ಭಾರೀ ಗಾತ್ರದ ಮೀನು ಬಲೆಗೆ ಕೆಡವಿದ ಜೋಡಿ ಕೆನಡಾದ ಆಲ್ಬರ್ಟಾದಲ್ಲಿ ಘಟನೆ 159 ಕಿ.ಗ್ರಾಂ ತೂಕ, 8 ಅಡಿ 6 ಇಂಚು ಉದ್ದದ ಮೀನು
ಆಲ್ಬರ್ಟಾ(ಏ.4): ಕೆನಡಾದ ಆಲ್ಬರ್ಟಾ ಮೂಲದ ವ್ಯಕ್ತಿಯೊಬ್ಬರು ಬೋರಾಗುತ್ತಿದೆ ಎಂದು ಮೀನು ಹಿಡಿಯಲು ಹೋಗಿ ಭಾರಿ ಗಾತ್ರದ ಜೀವಂತ ಡೈನೋಸಾರ್ ಎಂದು ಕರೆಯಲ್ಪಡುವ ಬೃಹತ್ ಗಾತ್ರದ ಸ್ಟರ್ಜನ್ (sturgeon) ಮೀನನ್ನು ಬಲೆಗೆ ಕೆಡವಿದ್ದಾರೆ. ಆಲ್ಬರ್ಟಾದ ಫ್ರೇಸರ್ (Fraser river) ನದಿಯಲ್ಲಿ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಸಿಗಬಹುದಾದಂತಹ ಭಾರಿ ಗಾತ್ರದ ಮೀನು ಇವರ ಪಾಲಾಗಿದೆ. ಈ ಸ್ಟರ್ಜನ್ ಮೀನು 159 ಕಿಲೋಗ್ರಾಂಗಳಷ್ಟು ತೂಕವಿದ್ದು, 8 ಅಡಿ 6 ಇಂಚು ಉದ್ದವಿದೆ.
CTV ನ್ಯೂಸ್ ಕ್ಯಾಲ್ಗರಿ ಪ್ರಕಾರ, ವಾರಾಂತ್ಯದಲ್ಲಿ ಯಾವುದೇ ಕೆಲಸವಿಲ್ಲದೇ ಬೋರು ಹೊಡೆಸಿಕೊಂಡು ಕುಳಿತಿದ್ದ, ಮನೆಯ ಮಹಡಿ ರಿಪೇರಿ ಮಾಡುವ ಕೆಲಸ ಮಾಡುವ ಬ್ರೇಡನ್ ರೌಸ್ (Braeden Rouse) ಎಂಬಾತ ನದಿಯಲ್ಲಿ ತನ್ನ ಅದೃಷ್ಟ ಪರೀಕ್ಷಿಸಲು ನಿರ್ಧರಿಸಿದರು. ಮೀನು ಹಿಡಿಯಲು ನದಿಗೆ ಇಳಿದ ಅವರಿಗೆ ಭಾರಿ ಅದೃಷ್ಟವೇ ಕುಲಾಯಿಸಿದೆ. ಟ್ರಯಾಸಿಕ್ ಯುಗದ (Triassic-era) ಬೃಹತ್ ಮೀನು ಅವರ ಗಾಳಕ್ಕೆ ಬಿದ್ದಿದ್ದು, ಅದನ್ನು ಶ್ರಮಪಟ್ಟು ದಡಕ್ಕೆ ಎಳೆದು ತಂದರು.
ಆಂಧ್ರದಲ್ಲಿ ಮೀನುಗಾರನ ಬಲೆಗೆ ಬಿತ್ತು 'ಚಿನ್ನದ' ಮೀನು, ಮಾರಿದಾತನಿಗೆ ಸಿಕ್ಕಿದ್ದು ಬರೋಬ್ಬರಿ 2.90 ಲಕ್ಷ!
ಶೀತ ಹವಾಮಾನದಿಂದಾಗಿ ಚಳಿಗಾಲದಲ್ಲಿ ಆಲ್ಬರ್ಟಾದಲ್ಲಿ ರೂಫಿಂಗ್(ಮಹಡಿ) ಮುಚ್ಚಲ್ಪಡುತ್ತದೆ. ಆದ್ದರಿಂದ ನಾವು ಶೀತ ವಾತಾವರಣದಲ್ಲಿ ಇಲ್ಲಿ ಕೆಲಸ ಮಾಡಬಹುದು ಎಂಬ ಉದ್ದೇಶದಿಂದ ನಾವು ಇಲ್ಲಿಗೆ ಬಂದಿದ್ದೇವೆ ಎಂದು ರೂಸ್ ಮಾಧ್ಯಮಗಳಿಗೆ ತಿಳಿಸಿದರು. ವಾರಾಂತ್ಯವಾಗಿದ್ದರಿಂದ ಅವರು ಅವರ ಅದೃಷ್ಟವನ್ನು ಪರೀಕ್ಷಿಸಲು ನಿರ್ಧರಿಸಿದರು ಹೀಗಾಗಿ ಬ್ರೇಡನ್ ರೌಸ್ ಹಾಗೂ ಆತನ ಗೆಳತಿ ಸಿಡ್ನಿ ಕೊಜೆಲೆಂಕೊ (Sidney Kozelenko) ಫ್ರೇಸರ್ ನದಿಗೆ ತೆರಳಲು ಮೂರು ಗಂಟೆಗಳ ಕಾಲ ಪ್ರಯಾಣ ಮಾಡಿದರು.
ತನಗಿಂತ ದೊಡ್ಡ ಮೀನು ಹಿಡಿದ ಪುಟ್ಟ ಬಾಲಕ : ವಿಡಿಯೋ ಶೇರ್ ಮಾಡಿದ ಆನಂದ್ ಮಹೀಂದ್ರಾ
ದೈತ್ಯಾಕಾರದ ಸ್ಟರ್ಜನ್ ಸಿಗುವ ಯಾವುದೇ ನಿರೀಕ್ಷೆಯಿಲ್ಲದ ಕಾರಣ ರೂಸ್ ಗೆ ಇದು ದೊಡ್ಡ ಅದೃಷ್ಟವಾಗಿತ್ತು. ಆದಾಗ್ಯೂ, ಭಾರೀ ಗಾತ್ರದ ಈ ಮೀನನ್ನು ದಡಕ್ಕೆ ಸೇರಿಸಲು ಈ ಜೋಡಿ ಸುಮಾರು ಅರ್ಧ ಗಂಟೆ ಕಠಿಣ ಶ್ರಮ ಹಾಕಿದೆ. ಭಾರೀ ಗಾತ್ರದ ಮೀನೇ ಬಲೆಗೆ ಬಿದ್ದಿದೆ ಎಂಬುದು ನಮಗೆ ಗೊತ್ತಾಯಿತು ಏಕೆಂದರೆ ನಾವು ಎಳೆದಾಗ ಅದು ಮಸುಕಾಡುತ್ತಿರಲಿಲ್ಲ. ಅಲ್ಲದೇ ಆಚೇಗೆ ಓಡಲು ಆರಂಭಿಸಿತ್ತು. ಕೂಡಲೇ ರೂಸ್ ಗೆಳತಿ ಸಿಡ್ನಿ ಇದು ದೊಡ್ಡ ಮೀನೇ ಎಂಬುದರ ಅರಿವಾಗಿ ದೃಶ್ಯವನ್ನು ಚಿತ್ರೀಕರಿಸಲು ಆರಂಭಿಸಿದರು. ತುಂಬಾ ಶ್ರಮ ಹಾಕಿ ಅದನ್ನು ಎಳೆಯಲಾಯಿತು, ಅದಾಗ್ಯೂ ಅದು ಕೆಳಗೆ ಕೆಳಗೆ ಚಲಿಸುತ್ತಿತ್ತು. ಈ ವೇಳೆ ಸಿಡ್ನಿ ಕೂಡ ದೋಣಿಗೆ ಹಾರಿದರು. ಸುಮಾರು 25 ನಿಮಿಷಗಳ ಕಾಲ ಇಬ್ಬರು ನದಿಯಲ್ಲಿ ಹೋರಾಡಿ ಅಂತಿಮವಾಗಿ ಮೀನನ್ನು ದಡಕ್ಕೆ ತರುವಲ್ಲಿ ಯಶಸ್ವಿಯಾದರು.
ಕೆಲ ದಿನಗಳ ಹಿಂದಷ್ಟೇ ಆಳಸಾಗರದಲ್ಲಿ ಅಧ್ಯಯನ ನಡೆಸಲು ತೆರಳಿದ ವಿಜ್ಞಾನಿಗಳಿಗೆ ಅಚ್ಚರಿಯೊಂದು ಕಾದಿತ್ತು. ಆಗಷ್ಟೇ ಮೊಟ್ಟೆಯೊಡೆದು ಹೊರಬಂದ ಶಾರ್ಕ್ ಮೀನಿನ ಮರಿ ವಿಜ್ಞಾನಿಗಳ ತಂಡವವನ್ನು ಆಕರ್ಷಿಸಿತ್ತು. ಕಾರಣ ಇದು ಶಾರ್ಕ್ ಮೀನಿನ ಸಹಜ ಮರಿಯಾಗಿರಲಿಲ್ಲ. ನೋಡಲು ಭಯ ಹುಟ್ಟಿಸುವ ಶಾರ್ಕ್ ಮೀನಿನ ಮರಿ ಭಾರಿ ಸಂಚಲನ ಸೃಷ್ಟಿಸಿತ್ತು.
ನ್ಯೂಜಿಲೆಂಡ್‌ನ ದಕ್ಷಿಣ ಐಸ್‌ಲೆಂಡ್ ತೀರದ ಸಮುದ್ರದಲ್ಲಿ ಅಧ್ಯಯನಕ್ಕೆ ತೆರಳಿದ ವಿಜ್ಞಾನಿಗಳ ತಂಡ ಈ ಹೊಸ ಹಾಗೂ ವಿಚಿತ್ರ ಆಕಾರದ ಶಾರ್ಕ್ ಮೀನಿನ ಮರಿಯನ್ನು ಪತ್ತೆ ಹಚ್ಚಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವಾಟರ್ ಅಂಡ್ ಅಟ್ಮಾಸ್ಫಿಯರಿಕ್ ರಿಸರ್ಚ್ ತಂಡದ ವಿಜ್ಞಾನಿಗಳು ಆಳ ಸಮುದ್ರದಲ್ಲಿ ಈ ಶಾರ್ಕ್ ಮರಿ ಮೀನನ್ನು ಪತ್ತೆ ಹಚ್ಚಿದ್ದಾರೆ.