ತನಗಿಂತ ದೊಡ್ಡ ಮೀನು ಹಿಡಿದ ಪುಟ್ಟ ಬಾಲಕ : ವಿಡಿಯೋ ಶೇರ್ ಮಾಡಿದ ಆನಂದ್ ಮಹೀಂದ್ರಾ

  • ಮೀನು ಹಿಡಿಯುತ್ತಿರುವ ಪುಟ್ಟ ಬಾಲಕ
  • ವಿಡಿಯೋ ಶೇರ್ ಮಾಡಿದ ಆನಂದ್‌ ಮಹೀಂದ್ರಾ
  • ಯಶಸ್ಸಿನ ಕೀಲಿ ಕೈಗೇನು ಬೇಕು ಎಂದು ತಿಳಿಸಿದ ಉದ್ಯಮಿ
Anand Mahindra shares viral video in which he shares three virtues that bring success in life akb

ಟ್ವಿಟ್ಟರ್‌ನಲ್ಲಿ ಸದಾ ಒಂದಿಲ್ಲೊಂದು ಸ್ಪೂರ್ತಿದಾಯಕ ಸಂದೇಶಗಳನ್ನು ವಿಡಿಯೋಗಳನ್ನು ಶೇರ್ ಮಾಡುವ ಭಾರತದ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ  ಈಗ ಮತ್ತೊಂದು ಪುಟ್ಟ ಬಾಲಕನೋರ್ವನ ಸ್ಪೂರ್ತಿದಾಯಕವಾದ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಪುಟ್ಟ ಬಾಲಕನ ಶ್ರಮಕ್ಕೆ ಶಹಭಾಷ್‌ ಹೇಳುತ್ತಿದ್ದಾರೆ. 

ಪುಟ್ಟ ಬಾಲಕನೋರ್ವ ಮೀನು ಹಿಡಿಯುವ ವಿಡಿಯೋ ಇದಾಗಿದೆ. ಈ ವಿಡಿಯೋದಲ್ಲಿ ಕಾಣಿಸುವಂತೆ ಬಾಲಕ ನದಿ ಅಥವಾ ಕೆರೆಯ ಬಳಿ ತೆರಳಿ ಮೀನು ಹಿಡಿಯುವ ಸ್ವಯಂ ನಿರ್ಮಿತ ಉಪಕರಣವನ್ನು ಕಿನಾರೆಯ ಬಳಿ ಇಟ್ಟು ಅದಕ್ಕೆ ಗುದ್ದಲಿಯಿಂದ ಹೊಡೆದು ಗಟ್ಟಿಯಾಗಿ ನಿಲ್ಲುವಂತೆ ಮಾಡುತ್ತಾನೆ. ನಂತರ ಮೀನು ಹಿಡಿಯುವುದಕ್ಕಾಗಿ ಮನೆಯಿಂದ ಪಾತ್ರೆಯೊಂದರಲ್ಲಿ ತೆಗೆದುಕೊಂಡು ಬಂದಂತಹ ಆಹಾರವನ್ನು ಮೀನು ಹಿಡಿಯುವ ಗಾಳದ ತುದಿಗೆ ಸಿಕ್ಕಿಸುತ್ತಾನೆ. ನಂತರ ಗಾಳವನ್ನು ತುಂಬಾ ವೇಗವಾಗಿ ನೀರಿನತ್ತ ಎಸೆಯುತ್ತಾನೆ. ಹೀಗೆ ಎಸೆದ ಕೆಲ ಸೆಕೆಂಡುಗಳಲ್ಲಿ ಬಾಲಕ ಗಾಳವನ್ನು ಶ್ರಮಪಟ್ಟು ಹಿಡಿದು ಎಳೆಯುತ್ತಾನೆ. ಈ ವೇಳೆ ಗಾಳದಲ್ಲಿ ಎರಡು ದೊಡ್ಡದಾದ ಮೀನುಗಳು ಸಿಲುಕಿಕೊಳ್ಳುತ್ತದೆ. ನಂತರ ಗಾಳದಿಂದ ಮೀನನ್ನು ತೆಗೆಯುವ ಬಾಲಕ ತನ್ನ ಚೀಲಕ್ಕೆ ಮೀನನ್ನು ತುಂಬಿಸುತ್ತಾನೆ. 

 

ಈ ವಿಡಿಯೋ ನೋಡುವುದಕ್ಕೆ ಸರಳವಾಗಿ ಕಾಣಬಹುದು. ಆದರೆ ಅದರ ಹಿಂದೆ ಯಶಸ್ಸಿನತ್ತ ಸಾಗಲು ಏನು ಬೇಕು ಎಂಬ ಬಗ್ಗೆ ಒಂದು ಆಳವಾದ ಸಂದೇಶವಿದೆ. ಈ ವಿಡಿಯೋ ನನ್ನ ಇನ್‌ಬಾಕ್ಸ್‌ಗೆ ಬಂದಿದೆ. ಹೆಚ್ಚುತ್ತಿರುವ ಸಂಕೀರ್ಣ ಜಗತ್ತಿನಲ್ಲಿ ಇದೊಂದು ವಿಚಿತ್ರವಾಗಿದೆ. ದೃಢಸಂಕಲ್ಪ + ಜಾಣ್ಮೆ + ತಾಳ್ಮೆ = ಯಶಸ್ಸು ಅಂದರೆ ದೃಢಸಂಕಲ್ಪ , ಜಾಣ್ಮೆ , ತಾಳ್ಮೆ ಯಶಸ್ಸು ಜೊತೆ ಗೂಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದು ಈ ವಿಡಿಯೋದ ಸಂದೇಶವಾಗಿದೆ ಎಂದು ಬರೆದುಕೊಂಡು ಆನಂದ್ ಮಹೀಂದ್ರಾ ಈ ವಿಡಿಯೋವನ್ನು ಟ್ವಿಟ್ ಮಾಡಿದ್ದಾರೆ. 

Vehicle Built from Scrap: ಗುಜುರಿ ವಸ್ತುಗಳಿಂದ ಹೊಸ ವಾಹನ ನಿರ್ಮಾಣ: ಆನಂದ್ ಮಹೀಂದ್ರಾ ಇಂಪ್ರೆಸ್!

2 ನಿಮಿಷಗಳ ಈ ವಿಡಿಯೋವನ್ನು ಟ್ಟಿಟ್ಟರ್‌ನಲ್ಲಿ ಲಕ್ಷಾಂತರ ಮಂದಿ ವೀಕ್ಷಿಸಿದ್ದು, ಬಾಲಕನ ಪರಿಶ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 66 ವರ್ಷದ ಉದ್ಯಮಿ ಆನಂದ್‌ ಮಹೀಂದ್ರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸದಾ ಇಂತಹ ವಿಡಿಯೋಗಳನ್ನು ಪೋಸ್ಟ್ ಮಾಡಿ ಯುವ ಸಮುದಾಯಕ್ಕೆ ಸ್ಪೂರ್ತಿ ತುಂಬುತ್ತಿರುತ್ತಾರೆ. 

ಜಾಹೀರಾತು ಶೂಟ್‌ ವೇಳೆ ತಾಳ್ಮೆ ಕಳೆದುಕೊಂಡ ನಟ ಅಜಯ್.. ಆನಂದ್ ಮಹೀಂದ್ರಾ ಏನ್‌ ಹೇಳಿದ್ರು ನೋಡಿ

Latest Videos
Follow Us:
Download App:
  • android
  • ios