Asianet Suvarna News Asianet Suvarna News

ಲಸಿಕೆ ನಿರಾಕರಿಸಿದರೆ ಜೈಲು, ನಿಮ್ಮಿಷ್ಟದಂತೆ ಇರಲು ಭಾರತಕ್ಕೆ ತೊಲಗಿ: ಫಿಲಿಪೈನ್ ಅಧ್ಯಕ್ಷ ವಾರ್ನಿಂಗ್!

  • ಸುಳ್ಳು ವದಂತಿಗಳು, ರಾಜಕೀಯ ಬಣ್ಣದಿಂದ ಲಸಿಕೆ ಪಡೆಯಲು ಕೆಲವರು ಹಿಂದೇಟು
  • ನಿಮ್ಮಿಷ್ಟದಂತೆ ಇರಲು ಭಾರತಕ್ಕೆ ತೆರಳಿ 
  • ಕೋವಿಡ್ ಲಸಿಕೆ ನಿರಾಕರಿಸಿದರೆ ಜೈಲು ಶಿಕ್ಷೆ ಎಂದ ಅಧ್ಯಕ್ಷ
Arrest or leave country who refuse Covid 19 vaccination Philippine president threaten public ckm
Author
Bengaluru, First Published Jun 22, 2021, 5:34 PM IST

ಮನಿಲಾ(ಜೂ.22):  ಸುಳ್ಳು ವದಂತಿ, ರಾಜಕೀಯ ಬಣ್ಣ, ಧರ್ಮದ ಕಟ್ಟುಪಾಡುಗಳಿಂದ ಕೊರೋನಾ ಲಸಿಕೆ ಪಡೆಯಲು ಕೆಲವರು ನಿರಾಕರಿಸಿದ್ದಾರೆ. ಇತ್ತ ಕೊರೋನಾ ನಿಯಂತ್ರಣ ಸವಲಾಗುತ್ತಿರುವ ಕಾರಣ ಫಿಲಿಪೈನ್ಸ್ ಅಧ್ಯಕ್ಷ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಲಸಿಕೆ ನಿರಾಕರಿಸಿದರೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಜೈಲು ಶಿಕ್ಷೆ ಬೇಡ ಎನ್ನುವವರು ದೇಶ ಬಿಟ್ಟು ತೊಲಗಿ ಎಂದು ಅಧ್ಯಕ್ಷ ರೊಡ್ರಿಗೋ ಡುಟರ್ಟೆ  ಖಡಕ್ ವಾರ್ನಿಂಗ್ ನೀಡಿದ್ದಾರೆ. 

ಕರ್ನಾಟಕದಲ್ಲಿ 10 ಲಕ್ಷ, ಭಾರತದಲ್ಲಿ 75 ಲಕ್ಷ. ದಾಖಲೆ ಬರೆದ ಜೂನ್ 21

ವಿಶ್ವವೇ ಆರೋಗ್ಯ ತುರ್ತು ಪರಿಸ್ಥಿತಿ ಎದುರಿಸುತ್ತಿದೆ. ಫಿಲಿಪೈನ್ಸ್ ಅತೀ ದೊಡ್ಡ ಸವಾಲನ್ನೇ ಎದುರಿಸುತ್ತಿದೆ. ಆರೋಗ್ಯ ಕಾರ್ಯಕರ್ತರು, ಸಿಬ್ಬಂದಿಗಳು, ಆಡಳಿತ ವಿಭಾಗ ಸಾಂಕ್ರಾಮಿಕ ಪಿಡುಗು ನಿಯಂತ್ರಿಸಲು ಜೀವದ ಹಂಗು ತೊರೆದು ಕೆಲಸ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಕ್ಷುಲ್ಲಕ ಕಾರಣ ನೀಡಿ ಲಸಿಕೆ ನಿರಾಕರಿಸುವುದು ಸರಿಯಲ್ಲ. ಇದರಿಂದ ದೇಶ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ ಎಂದು ರೋಡ್ರಿಗೋ ಹೇಳಿದ್ದಾರೆ.

ತಪ್ಪಾಗಿ ಅರ್ಥೈಸಬೇಡಿ. ಕೊರೋನಾ ಕಾರಣ ದೇಶ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಎಲ್ಲರಿಗೂ ಅರಿವಿದೆ. ಹಸಿವು, ಆರ್ಥಿಕ ಸಂಕಷ್ಟ ಸೇರಿದಂತೆ ಹತ್ತು ಹಲವು ಸಮಸ್ಯೆಗಳು ತಲೆದೋರಿದೆ. ಇದರ ನಡುವೆ ಲಸಿಕೆ ಬೇಡ ಎಂದವನ್ನು ಆರಸ್ಟ್ ಮಾಡಿ ಲಸಿಕೆ ಹಾಕಿಸುತ್ತೇನೆ. ಇದು ಆಗಲ್ಲ ಫಿಲಿಪೈನ್ಸ್ ಬಿಟ್ಟು ತೊಲಗಿ. ನಿಮ್ಮಿಷ್ಟ ಬಂದಂತೆ ಇರಲು ಭಾರತ ಅಥವಾ ಅಮೆರಿಕಾ ಅಥವಾ ಇನ್ಯಾವುದೇ ದೇಶಕ್ಕೆ ತೊಲಗಿ ಎಂದು ರೊಡ್ರಿಗೋ ಹೇಳಿದ್ದಾರೆ.

ಲಸಿಕೆ ಮಿಶ್ರಣದಿಂದ ಹೆಚ್ಚು ರೋಗನಿರೋಧಕ ಶಕ್ತಿ ವೃದ್ಧಿ!

ಲಸಿಕೆ ಪಡೆಯಲು ಹಿಂದೇಟು ಹಾಕಿದವರನ್ನು ಬಂಧಿಸುವ ಕಾನೂನು ಫಿಲಿಪೈನ್ಸ್‌ನಲ್ಲಿ ಇಲ್ಲ. ರೊಡ್ರಿಗೋ ದೇಶದಲ್ಲಿನ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಲು ಕಟು ಶಬ್ದಗಳನ್ನು ಪ್ರಯೋಗಿಸಿದ್ದಾರೆ ಎಂದು  ಅಧ್ಯಕ್ಷರ ಹೇಳಿಕೆ ಕುರಿತು  ಕಾರ್ಯದರ್ಶಿ ಮರ್ನಾಡೋ ಗುವಾರಾ ಸಮರ್ಥನೆ ನೀಡಿದ್ದಾರೆ.

Follow Us:
Download App:
  • android
  • ios