ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಇಂದು ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ಕಡಗೋಲು ಕೃಷ್ಣ! ಸುದರ್ಶನ ಚಕ್ರವನ್ನು ಒಂದು ಕೈಯಲ್ಲಿ, ಸಿಂಧೂರದ ಬಟ್ಟಲನ್ನು ಮತ್ತೊಂದು ಕೈಯಲ್ಲಿ ಹಿಡಿದು ದೇಶ ರಕ್ಷಣೆಯ ಸಂದೇಶವನ್ನು ಸಾರಿದ ಶ್ರೀಕೃಷ್ಣನ ಅಲಂಕಾರ ಭಕ್ತರ ಗಮನ ಸೆಳೆದಿದೆ.

ಉಡುಪಿ (ಮೇ.8): ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಇಂದು ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ಕಡಗೋಲು ಕೃಷ್ಣ! ಸುದರ್ಶನ ಚಕ್ರವನ್ನು ಒಂದು ಕೈಯಲ್ಲಿ, ಸಿಂಧೂರದ ಬಟ್ಟಲನ್ನು ಮತ್ತೊಂದು ಕೈಯಲ್ಲಿ ಹಿಡಿದು ದೇಶ ರಕ್ಷಣೆಯ ಸಂದೇಶವನ್ನು ಸಾರಿದ ಶ್ರೀಕೃಷ್ಣನ ಅಲಂಕಾರ ಭಕ್ತರ ಗಮನ ಸೆಳೆದಿದೆ.

ಪರ್ಯಾಯ ಶ್ರೀ ಪುತ್ತಿಗೆ ಶ್ರೀಗಳ ನೇತೃತ್ವದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ದೇಶದ ರಕ್ಷಣೆಗಾಗಿ, ಸೈನಿಕರ ಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಚಕ್ರಪಾಣಿ ಕೃಷ್ಣನ ಈ ಅಲಂಕಾರ ದುಷ್ಟ ಶಕ್ತಿಗಳ ಸಂಹಾರದ ಸಂಕೇತವಾಗಿದ್ದು, ಸಿಂಧೂರದ ಬಟ್ಟಲು ಸೈನಿಕ ಪತ್ನಿಯರಿಗೆ ಅಭಯವನ್ನು, ವೀರ ವನಿತೆಯರಿಗೆ ಶುಭವನ್ನು ತಿಳಿಸುವ ಸಂಕೇತವಾಗಿದೆ.

ಇದನ್ನೂ ಓದಿ: S 400 missile system: ಭಾರತೀಯ ಸೇನೆಯ ಶೌರ್ಯವನ್ನು ತೋರಿಸುವ ವಿಡಿಯೋ ವೈರಲ್!

ಅತ್ತ ಭಾರತೀಯ ಸೇನೆ ಸುದರ್ಶನ ಚಕ್ರದಂತೆ ಕ್ಷಿಪಣಿಗಳನ್ನು ಉಡಾಯಿಸಿ ಶತ್ರು ಶಕ್ತಿಗಳನ್ನು ನಾಶಪಡಿಸುತ್ತಿದ್ದರೆ, ಇತ್ತ ಉಡುಪಿಯ ಕೃಷ್ಣ ದೇವರು ಸೈನಿಕರಿಗೆ ಮತ್ತು ಅವರ ಕುಟುಂಬಗಳಿಗೆ ಧೈರ್ಯವನ್ನು, ಆಶೀರ್ವಾದವನ್ನು ನೀಡಿದ್ದಾನೆ. ವಿಜಯಲಕ್ಷ್ಮಿಯ ಒಲಿಯಲಿ, ದೇಶದ ರಕ್ಷಣೆಗೆ ಶ್ರೀಕೃಷ್ಣನ ಈ ವಿಶೇಷ ಅಲಂಕಾರ ಶಕ್ತಿಯ ಸಂಕೇತವಾಗಿದೆ. ಉಡುಪಿಯ ಈ ದೈವಿಕ ಕ್ಷಣ ಎಲ್ಲರ ಮನಸ್ಸಿನಲ್ಲಿ ದೇಶಭಕ್ತಿಯ ಜ್ವಾಲೆಯನ್ನು ಹೊತ್ತಿಸಿದೆ!