ವಿಮಾನ ಅಪಘಾತದ ಬಳಿಕ ಬದುಕುಳಿದು ಅಮೆಜಾನ್‌ನಂತಹ ದಟ್ಟ ಕಾಡಿನಲ್ಲಿ 40 ದಿನಗಳನ್ನು ಕಳೆದ ಆದಿವಾಸಿ ಸಮುದಾಯದ ಮಕ್ಕಳ ಬಗ್ಗೆ ಜಗತ್ತಿನಾದ್ಯಂತ ಪ್ರಶಂಸೆ ವ್ಯಕ್ತವಾಗುತ್ತಿದೆ. ಅನಾಹುತದ ಬಳಿಕ ಮಕ್ಕಳ ಅಮ್ಮ 4 ದಿನಗಳ ಕಾಲ ಬದುಕಿದ್ದು, ಸಾಯುವ ಮೊದಲು ಮಕ್ಕಳಿಗೆ ಹೇಳಿದ್ದೇನು ಇಲ್ಲಿದೆ ಓದಿ

ವಿಮಾನ ಅಪಘಾತದ ಬಳಿಕ ಬದುಕುಳಿದು ಅಮೆಜಾನ್‌ನಂತಹ ದಟ್ಟ ಕಾಡಿನಲ್ಲಿ 40 ದಿನಗಳನ್ನು ಕಳೆದ ಆದಿವಾಸಿ ಸಮುದಾಯದ ಮಕ್ಕಳ ಬಗ್ಗೆ ಜಗತ್ತಿನಾದ್ಯಂತ ಪ್ರಶಂಸೆ ವ್ಯಕ್ತವಾಗುತ್ತಿದೆ. ವಿಮಾನ ಅಪಘಾತದ ನಂತರ ತಾಯಿಯನ್ನು ಕಳೆದುಕೊಂಡಿದ್ದ ಈ ಮಕ್ಕಳಲ್ಲಿ ಒಂದು ವರ್ಷದ ಮಗುವೂ ಕೂಡ ಇದ್ದು ತಾಯಿ ಹಾಲು ಕುಡಿಯುತ್ತಿದ್ದ ಆ ಮಗುವನ್ನು ಇತರ ಮೂವರು ಒಡಹುಟ್ಟಿದವರು 40 ದಿನಗಳ ಕಾಲ ಬದುಕಿಸಿಕೊಂಡಿದ್ದು, ಯಾವುದೇ ಪವಾಡಕ್ಕಿಂತ ಕಡಿಮೆ ಏನಲ್ಲ. 

ರಕ್ಷಣಾ ತಂಡದ ಮುಂದೆ ಅಮ್ಮ ಸತ್ತೊದಳು ಎಂದ ಮಕ್ಕಳು

ಅಪಘಾತದ ಬಳಿಕ ಈ ಮಕ್ಕಳ ಶೋಧಕ್ಕಾಗಿ ಬಂದ ರಕ್ಷಣಾ ತಂಡದ ಮುಂದೆ ಮಕ್ಕಳು ಮೊದಲು ಹೇಳಿದ್ದೆ, ನಮ್ಮಮ್ಮ ಸತ್ತೋದಳು, ನಮಗೆ ತುಂಬಾ ಹಸಿವಾಗುತ್ತಿದೆ ಎಂಬುದು ಎಂದು ರಕ್ಷಣಾ ತಂಡದ ಭಾಗವಾಗಿದ್ದ ಸದಸ್ಯರೊಬ್ಬರು ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಒಂದು ತಿಂಗಳಿಗಿಂತ ಹೆಚ್ಚು ಕಾಲ ಗೊತ್ತು ಗುರಿ ಇಲ್ಲದೇ ಹಾವು,ಚಿರತೆಗಳಿರುವಂತಹ ಅಪಾಯಕಾರಿ ಕಾಡಿನಲ್ಲಿ ಅಲೆದಾಡಿದ ನಂತರ ಈ 13 ವರ್ಷದ, 9 ಹಾಗೂ 5 ವರ್ಷದ ಹಾಗೂ ಒಂದು ವರ್ಷದ ಹುಯಿಟೊಟೊ ಆದಿವಾಸಿ ಸಮುದಾಯದ ಮಕ್ಕಳನ್ನು ರಕ್ಷಣೆ ಮಾಡಲಾಗಿತ್ತು. ಆಮೆಜಾನ್ ಕಾಡಿನಿಂದ ವಿಮಾನದ ಮೂಲಕ ರಕ್ಷಿಸಿ ಕರೆತಂದ ಈ ಮಕ್ಕಳು ರಾಜಧಾನಿ ಬೊಗೋಟಾದ ಮಿಲಿಟರಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. 

40 ದಿನ ಬೀಜ, ಬೇರು, ಸಸ್ಯ ತಿಂದು ಬದು​ಕಿ​ದ್ದ ಕಾಡಿನ ಮಕ್ಕಳು: ಅಮೆ​ಜಾನ್‌ ಅರ​ಣ್ಯ​ದಲ್ಲಿ ನಾಪತ್ತೆಯಾಗಿದ್ದ ನಾಲ್ವರ ರೋಚಕ ಕತೆ

ಸ್ಥಳೀಯ ಹುಯಿಟೊಟೊ ಸಮುದಾಯದ ಸದಸ್ಯರು ಆಗಿರುವ, ಮಕ್ಕಳ ರಕ್ಷಣಾ ತಂಡದ ಭಾಗವಾಗಿದ್ದ ಸದಸ್ಯರನ್ನು ಅಲ್ಲಿನ ಆರ್‌ಟಿವಿಸಿ ಚಾನೆಲ್ ಸಂದರ್ಶನ ನಡೆಸಿದ್ದು, ಮಕ್ಕಳು ರಕ್ಷಣಾ ತಂಡಕ್ಕೆ ಸಿಕ್ಕ ರೋಚಕ ಕ್ಷಣಗಳನ್ನು ಅವರು ಎಳೆ ಎಳೆಯಾಗಿ ಚಾನೆಲ್ ಮುಂದೆ ಬಿಟ್ಟಿದ್ದರು.

ಈ ಅಪಘಾತದಲ್ಲಿ ಬದುಕುಳಿದ ಹಿರಿಯ ಪುತ್ರಿ ಲೆಸ್ಲಿ ತನ್ನ ತೋಳಲ್ಲಿ ಒಂದು ವರ್ಷದ ತನ್ನ ಪುಟ್ಟ ತಂಗಿಯನ್ನು ಹಿಡಿದುಕೊಂಡು ನನಗೆ ತುಂಬಾ ಹಸಿವಾಗುತ್ತಿದೆ ಎಂದಿದ್ದಳು. ನಾವು ಹೋದಾಗ ಇಬ್ಬರು ಹುಡುಗರು ನೆಲದಲ್ಲಿ ಮಲಗಿದ್ದರು. ಅದರಲ್ಲಿ ನಮ್ಮನ್ನು ನೋಡಿದ ಕೂಡಲೇ ಎದ್ದ ಬಾಲಕ ನಮ್ಮಮ್ಮ ಹೊರಟೋದಳು ಎಂದು ಹೇಳಿದ. ನಾವು ಅವರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದೆವು. ನಾವು ನಿಮ್ಮ ಸ್ನೇಹಿತರಾಗಿದ್ದೇವೆ, ನಮ್ಮನ್ನು ನಿಮ್ಮ ಕುಟುಂಬ, ತಂದೆ, ಚಿಕ್ಕಪ್ಪ ಕಳುಹಿಸಿದ್ದಾರೆ ನಾವು ನಿಮ್ಮ ಕುಟುಂಬವಾಗಿದ್ದೇವೆ ಎಂದು ನಾವು ತಕ್ಷಣ ಮಕ್ಕಳಿಗೆ ಸಕಾರಾತ್ಮಕ ಮಾತುಗಳನ್ನು ಹೇಳಿದೆವು ರಕ್ಷಣಾ ತಂಡದ ಸಿಬ್ಬಂದಿಯಲ್ಲಿ ಒಬ್ಬರಾದ ನಿಕೋಲಸ್ ಒರ್ಡೊನೆಜ್ ಗೋಮ್ಸ್ ಹೇಳಿದರು.

ಈ ನಾಲ್ವರು ಮಕ್ಕಳು ಮೇ. 1 ರಂದು ಅವರು ಪ್ರಯಾಣಿಸುತ್ತಿದ್ದ ಪುಟ್ಟ ವಿಮಾನ ಅಮೇಜಾನ್‌ನ ಕಾಡಿನ ಮಧ್ಯೆ ಪತನವಾದ ನಂತರ ಕಾಣೆಯಾಗಿದ್ದರು. ಸ್ಯಾನ್ ಜೋಸ್ ಡೆಲ್ ಗುವಿಯಾರ್ ಪಟ್ಟಣಕ್ಕೆ 350 ಕಿಲೋಮೀಟರ್ (217-ಮೈಲಿ) ಪ್ರಯಾಣದ ಹಾದಿಯಲ್ಲಿದ್ದಾಗ, ಅರರಾಕುರಾ ಎಂದು ಕರೆಯಲ್ಪಡುವ ದಟ್ಟ ಅಮೆಜಾನ್ ಪ್ರದೇಶದಿಂದ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪೈಲಟ್ ಎಂಜಿನ್ ಸಮಸ್ಯೆ ಬಗ್ಗೆ ವರದಿ ಮಾಡಿದ್ದರು. ಇದಾದ ಸ್ವಲ್ಪ ಸಮಯದಲ್ಲಿ ವಿಮಾನ ಅಪಘಾತವಾಗಿತ್ತು. ವಿಮಾನದ ಪೈಲಟ್, ಮಕ್ಕಳ ತಾಯಿ ಮತ್ತು ಇನ್ನೊಬ್ಬ ವಯಸ್ಕ ವ್ಯಕ್ತಿಯ ಮೃತದೇಹಗಳು ಅಪಘಾತದ ಸ್ಥಳದಲ್ಲಿ ಕಂಡುಬಂದಿತ್ತು. ಅಲ್ಲೇ ವಿಮಾನವು ಮರಗಳ ಮೇಲೆ ಬಹುತೇಕ ಲಂಬವಾಗಿ ನಿಂತಿತ್ತು. 

Amazing..ಅಮೆಜಾನ್​ ಕಾಡಿಗೇ ಸವಾಲೆಸೆದು ಬದುಕಿ ಬಂದ ಮಕ್ಕಳು..!

4 ದಿನಗಳ ಕಾಲ ಬದುಕಿದ್ದ ಅಮ್ಮ

ಈ ನಾಲ್ವರು ಬದುಕಿ ಬಂದ ಅದೃಷ್ಟವಂತ ಮಕ್ಕಳ ತಂದೆ ಮ್ಯಾನುಯೆಲ್ ಮಿಲ್ಲರ್ ರಾನೋಕ್ (Manuel Miller Ranoque) ಅವರು ತನ್ನ ಪತ್ನಿ 4 ದಿನಗಳ ಕಾಲ ಬದುಕ್ಕಿದ್ದಳು ಎಂಬುದ್ನು ಹಿರಿಯ ಮಗಳು ಲೆಸ್ಲಿ ಹೇಳಿದ್ದಾಳೆ ಎಂದರು. ಮಕ್ಕಳಿದ್ದ ಆಸ್ಪತ್ರೆ ಮುಂದೆ ಮಾತನಾಡಿದ ಅವರು ಮೇ.1 ರಂದು ನಡೆದ ದುರಂತದಲ್ಲಿ ನನ್ನ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಳು. ಆದರೂ ಆಕೆ 4 ದಿನಗಳ ಕಾಲ ಬದುಕಿಯೇ ಇದ್ದಳು ಎಂದು ಹೇಳಿದ್ದಾರೆ. 

ಸಾಯುವ ಮೊದಲು ಮಕ್ಕಳಿಗೆ ಹೇಳಿದ್ದೇನು?

ಸಾಯುವ ಮೊದಲು ಆ ತಾಯಿ ಮ್ಯಾಗ್ಡಲೀನಾ ಮುಕುಟುಯ್ (Magdalena Mucutuy) ಮಕ್ಕಳೇ ನೀವು ಇಲ್ಲಿಂದ ಹೊರಟು ಹೋಗಬೇಕು. ನೀವು ನಿಮ್ಮ ತಂದೆಯನ್ನು ನೋಡಲಿದ್ದೀರಿ, ಭೇಟಿಯಾಗುತ್ತೀರಿ ಹಾಗೂ ನಾನು ನಿಮ್ಮನ್ನು ಹೇಗೆ ಪ್ರೀತಿ ಮಾಡುತ್ತೇನೋ ಅದೇ ರೀತಿ ನಿಮ್ಮ ತಂದೆ ನಿಮ್ಮನ್ನು ಪ್ರೀತಿ ಮಾಡಲಿದ್ದಾರೆ ಎಂದು ಮಕ್ಕಳಿಗೆ ಹೇಳಿ ಆ ತಾಯಿ ಪ್ರಾಣ ಬಿಟ್ಟಿದ್ದಾಳೆ.

ಮಕ್ಕಳ ತಾಯಿ ತಾಯಿ ಮ್ಯಾಗ್ಡಲೀನಾ ಮುಕುಟುಯ್ ಸ್ಥಳೀಯ ಬುಡಕಟ್ಟು ಸಮುದಾಯದ ನಾಯಕಿಯೂ ಆಗಿದ್ದರು. ಕೊಲಂಬಿಯಾದ ರಕ್ಷಣಾ ಪಡೆಗಳ ಹುಡುಕಾಟದ ಜೊತೆ ಕಾಡಿನ ಬಗ್ಗೆ ಮಕ್ಕಳಲ್ಲಿದ್ದ ಸಾಮಾನ್ಯ ಜ್ಞಾನದಿಂದಾಗಿ ಮಕ್ಕಳು ಹಾವುಗಳು ಹಾಗೂ ಜಾಗ್ವಾರ್‌ಗಳ ಭಯವಿರುವ ಆ ನಿಗೂಢ ಕಾಡಿನಲ್ಲಿ ಜೀವಂತವಾಗಿ 40 ದಿನ ಕಳೆದು ಬಂದಿದ್ದು, ಯಾವ ಸಾಹಸಕ್ಕೂ ಕಡಿಮೆ ಏನಲ್ಲಾ.