ಡ್ರಾಯರ್ ಎಳೆದ ಮ್ಯಾನೇಜರ್‌ಗೆ ಶಾಕ್ ನೀಡಿದ ಸ್ನೇಕ್: ವೈರಲ್ ವೀಡಿಯೋ
ಇಲ್ಲೊಂದು ಕಡೆ ಹಾವೊಂದು ಬಂದು ಟೇಬಲ್ ಡ್ರಾಯರ್ ಸೇರಿದ್ದು, ಡ್ರಾಯರ್ ಎಳೆದ ಮ್ಯಾನೇಜರ್ ಬೆಚ್ಚಿ ಬಿದ್ದಿದ್ದಾನೆ.
ಇನ್ನೇನು ಬೇಸಿಗೆ ಕಳೆದು ಮುಂಗಾರು ಆಗಮನದ ಸಮಯಕ್ಕೆ ದಿನಗಣನೆ ಶುರುವಾಗಿದೆಯಷ್ಟೇ ಅಷ್ಟರಲ್ಲೇ ಇಲ್ಲೊಂದು ಕಡೆ ಹಾವೊಂದು ಬಂದು ಟೇಬಲ್ ಡ್ರಾಯರ್ ಸೇರಿದ್ದು, ಡ್ರಾಯರ್ ಎಳೆದ ಮ್ಯಾನೇಜರ್ ಬೆಚ್ಚಿ ಬಿದ್ದಿದ್ದಾನೆ. ಮಳೆಗಾಲ ಬಂತೆಂದರೆ ಸಾಕು ಹಾವು, ಚೇಳುಗಳೆಲ್ಲಾ ಆಶ್ರಯ ಪಡೆಯುವುದಕ್ಕಾಗಿ ಕಾರು ಬೈಕ್‌ಗಳನ್ನೇರಿ ಒಳಗೆ ಸೇರಿ ಬಿಡುತ್ತವೆ. ಇನ್ನು ಕೆಲವು ಹಾವುಗಳು ಶೂಗಳ ಒಳಗೆ ಸೇರಿ ದಂಗು ಬಡಿಸುತ್ತವೆ. ಆದರೆ ಇಲ್ಲಿ ಮಳೆ ಶುರುವಾಗುವುದಕ್ಕೆ ಮೊದಲೇ ಹಾವೊಂದು ಬೆಚ್ಚಗಿನ ಜಾಗ ಅರಸಿ ಬಂದು ಕಚೇರಿಯೊಂದರ ಡ್ರಾಯರ್ ಸೇರಿದ್ದು, ಡ್ರಯರ್ ಎಳೆದ ಮ್ಯಾನೇಜರ್ ಹೆದರಿ ಓಡುವುದೊಂದು ಬಾಕಿ.
ಅಂದಹಾಗೆ ಈ ಘಟನೆ ನಡೆದಿರುವುದು ಆಸ್ಟ್ರೇಲಿಯಾದ ಬಾರೊಂದರಲ್ಲಿ . ಬಾರ್‌ನ ಮ್ಯಾನೇಜರ್ ಎಂದಿನಂತೆ ಕೆಲಸಕ್ಕೆ ಆಗಮಿಸಿದ್ದು ಸ್ವಲ್ಪ ಸಮಯದ ನಂತರ ಏನೋ ತೆಗೆದುಕೊಳ್ಳುವುದಕ್ಕಾಗಿ ಮೇಜಿನ ಡ್ರಾಯರ್ ಎಳೆದಿದ್ದಾನೆ. ಈ ವೇಳೆ ಡ್ರಾಯರ್ ಒಳಗೆ ಕಾರ್ಪೆಟ್ ಹೆಬ್ಬಾವು ಬೆಚ್ಚನೆ ಮುದುಡಿ ಮಲಗಿದೆ. ನಂತರ ಉರಗತಜ್ಞರಿಗೆ ಕರೆ ಮಾಡಿ ಅದನ್ನು ಡ್ರಾಯರ್‌ನಿಂದ ತೆಗೆದು ಸುರಕ್ಷಿತವಾಗಿ ಚೀಲಕ್ಕೆ ತುಂಬಿಸಿ ಅದರ ಆವಾಸಸ್ಥಾನಕ್ಕೆ ಬಿಡಲಾಗಿದೆ. ಈ ರಕ್ಷಣಾ ಕಾರ್ಯಾಚರಣೆಯ ವಿಡಿಯೋವನ್ನು 'ಸನ್‌ಶೈನ್ ಕೋಸ್ಟ್ ಸ್ನೇಕ್ ಕ್ಯಾಚರ್ಸ್ 24/7' ತನ್ನ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದೆ. ಕಪ್ಪು ಹಳದಿ ಮಿಶ್ರಣದ ಈ ಸರೀಸೃಪವು ಬಾರ್ ಮ್ಯಾನೇಜರ್‌ನ ಮೇಜಿನ ಡ್ರಾಯರ್‌ನಲ್ಲಿ ಆರಾಮವಾಗಿ ಸುತ್ತಿಕೊಂಡು ಮಲಗಿತ್ತು.
ಆಹ ಆಹಾ... ಹಾವಿಗೆ ಮುತ್ತಿಕ್ಕಿದ ಯುವಕ: ವೈರಲ್ ವೀಡಿಯೋ
ಕೆಲಸಕ್ಕೆ ಬಂದಿದ್ದ ಮ್ಯಾನೇಜರ್ ತನ್ನದೇ ಕೆಲಸದಲ್ಲಿ ಮಗ್ನನಾಗಿದ್ದು, ಏನನ್ನೋ ಹುಡುಕುವುದಕ್ಕಾಗಿ ಡ್ರಾಯರ್ ಎಳೆದ ಆತ ಒಳಗೆ ಬೆಚ್ಚನೆ ಮಲಗಿದ್ದ ಹಾವನ್ನು ನೋಡಿ ಅಕ್ಷರಶಃ ಶಾಕ್‌ಗೆ ಒಳಗಾಗಿದ್ದ. ಇಡೀ ದಿನ ಡೆಸ್ಕ್‌ನಲ್ಲಿ ಕೆಲಸ ಮಾಡಿದ್ದ ಮ್ಯಾನೇಜರ್ ತಾನು ಕೆಲಸ ಮಾಡುತ್ತಿದ್ದ ಡೆಸ್ಕ್‌ನ ಡ್ರಾಯರ್‌ನಲ್ಲಿ ಹಾವಿತ್ತು ಎಂಬುದನ್ನು ನೋಡಿ ಭಯಗೊಂಡಿದ್ದ ಎಂದು ಸ್ನೇಕ್ ಕ್ಯಾಚರ್ಸ್ ಟೀಮ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದೆ. ಹಾವನ್ನು ರಕ್ಷಿಸುತ್ತಿರುವ ವೀಡಿಯೋವನ್ನು ಸ್ನೇಕ್ ರೆಸ್ಕ್ಯೂ ಟೀಂ, ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದೆ. ವೀಡಿಯೋದಲ್ಲಿ ಹಾವು ಹಿಡಿಯುವವರು ಬಹಳ ಸಲೀಸಾಗಿ ಆ ಹಾವನ್ನು ಕೈಯಲ್ಲಿ ಹಿಡಿದು ಮೆಲ್ಲನೆ ಚೀಲಕ್ಕೆ ತುಂಬಿಸಿ ತೆಗೆದುಕೊಂಡು ಹೋಗುವ ದೃಶ್ಯವಿದೆ.
ಹಾವನ್ನೇ ಹಗ್ಗದಂತೆ ಬಳಸಿ ಹೊಡೆದಾಟ
ಲಂಡನ್: ಸಾಮಾಜಕ ಜಾಲತಾಣದಲ್ಲಿ ಚಿತ್ರ ವಿಚಿತ್ರವಾದ ವೀಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ವೀಡಿಯೋ ವೈರಲ್ ಆಗಿದ್ದು, ಹಾವೊಂದನ್ನು ಹಿಡಿದು ಯುವಕನೋರ್ವ ತನ್ನ ಎದುರಾಳಿಯ ಜೊತೆ ಸೆಣೆಸಾಡುತ್ತಿದ್ದಾನೆ. ಲಂಡನ್‌ನ ಟೊರೊಂಟೋದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಸಾಮಾನ್ಯವಾಗಿ ಹಾವು ಎಂದರೆ ಹೆದರಿ ಓಡ್ ಹೋಗೋದೆ ಹೆಚ್ಚು, ಆದರೆ ಈತ ಹಾವನ್ನು ಹಗ್ಗದಂತೆ ಬಳಸಿ ಎದುರಾಳಿಯ ಜೊತೆ ಸಖತ್ ಫೈಟ್ ಮಾಡಿದ್ದು ಈ ವಿಡಿಯೋ ಭಯ ಮೂಡಿಸುತ್ತಿದೆ.
ಲಂಡನ್‌ನ ಸಿಬಿಸಿ ನ್ಯೂಸ್ ಪ್ರಕಾರ, ಮೇ.10 ರಂದು ರಾತ್ರಿ 11.50ರ ಸುಮಾರಿಗೆ ಡುಂಡಾಸ್ ಸ್ಟ್ರೀಟ್ ವೆಸ್ಟ್ & ಮ್ಯಾನಿಂಗ್ ಅವೆನ್ಯೂ ಪ್ರದೇಶದಲ್ಲಿ (Dundas Street West and Manning Avenue area) ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ತಾನು ಸಾಕಿದ್ದ ಹಾವನ್ನು ಹಗ್ಗದಂತೆ ಬಳಸಿ ನಡುಬೀದಿಯಲ್ಲಿ ತನ್ನನ್ನು ತಾನು ರಕ್ಷಿಸಿಕೊಂಡಿದ್ದಾನೆ. ಸ್ವಲ್ಪ ಹೊತ್ತಿನಲ್ಲಿ ಪೊಲೀಸ್ ವಾಹನ ಅಲ್ಲಿಗೆ ಬಂದಿದ್ದು, ಆತ ಹಾವನ್ನು ಕೆಳಗೆ ಬಿಟ್ಟಿದ್ದಾನೆ. ಹಾವು ರಸ್ತೆಯಲ್ಲಿ ಹರಿದುಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.