ಆಗಸದಲ್ಲಿ ವಿಚಿತ್ರ ಬ್ಲ್ಯಾಕ್ ರಿಂಗ್: ಎದ್ದು ಬಿದ್ದು ಓಡಿದ ಜನ!
ಆಗಸದಲ್ಲಿ ಏಕಾಏಕಿ ವಿಚಿತ್ರ ಕಪ್ಪು ವೃತ್ತ ನಿರ್ಮಾಣ| ಬ್ಲ್ಯಾಕ್ ರಿಂಗ್ ಕಂಡು ದಂಗಾದ ಜನತೆ| ನಿರ್ದಿಷ್ಟ ಪಥದತ್ತ ಮುನ್ನುಗ್ಗುತ್ತಿರುವುದು ವಿಡಿಯೋದಲ್ಲಿ ಸೆರೆ| ವಿಚಿತ್ರ ಘಟನೆಗೆ ಸಾಕ್ಷಿಯಾದ ಪಾಕಿಸ್ತಾನದ ಲಾಹೋರ್ ನಗರ| ಏಲಿಯನ್ ಸ್ಪೇಸ್ ಶಿಪ್(ಪರಗ್ರಹಿ ಯಾನ) ಬಂದಿರಬಹುದಾದ ಅನುಮಾನ| ತ್ತಿರದ ಕಾರ್ಖಾನೆಯಿಂದ ಬಿಡುಗಡೆಯಾಗಿರುವ ಹೊಗೆ ಎಂಬ ಗುಮಾನಿ|
ಲಾಹೋರ್(ಜ.23): ಆಗಸದಲ್ಲಿ ಏಕಾಏಕಿ ವಿಚಿತ್ರ ಕಪ್ಪು ವೃತ್ತವೊಂದು ಕಾಣಿಸಿಕೊಂಡ ಪರಿಣಾಮ, ಜನರು ಬೆದರಿ ಓಡಿದ ಘಟನೆ ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದಿದೆ.
ಏಕಾಏಕಿ ಆಗಸದಲ್ಲಿ ವೃತ್ತಾಕಾರದ ಹೊಗೆ ನಿರ್ಮಾಣವಾಗಿದ್ದು, ಅದು ನಿರ್ದಿಷ್ಟ ಪಥದತ್ತ ಮುನ್ನುಗ್ಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಈ ಹೊಗೆ ಏನೆಂದು ತಿಳಿಯಲಾಗದೇ ಜನರು ಬೆದರಿದ್ದಾರೆ ಎನ್ನಲಾಗಿದೆ.
ಕೆಲವರು ಇದನ್ನು ಏಲಿಯನ್ ಸ್ಪೇಸ್ ಶಿಪ್(ಪರಗ್ರಹಿ ಯಾನ) ಎಂದು ಕರೆದರೆ, ಮತ್ತೆ ಕೆಲವರು ಇದು ಸ್ಫೋಟದಿಂದ ನಿರ್ಮಾಣವಾಗಿರುವ ವೃತ್ತಾಕಾರದ ಹೊಗೆ ಎಂದು ಅಂದಾಜಿಸಿದ್ದಾರೆ.
ಸೂರ್ಯನ ಸುತ್ತ ಉಂಗುರ, ಉಡುಪಿಯಲ್ಲಿ ಕಂಡ ‘ರವಿಕ್ರಾಂತ' ಯುದ್ಧ ರಹಸ್ಯ!
ವೃತ್ತಾಕಾರದಲ್ಲಿ ನಿರ್ದಿಷ್ಟ ಪಥದತ್ತ ಚಲಿಸುತ್ತಿದ್ದ ಈ ಹೊಗೆಯ ಮೋಡ ಖಂಡಿತ ಪರಗ್ರಹಿ ಜೀವಿಗಳ ಯಾನ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಆದರೆ ಇದು ಹತ್ತಿರದ ಕಾರ್ಖಾನೆಯಿಂದ ಬಿಡುಗಡೆಯಾಗಿರುವ ಹೊಗೆ ಎಂದು ಕೆಲವರು ವಾದಿಸಿದ್ದಾರೆ.
ಇನ್ನು ಲಾಹೋರ್ ಆಕಾಶದಲ್ಲಿ ಕಂಡ ವೃತ್ತಾಕಾರದ ಹೊಗೆಯನ್ನೇ ಹೋಲುವ, ಜಗತ್ತಿನ ವಿವಿಧೆಡೆ ಕಂಡುಬಂದ ಬ್ಲ್ಯಾಕ್ ರಿಂಗ್‌ನ ಹಲವು ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಶುಭ್ರ ನೀಲಿಯಾಕಾಶದಲ್ಲಿ ವಿಸ್ಮಯ ಬೃಹತ್ ಕುಳಿ: ಬೆದರಿದ ಜನಜಂಗುಳಿ!