ಆಪರೇಶನ್ ಸಿಂದೂರ ದಾಳಿಗೆ ತತ್ತರಿಸಿದ ಪಾಕಿಸ್ತಾನಕ್ಕೆ ಮೇ.9 ನಿರ್ಣಾಯಕ, ಡೂ ಆರ್ ಡೈ
ಆಪರೇಶನ್ ಸಿಂದೂರಕ್ಕೆ ಪಾಕಿಸ್ತಾನ ತತ್ತರಿಸಿದೆ. ಇದೀಗ ಪ್ರತಿ ದಾಳಿ ನಡೆಸಲು ಹೋಗಿ ಭಾರತದ ತಿರುಗೇಟಿಗೆ ಮೆಲೇಳಲು ಸಾಧ್ಯವಾಗದೆ ಕುಳಿತಿದೆ. ಇದರ ಬೆನ್ನಲ್ಲೇ ಮೇ.9 ಪಾಕಿಸ್ತಾನಕ್ಕೆ ನಿರ್ಣಾಯಕ. ಮುಂದಿನ ದಿನಗಳಲ್ಲಿ ಪಾಕಿಸ್ತಾನ ಉಸಿರಾಡಲು ಮೇ.9 ಕೊನೆಯ ಅವಕಾಶ.

ಆಪರೇಶನ್ ಸಿಂದೂರ್ ದಾಳಿಗೆ ಪಾಕಿಸ್ತಾನ ನಲುಗಿದೆ. 9 ಕಡೆಗಳಲ್ಲಿ ಭಾರತ ದಾಳಿ ಮಾಡಿದೆ. 100ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ. ಇದಕ್ಕೆ ಪ್ರತೀಕಾರವಾಗಿ ಭಾರತದ ಮೇಲೆ ಗಡಿಯಲ್ಲಿ ಪಾಕಿಸ್ತಾನ ದಾಳಿ ಮಾಡುತ್ತಿದೆ. ನಾಗರೀಕರ ಮೇಲೆ ದಾಳಿ ಮಾಡಿ ಸಾವು ನೋವು ಹೆಚ್ಚಿಸಲು ಮುಂದಾಗಿದೆ. ಆದರೆ ಭಾರತದ ಡ್ರೋನ್ ದಾಳಿಗೆ ಪಾಕಿಸ್ತಾನದ ಲಾಹೋರ್‌ನಲ್ಲಿರುವ ಏರ್ ಡಿಫೆನ್ಸ್ ಸಿಸ್ಟಮ್ ಧ್ವಂಸಗೊಂಡಿದೆ. ಪಾಕಿಸ್ತಾನ ಅರ್ಧ ಮಿಲಿಟರಿ ಪಡೆಯ ಏರ್ ಡಿಫೆನ್ಸ್ ಸ್ಥಗಿತಗೊಂಡಿದೆ. ಕಂಗಾಲಾಗಿರುವ ಪಾಕಿಸ್ತಾನಕ್ಕೆ ಇದೀಗ ಮೇ.09 ನಿರ್ಣಾಯಕ ದಿನವಾಗಿದೆ. ಈ ದಿನ ಪಾಕಿಸ್ತಾನದ ಹಣೆ ಬರಹ ನಿರ್ಧಾರವಾಗಲಿದೆ.
ಒಂದೆಡೆ ಭಾರತದ ಪ್ರತಿದಾಳಿಯಿಂದ ಪಾಕಿಸ್ತಾನ ಹೈರಾಣಾಗಿದ್ದರೆ, ಮತ್ತೊಂದೆಡ ಮೊದಲೇ ಪಾಕಿಸ್ತಾನ ಆರ್ಥಿಕತೆ ಮೊದಲೇ ಹಳ್ಳ ಹಿಡಿದಿದೆ. ಇದೀಗ ಮಿಲಿಟರಿ ದಾಳಿಗೆ ಭಾರಿ ಬಂಡವಾಳ ಹಾಕಲಾಗುತ್ತಿದೆ. ಹೀಗಾಗಿ ಪಾಕಿಸ್ತಾನ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಮತ್ತೆ ಸಾಲ ಕೇಳಿದೆ. 1.3 ಬಿಲಿಯನ್ ಅಮೆರಿಕನ್ ಡಾಲರ್ ಸಾಲವನ್ನು ಪಾಕಿಸ್ತಾನ ಕೇಳಿದೆ. ಆದರೆ ಭಾರತದ ಎಚ್ಚರಿಕೆಯಿಂದ ಇದೀಗ ಮೇ.9 ನಿರ್ಣಾಯಕವಾಗಿದೆ.
ಪಾಕಿಸ್ತಾನ ಮತ್ತೆ ಹಣಕಾಸು ನಿಧಿಯಿಂದ ಹಣ ಸಾಲ ಕೇಳಿದೆ. ಆದರೆ ಭಾರತ ಈಗಾಗಲೇ ಐಎಂಎಫ್‌ಗೆ ಮಹತ್ವದ ಸೂಚನೆ ನೀಡಿದೆ. ಪಾಕಿಸ್ತಾನ ಆರ್ಥಿಕತೆ, ಆಹಾರ, ಔಷಧಿಗಳಿಗೆ ಉಪಯೋಗಿಸಲು ಸಾಲ ಕೇಳಿ ಈ ಹಣವನ್ನು ಭಾರತದ ವಿರುದ್ಧ ಉಗ್ರರ ನುಸುಳಿಸಲು, ಭಾರತದಲ್ಲಿ ವಿದ್ವಂಸಕ ಕೃತ್ಯ ಎಸಗಲು, ಮಿಲಿಟರಿ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದೆ. ಹೀಗಾಗಿ ಪಾಕಿಸ್ತಾನಕ್ಕೆ ಸಾಲ ನೀಡಬಾರದು ಎಂದು ಭಾರತ ಮನವಿ ಮಾಡಿದೆ.
ಭಾರತದ ದಾಖಲೆ ಸಮೇತ ಮನವಿ ಮಾಡಿದೆ. ಇದರ ಪರಿಣಾಮ ಇದೀಗ ಐಎಂಎಫ್ ಅಧಿಕಾರಿಗಳು ಮೇ 9 ರಂದು ಪಾಕಿಸ್ತಾನಕ್ಕೆ ಸಾಲ ನೀಡುವ ಕುರಿತು ಪುರ್ನರ್ ಪರೀಶೀಲನೆ ನಡೆಸಲಾಗುತ್ತದೆ. ಪಾಕಿಸ್ತಾನ ಕಳೆದ ಬಾರಿ ಪಡೆದಿರುವ ಸಾಲದಲ್ಲಿ ಬಹುತೇಕ ಹಣವನ್ನು ಮಿಲಿಟಿ ಕಾರ್ಯಕ್ಕೆ ಉಪಯೋಗಿಸಿದೆ. ಹೀಗಾಗಿ ಈ ಬಾರಿ ಮತ್ತೆ ಸಾಲ ನೀಡಿದರೆ ಸಂಘರ್ಷ ಉದ್ವಿಘ್ನವಾಗಲಿದೆ ಅನ್ನೋ ಭಾರತದ ಮನವಿ ಕುರಿತು ಐಎಂಎಫ್ ಅಧಿಕಾರಿಗಳು ಪರಿಶೀಲನೆ ನಡೆಸಿ ನಿರ್ಧಾರ ಪ್ರಕಟಿಸಲಿದ್ದಾರೆ.
ಮೇ.9ರಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ, ಪಾಕಿಸ್ತಾನಕ್ಕೆ ಸಾಲ ನೀಡಬೇಕೋ, ಬೇಡವೋ ಅನ್ನೋದು ನಿರ್ಧರಿಸಲಿದೆ. ಒಂದು ವೇಳೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಸಾಲ ಸಿಗದೇ ಹೋದಲ್ಲಿ ಪಾಕಿಸ್ತಾನ ಆರ್ಥಿಕತೆ ಹಳ್ಳ ಹಿಡಿಯಲಿದೆ. ಪಾಕಿಸ್ತಾನ ಒಳಗೇ ಸಾರ್ವಜನಿಕರು ದಂಗೆ ಏಳಲಿದ್ದಾರೆ. ಹಸಿವಿನಿಂದ ಸಾಯಲಿದ್ದಾರೆ.