ಕ್ಲಾಸ್‌ನಲ್ಲಿ ಮೊಬೈಲ್ ಬಳಸುತ್ತಿದ್ದ ವಿದ್ಯಾರ್ಥಿಯೊಬ್ಬಳು ಶಿಕ್ಷಕರ ಕೈಗೆ ಸಿಕ್ಕಿಬಿದ್ದಿದ್ದು, ಈ ವೇಳೆ ಶಿಕ್ಷಕರು ಆಕೆಯ ಮೊಬೈಲ್ ವಶಕ್ಕೆ ಪಡೆದಿದ್ದಕ್ಕೆ ಶಿಕ್ಷಕರ ಮೇಲೆಯೇ ಆಕೆ ಪೆಪ್ಪರ್ ಸ್ಪೇ ಮಾಡಿದ ಆಘಾತಕಾರಿ ಘಟನೆ ನಡೆದಿದೆ.
ನ್ಯೂಯಾರ್ಕ್: ಅಬ್ಬಬ್ಬಾ ಎಂತೆಂಥಾ ವಿದ್ಯಾರ್ಥಿಗಳಿರ್ತಾರೆ ನೋಡಿ, ಕ್ಲಾಸ್‌ನಲ್ಲಿ ಮೊಬೈಲ್ ಬಳಸುತ್ತಿದ್ದ ವಿದ್ಯಾರ್ಥಿಯೊಬ್ಬಳು ಶಿಕ್ಷಕರ ಕೈಗೆ ಸಿಕ್ಕಿಬಿದ್ದಿದ್ದು, ಈ ವೇಳೆ ಶಿಕ್ಷಕರು ಆಕೆಯ ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಇದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿನಿ ಪಾಠ ಮಾಡಿದ ಗುರು ಎಂಬುವುದನ್ನು ನೋಡದೇ ಟೀಚರ್ ಮುಖಕ್ಕೆ ಖಾರದ ಪುಡಿ ಸ್ಪ್ರೇ ಮಾಡಿದ್ದು, ಇದರಿಂದ ಶಿಕ್ಷಕ ಕಣ್ಣು ಮುಖ ಉರಿ ತಡೆಯಲಾಗದೇ ಜೋರಾಗಿ ಬೊಬ್ಬೆ ಹೊಡೆದಿದ್ದಾರೆ. ಅಂದಹಾಗೆ ಈ ಘಟನೆ ನಡೆದಿರುವುದು ಅಮೆರಿಕಾದ ಶಾಲೆಯೊಂದರಲ್ಲಿ.
ನ್ಯಾಶ್ವಿಲ್ಲೆ ಸಮೀಪದ ಟೆನ್ನೆಸ್ಸೀ ಎಂಬಲ್ಲಿ ಇರುವ ಅಂಟಿಯೋಚ್ ಹೈ ಎಂಬಲ್ಲಿ ಈ ಘಟನೆ ನಡೆದಿದೆ. ಶಾಲೆಯಲ್ಲಿ ಶಿಕ್ಷಕರೊಬ್ಬರು ಪಾಠ ಮಾಡುತ್ತಿದ್ದು, ಈ ವೇಳೆ ವಿದ್ಯಾರ್ಥಿನಿಯೊಬ್ಬಳು ಪಾಠದ ಬಗ್ಗೆ ಗಮನ ಕೊಡದೇ ಮೊಬೈಲ್ ಒತ್ತುತ್ತಾ ಕುಳಿತಿರುವುದು ಕಂಡು ಬಂದಿದೆ. ಇದನ್ನು ನೋಡಿದ ಶಿಕ್ಷಕರು, ವಿದ್ಯಾರ್ಥಿನಿ ಬಳಿ ಬಂದು ಆಕೆಯ ಮೊಬೈಲ್ ಕಿತ್ತುಕೊಂಡು ಹೋಗಿದ್ದಾರೆ. ಇದ್ದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿನಿ ಪಾಠ ಮಾಡಿದ ಶಿಕ್ಷಕರು ಎಂಬುವುದನ್ನು ಕೂಡ ನೋಡದೇ ಶಿಕ್ಷಕನ ಮೇಲೆ ಪೆಪ್ಪರ್ ಸ್ಪ್ರೇ ಮಾಡಿದ್ದಾರೆ. ಇದರಿಂದ ಶಿಕ್ಷಕ ಉರಿ ಹಾಗೂ ಖಾರ ತಡೆದುಕೊಳ್ಳಲಾಗದೇ ತರಗತಿಯಿಂದ ಬೊಬ್ಬೆ ಹೊಡೆಯುತ್ತಾ ಓಡಿ ಹೋಗಿದ್ದಾನೆ. ತರಗತಿಯಲ್ಲೇ ಇದ್ದ ಬೇರೆ ವಿದ್ಯಾರ್ಥಿಯೊಬ್ಬ ತನ್ನ ಮೊಬೈಲ್‌ನಲ್ಲಿ ಈ ದೃಶ್ಯವನ್ನು ಚಿತ್ರೀಕರಿಸಿದ್ದಾನೆ.
ಮೊದಲಿಗೆ ಶಿಕ್ಷಕನ ಕೈಯಿಂದ ಮೊಬೈಲ್ (Smart Phone)ಕಿತ್ತುಕೊಳ್ಳಲು ಯತ್ನಿಸಿದ ವಿದ್ಯಾರ್ಥಿನಿ ಅದು ಸಾಧ್ಯವಾಗದೇ ಇದ್ದಾಗ ಶಿಕ್ಷಕನ ಮುಖಕ್ಕೆ ಪೆಪ್ಪರ್ ಸ್ಪೇ ಮಾಡಿದ್ದಾಳೆ. ಇದರಿಂದ ಶಿಕ್ಷಕ ಖಾರ ಹಾಗೂ ಉರಿ ತಡೆದುಕೊಳ್ಳಲಾಗದೇ ನೆಲದ ಮೇಲೆ ಬಿದ್ದು ಒದ್ದಾಡಿದ್ದಲ್ಲದೇ ಜೋರಾಗಿ ಬೊಬ್ಬೆ ಹಾಕಿದ್ದಾನೆ. ಅಲ್ಲದೇ ಈ ವೇಳೆ ಶಿಕ್ಷಕನ ಬೊಬ್ಬೆ ಕೇಳಿ ಮತ್ತೊಬ್ಬ ಶಿಕ್ಷಕ ಅಲ್ಲಿಗೆ ಬಂದಿದ್ದು, ವಿದ್ಯಾರ್ಥಿನಿಯನ್ನು ಸುಮ್ಮನಿರುವಂತೆ ಹೇಳಿದ್ದಾನೆ. ಈ ವೇಳೆ ಆಕೆ ನನಗೆ ನನ್ನ ಫೋನ್ ವಾಪಸ್ ಪಡೆಯಬೇಕು ಹಾಗೂ ನನಗೆ ನನ್ನ ಫೋನ್ ಬೇಕು ಎಂದು ಜೋರಾಗಿ ಬೊಬ್ಬೆ ಹೊಡೆದಿದ್ದಾಳೆ.
Women Safety: ಬ್ಯಾಗಲ್ಲಿ ಪೆಪ್ಪರ್ ಸ್ಪೇ, ಗನ್ ಏನಾದರೂ ಇಟ್ಕೊಂಡಿದ್ದೀರಾ?
ಅಲ್ಲದೇ ಈ ವೇಳೆ ಹತ್ತಿರದ ತರಗತಿಯ ಶಿಕ್ಷಕರು (Teacher) ಕೂಡ ಅಲ್ಲಿಗೆ ಬಂದಿದ್ದು, ಈ ವೇಳೆ ಶಿಕ್ಷಕ ಮೆಣಸಿನ (Mirchi Powder) ಹುಡಿಯ ಖಾರ ನೆತ್ತಿಗೇರಿ ಕೆಮ್ಮುತ್ತಿರುವುದು ಕಂಡು ಬಂದಿದೆ. ಅಲ್ಲದೇ ಇನ್ನು ಕೆಲವರು ಅಲ್ಲಿಗೆ ಬಂದಿದ್ದು, ಪರಿಸ್ಥಿತಿ ಹತೋಟಿಗೆ ತೆಗೆದುಕೊಳ್ಳಲು ಯತ್ನಿಸಿದ್ದಾರೆ. ಫೋನ್ ವಿಚಾರಕ್ಕೆ ಈ ರೀತಿ ಮಾಡಿದ್ದೇ ಇದೊಂದು ಹುಚ್ಚುತನ ಎಂದು ಒಬ್ಬರು ಉದ್ಘರಿಸುತ್ತಿರುವುದು ವಿಡಿಯೋದ ಹಿನ್ನೆಲೆಯಲ್ಲಿ ಕೇಳಿಸುತ್ತಿದೆ. ವೀಡಿಯೊವನ್ನು ಹಂಚಿಕೊಂಡಿರುವ ರೆಡ್ಡಿಟ್ ಬಳಕೆದಾರ @Lazy_Mouse3803 ಅವರ ಪ್ರಕಾರ, ಶಿಕ್ಷಕನಿಂದ ಫೋನ್ ಕಿತ್ತುಕೊಂಡ ವಿದ್ಯಾರ್ಥಿನಿ ಆ ಫೋನ್ ಅನ್ನು ಶಾಲೆಯ ಪಠ್ಯಕ್ಕೆ ಸಂಬಂಧಿಸಿದಂತೆ ಉತ್ತರವನ್ನು ಗೂಗಲ್ ಮಾಡಲು ಬಳಸುತ್ತಿದ್ದಳು ಎಂದು ತಿಳಿದು ಬಂದಿದೆ.
ಬೆಂಗಳೂರು ಕರಗ ಮಹೋತ್ಸವಕ್ಕೆ ಕೆಮಿಕಲ್ ಮಿಶ್ರಿತ ಹೂವು ಪೂರೈಕೆ: ಕರಗ ಹೊತ್ತ ಜ್ಞಾನೇಂದ್ರ ದೇಹದಲ್ಲಿ ಸುಟ್ಟ ಗಾಯ
ಇತ್ತ ಹೀಗೆ ವಿದ್ಯಾರ್ಥಿನಿಯಿಂದ ಪೆಪ್ಪರ್ ಸ್ಪೇಗೆ ಒಳಗಾದ ಶಿಕ್ಷಕ ಈ ಹಿಂದೆಯೂ ವಿದ್ಯಾರ್ಥಿಗಳಿಂದ ಏಟು ತಿಂದಿದ್ದ ಎಂದು ರೆಡಿಟ್ ಯೂಸರ್ ಒಬ್ಬರು ಹೇಳಿದ್ದಾರೆ. ವಿದ್ಯಾರ್ಥಿಯೊಬ್ಬ ಮೊಬೈಲ್ ಬಳಸಿ ಪರೀಕ್ಷೆಯಲ್ಲಿ ಕಾಪಿ ಮಾಡುತ್ತಾ ವಂಚನೆ (cheating) ಮಾಡುತ್ತಿದ್ದು, ಇದೇ ಕಾರಣಕ್ಕೆ ಶಿಕ್ಷಕ ಮೊಬೈಲ್ ಫೋನ್ ಕಸಿದುಕೊಂಡಿದ್ದ. ಆದರೆ ಆ ವಿದ್ಯಾರ್ಥಿ ಶಿಕ್ಷಕನ ಮುಖಕ್ಕೆ ಗುದ್ದಿ ಮೊಬೈಲ್ ಕಿತ್ತುಕೊಂಡು ಹೋಗಿದ್ದ ಎಂದು ರೆಡಿಟ್ ಯೂಸರ್ ಒಬ್ಬರು ಹೇಳಿದ್ದಾರೆ. ಅದೇನೆ ಇರಲಿ ಪಾಠ ಹೇಳಿಕೊಡುವ ಬದುಕಿನ ದಾರಿ ತೋರಿಸುವ ಶಿಕ್ಷಕನನ್ನು ದೇವರು ಎಂದು ಪೂಜಿಸುವ ನಾಡು ನಮ್ಮದಾಗಿದೆ. ಆದರೆ ಅಲ್ಲಿ ಇಂತಹ ಶಿಕ್ಷಕರಿಗೇ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದು, ದೂರಾದೃಷ್ಟವೇ ಸರಿ.
