜಾಯ್ ಮಾಡ್ತಾರೆ.  ಇನ್ನು ವಿದೇಶಿಗರಿಗೆ ಇದು ಸಾಮಾನ್ಯ ಆಗಿದ್ದು,  ಅನೇಕರು ಬಿಕಿನಿ ತೊಟ್ಟು  ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿ ಕಡಲ ತಡಿಯ ಮರಳಿನ ಮೇಲೆ  ಬಿಂದಾಸ್ ಆಗಿ ಮಲಗಿ ನಿರಾಳಗಾಗುತ್ತಿರುತ್ತಾರೆ. ಆದರೆ ಹೀಗೆ ಮಲಗಿದ್ದ ಮಹಿಳೆಯೊಬ್ಬರ ಮೇಲೆ  ಆಸ್ಟ್ರೇಲಿಯಾದ ಕಾಡು ನಾಯಿಯೊಂದು ದಾಳಿ ಮಾಡಿದೆ. ಈ ಘಟನೆಯೂ ಕ್ಯಾಮರಾದಲ್ಲಿ ಸೆರೆ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಈ ಕಾಡುನಾಯಿಗಳನ್ನು ಡಿಂಗೋಗಳೆಂದು ಕರೆಯಲಾಗುತ್ತದೆ. ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ಕೆ'ಗಾರಿ (Fraser Island)ಐಲ್ಯಾಂಡ್‌ನಲ್ಲಿ ಈ ಘಟನೆ ನಡೆದಿದೆ. ಇದು ಕಡಲತಡಿಯಲ್ಲಿ ತಮ್ಮ ಖಾಸಗಿ ಕ್ಷಣಗಳನ್ನು ಆನಂದಿಸುತ್ತಿರುವವರು ಭಯಪಡುವಂತೆ ಮಾಡಿದೆ.  ಆಸ್ಟ್ರೇಲಿಯಾದ ಕಾಡು ನಾಯಿಗಳಾದ ಈ ಡಿಂಗೊಗಳು ಬೀಚ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿದ  ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿದೆ ಎಂದು ಪ್ರವಾಸಿಗರು ದೂರಿದ್ದಾರೆ. ಕಾಡುನಾಯಿಗಳ ದಾಳಿ ಆಗಾಗ ವರದಿಯಾಗುತ್ತಿರುವ  ಹಿನ್ನೆಲೆಯಲ್ಲಿ ಬೀಚ್‌ಗಳಲ್ಲಿ ಅಧಿಕಾರಿಗಳು ಪ್ರವಾಸಿಗರಿಗೆ ಮುನ್ನೆಚ್ಚರಿಕೆ ಹಾಗೂ ಮಾರ್ಗಸೂಚಿಗಳನ್ನು ನೀಡುವಂತಹ ಸ್ಥಿತಿ ನಿರ್ಮಾಣವಾಗಿದೆ. ನಾಯಿಯೊಂದು ಬೀಚ್‌ನಲ್ಲಿ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ಮಹಿಳೆಯ ಮೇಲೆ ದಾಳಿ ಮಾಡಿದ ದೃಶ್ಯವನ್ನು  ಅಲ್ಲಿನ ಸ್ಕೈ ನ್ಯೂಸ್ ಟ್ವಿಟ್ ಮಾಡಿದ್ದು,   ಕ್ವೀನ್ಸ್‌ಲ್ಯಾಂಡ್‌ನ ಪರಿಸರ ಮತ್ತು ವಿಜ್ಞಾನ ಇಲಾಖೆಯು ಕಾಡು ಪ್ರಾಣಿಗಳಿಂದ ಉಂಟಾಗುವ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದೆ ಎಂದು ಬರೆದುಕೊಂಡಿದೆ. 

ಬೀದಿ ನಾಯಿಗಳ ದಾಳಿಗೆ 11 ವರ್ಷದ ವಿಶೇಷಚೇತನ ಬಾಲಕ ಬಲಿ: ಕೇರಳ ಸರ್ಕಾರದ ವಿರುದ್ದ ಟೀಕೆ

ವೀಡಿಯೋದಲ್ಲಿ ಮೂರು ಡಿಂಗೋಗಳ (dingo) ಗುಂಪು ತಮ್ಮತ್ತ ಬರುತ್ತಿದ್ದತೆ ಕಡಲತೀರದಲ್ಲಿ ಮರಳಿನಲ್ಲಿ ಮಲಗಿದ್ದ ಪ್ರವಾಸಿಗರು ಭಯಭೀತರಾಗುತ್ತಿರುವುದನ್ನು ವೀಡಿಯೊ ತೋರಿಸುತ್ತಿದೆ. ಮೂರು ಡಿಂಗೊಗಳಲ್ಲಿ ಒಂದು ಮಹಿಳೆಯನ್ನು ಕಚ್ಚುವ ಮೊದಲು ಸಮುದ್ರತೀರದಲ್ಲಿ ಮಲಗಿದ್ದ ಆಕೆಯನ್ನು ಮೂಸುತ್ತಾ ಸಾಗಿದೆ. ಈ ವೇಳೆ ಭಯಗೊಂಡ ಮಹಿಳೆ ಓಡಲು ಮುಂದಾಗಿದ್ದು, ಈ ವೇಳೆ ಡಿಂಗೋ ಆಕೆಯನ್ನು ಬೆನ್ನಟ್ಟಿ ಹಿಂಭಾಗಕ್ಕೆ ಕಚ್ಚಿದೆ.  ಇದೇ ವೇಳೆ ಅಲ್ಲೇ ಇದ್ದ ಇತರ ಪ್ರವಾಸಿಗರು ಆಗಮಿಸಿ ಡಿಂಗೋನನ್ನು ಓಡಿಸಿ ಆಕೆಯ ರಕ್ಷಣೆ ಮಾಡಿದ್ದಾರೆ. ಒಂದು ಮಿಲಿಯನ್‌ಗೂ ಅಧಿಕ ಜನ ಈ ವೀಡಿಯೋ ವೀಕ್ಷಿಸಿದ್ದಾರೆ.

ಬೀದಿನಾಯಿಗಳ ಭೀಕರ ದಾಳಿಗೆ ವೃದ್ಧ ಬಲಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ವೀಡಿಯೋ ನೋಡಿದ ಒಬ್ಬರು ವೀಡಿಯೊದಲ್ಲಿ ಕಾಣಿಸಿದ ಡಿಂಗೊವನ್ನು ಅಧಿಕಾರಿಗಳು ಕೊಂದಿದ್ದಾರೆ ಎಂದು ಹೇಳಿದ್ದಾರೆ. ಇದರಲ್ಲಿ ದುಃಖದ ವಿಚಾರವೆಂದರೆ ಡಿಂಗೊಗೆ ದಯಾಮರಣ ನೀಡಲಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.  ಮತ್ತೊಬ್ಬ ಬಳಕೆದಾರರು ಡಿಂಗೊಗಳ ಸ್ನೇಹಪರ ಸ್ವಭಾವದ ಪರವಾಗಿ ಕಾಮೆಂಟ್ ಮಾಡಿದ್ದಾರೆ. ನೀವು ಫ್ರೇಸರ್ ದ್ವೀಪದಲ್ಲಿ (Fraser Island) ಇದ್ದರೆ  ನೀವು ಅವುಗಳಿಗೆ ಅವರ ಸ್ಥಳ ಮತ್ತು ಗೌರವ ನೀಡಿದರೆ ಒಳ್ಳೆಯದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಪ್ರದೇಶದಲ್ಲಿ ಡಿಂಗೊಗಳು ಪ್ರವಾಸಿಗರ ಮೇಲೆ ದಾಳಿ ಮಾಡುತ್ತಿರುವುದು ಇದೇ ಮೊದಲಲ್ಲ. ಜೂನ್ 16 ರಂದು ಇದೇ ಬೀಚ್‌ನಲ್ಲಿ 10 ವರ್ಷದ ಬಾಲಕನ ಮೇಲೆ ಡಿಂಗೋ ದಾಳಿ ಮಾಡಿ ಆತನನ್ನು ನೀರಿಗೆ ಎಳೆದಿತ್ತು. ಅದೃಷ್ಟವಶಾತ್, ಹುಡುಗನ 12 ವರ್ಷದ ಸಹೋದರಿ ಹತ್ತಿರದಲ್ಲಿದ್ದು ಆಕೆಯನ್ನು ಹೆಚ್ಚಿನ ದಾಳಿಯಿಂದ ರಕ್ಷಿಸಿದ್ದಳು.  ಆದರೆ ಆತನಿಗೆ  ಮತ್ತು ಅವಳು ಅವನನ್ನು ಹೆಚ್ಚಿನ ಹಾನಿಯಿಂದ ರಕ್ಷಿಸಿದ್ದಳು. 


 

Latest Videos
Follow Us:
Download App:
  • android
  • ios