ಈಗಾಗಲೇ ಆರ್ಥಿಕ ದುಸ್ಥಿತಿಗೆ ತಲುಪಿರುವ ಪಾಕಿಸ್ತಾನ ಈಗ ವಿದ್ಯುತ್‌ ಸಮಸ್ಯೆಗೂ ಸಿಲುಕಿಕೊಂಡಿದೆ. ಹಾಗಾಗಿ ಮಾರುಕಟ್ಟೆ, ಅಂಗಡಿಗಳನ್ನು ರಾತ್ರಿ 8 ಗಂಟೆಗೆ ಮುಚ್ಚಲು ಹಾಗೂ ಮದುವೆ ಮಂಟಪಗಳಿಗೆ ರಾತ್ರಿ 10 ಗಂಟೆವರೆಗೆ ಮಾತ್ರ ಅವಕಾಶ ನೀಡುವ ಯೋಜನೆ ಸಿದ್ಧಪಡಿಸಿದೆ.

ಇಸ್ಲಾಮಾಬಾದ್‌: ಈಗಾಗಲೇ ಆರ್ಥಿಕ ದುಸ್ಥಿತಿಗೆ ತಲುಪಿರುವ ಪಾಕಿಸ್ತಾನ ಈಗ ವಿದ್ಯುತ್‌ ಸಮಸ್ಯೆಗೂ ಸಿಲುಕಿಕೊಂಡಿದೆ. ಹಾಗಾಗಿ ಮಾರುಕಟ್ಟೆ, ಅಂಗಡಿಗಳನ್ನು ರಾತ್ರಿ 8 ಗಂಟೆಗೆ ಮುಚ್ಚಲು ಹಾಗೂ ಮದುವೆ ಮಂಟಪಗಳಿಗೆ ರಾತ್ರಿ 10 ಗಂಟೆವರೆಗೆ ಮಾತ್ರ ಅವಕಾಶ ನೀಡುವ ಯೋಜನೆ ಸಿದ್ಧಪಡಿಸಿದೆ. ಪ್ರಸ್ತುತ ನಡೆಯುತ್ತಿರುವ ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧ ಹಾಗೂ ಕಳೆದ ಜೂನ್‌ನಲ್ಲಿ ಪಾಕಿಸ್ತಾನದಲ್ಲಿ ಉಂಟಾದ ಭಾರಿ ಪ್ರವಾಹ ದೇಶವನ್ನು ಆರ್ಥಿಕ ದುಸ್ಥಿತಿಗೆ ತಳ್ಳಿದೆ. ವಿದ್ಯುತ್‌ ಉತ್ಪಾದನೆಗೆ ಹೊಡೆತ ಬಿದ್ದಿದೆ. ಸರ್ಕಾರವು ಈಗಾಗಲೇ ವಿದ್ಯುತ್‌ ಸಂರಕ್ಷಣಾ ಯೋಜನೆಯನ್ನು ಜಾರಿ ಮಾಡಿದ್ದು, ಇದನ್ನು ದೇಶಾದ್ಯಂತ ಜಾರಿ ಮಾಡಲು ಪ್ರಾಂತ್ಯಗಳೊಂದಿಗೆ ಈಗಾಗಲೇ ಸಭೆ ನಡೆಸುತ್ತಿದೆ.

ಈ ಯೋಜನೆಯ ಪ್ರಕಾರ ಮದುವೆ ಮಂಟಪಗಳಿಗೆ ನೀಡಲಾಗಿರುವ ಅನುಮತಿಯನ್ನು ರಾತ್ರಿ 10 ಗಂಟೆಗೆ ನಿರ್ಬಂಧಿಸಲು ಸೂಚಿಸಲಾಗಿದೆ. ಜೊತೆಗೆ ರೆಸ್ಟೋರೆಂಟ್‌ಗಳು (restaurants), ಹೋಟೆಲ್‌ಗಳು (hotels) ಮತ್ತು ಮಾರುಕಟ್ಟೆಗಳನ್ನು (markets) ರಾತ್ರಿ 8 ಗಂಟೆಗೆ ಮುಚ್ಚಲು ತೀರ್ಮಾನಿಸಲಾಗಿದೆ. ಒಂದು ವೇಳೆ ಸರ್ಕಾರದ ಶೇ.20ರಷ್ಟು ಉದ್ಯೋಗಿಗಳು ವರ್ಕ್ ಫ್ರಂ ಹೋಮ್‌ (work from home) ಮಾಡಿದರೆ 5600 ಕೋಟಿ ರು. ಉಳಿಸಬಹುದು. ಈ ಬಗ್ಗೆ ಗುರುವಾರ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ.

Chamarajanagar: ವಿದ್ಯುಚ್ಛಕ್ತಿ ಸಂಪರ್ಕ ಕಲ್ಪಿಸಲು ಹರಕೆ: ಮುಜರಾಯಿ ಇಲಾಖೆ ಅನುಮತಿ ಪತ್ರ ನೀಡಲು ಮೀನಾಮೇಷ

ಬಾರ್ಡರ್‌ ಸಿನಿಮಾಗೆ ಸ್ಫೂರ್ತಿಯಾಗಿದ್ದ 1971ರ ಇಂಡೋ-ಪಾಕ್‌ ಯುದ್ಧದ ವೀರ ರಾಥೋಡ್‌ ನಿಧನ