ಇಟಲಿಯ ಕ್ಯಾಲಬ್ರಿಯಾ ಪ್ರದೇಶದ ಪೂರ್ವ ಕರಾವಳಿಯಲ್ಲಿ ವಲಸಿಗರು ಪ್ರಯಾಣ ಮಾಡುತ್ತಿದ್ದ ದೋಣಿ ದುರಂತ ಸಂಭವಿಸಿದೆ.  ಈ ದುರಂತದಲ್ಲಿ ಕನಿಷ್ಠ 30 ಜನರು ಮೃತಪಟ್ಟಿದ್ದಾರೆ.

ರೋಮ್ (ಫೆ.26): ಇಟಲಿಯ ಕ್ಯಾಲಬ್ರಿಯಾ ಪ್ರದೇಶದ ಪೂರ್ವ ಕರಾವಳಿಯಲ್ಲಿ ವಲಸಿಗರು ಪ್ರಯಾಣ ಮಾಡುತ್ತಿದ್ದ ದೋಣಿ ದುರಂತ ಸಂಭವಿಸಿದೆ. ಈ ದುರಂತದಲ್ಲಿ ಕನಿಷ್ಠ 30 ಜನರು ಮೃತಪಟ್ಟಿದ್ದಾರೆ ಎಂದು ಇಟಾಲಿಯನ್ ಸುದ್ದಿ ಸಂಸ್ಥೆಗಳು ಭಾನುವಾರ ವರದಿ ಪ್ರಕಟಿಸಿದೆ. ಕ್ರೋಟೋನ್ ಪ್ರಾಂತ್ಯದ ಕಡಲತೀರದ ರೆಸಾರ್ಟ್ ಆಗಿರುವ ಸ್ಟೆಕಾಟೊ ಡಿ ಕಟ್ರೊ ತೀರದಲ್ಲಿ ಸುಮಾರು 27 ಶವಗಳು ಪತ್ತೆಯಾಗಿವೆ ಮತ್ತು ಹೆಚ್ಚಿನವು ಸಮುದ್ರದಲ್ಲಿ ಪತ್ತೆಯಾಗಿವೆ. ದುರಂತದಲ್ಲಿ ಮಗು ಮತ್ತು ಹಲವಾರು ಮಕ್ಕಳು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ. ವಲಸಿಗರನ್ನು ಹೊತ್ತೊಯ್ದ ದೋಣಿಯಲ್ಲಿ 100 ಕ್ಕೂ ಹೆಚ್ಚು ಜನರು ಪ್ರಯಾಣ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಘಟನೆಯಲ್ಲಿ ಸುಮಾರು 50 ಜನರನ್ನು ರಕ್ಷಿಸಲಾಗಿದೆ ಎಂದು ವರದಿ ತಿಳಿಸಿದೆ. ಇರಾನ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ವಲಸಿಗರನ್ನು ಕರೆತರುತ್ತಿದ್ದ ದೋಣಿಯು ಒರಟಾದ ಸಮುದ್ರದ ವಾತಾವರಣದಲ್ಲಿ ಬಂಡೆಗಳ ಮೇಲೆ ಅಪ್ಪಳಿಸಿ ಈ ಭೀಕರ ದುರಂತ ನಡೆದಿದೆ.

ಮಗನ ಮಗುವಿಗೆ ಜನ್ಮ ನೀಡಿದ ತಾಯಿ, ಈಕೆ ಅಜ್ಜಿಯೂ ಹೌದು, ತಾಯಿಯೂ ಹೌದು!

ಇದು ಅನಿಯಮಿತ ವಲಸೆ ಮಾರ್ಗಗಳ ವಿರುದ್ಧ ದೃಢವಾಗಿ ಕಾರ್ಯನಿರ್ವಹಿಸುವ ಸಂಪೂರ್ಣ ಅಗತ್ಯವನ್ನು ತೋರಿಸುವ ಒಂದು ದೊಡ್ಡ ದುರಂತವಾಗಿದೆ ಎಂದು ಇಟಾಲಿಯನ್ ಆಂತರಿಕ ಸಚಿವ ಮ್ಯಾಟಿಯೊ ಪಿಯಾಂಟೆಡೋಸಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ವಲಸಿಗರಿಗೆ ಯುರೋಪ್‌ನಲ್ಲಿ 'ಉತ್ತಮ ಜೀವನದ ಭ್ರಮೆ ಮರೀಚಿಕೆ' ನೀಡುವ, ಕಳ್ಳಸಾಗಾಣಿಕೆದಾರರನ್ನು ಉತ್ಕೃಷ್ಟಗೊಳಿಸುವ ಮತ್ತು "ಇಂದಿನ ದುರಂತಗಳಿಗೆ ಕಾರಣವಾಗುವ" ಸಮುದ್ರ ಮೂಲಕ ಹಾದು ಹೋಗುವುದನ್ನು ನಿಲ್ಲಿಸಬೇಕು ಎಂದು ಅವರು ಹೇಳಿದರು.

ಆಹಾರದ ಜೊತೆಗೆ ಪತ್ತೆಯಾಯ್ತು 5000 ವರ್ಷ ಹಳೆಯ ರೆಫ್ರಿಜರೇಟರ್

ಇಟಲಿ ಸರ್ಕಾರವು ಸಂಸತ್ತಿನಲ್ಲಿ ಇತ್ತೀಗಷ್ಟೇ ವಲಸಿಗರ ರಕ್ಷಣೆಗಾಗಿ ವಿವಾದಾತ್ಮಕವಾದ ಹೊಸ ಕಾನೂನನ್ನು ಮಂಡಿಸಿದ್ದು, ಅದರ ಬೆನ್ನಲ್ಲೇ ದೋಣಿ ದುರಂತ ನಡೆದಿದೆ. ಇಟಲಿ ಸರಕಾರದ ಹೊಸ ಕಾನೂನಿನ ಪ್ರಕಾರ ಒಂದು ಬಾರಿಯಷ್ಟೇ ವಲಸಿಗರನ್ನು ತುಂಬಿದ ದೋಣಿಯನ್ನು ರಕ್ಷಣೆ ಮಾಡಬಹುದು. ಆದರೆ ಮೆಡಿಟರೇನಿಯನ್‌ ಸಮುದ್ರದ ಮಧ್ಯ ಭಾಗದಲ್ಲಿ ದೋಣಿ ಮುಳುಗಡೆಯಾಗುವ ದುರಂತ ನಿರಂತರವಾಗಿ ನಡೆಯುತ್ತಲೇ ಇರುತ್ತದೆ . ಬಡತನ ಹಾಗೂ ಬದುಕಿನ ಸಂಘರ್ಷದಿಂದ ಬೇಸತ್ತ ಆಫ್ರಿಕಾ ಜನರು ಯುರೋಪ್‌ನಲ್ಲಿ ತಮ್ಮ ಜೀವನ ಕಂಡುಕೊಳ್ಳಲು ಇಟಲಿ ಮೂಲಕ ಹಾದು ಹೋಗುತ್ತಾರೆ. ಈ ಜಲಮಾರ್ಗ ವಿಶ್ವದಲ್ಲೇ ಅತ್ಯಂತ ಅಪಾಯಕರ ಎಂದು ಯುರೋಪ್‌ ಜನ ಹೇಳುತ್ತಾರೆ.