ಇಂದಿನಿಂದ ದೇಶದಲ್ಲಿ ಹೊಸ ಲಸಿಕಾ ನೀತಿ ಜಾರಿ ಲಸಿಕಾ ಅಭಿಯಾನದಲ್ಲಿ ಮೊದಲ ದಿನವೇ ದಾಖಲೆ ಬರದೆ ಭಾರತ 75 ಲಕ್ಷ ಮಂದಿಗೆ ಲಸಿಕೆ ನೀಡಿದ ಭಾರತಕ್ಕೆ ಮೋದಿ ಅಭಿನಂದನೆ

ನವದೆಹಲಿ(ಜೂ.21): ಕೊರೋನಾ ವೈರಸ್ ವಿರುದ್ಧದ ಭಾರತದ ಹೋರಾಟಕ್ಕೆ ಮತ್ತಷ್ಟು ವೇಗ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಘೋಷಿಸಿದಂತೆ ಜೂನ್ 21ರಿಂದ ಹೊಸ ಲಸಿಕಾ ನೀತಿ ಜಾರಿಯಾಗಿದೆ. ಇದರ ಪರಿಣಾಮ ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಬರೋಬ್ಬರಿ 75 ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಲಾಗಿದೆ. ಇತ್ತ ಕರ್ನಾಟಕದಲ್ಲಿ ಇಂದು 10.34 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ.ಇದರೊಂದಿಗೆ ಒಂದೇ ದಿನ ಗರಿಷ್ಠ ಲಸಿಕೆ ನೀಡಿದ ರಾಜ್ಯಗಳ ಪೈಕಿ ಕರ್ನಾಟಕ 2ನೇ ಸ್ಥಾನ ಪಡೆದುಕೊಂಡಿದೆ. ದೇಶದ ಈ ಸಾಧನೆಗೆ ಸಹಕರಿಸಿದ ಎಲ್ಲರಿಗೂ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

ಲಸಿಕೆಯಿಂದ ಕೋವಿಡ್‌ ವಿರುದ್ಧ 94% ಸುರಕ್ಷತೆ, ಆಸ್ಪತ್ರೆ ದಾಖಲಾಗುವ ಅಪಾಯ 80% ಕಡಿತ!

ಇಂದಿನ ಲಸಿಕಾ ಅಭಿಯಾನದ ಸಂಖ್ಯೆ ಸಂತೋಷ ತಂದಿದೆ. ಕೊರೋನಾ ವಿರುದ್ಧ ಹೋರಾಡಲು ನಮ್ಮಲ್ಲಿರುವ ಪ್ರಮುಖ ಅಸ್ತ್ರ ಲಸಿಕೆ. ಲಸಿಕೆ ಪಡೆದವರಿಗೆ ಎಲ್ಲರಿಗೂ ಅಭಿನಂದನೆಗಳು. ಇದರ ಜೊತೆಗೆ ಲಸಿಕೆ ನೀಡಿದ, ಸಹಕರಿಸಿದ ಎಲ್ಲಾ ಫ್ರಂಟ್‌ಲೈನ್ ವಾರಿಯರ್ಸ್‌ಗೆ ಅಭಿನಂದನೆಗಳು. ವೆಲ್ ಡನ್ ಇಂಡಿಯಾ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. 

Scroll to load tweet…

ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ. ಇದಕ್ಕಾಗಿ ಶೇಕಜಾ 75 ರಷ್ಟು ಲಸಿಕೆಯನ್ನು ಕೇಂದ್ರ ಸರ್ಕಾರವೇ ಖರೀದಿ ಮಾಡಲಿದೆ. ಬಳಿಕ ಉಚಿತವಾಗಿ ರಾಜ್ಯಗಳಿಗೆ ಹಂಚಲಿದೆ. ಪ್ರಧಾನಿ ಮೋದಿ ಘೋಷಣೆಯಂತೆ, ಹೊಸ ಲಸಿಕಾ ನೀತಿ ಅಭಿಯಾನದಿಂದ ಗರಿಷ್ಠ ಮಂದಿಗೆ ಲಸಿಕೆ ನೀಡಲು ಸಾಧ್ಯವಾಗಿದೆ

ಇಂದಿನಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿ​ಕೆ!.

ಜನವರಿ 16 ರಿಂದ ಭಾರತ ಲಸಿಕಾ ಅಭಿಯಾನ ಆರಂಭಿಸಿದೆ. ಇಲ್ಲೀವರೆಗಿನ ಲಸಿಕೆ ನೀಡುವಿಕೆಯಲ್ಲಿ ಇಂದು ಗರಿಷ್ಠ ಅಂದರೆ 75 ಲಕ್ಷಕ್ಕೂ ಅಧಿಕ ಮಂದಿ ಲಸಿಕೆ ಪಡೆದಿದ್ದಾರೆ. ಇದಕ್ಕೂ ಮೊದಲು ಎಪ್ರಿಲ್ 2 ರಂದು 42,65,157 ಲಕ್ಷ ಮಂದಿಗೆ ಲಸಿಕೆ ನೀಡಿ ಗರಿಷ್ಠ ದಾಖಲೆ ಬರೆದಿತ್ತು. ಇದೀಗ ಈ ಎಲ್ಲಾ ದಾಖಲೆಗಳನ್ನು ಇಂದಿನ ಸಂಖ್ಯೆ ಅಳಿಸಿ ಹಾಕಿದೆ.

Scroll to load tweet…

ಕರ್ನಾಟಕದಲ್ಲಿ 10 ಲಕ್ಷ ಮಂದಿಗೆ ಲಸಿಕೆ:
ಕರ್ನಾಟಕದಲ್ಲೂ ಲಸಿಕೆ ಅಭಿಯಾನದಲ್ಲಿ ದಾಖಲೆ ಬರೆದಿದೆ. ಇಂದು(ಜೂ.21) ಒಂದೇ ದಿನ 10.36 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. ರಾಜ್ಯಗಳ ಪೈಕಿ ಒಂದೇ ದಿನ ಗರಿಷ್ಠ ಲಸಿಕೆ ನೀಡಿದ ಪೈಕಿ ಕರ್ನಾಟಕಕ್ಕೆ 2ನೇ ಸ್ಥಾನ ಲಭ್ಯವಾಗಿದೆ. ಮೊದಲ ಸ್ಥಾನದಲ್ಲಿರುವ ಮಧ್ಯ ಪ್ರದೇಶ 14 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. ಕರ್ನಾಟಕದಲ್ಲಿ ಒಟ್ಟು 1.96 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ. ಕರ್ನಾಟಕದ ಜನಸಂಖ್ಯೆಯ 3ನೇ 1 ರಷ್ಟು ಮಂದಿಗೆ ಲಸಿಕೆ ನೀಡಲಾಗಿದೆ.

Scroll to load tweet…

ಲಸಿಕೆ ಅಭಿಯಾನದಲ್ಲಿ ಟಾಪ್ 3 ರಾಜ್ಯ
ಮಧ್ಯ ಪ್ರದೇಶ : 14,71,936
ಕರ್ನಾಟಕ : 10,36,526
ಉತ್ತರ ಪ್ರದೇಶ : 6,57,689