ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಸೆಕ್ಸ್ ಆಡಿಯೋ ಕಾಲ್ ಲೀಕ್, ಜಗತ್ತಿನ ಮುಂದೆ ಬೆತ್ತಲಾದ ಪಾಕಿಸ್ತಾನ!
ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಇದೀಗ ಮಹಿಳೆ ಜೊತೆ ಸರಸ ಸಲ್ಲಾಪದ ಮಾತುಗಳನ್ನಾಡಿರುವ ಆಡಿಯೋ ಕಾಲ್ ಲೀಕ್ ಆಗಿದೆ. ಈ ಆಡಿಯೋದಲ್ಲಿ ಮಹಿಳೆ ಜೊತೆ ಅಸಭ್ಯವಾಗಿ ಮಾತನಾಡುವ ಇಮ್ರಾನ್ ಖಾನ್‌ಗೆ ಈಗ ಸಾಧ್ಯವಿಲ್ಲ, ನನಗೆ ನೋವಾಗುತ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಆಡಿಯೋ ಕಾಲ್‌ನಲ್ಲಿ ಏನಿದೆ? ಇಲ್ಲಿದೆ ವಿವರ.
ಇಸ್ಲಾಮಾಬಾದ್(ಡಿ.20): ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹುದ್ದೆಯಿಂದ ಕೆಳಗಿಳಿದರೂ ಭಾರಿ ಸದ್ದು ಮಾಡುತ್ತಿದ್ದಾರೆ. ಪ್ರಧಾನಿಯಾಗಿ ವಿವಾದದಲ್ಲೇ ಮುಳುಗಿದ್ದ ಇಮ್ರಾನ್ ಖಾನ್ ಇತ್ತೀಚೆಗೆ ಸಾರ್ವಜನಿಕ ರ್ಯಾಲಿಯಲ್ಲಿ ಗುಂಡೇಟು ತಗುಲಿ ವಿಶ್ವದಾದ್ಯಂತ ಸುದ್ದಿಯಾಗಿದ್ದರು. ಇದೀಗ ತೀವ್ರ ಮುಖಭಂಗಕ್ಕೆ ಒಳಗಾಗಿದ್ದಾರೆ. ಇಮ್ರಾನ್ ಖಾನ್ ಮಹಿಳೆ ಜೊತೆ ಸೆಕ್ಸ್ ಕುರಿತು ಮಾತನಾಡುವ ಆಡಿಯೋ ಕಾಲ್ ಲೀಕ್ ಆಗಿದೆ. ಈ ಆಡಿಯೋ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರದ್ದು ಎನ್ನಲಾಗುತ್ತಿದೆ. ಈ ಆಡಿಯೋದಲ್ಲಿ ಇಮ್ರಾನ್ ಖಾನ್ ಈಗಲೇ ತನ್ನ ಬಳಿ ಬರುವಂತೆ ಮಹಿಳಗೆ ಬುಲಾವ್ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಹಿಳೆ, ಈಗಾಗಲೇ ನಿಮ್ಮ ನಡೆಯಿಂದ ನನ್ನ ಖಾಸಗಿ ಅಂಗಗಳಿಗೆ ನೋವಾಗಿದೆ. ಹೀಗಾಗಿ ಈಗ ಬರಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಆಡಿಯೋ ಇದೀಗ ಪಾಕಿಸ್ತಾನ ಮಾತ್ರವಲ್ಲ, ವಿಶ್ವದಲ್ಲೇ ಪಾಕಿಸ್ತಾನದ ಪ್ರಧಾನಿ ಕಚೇರಿಯಲ್ಲಿ ನಡೆಯುತ್ತಿರುವ ಅಸಲಿ ಆಟಗಳನ್ನು ಬೆತ್ತಲೆ ಮಾಡಿದೆ ಎಂದು ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇಮ್ರಾನ್ ಖಾನ್ ಅವರದ್ದು ಎನ್ನಲಾಗಿರುವ ಸೆಕ್ಸ್ ಕಾಲ್ ಆಡಿಯೋವನ್ನು ಪಾಕಿಸ್ತಾನದ ಪತ್ರಕರ್ತ ಸೈಯದ್ ಆಲಿ ಹೈದರ್ ಲೀಕ್ ಮಾಡಿದ್ದಾರೆ. ಯೂಟ್ಯೂಬ್ ಚಾನೆಲ್ ಮೂಲಕ ಈ ಆಡಿಯೋ ಬಹಿರಂಗ ಮಾಡಲಾಗಿದೆ. ಈ ಆಡಿಯೋದಲ್ಲಿ ಇಮ್ರಾನ್ ಖಾನ್, ಮಹಿಳೆಯೊಂದಿಗೆ ಸೆಕ್ಸ್ ಸಂಭಾಷಣೆ ನಡೆಸಿದ್ದಾರೆ.
Explained: ಇಮ್ರಾನ್ ಖಾನ್ ಹತ್ಯೆ ಯತ್ನದಿಂದ ಪಾಕಿಸ್ತಾನ ಸೇನೆ ಮತ್ತು ಆರ್ಥಿಕತೆಗೆ ಆದ ನಷ್ಟವೇನು?
ಇಮ್ರಾನ್ ಖಾನ್ ಅವರ ಎರಡು ಸೆಕ್ಸ್ ಆಡಿಯೋ ಬಹಿರಂಗವಾಗಿದೆ. ಮೊದಲ ಆಡಿಯೋದಲ್ಲಿ ಇಮ್ರಾನ್ ಖಾನ್ ಸೆಕ್ಸ್ ಸಂಭಾಷಣೆ ನಡೆಸಿರುವ ಮಹಿಳೆ ಅವರದೇ ಪಕ್ಷದ ನಾಯಕಿ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ಈ ಆಡಿಯೋ ಕ್ಲಿಪ್ ತುಂಬಾ ಹಳೆಯ ಆಡಿಯೋ ಎಂದು ಹೇಳಲಾಗುತ್ತಿದೆ. ಆದರೆ ಎರಡನೇ ಆಡಿಯೋ ಕ್ಲಿಪ್‌ನಲ್ಲಿ ಮಹಿಳೆಯನ್ನು ತನ್ನ ಬಳಿ ಈಗಲೇ ಬರುವಂತೆ ಆಹ್ವಾನಿಸುವ ಮಾತುಗಳಿವೆ. ಇಮ್ರಾನ್ ಮಾತಿಗೆ ಪ್ರತಿಕ್ರಿಯಿಸಿರುವ ಮಹಿಳೆ, ಈಗ ನನಗೆ ಸಾಧ್ಯವಿಲ್ಲ, ಕಾರಣ ನಿಮ್ಮಿಂದ ನನ್ನ ಖಾಸಗಿ ಅಂಗಗಳು ತೀವ್ರ ನೋಯುತ್ತಿದೆ. ಮತ್ತೊಂದು ದಿನ ಭೇಟಿಯಾಗುತ್ತೇನೆ ಎಂದಿದ್ದಾಳೆ. ಇದಕ್ಕೆ ಪ್ರತಿಕ್ರಿಯಿಸಿದ ಇಮ್ರಾನ್ ಖಾನ್, ಹಾಗಾದರೆ ಆ ದಿನ ನನ್ನ ಎಲ್ಲಾ ಕಾರ್ಯಕ್ರಮಗಳನ್ನು ಬದಲಾಸುತ್ತೇನೆ ಎಂದಿದ್ದಾರೆ.
ನನ್ನ ಮಕ್ಕಳು ಭೇಟಿ ಮಾಡಲು ಬರುತ್ತಿದ್ದಾರೆ. ನಾನು ಅವರ ಭೇಟಿಯನ್ನು ವಿಳಂಬ ಮಾಡುತ್ತೇನೆ. ನಾಳೆ ಬೆಳಗ್ಗೆ ಸಮಯ ಹೇಳುತ್ತೇನೆ. ಬಂದು ಬಿಡು ಎಂದು ಇಮ್ರಾನ್ ಖಾನ್, ಮಹಿಳೆಗೆ ಹೇಳಿದ್ದಾರೆ. ಇದೀಗ ಈ ಆಡಿಯೋ ಕ್ಲಿಪ್ ಭಾರಿ ಸಂಚಲನ ಸೃಷ್ಟಿಸಿದೆ. ಸಾಮಾಜಿಕ ಜಾಲತಾಣ, ಯೂಟ್ಯೂಬ್‌ನಲ್ಲಿ ಈ ಆಡಿಯೋ ಕ್ಲಿಪ್ ಹರಿದಾಡುತ್ತಿದೆ.
Imran Khan Disqualified: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ 5 ವರ್ಷ ನಿಷೇಧ!
ಇಮ್ರಾನ್ ಖಾನ್ ಆಪ್ತನ ಸೆಕ್ಸ್ ವಿಡಿಯೋ ವೈರಲ್
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆಪ್ತ, ತೆಹ್ರಿಕ್ ಎ ಇನ್ಸಾಫ್ ಪಕ್ಷದ ಮುಖಂಡ ಆಜಂ ಖಾನ್ ಸ್ವಾತಿ (75) ಅವರ ಅಶ್ಲೀಲ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋವನ್ನು ಸ್ವಾತಿ ಅವರ ಪತ್ನಿಗೆ ಅನಾಮಧೇಯ ನಂಬರ್‌ನಿಂದ ಕಳುಹಿಸಲಾಗಿದೆ.
ಈ ಕುರಿತಾಗಿ ಭಾನುವಾರ ಪ್ರತಿಕ್ರಿಯಿಸಿರುವ ಅವರು, ‘ಈ ವಿಡಿಯೋವನ್ನು ಯಾರೋ ಕಳುಹಿಸಿರುವುದಾಗಿ ನನ್ನ ಪತ್ನಿ ನನಗೆ ಹೇಳಿದಳು. ಆದರೆ ನನ್ನ ದೇಶದ ಮಕ್ಕಳು ಮತ್ತು ಮೊಮ್ಮಕ್ಕಳು ಕೇಳುತ್ತಿರುವುದರಿಂದ ನಾನು ಹೆಚ್ಚಿಗೆ ಏನೂ ಹೇಳಲಾರೆ’ ಎಂದು ಹೇಳುತ್ತಾ ಅವರು ಅಳಲು ಆರಂಭಿಸಿದರು. ಈ ವಿಡಿಯೋವನ್ನು ಪತ್ನಿಯೊಂದಿಗೆ ಕ್ವೆಟ್ಟಾಗೆ ಭೇಟಿ ನೀಡಿದಾಗ ಮಾಡಲಾಗಿದೆ ಎಂದು ಅವರು ಹೇಳಿದರು. ಆದರೆ ಇದು ನಕಲಿ ವಿಡಿಯೋ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.