ನಾಯಿಯನ್ನು ಒಳಗೆ ಬಿಡದ ಪಬ್‌ಗೆ ಬರೋಬ್ಬರಿ 4.3 ಲಕ್ಷ ದಂಡ

ತನ್ನೊಂದಿಗೆ ಸಹಾಯಕನಾಗಿ ಕರೆತಂದಿದ್ದ ಶ್ವಾನವನ್ನು ಒಳಗೆ ಬಿಡದಕ್ಕೆ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿಗೆ ಬರೋಬರಿ 4.3 ಲಕ್ಷ ರೂ. ಮೊತ್ತದ ಪರಿಹಾರ ಸಿಕ್ಕಿದೆ. ಆಸ್ಟ್ರೇಲಿಯಾದಲ್ಲಿ ಈ ವಿಚಿತ್ರ ಘಟನೆ ನಡೆದಿದೆ.

Australian pub fined 4.3 Lakh for denying entry to Human Assistance Dog akb

ತನ್ನೊಂದಿಗೆ ಸಹಾಯಕನಾಗಿ ಕರೆತಂದಿದ್ದ ಶ್ವಾನವನ್ನು ಒಳಗೆ ಬಿಡದಕ್ಕೆ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿಗೆ ಬರೋಬರಿ 4.3 ಲಕ್ಷ ರೂ. ಮೊತ್ತದ ಪರಿಹಾರ ಸಿಕ್ಕಿದೆ. ಆಸ್ಟ್ರೇಲಿಯಾದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ನಾಯಿ ಮನುಷ್ಯನ ಆತ್ಮೀಯ ಸ್ನೇಹಿತ. ಕೆಲವು ಶ್ವಾನ ಪ್ರಿಯರು ತಾವು ಎಲ್ಲಿ ಹೋಗುತ್ತೇವೋ ಅಲ್ಲೆಲ್ಲಾ ತಮ್ಮ ಪ್ರೀತಿಯ ಶ್ವಾನವನ್ನು ಕರೆದೊಯ್ಯುತ್ತಾರೆ. ಆದರೆ ಕೆಲವು ಪ್ರದೇಶಗಳಲ್ಲಿ ನಾಯಿಗಳಿಗೆ ಪ್ರವೇಶ ಇರುವುದಿಲ್ಲ. ಏಕೆಂದರೆ ಎಲ್ಲರೂ ನಾಯಿ ಪ್ರಿಯರಾಗಿರುವುದಿಲ್ಲ. ಭಾರತದಲ್ಲಿ ಇತ್ತೀಚೆಗೆ ಶ್ವಾನಪ್ರಿಯರ ಸಂಖ್ಯೆ ಹೆಚ್ಚುತ್ತಿದೆ. ಕೆಲವರು ಶ್ವಾನಗಳನ್ನು ಎಷ್ಟು ಪ್ರೀತಿ ಮಾಡುತ್ತಾರೆ ಎಂದರೆ ಶ್ವಾನದೊಂದಿಗೆ ಮಲಗುತ್ತಾರೆ. ಇತ್ತ ಶ್ವಾನಗಳು ಕೂಡ ಯಾವ ಸೆಲೆಬ್ರಿಟಿಗೂ ಕಡಿಮೆ ಇಲ್ಲದಂತಹ ಐಷಾರಾಮಿ ಜೀವನವನ್ನು ನಡೆಸುತ್ತವೆ. 

ಈಗ ಆಸ್ಟ್ರೇಲಿಯಾದ ಪಬ್‌ವೊಂದು ಶ್ವಾನದಿಂದ ಸಂಕಷ್ಟಕ್ಕೀಡಾಗಿದೆ. ಆಸ್ಟ್ರೇಲಿಯಾ ಮೂಲದ ವ್ಯಕ್ತಿಯೊಬ್ಬರು ತಮ್ಮೊಂದಿಗೆ ತಮ್ಮ ಸಹಾಯಕ ಶ್ವಾನವನ್ನು ಕೂಡ ಪಬ್‌ಗೆ ಕರೆದೊಯ್ದಿದ್ದರು. ಆದರೆ ಪಬ್‌ನಲ್ಲಿ ಶ್ವಾನಕ್ಕೆ ಬೌನ್ಸರ್‌ಗಳು ಪ್ರವೇಶ ನಿರಾಕರಿಸಿದ್ದಾರೆ. ಈ ವಿಚಾರವಾಗಿ ವ್ಯಕ್ತಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಕೋರ್ಟ್‌ನಲ್ಲಿ ಕೇಸನ್ನು ಗೆದ್ದಿರುವ ಅವರಿಗೆ ಈಗ ಪಬ್‌ 8,000 ಆಸ್ಟ್ರೇಲಿಯಾ ಡಾಲರ್ ನಗದನ್ನು ಪರಿಹಾರವಾಗಿ ನೀಡಬೇಕು. 8 ಸಾವಿರ ಆಸ್ಟ್ರೇಲಿಯಾ ಡಾಲರ್ ಎಂದರೆ ಭಾರತದ ಬರೋಬ್ಬರಿ 4.3 ಲಕ್ಷ ರೂಪಾಯಿಗಳು. ಆಸ್ಟ್ರೇಲಿಯಾ ಖಂಡದ ಸನ್‌ಸೈನ್‌ ಕರಾವಳಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ರೇಮಂಡ್ ಮ್ಯಾಥ್ಯೂ ಎಂಬುವವರೇ ಹೀಗೆ ಕೋರ್ಟ್‌ನಲ್ಲಿ ಕೇಸು ಗೆದ್ದು ಬೀಗಿದ ಶ್ವಾನಪ್ರಿಯ. 

ದೇಶದ ಚೌಕಿದಾರನ ರಕ್ಷಣೆಗೆ ರಾಜ್ಯದ ರಣಬೇಟೆಗಾರ!

ಇವರು ತಮ್ಮ ಮನೆ ಸಮೀಪದ ವೂಂಬಿ ಪಬ್‌ವೊಂದರ (Woombye Pub) ಮಾಮೂಲಿ ಗ್ರಾಹಕರಾಗಿದ್ದರು. ಇಲ್ಲಿಗೆ ಆಗಾಗ ಅಂದರೆ ವಾರಕ್ಕೆ ಎರಡು ಮೂರು ಬಾರಿಯಾದರೂ ಬೀರ್‌ಗಾಗಿ ಅವರು ಭೇಟಿ ನೀಡುತ್ತಿದ್ದರು. ಪಬ್‌ಗೆ ಹೋಗುವ ವೇಳೆ ಇವರು ತಮ್ಮ ಚಿಹುವಾ (Chihuahua) ತಳಿಯ ಕೂ ಇ (Coo-ee) ಯನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ಮಾಮೂಲಿ ಹವ್ಯಾಸದಂತೆ ನಾನು ಅಲ್ಲಿಗೆ ಚಿಕನ್‌ ಪರ್ಮಿ, ಬೀರ್ ಕುಡಿಯುವ ಸಲುವಾಗಿ ವಾರದಲ್ಲಿ ಒಂದು ಎರಡು ಬಾರಿ ಹೋಗುತ್ತಿದ್ದೆ ಎಂದು ಮ್ಯಾಥಿವ್ ನ್ಯೂಸ್ ಒಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. 

2017ರಲ್ಲಿ ಈ ಪಬ್‌ನ ಆಡಳಿತ ಮಂಡಳಿ ಬದಲಾಗಿ ಹೊಸ ತಂಡ ಅಧಿಕಾರ ವಹಿಸಿಕೊಂಡಿತ್ತು. ಅಂದಿನಿಂದ ಮ್ಯಾಥಿವ್ ಅವರಿಗೆ ನಾಯಿಯನ್ನು ಕರೆ ತರುತ್ತಿರುವುದಕ್ಕೆ ಅವರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ನಾಯಿಯನ್ನು ಕರೆದುಕೊಂಡು ಬಂದಲ್ಲಿ ಪ್ರವೇಶ ನಿಷೇಧಿಸುವುದಾಗಿ ಹೇಳಿದ್ದಲ್ಲದೇ ನಾಯಿಯನ್ನು ಹೊರಗೆ ಬಿಡುವಂತೆ ಹೇಳಿದ್ದರು.  

ಸಿಪಿಆರ್ ಮಾಡಲು ಕಲಿತ ಶ್ವಾನ: ಹಸ್ಕಿ ನಾಯಿಯ ಮುದ್ದಾದ ವಿಡಿಯೋ ವೈರಲ್

ಈ ಬಗ್ಗೆ ಪಬ್ ಸಿಬ್ಬಂದಿಯ ಮನವೊಲಿಸಲು ಮ್ಯಾಥಿವ್ ಹಲವು ಬಾರಿ ಪ್ರಯತ್ನಿಸಿ ವಿಫಲವಾಗಿದ್ದರು. ತನ್ನ ಬದುಕಿನಲ್ಲಿ ಶ್ವಾನ ಕೊ ಇ ಯ ಮಹತ್ವವನ್ನು ಅರ್ಥ ಮಾಡಿಸಲು ಸಾಕಷ್ಟು ಪ್ರಯತ್ನ ಪಟ್ಟುರು ಪಬ್‌ ಆಡಳಿತ ಮಂಡಳಿ ಅದನ್ನು ಅರ್ಥ ಮಾಡಿಕೊಳ್ಳಲೇ ಇಲ್ಲ. ನಾಯಿಯನ್ನು ಸಹಾಯಕನಾಗಿ ಇರಿಸಿಕೊಂಡಿರುವುದರ ಬಗ್ಗೆ ನಾನು ವೈದ್ಯರಿಂದ ಸಹಿಯನ್ನು ಪಡೆದಿದ್ದೆ. ಆದರೂ ಅವರು ನಾಯಿಯನ್ನು ಒಳಗೆ ಬಿಡಲು ಒಪ್ಪಲಿಲ್ಲ ಎಂದು ಮ್ಯಾಥಿವ್ ಹೇಳಿದ್ದಾರೆ.

ಹೀಗಾಗಿ ಪಬ್ ಆಡಳಿತ ಸಿಬ್ಬಂದಿಗೆ ಪಾಠ ಕಲಿಸಲು ಮುಂದಾದ ನಾನು ಕೋರ್ಟ್‌ ಮೆಟ್ಟಿಲೇರಿದೆ ಎಂದು ಮ್ಯಾಥಿವ್ ಹೇಳಿದ್ದಾರೆ. ಕೋರ್ಟ್ ಮೆಟ್ಟಿಲೇರುವ ಮೊದಲು ಹಲವು ಸಾಕ್ಷ್ಯಗಳನ್ನು ಮ್ಯಾಥಿವ್ ಸಂಗ್ರಹಿಸಿದ್ದಾರೆ. ನಂತರ ಪ್ರಕರಣ ಟ್ರಿಬ್ಯುನಲ್ ಮುಂದೆ ಬಂದಾಗ, ಪಬ್‌ನ ಆಡಳಿತ ಮಂಡಳಿ ತಾರತಮ್ಯ ವಿರೋಧಿ ಕಾನೂನನ್ನು (anti-discrimination law) ಉಲ್ಲಂಘಿಸಿರುವುದು ಗಮನಕ್ಕೆ ಬಂದಿದೆ. ಪರಿಣಾಮ ಮ್ಯಾಥಿವ್‌ ಜೊತೆ ಕ್ಷಮೆ ಕೇಳಿ 4 ಲಕ್ಷ ಪರಿಹಾರ ನೀಡುವಂತೆ ಕೋರ್ಟ್ ಹೇಳಿದೆ.
 

Latest Videos
Follow Us:
Download App:
  • android
  • ios