Asianet Suvarna News Asianet Suvarna News

ಮತೊರ್ವ ಪಾಕಿಸ್ತಾನಿ ಗಗನಸಖಿ ನಾಪತ್ತೆ: ಒಂದು ವರ್ಷದಲ್ಲಿ 9ನೇ ಪ್ರಕರಣ

ಪಾಕಿಸ್ತಾನ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ  ಪಾಕಿಸ್ತಾನಿ ಗಗನಸಖಿಯೊಬ್ಬರು ಕರ್ತವ್ಯದಲ್ಲಿದ್ದಾಗಲೇ ನಾಪತ್ತೆಯಾಗಿದ್ದಾರೆ. ಕಳೆದೊಂದು ವರ್ಷದಲ್ಲಿ ಇಂತಹ ಒಂಭತ್ತು ನಾಪತ್ತೆ ಪ್ರಕರಣಗಳು ನಡೆದಿವೆ.

Another Pakistani air hostess goes missing In canada 9th case in a year akb
Author
First Published Feb 29, 2024, 12:01 PM IST

ಕರಾಚಿ: ಪಾಕಿಸ್ತಾನ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ  ಪಾಕಿಸ್ತಾನಿ ಗಗನಸಖಿಯೊಬ್ಬರು ಕರ್ತವ್ಯದಲ್ಲಿದ್ದಾಗಲೇ ನಾಪತ್ತೆಯಾಗಿದ್ದಾರೆ. ಕಳೆದೊಂದು ವರ್ಷದಲ್ಲಿ ಇಂತಹ ಒಂಭತ್ತು ನಾಪತ್ತೆ ಪ್ರಕರಣಗಳು ನಡೆದಿವೆ. ನಾಪತ್ತೆಯಾದ ಗಗನಸಖಿಯನ್ನು ಮರ್ಯಾಮ್ ರಾಜಾ ಎಂದು ಗುರುತಿಸಲಾಗಿದೆ. ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್‌ನಲ್ಲಿ ವಿಮಾನ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುವುದಕ್ಕಾಗಿ ಕೆನಡಾಗೆ ಆಗಮಿಸಿದ ಆಕೆ ನಂತರ ನಾಪತ್ತೆಯಾಗಿದ್ದಾಳೆ.  ಕರ್ತವ್ಯದಲ್ಲಿದ್ದ ಗಗನಸಖಿ ದೂರವಾಣಿ ಕರೆಗಳಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಆಕೆ ಉಳಿದಿದ್ದ ಹೊಟೇಲ್ ರೂಮ್‌ಗೆ ತೆರಳಿ ಪರೀಕ್ಷಿಸಿದಾಗ ಅಲ್ಲಿ ಆಕೆಯ ಸಮವಸ್ತ್ರದ ಜೊತೆ ಚೀಟಿಯೊಂದು ಪತ್ತೆಯಾಗಿದ್ದು, ಅದರಲ್ಲಿ ಥ್ಯಾಂಕ್ಯು ಪಿಐಎ (Pakistan International Airlines) ಎಂದು ಬರೆದಿತ್ತು ಎಂದು ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿದೆ. 

ನಾಪತ್ತೆಯಾದ ಗಗನಸಖಿ ಮರ್ಯಾಮ್ ರಾಜಾ ಅವರು ಪಿಐಎ ವಿಮಾನ ಪಿಕೆ.782 ವಿಮಾನದಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್‌ನಿಂದ ಕೆನಡಾದ ಟೊರೆಂಟೋಗೆ ಸೋಮವಾರ ಫೆಬ್ರವರಿ 26 ಆಗಮಿಸಿದ್ದರು. ಅದೇ ವಿಮಾನದಲ್ಲಿ ಅವರು ಪಾಕಿಸ್ತಾನದ ಕರಾಚಿಗೆ ಮರಳಬೇಕಿತ್ತು. ಆದರೆ ಅವರು ಕರ್ತವ್ಯಕ್ಕೆ ಹಾಜರಾಗದೇ ಕೆನಡಾದಲ್ಲೇ ನಾಪತ್ತೆಯಾಗಿದ್ದಾರೆ. 

ಇನ್ನು ಈಕೆ ಕರ್ತವ್ಯಕ್ಕೆ ವಾಪಸ್ ಹಾಜರಾಗದ ಹಿನ್ನೆಲೆಯಲ್ಲಿ ಆಕೆ ಉಳಿದಿದ್ದ ಹೊಟೇಲ್‌ಗೆ ಹೋಗಿ ನೋಡಿದಾಗ ಆಕೆಯ ಸಮವಸ್ತ್ರದ ಜೊತೆ ಚೀಟಿಯೊಂದು ಪತ್ತೆಯಾಗಿದೆ. ಅದರಲ್ಲಿ ಆಕೆ ಪಾಕಿಸ್ತಾನ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ಗೆ ಧನ್ಯವಾದ ಸಲ್ಲಿಸಿದ್ದಾಳೆ. ಹೀಗಾಗಿ ಈಕೆ ಉದ್ದೇಶಪೂರ್ವಕವಾಗಿಯೇ ಭೂಗತವಾಗಿರುವುದು ಖಚಿತವಾಗಿದೆ. 

ಮಹಿಳೆ ವಿರುದ್ಧ ಸರ್‌ ತನ್‌ ಸೇ ಜುದಾ ಘೋಷಣೆ : ಮತಾಂಧರ ವಿರುದ್ಧ ಕುವೈತ್‌ ವಸ್ತ್ರ ವಿನ್ಯಾಸ ಸಂಸ್ಥೆ ತೀವ್ರ ಆಕ್ರೋಶ

15 ವರ್ಷಗಳ ಕಾಲ ರಾಷ್ಟ್ರೀಯ ವಿಮಾನಯಾನ ಸೇವೆಯಲ್ಲಿ ಕೆಲಸ ಮಾಡಿದ್ದ ಅನುಭವವಿದ್ದ ರಾಜಾ ಅವರನ್ನು ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ವಿಮಾನ ಸೇವೆಯಾದ ಇಸ್ಲಾಮಾಬಾದ್ ಹಾಗೂ ಟೊರೆಂಟೋ ನಡುವೆ ಕಾರ್ಯನಿರ್ವಹಿಸುವ ವಿಮಾನಕ್ಕೆ ನಿಯೋಜನೆ ಮಾಡಲಾಗಿತ್ತು.ಘಟನೆಗೆ ಸಂಬಂಧಿಸಿದಂತೆ ಪಿಐಎ ವಕ್ತಾರರು  ಮಾತನಾಡಿದ್ದು, ಕೆನಡಾಗೆ ಆಗಮಿಸಿದ ನಂತರ ಗಗನಸಖಿಯರು ನಾಪತ್ತೆಯಾಗುವ 2ನೇ ಪ್ರಕರಣ ಇದಾಗಿದೆ ಎಂದು ಹೇಳಿದ್ದಾರೆ.

ಕೆನಡಾ ಕಾನೂನಿನ ಸಡಿಲತೆ ಈ ಘಟನೆಗೆ ಕಾರಣ, ಕೆನಡಾಗೆ ಅಕ್ರಮವಾಗಿ ಪ್ರವೇಶಿಸಿದ ನಂತರ ಅಲ್ಲಿ ಅಶ್ರಯ ಕೇಳುವುದಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ ಇದಕ್ಕೆ ಅಲ್ಲಿ ಅನುಮತಿ ಇದೆ ಇದೇ ಕಾರಣಕ್ಕೆ ಕೆನಡಾಗೆ ಆಗಮಿಸಿದ ಜನ ಮರಳಿ ತಮ್ಮ ದೇಶಕ್ಕೆ ಹೋಗಲು ಬಯಸುತ್ತಿಲ್ಲ ಎಂದು ಹೇಳಿದ್ದಾರೆ. ಕಳೆದ ತಿಂಗಳು ಕೂಡ ಇದೇ ರೀತಿಯ ಘಟನೆ ನಡೆದಿತ್ತು. ವಿಮಾನದಲ್ಲಿ ಕರ್ತವ್ಯಕ್ಕೆ ಆಗಮಿಸಿದ ಗಗನಸಖಿ ಕೆನಡಾ ತಲುಪಿದ ನಂತರ ನಾಪತ್ತೆಯಾಗಿದ್ದರು. ಕಳೆದ ವರ್ಷ ಇಂತಹ ಒಟ್ಟು ಏಳು ಪ್ರಕರಣಗಳು ನಡೆದಿವೆ ಎಂದು ಪಾಕಿಸ್ತಾನ ವಿಮಾನಯಾನ ಸಂಸ್ಥೆ ಹೇಳಿದೆ. 

ಕುರ್ತಾದ ಮೇಲಿದ್ದ ಅರೇಬಿಕ್ ಬರಹ ಕುರಾನ್ ಎಂದು ತಪ್ಪಾಗಿ ತಿಳಿದು ಮಹಿಳೆ ಮೇಲೆ ಹಲ್ಲೆಗೆ ಮುಂದಾದ ಗುಂಪು

ಕೆಲವು ವರ್ಷಗಳ ಹಿಂದೆ ಕರ್ತವ್ಯದಲ್ಲಿದ್ದಾಗ ಪರಾರಿಯಾಗಿದ್ದ ಪಾಕಿಸ್ತಾನದ ಸಿಬ್ಬಂದಿಯೊಬ್ಬರು ಕೆನಡಾದಲ್ಲಿ ನೆಲೆಸಿದ್ದಾರೆ ಮತ್ತು ಅವರು ಕೆನಡಾದಲ್ಲಿ ಆಶ್ರಯ ಪಡೆಯಲು ಪರಿಗಣಿಸುವ ಇತರ ಸಿಬ್ಬಂದಿ ಸದಸ್ಯರಿಗೆ ಸಲಹೆ ನೀಡುತ್ತಾರೆ ಎಂದು ಏರ್‌ಲೈನ್‌ನ ವಕ್ತಾರರು ಆರೋಪಿಸಿದ್ದಾರೆ. ಹೀಗಾಗಿ ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ಪಿಐಎ ಆಡಳಿತವೂ ಕೆನಡಾದ ಅಧಿಕಾರಿಗಳೊಂದಿಗೆ ಚರ್ಚಿಸುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ. 

ಪಾಕಿಸ್ತಾನದಲ್ಲಿ ಆಂತರಿಕ ಅಸ್ಥಿರತೆ, ಹಾಗೂ ಹಣದುಬ್ಬರದಿಂದಾಗಿ ಪ್ರತಿಯೊಬ್ಬರಿಗೂ ಅಲ್ಲಿ ಜೀವನ ನಡೆಸುವುದು ಬಹಳ ದುರ್ಬರವೆನಿಸಿದೆ. ಒಂದು ಹೊತ್ತಿನ ಊಟಕ್ಕೂ ಅಲ್ಲಿ ತಾತ್ವಾರವಿದ್ದು, ಇದರಿಂದಾಗಿ ಸಾಕಷ್ಟು ಜನ ಅಲ್ಲಿಂದ ಪಾಶ್ಚಾತ್ಯ ರಾಷ್ಟ್ರಗಳಿಗೆ ವಲಸೆ ಹೋಗುತ್ತಿದ್ದಾರೆ. ಆದರೆ ಈ ಪ್ರಕರಣದಲ್ಲಿ ಕರ್ತವ್ಯ ನಿಮಿತ್ತ ವಿಮಾನದಲ್ಲಿ ಟೊರೆಂಟೋ ತಲುಪಿದ ಗಗನಸಖಿ ನಂತರ ನಾಪತ್ತೆಯಾಗಿದ್ದಾರೆ. 

ಇಡೀ ಜೀವಮಾನದ ಉಳಿಕೆಯನ್ನೆಲ್ಲಾ ಕಳೆದುಕೊಂಡ ಮಹಿಳೆ: ಏನಿದು ಕ್ರಿಫ್ಟೊಕರೆನ್ಸಿ ರೋಮ್ಯಾನ್ಸ್ ಹಗರಣ?

Follow Us:
Download App:
  • android
  • ios