Asianet Suvarna News Asianet Suvarna News

ಸಿಲಿಂಡರ್ ಬದ್ಲು ಪ್ಲಾಸ್ಟಿಕ್ ಬ್ಯಾಗ್ ಅಲ್ಲಿ ದೊರೆಯುತ್ತೆ ಎಲ್‌ಪಿಜಿ

ಪ್ಲಾಸ್ಟಿಕ್ ಚೀಲದಲ್ಲಿ ಗ್ಯಾಸ್ ಕೂಡ ಗ್ಯಾಸ್ ತುಂಬಿಸಬಹುದು ಎಂಬುದು ನಿಮಗೆ ಗೊತ್ತೆ. ಪಾಕಿಸ್ತಾನದಲ್ಲಿ ಈ ವಿಚಿತ್ರ ದೃಶ್ಯ ಕಂಡು ಬಂದಿದೆ. ಜನ ಸಿಲಿಂಡರ್ ಬದಲು ಪ್ಲಾಸ್ಟಿಕ್ ಚೀಲದಲ್ಲಿ ಗ್ಯಾಸ್ ತುಂಬಿಸಿಕೊಂಡು ಹೋಗುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

watch viral video economic crisis Pakistani people storing cooking gas in Plastic Balloons akb
Author
First Published Jan 3, 2023, 3:31 PM IST

ಅಡುಗೆ ಅನಿಲ ಅಂದ ಕೂಡಲೇ ನಮಗೆ ನೆನಪಾಗೋದು ಸಿಲಿಂಡರ್. ನಮ್ಮ ದೇಶದಲ್ಲಿ ಕಬ್ಬಿಣದ ಸಿಲಿಂಡರ್‌ನಲ್ಲಿ ಗ್ಯಾಸ್ ತುಂಬಿಸಿ ಮನೆ ಮನೆಗೆ ಪೂರೈಕೆ ಮಾಡಲಾಗುತ್ತದೆ. ಆದರೆ ಪ್ಲಾಸ್ಟಿಕ್ ಚೀಲದಲ್ಲಿ ಗ್ಯಾಸ್ ಕೂಡ ಗ್ಯಾಸ್ ತುಂಬಿಸಬಹುದು ಎಂಬುದು ನಿಮಗೆ ಗೊತ್ತೆ. ಪಾಕಿಸ್ತಾನದಲ್ಲಿ ಈ ವಿಚಿತ್ರ ದೃಶ್ಯ ಕಂಡು ಬಂದಿದೆ. ಜನ ಸಿಲಿಂಡರ್ ಬದಲು ಪ್ಲಾಸ್ಟಿಕ್ ಚೀಲದಲ್ಲಿ ಗ್ಯಾಸ್ ತುಂಬಿಸಿಕೊಂಡು ಹೋಗುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.  @lonewolf_singh ಅಥವಾ ಆರ್‌ ಸಿಂಗ್ ಎಂಬುವವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 'ಪಾಕಿಸ್ತಾನದಲ್ಲಿ ಅಡುಗೆಗೆ ಗ್ಯಾಸ್ ಸಿಲಿಂಡರ್ ಬದಲಿಗೆ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ ಗ್ಯಾಸ್ ಬಳಸುವ ಪರಿಪಾಠ ಹೆಚ್ಚಾಗಿದೆ. ಗ್ಯಾಸ್ ಪೈಪ್‌ಲೈನ್ (Gas pipeline) ನೆಟ್‌ವರ್ಕ್‌ಗೆ ಸಂಪರ್ಕ ಹೊಂದಿದ ಅಂಗಡಿಗಳ ಒಳಗೆ ಚೀಲಗಳಲ್ಲಿ ಗ್ಯಾಸ್ ತುಂಬಿಸಿ ಅನಿಲವನ್ನು ಮಾರಾಟ ಮಾಡಲಾಗುತ್ತದೆ. ಸಣ್ಣ ವಿದ್ಯುತ್ ಬಳಕೆಯಿಂದ ಚಾಲಿತವಾಗುವ ಪಂಪ್ ಸಹಾಯದಿಂದ ಜನರು ಇದನ್ನು ಅಡುಗೆಮನೆಯಲ್ಲಿ ಬಳಸುತ್ತಾರೆ ಎಂದು ವಿಡಿಯೋ ಪೋಸ್ಟ್ ಮಾಡಿ ಅವರು ಬರೆದುಕೊಂಡಿದ್ದಾರೆ.

ವಿಡಿಯೋದಲ್ಲಿ ಕಾಣಿಸುವಂತೆ ಇಬ್ಬರು ದೊಡ್ಡದಾದ ಪ್ಲಾಸ್ಟಿಕ್ ಚೀಲದಲ್ಲಿ ಗ್ಯಾಸ್ ತುಂಬಿಸಿಕೊಂಡು ತೆಗೆದುಕೊಂಡು ಹೋಗುವುದನ್ನು ಕಾಣಬಹುದಾಗಿದೆ. ಆರು ಸೆಕೆಂಡ್‌ನ ಈ ವಿಡಿಯೋದಲ್ಲಿ ಇಬ್ಬರು ತಮ್ಮಗಿಂತ ಮೂರು ಪಾಲು ಅಗಲ, ಉದ್ದ ಇರುವ ಪ್ಲಾಸ್ಟಿಕ್ ಚೀಲಗಳನ್ನು ಎಳೆದುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.  ಪಾಕಿಸ್ತಾನದ ಜನ ತೀವ್ರವಾದ ಆರ್ಥಿಕ ಬಿಕ್ಕಟ್ಟಿನಿಂದ (economic crisis) ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ಅಡುಗೆ ಅನಿಲವನ್ನು ಖರೀದಿಸುವುದು ಕನಸಿನ ಮಾತಾಗಿದೆ. ಆದರೆ ಅಡುಗೆ ಅನಿಲ (LPG) ಪಡೆಯದೇ ಅನ್ನ ಆಹಾರ ತಿನ್ನಲಾಗದು ಹೀಗಾಗಿ ಜನ ಈ ರೀತಿಯ ಅಡ್ಡದಾರಿಗಳನ್ನು ಹಿಡಿಯುತ್ತಿದ್ದಾರೆ. ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ (Khyber Pakhtunkhwa province) ಹೀಗೆ ಅಡುಗೆ ಅನಿಲವನ್ನು ಜನ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸಿ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ವರದಿ ಆಗಿದೆ. ಪಾಕಿಸ್ತಾನದಲ್ಲಿ ಸಿಲಿಂಡರ್‌ಗಳ ಸಂಗ್ರಹದ ಕೊರತೆ ಇದ್ದು, ಸ್ಥಳೀಯರು ಎಲ್‌ಪಿಜಿ  ಪಡೆಯಲು ಬೃಹತ್ ಪ್ಲಾಸ್ಟಿಕ್ ಚೀಲಗಳನ್ನು ಬಳಸುತ್ತಿರುವುದು ಕಂಡುಬಂದಿದೆ.

ಹೊಸ ವರ್ಷದ ಮೊದಲ ದಿನವೇ ಶಾಕಿಂಗ್ ನ್ಯೂಸ್‌: ಎಲ್‌ಪಿಜಿ ದರದಲ್ಲಿ 25 ರೂ. ಹೆಚ್ಚಳ

DW.com  ಎಂಬ ವೆಬ್‌ಸೈಟ್ ಪ್ರಕಾರ, ಈ ಪ್ಲಾಸ್ಟಿಕ್ ಚೀಲಗಳನ್ನು ದೇಶದಲ್ಲಿ ಅನಿಲ ಪೈಪ್‌ಲೈನ್ ಜಾಲಕ್ಕೆ ಸಂಪರ್ಕ ಹೊಂದಿದ ಅಂಗಡಿಗಳಲ್ಲಿ ನೈಸರ್ಗಿಕ ಅನಿಲದಿಂದ ತುಂಬಿಸಲಾಗುತ್ತದೆ. ಇದರ ಸೋರಿಕೆಯನ್ನು ತಪ್ಪಿಸಲು, ಮಾರಾಟಗಾರರು ನಳಿಕೆ ಮತ್ತು ಕವಾಟದಿಂದ ಚೀಲದ ಮುಚ್ಚಳದ ಭಾಗವನ್ನು ಬಿಗಿಯಾಗಿ ಮುಚ್ಚುತ್ತಾರೆ. ನಂತರ ಚೀಲಗಳನ್ನು ಜನರಿಗೆ ಮಾರಾಟ ಮಾಡಲಾಗುತ್ತದೆ, ಅವರು ನಂತರ ಸಣ್ಣ ವಿದ್ಯುತ್ ಹೀರಿಕೊಳ್ಳುವ ಪಂಪ್‌ನ ಸಹಾಯದಿಂದ ಅನಿಲವನ್ನು ಬಳಸುತ್ತಾರೆ. ಪ್ಲಾಸ್ಟಿಕ್ ಚೀಲಗಳಲ್ಲಿ ಮೂರರಿಂದ ನಾಲ್ಕು ಕೆಜಿ ಗ್ಯಾಸ್ ತುಂಬಲು ಅಂದಾಜು ಒಂದು ಗಂಟೆ ಬೇಕಾಗುತ್ತದೆ 

ಇಬ್ಬರು ಎಲ್‌ಪಿಜಿ ತುಂಬಿದ ಪ್ಲಾಸ್ಟಿಕ್ ಚೀಲವನ್ನು (plastic bags) ಹೊತ್ತೊಯ್ಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು, ಈ ಚೀಲಗಳು ಸ್ಫೋಟಕ್ಕೆ ಕಾರಣವಾಗುತ್ತವೆ ಎಂಬ ಭಯವಿದ್ದರೂ ಕೂಡ ಇದುವರೆಗೆ ಅಂತಹ ಅವಘಡ ನಡೆದಿಲ್ಲವಂತೆ. ಒಂದು ವೇಳೆ ಅನಾಹುತ ನಡೆದರು ನಮ್ಮಂತಹ ಬಡ ಜನರಿಗೆ ದುಬಾರಿ ಸಿಲಿಂಡರ್‌ ಕೊಳ್ಳುವ ಆಯ್ಕೆ ಇಲ್ಲ ಎಂದು ಸ್ಥಳೀಯರೊಬ್ಬರು ಹೇಳಿದ್ದಾಗಿ DW.com ವರದಿ ಮಾಡಿದೆ. ಆದರೆ ಈ ವಿಡಿಯೋ ನೋಡಿದ ಅನೇಕರು ಈ ಬಗ್ಗೆ ಭಯ ವ್ಯಕ್ತಪಡಿಸಿದ್ದು, ಈ ದೃಶ್ಯವನ್ನು ನಂಬಲಾಗುತ್ತಿಲ್ಲ. ಪಾಕಿಸ್ತಾನದಲ್ಲಿ ಸರಕು ಸೇವಾ ಇಲಾಖೆ ಇಲ್ವೆ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ಕೆಲವು ಮೂಲಭೂತ ಸುರಕ್ಷತಾ ಮಾನದಂಡಗಳನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಪಾಕಿಸ್ತಾನದ ಆರ್ಥಿಕ ದುಸ್ಥಿತಿಯಿಂದ ಬದುಕುವುದಾಗಿ ಜೀವ ಹಾನಿಯ ಭಯ ಬಿಡುವಂತಾಗಿದೆ.

ರಾಜಸ್ಥಾನದಲ್ಲಿ ಎಲ್‌ಪಿಜಿ ಸಿಲಿಂಡರ್‌ ಬೆಲೆ ಶೇ. 50 ರಷ್ಟು ಇಳಿಕೆ ಮಾಡಿದ ಅಶೋಕ್‌ ಗೆಹ್ಲೋಟ್‌..!

 

Follow Us:
Download App:
  • android
  • ios