ಆಂಧ್ರದಲ್ಲಿ ಮೀನುಗಾರನ ಬಲೆಗೆ ಬಿತ್ತು 'ಚಿನ್ನದ' ಮೀನು, ಮಾರಿದಾತನಿಗೆ ಸಿಕ್ಕಿದ್ದು ಬರೋಬ್ಬರಿ 2.90 ಲಕ್ಷ!
* ನೋಡ ನೋಡುತ್ತಿದ್ದಂತೆಯೇ ಲಕ್ಷಾಧಿಪತಿಯಾದ ಮೀನುಗಾರ
* ಅಪರೂಪದ ಮೀನು ಹಿಡಿದಾತನ ಕೈ ಹಿಡಿದ ಅದೃಷ್ಟ
* ಕಚಿಡಿ ಮೀನಿನಿಂದ 2.9 ಲಕ್ಷ ಸಂಪಾದಿಸಿದ ಬಡ ಮೀನುಗಾರ
ಅಮರಾವತಿ(ಮಾ.26): ದಯೆ ಇದ್ದರೆ ಸೂರು ಹರಿದಾದರೂ ಹಣದ ಮಳೆಯಾಗುತ್ತದೆ ಎಂಬ ಮಾತಿದೆ. ಆಂಧ್ರಪ್ರದೇಶದ ಮೀನುಗಾರನ ಜೀವನದಲ್ಲೂ ನಡೆದಿದ್ದು ಇಂತಹುದೇ ಘಟನೆ. ಹೌದು ಸಮುದ್ರದಲ್ಲಿ ಮೀನು ಹಿಡಿಯಲು ಹೋಗಿದ್ದ ಈತನ ಬಲೆಯಲ್ಲಿ ಉಳಿದ ಮೀನುಗಳ ಜತೆಗೆ 'ಗೋಲ್ಡನ್' ಫಿಶ್ ಕೂಡ ಬಿದ್ದಿದೆ. ಇದು ಬಹಳ ಅಪರೂಪದ ಜಾತಿಯು ಕಚಿಡಿ ಮೀನು ಆಗಿತ್ತು. ಅದರ ತೂಕ ಬರೋಬ್ಬರಿ 28 ಕೆ.ಜಿ. ಮೀನುಗಾರರು ಅದನ್ನು ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡಿದಾಗ ಭಾರಿ ಮೊತ್ತ ಸಿಕ್ಕಿದೆ, ಒಂದೇ ಕ್ಷಣದಲ್ಲಿ ಮೀನುಗಾರ 2 ಲಕ್ಷ 90 ಸಾವಿರ ರೂ. ಸಂಪಾದಿಸಿದ್ದಾನೆ.
ಕಚಿಡಿ ಮೀನು ಅಪರೂಪದ ಮತ್ತು ದುಬಾರಿ ಬೆಲೆಗೆ ಮಾರಾಟವಾಗುವುದರಿಂದ ಗೋಲ್ಡನ್ ಫಿಶ್ ಎಂದು ಕರೆಯುತ್ತಾರೆ ಎನ್ನುತ್ತಾರೆ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಇದರ ಅನೇಕ ಭಾಗಗಳನ್ನು ಔಷಧ ತಯಾರಿಸಲು ಬಳಸಲಾಗುತ್ತದೆ. ತಜ್ಞರು ಹೇಳುವಂತೆ ಹಸಿ ಮೀನಿನ ಪಿತ್ತಕೋಶ ಮತ್ತು ಶ್ವಾಸಕೋಶವನ್ನು ವೈದ್ಯರು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಬಳಸುವ ನೂಲು ತಯಾರಿಸಲು ಸಹ ಬಳಸುತ್ತಾರೆ. ಇದರ ಅನೇಕ ಭಾಗಗಳನ್ನು ದುಬಾರಿ ವೈನ್ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ.
Sagarmala ಯೋಜನೆಗೆ ವಿರೋಧ, ಶಾಸಕಿ ಹಾಗೂ ಮೀನುಗಾರರ ನಡುವೆ ವಾಕ್ಸಮರ!
ಪೂರ್ವ ಗೋದಾವರಿ ಜಿಲ್ಲೆಯ ಅಂತರವೇದಿ ನಿವಾಸಿಯಾಗಿರುವ ಈ ಮೀನುಗಾರ ಕರಾವಳಿ ಪ್ರದೇಶದ ಮಿನಿ ಫಿಶಿಂಗ್ ಹಾರ್ಬರ್‌ಗೆ ಮೀನುಗಾರಿಕೆಗೆ ತೆರಳಿದ್ದರು. ಅದೇ ವೇಳೆಗೆ ಅವರ ಬಲೆಗೆ ಹಸಿ ಮೀನು ಸಿಕ್ಕಿಹಾಕಿಕೊಂಡಿತು. ಬಳಿಕ ಅದನ್ನು ನರಸಾಪುರದ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಿದ್ದರು. ಇದಕ್ಕೆ ಪ್ರತಿಯಾಗಿ 2.90 ಲಕ್ಷ ರೂ. ಮೀನುಗಾರ ಪಡೆಎದಿದ್ದಾನೆ. ಹೀಗಿರುವಾಗ ಆತನಿಗೆ ಬಹಳಷ್ಟು ಖುಷಿಯಾಗಿದೆ. ಅಲ್ಲದೇ ಹಸಿ ಮೀನು ಹಿಡಿಯುವುದು ಸುಲಭವಲ್ಲ ಎಂದೂ ಅವರು ಹೇಳಿದ್ದಾರೆ. ಈ ಮೀನು ಬಹಳಷ್ಟು ತಪ್ಪಿಸಿಕೊಳ್ಳಲು ಯತ್ನಿಸಿತು, ಕೊನೆಗೆ ಅದನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾದೆವು ಎಂದಿದ್ದಾರೆ.
ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಮೀನುಗಾರರ ಬಲೆಯಲ್ಲಿ 157 ಕೊಂತಿ ಮೀನುಗಳು ಒಂದೇ ಬಾರಿ ಬಿದ್ದಿದ್ದವು. ಸಮುದ್ರದ ಚಿನ್ನ ಎಂದು ಕರೆಯಲ್ಪಡುವ ಈ ಮೀನುಗಳು ಮೀನುಗಾರನನ್ನು ರಾತ್ರೋರಾತ್ರಿ ಕೋಟ್ಯಾಧಿಪತಿಯನ್ನಾಗಿಸಿತ್ತು. ಪ್ರತಿ ಮೀನಿಗೆ 85 ಸಾವಿರ ರೂ. ಬೆಲೆ ಇತ್ತು. ಎಲ್ಲ 157 ಮೀನುಗಳು ಮಾರುಕಟ್ಟೆಯಲ್ಲಿ 1.33 ಕೋಟಿ ರೂ.ಗೆ ಮಾರಾಟವಾಗಿದ್ದವು.
Fish Recipes: ಮೀನಿನ ಅಡುಗೆ ಮಾಡುವಾಗ ಈ ವಿಚಾರ ಗೊತ್ತಿರಲಿ
ಇತ್ತೀಚೆಗೆ ವಿಶಾಖಪಟ್ಟಣಂನಲ್ಲಿ ಮೀನುಗಾರರ ಬಲೆಯಲ್ಲಿ ತಿಮಿಂಗಿಲ ಮೀನೊಂದು ಸಿಕ್ಕಿಬಿದ್ದಿತ್ತು. ಅದು ಎಷ್ಟು ದೊಡ್ಡದಾಗಿತ್ತು ಎಂದರೆ ಅದನ್ನು ದಡಕ್ಕೆ ತರಲು ಸಹ ಸಾಕಷ್ಟು ಶ್ರಮ ಪಡಬೇಕಾಯಿತು. ಅವರ ತೂಕ 1200 ಕೆ.ಜಿ. ಇತ್ತು. ಸಾಮಾನ್ಯವಾಗಿ, ಮೀನುಗಾರರು ತಿಮಿಂಗಿಲ ಮೀನುಗಳನ್ನು ಆಹಾರಕ್ಕಾಗಿ ಬಳಸದ ಕಾರಣ ಅದನ್ನು ಮತ್ತೆ ಸಮುದ್ರಕ್ಕೆ ಬಿಡುತ್ತಾರೆ. ಆದರೆ ತಿಮಿಂಗಿಲಗಳಿಂದ ತೆಗೆದ ಎಣ್ಣೆಯನ್ನು ಖಂಡಿತವಾಗಿಯೂ ಅನೇಕ ಔಷಧಗಳನ್ನು ತಯಾರಿಸಲು ಬಳಸಲಾಗುತ್ತದೆ.
ಸಮುದ್ರ ಆಳದಲ್ಲಿ ಭಯ ಹುಟ್ಟಿಸುವ ಘೋಸ್ಟ್ ಬೇಬಿ ಶಾರ್ಕ್ ಪತ್ತೆ!
ಸಮುದ್ರದಲ್ಲಿನ ಜಲಚರಗಳ ಕುರಿತು ನಿರಂತರ ಸಂಶೋಧನೆ, ಅಧ್ಯಯನಗಳು ನಡೆಯತ್ತಲೇ ಇದೆ. ಹೀಗೆ ಆಳಸಾಗರದಲ್ಲಿ ಅಧ್ಯಯನ ನಡೆಸಲು ತೆರಳಿದ ವಿಜ್ಞಾನಿಗಳಿಗೆ ಅಚ್ಚರಿಯೊಂದು ಕಾದಿತ್ತು. ಆಗಷ್ಟೇ ಮೊಟ್ಟೆಯೊಡೆದು ಹೊರಬಂದ ಶಾರ್ಕ್ ಮೀನಿನ ಮರಿ ವಿಜ್ಞಾನಿಗಳ ತಂಡವವನ್ನು ಆಕರ್ಷಿಸಿದೆ. ಕಾರಣ ಇದು ಶಾರ್ಕ್ ಮೀನಿನ ಸಹಜ ಮರಿಯಾಗಿರಲಿಲ್ಲ.ನೋಡಲು ಭಯಹುಟ್ಟಿಸುವ ಶಾರ್ಕ್ ಮೀನಿನ ಮರಿ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.
ನ್ಯೂಜಿಲೆಂಡ್‌ನ ದಕ್ಷಿಣ ಐಸ್‌ಲೆಂಡ್ ತೀರದ ಸಮುದ್ರದಲ್ಲಿ ಅಧ್ಯಯನಕ್ಕೆ ತೆರಳಿದ ವಿಜ್ಞಾನಿಗಳ ತಂಡ ಈ ಹೊಸ ಹಾಗೂ ವಿಚಿತ್ರ ಆಕಾರಾದ ಶಾರ್ಕ್ ಮೀನಿನ ಮರಿಯನ್ನು ಪತ್ತೆ ಹಚ್ಚಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವಾಟರ್ ಅಂಡ್ ಅಟ್ಮಾಸ್ಫಿಯರಿಕ್ ರಿಸರ್ಚ್ ತಂಡದ ವಿಜ್ಞಾನಿಗಳು ಆಳ ಸಮುದ್ರದಲ್ಲಿ ಈ ಶಾರ್ಕ್ ಮರಿ ಮೀನನ್ನು ಪತ್ತೆ ಹಚ್ಚಿದ್ದಾರೆ.
ಪ್ರವಾಸದ ಖುಷಿಯಲ್ಲಿದ್ದ ವ್ಯಕ್ತಿಯ ಹೊತ್ತೊಯ್ದ ಶಾರ್ಕ್
ಅಧ್ಯಯನಕ್ಕೆ ತೆರಳಿದ ತಂಡಕ್ಕೆ ಆಗಷ್ಟೆ ಹುಟ್ಟಿದ ಮರಿ ಶಾರ್ಕ್ ಮೀನು ಪತ್ತೆಯಾಗಿದೆ. ಈ ರೀತಿ ಮೀನುಗಳು ಪತ್ತೆಯಾಗಿರುವುದು ಅತೀ ವಿರಳವಾಗಿದೆ. ಇದು ನೋಡಲು ವಿಚಿತ್ರವಾಗಿದೆ. ಜೊತೆಗೆ ಭಯಹುಟ್ಟಿಸುವಂತಿದೆ. ಆಳ ಸಮುದ್ರದಲ್ಲಿ ಶಾರ್ಕ್ ಮೀನು ಮೊಟ್ಟೆ ಇಡುತ್ತದೆ. ನಾವು ಆಳ ಸಮುದ್ರದ ಅಧ್ಯಯನ ಹೆಚ್ಚಾಗಿ ಮಾಡಬೇಕಿದೆ. ಈ ರೀತಿಯ ಮೀನುಗಳ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕಬೇಕಿದೆ ಎಂದು ಅಧ್ಯಯನ ತಂಡದ ಸದಸ್ಯ ಡಾ ಬ್ರಿಟ್ ಫಿನುಸಿ ಹೇಳಿದ್ದಾರೆ.