*  ವರ್ಣಬೇಧ ನೀತಿ ವಿರುದ್ಧ, ಲೈಂಗಿಕ ಅಲ್ಪ ಸಂಖ್ಯಾತರ ಹಕ್ಕುಗಳಿಗಾಗಿ ಹೋರಾಟ*  1984ನೇ ಸಾಲಿನ ನೊಬೆಲ್‌ ಶಾಂತಿ ಪ್ರಶಸ್ತಿ*  ಆಫ್ರಿಕಾದ ಮೊದಲ ಕಪ್ಪು ವರ್ಣೀಯ ಬಿಷಪ್‌ 

ಜೊಹಾನ್ಸ್‌ಬರ್ಗ್‌(ಡಿ.27): ದಕ್ಷಿಣ ಆಫ್ರಿಕಾದಲ್ಲಿ(South Africa) ವರ್ಣಬೇಧ(Racism) ನೀತಿಯ ವಿರುದ್ಧ ಮತ್ತು ಲೈಂಗಿಕ ಅಲ್ಪಸಂಖ್ಯಾತ ಹಕ್ಕುಗಳ ಹೋರಾಟಗಾರರಾಗಿದ್ದ ಕೇಪ್‌ ಟೌನ್‌ನ ಆರ್ಚ್‌ ಬಿಷಪ್‌ ಡೆಸ್ಮಂಡ್‌ ಟುಟು(90)(Desmond Tutu) ಭಾನುವಾರ ನಿಧನರಾಗಿದ್ದಾರೆ. ಇವರ ನಿಧನಕ್ಕೆ ದಕ್ಷಿಣ ಆಫ್ರಿಕಾ ಅಧ್ಯಕ್ಷ, ಸಿರಿಲ್‌ ರಾಮಾಪೋಸಾ(Cyril Ramaphosa), ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಟುಟು ನಿಧನದಿಂದಾಗಿ, ವರ್ಣಬೇಧ ನೀತಿಯಿಂದ ವಿಮೋಚನೆಗೊಂಡ ಆಫ್ರಿಕಾವನ್ನು ನಮಗೆ ನೀಡಿದ ಮತ್ತೊಂದು ಕೊಂಡಿಯನ್ನು ಕಳೆದುಕೊಂಡಾಂತಾಗಿದೆ’ ಎಂದು ಸಿರಿಲ್‌ ರಾಮಾಪೋಸಾ ಹೇಳಿದ್ದಾರೆ. ‘ಆರ್ಚ್‌ ಬಿಷಪ್‌ ಅವರು ಜಾಗತಿಕವಾಗಿ ಅಸಖ್ಯಾಂತ ಜನರಿಗೆ ಮಾರ್ಗದರ್ಶಕರಾಗಿದ್ದರು. ಮಾನವನ ಘನತೆ ಮತ್ತು ಸಮಾನತೆಗೆ ಅವರು ನೀಡಿದ ಒತ್ತು ಚಿರಕಾಲ ನೆನಪಿನಲ್ಲುಳಿಯುತ್ತದೆ. ಅವರ ಸಾವಿನಿಂದ ಬಹಳ ದುಃಖವಾಗಿದೆ’ ಎಂದು ಮೋದಿ(Narendra Modi) ಹೇಳಿದ್ದಾರೆ.

KV Raju Passed Away: 50ಕ್ಕೂ ಹೆಚ್ಚು ಹಿಟ್‌ ಚಿತ್ರಗಳ ನಿರ್ದೇಶಕ ಕೆ.ವಿ.ರಾಜು ಇನ್ನಿಲ್ಲ

ವರ್ಣಬೇಧ ನೀತಿಯಿಂದ ಬಳಲುತ್ತಿದ್ದ ಆಫ್ರಿಕಾವನ್ನು(Africa) ರಕ್ಷಿಸಲು ಛಲಬಿಡದೇ ಹೋರಾಟ ಮಾಡಿದ ಇವರಿಗೆ 1984ನೇ ಸಾಲಿನ ನೊಬೆಲ್‌ ಶಾಂತಿ ಪ್ರಶಸ್ತಿ(Nobel Prize) ಲಭಿಸಿತ್ತು. ವರ್ಣಬೇಧ ನೀತಿಯಷ್ಟೇ ಅಲ್ಲದೇ ದೇಶದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿಯೂ ಇವರು ಹೋರಾಟ ನಡೆಸಿದ್ದರು. ಇವರು ಜೊಹಾನ್ಸ್‌ಬರ್ಗ್‌ನ ಮೊದಲ ಕಪ್ಪು ವರ್ಣೀಯ ಬಿಷಪ್‌ ಆಗಿ ನೇಮಕಗೊಂಡರು. ನಂತರ ಕೇಪ್‌ಟೌನ್‌ನ ಆರ್ಚ್‌ ಬಿಷಪ್‌ ಆಗಿ ಸೇವೆ ಸಲ್ಲಿಸಿದರು. 1990ರಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಇವರನ್ನು ಹಲವು ಬಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.