Asianet Suvarna News Asianet Suvarna News

ಉದಯೋನ್ಮುಖ ತಂತ್ರಜ್ಞಾನದ ಬಗ್ಗೆ ಅಮೆರಿಕಾ ಭಾರತ ಮಧ್ಯೆ ಒಪ್ಪಂದ

ಭಾರತ ಹಾಗೂ ಅಮೆರಿಕಾ  ಕಾರ್ಯತಂತ್ರದ ತಂತ್ರಜ್ಞಾನ ಪಾಲುದಾರಿಕೆ ಮತ್ತು ರಕ್ಷಣಾ ಕೈಗಾರಿಕಾ ಸಹಕಾರವನ್ನು ಉನ್ನತೀಕರಿಸಲು ಮತ್ತು ವಿಸ್ತರಿಸಲು ಕ್ರಿಟಿಕಲ್ ಮತ್ತು ಎಮರ್ಜಿಂಗ್ ಟೆಕ್ನಾಲಜಿ (iCET)ಕುರಿತು ಒಪ್ಪಂದ ಮಾಡಿಕೊಂಡಿವೆ.

Agreement between US and India on emerging technologies akb
Author
First Published Feb 1, 2023, 11:35 AM IST

ನ್ಯೂಯಾರ್ಕ್‌: ಎರಡು ದೊಡ್ಡ ಮತ್ತು ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವಗಳೆನಿಸಿದ ಅಮೆರಿಕಾ ಹಾಗೂ ಭಾರತ ಕಾರ್ಯತಂತ್ರದ ತಾಂತ್ರಿಕ ಪಾಲುದಾರಿಕೆಯನ್ನು ಉನ್ನತೀಕರಿಸಲು ಪಾಲುದಾರಿಕೆಯನ್ನು ಹೆಚ್ಚಿಸಿರುವುದು ಭವಿಷ್ಯದ ತಂತ್ರಜ್ಞಾನ ಹಾಗೂ ಆವಿಷ್ಕಾರದ ವಿಚಾರದಲ್ಲಿ ಉತ್ತಮ ನಡೆಯಾಗಿದೆ. ಯುವ ಭಾರತೀಯರಿಗಾಗಿ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿತ್ವದ ಪರಿಣಾಮ ಇದಾಗಿದ್ದು, ಇದೊಂದು ದೊಡ್ಡ ಮಟ್ಟದ ಮೈಲಿಗಲ್ಲು ಎಂದು ಕೇಂದ್ರ ವಾಣಿಜ್ಯೋದ್ಯಮ, ಕೌಶಲ್ಯ ಅಭಿವೃದ್ಧಿ, ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ರಾಜ್ಯ ಸಚಿವರಾದ ರಾಜೀವ್ ಚಂದ್ರಶೇಖರ್ ಟ್ವಿಟ್ ಮಾಡಿದ್ದಾರೆ.  ಹಾಗಾದರೆ ಅಮೆರಿಕಾ ಹಾಗೂ ಭಾರತದ ನಡುವಿನ ಈ ಒಪ್ಪಂದದ ಬಗ್ಗೆ ಶ್ವೇತ ಭವನದ ವೆಬ್‌ಸೈಟ್‌ನ ಲೇಖನವೊಂದರ ಸಾರಾಂಶ ಇಲ್ಲಿದೆ. 

2022ರ ಮೇನಲ್ಲಿ ಅಮೆರಿಕಾದ ಅಧ್ಯಕ್ಷ ಬಿಡೆನ್ ಮತ್ತು ಭಾರತದ ಪ್ರಧಾನಿ ಮೋದಿ ಅವರು ಹಾಗೂ ಎರಡು ದೇಶಗಳ ಸರ್ಕಾರಗಳು ವ್ಯವಹಾರಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವೆ ನಮ್ಮ ಕಾರ್ಯತಂತ್ರದ ತಂತ್ರಜ್ಞಾನ ಪಾಲುದಾರಿಕೆ ಮತ್ತು ರಕ್ಷಣಾ ಕೈಗಾರಿಕಾ ಸಹಕಾರವನ್ನು ಉನ್ನತೀಕರಿಸಲು ಮತ್ತು ವಿಸ್ತರಿಸಲು ಕ್ರಿಟಿಕಲ್ ಮತ್ತು ಎಮರ್ಜಿಂಗ್ ಟೆಕ್ನಾಲಜಿ (iCET)ಕುರಿತು ಅಮೆರಿಕಾ ಭಾರತ ಒಪ್ಪಂದವನ್ನು  ಘೋಷಿಸಿದರು.

ಆರೋಗ್ಯ ಕ್ಷೇತ್ರದ ಬಹುದೊಡ್ಡ ಒಪ್ಪಂದಕ್ಕೆ ಭಾರತ ಸಹಿ

ಎರಡೂ ದೇಶಗಳು ತಂತ್ರಜ್ಞಾನವನ್ನು ವಿನ್ಯಾಸಗೊಳಿಸುವ ಅಭಿವೃದ್ಧಿಪಡಿಸುವ, ಆಡಳಿತ ನಡೆಸುವ ಮತ್ತು ಬಳಸುವ ವಿಧಾನಗಳ ಬಗ್ಗೆ ಧೃಡೀಕರಿಸುತ್ತದೆ  ಹಾಗೂ ನಮ್ಮ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಸಾರ್ವತ್ರಿಕ ಮಾನವ ಹಕ್ಕುಗಳ ಗೌರವದಿಂದ ರೂಪುಗೊಳ್ಳಬೇಕು ಎಂದು  ಅಮೆರಿಕಾ ಹಾಗೂ ಭಾರತ ಧೃಡೀಕರಿಸುತ್ತದೆ. ನಮ್ಮ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಬಲಪಡಿಸುವ ಪರಸ್ಪರ ನಂಬಿಕೆ ಮತ್ತು ವಿಶ್ವಾಸದ ಆಧಾರದ ಮೇಲೆ  ಪ್ರವೇಶಿಸಬಹುದಾದ ಮತ್ತು ಸುರಕ್ಷಿತ ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ಪೋಷಿಸಲು ನಾವು ಬದ್ಧರಾಗಿದ್ದೇವೆ. 

ನಿನ್ನೆ(ಜ31) ಎರಡು ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರು ವಾಷಿಂಗ್ಟನ್, ಡಿಸಿಯಲ್ಲಿ (Washington, DC) ಐಸಿಇಟಿಯ ಉದ್ಘಾಟನಾ ಸಭೆಯನ್ನು ಮುನ್ನಡೆಸಿದರು. ರಾಷ್ಟ್ರೀಯ ಏರೋನಾಟಿಕ್ಸ್ (National Aeronautics) ಮತ್ತು ಬಾಹ್ಯಾಕಾಶ ಆಡಳಿತದ ನಿರ್ವಾಹಕರು, ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನದ ನಿರ್ದೇಶಕರು, ರಾಷ್ಟ್ರೀಯ ಬಾಹ್ಯಾಕಾಶ ಮಂಡಳಿಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಮತ್ತು ರಾಜ್ಯ ಇಲಾಖೆ, ವಾಣಿಜ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ರಕ್ಷಣಾ ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿ ಸದಸ್ಯರು ಅಮೆರಿಕಾ ಪರವಾಗಿ ಈ ಸಭೆಯಲ್ಲಿ ಭಾಗಿಯಾಗಿದ್ದರು. 

ಸುದ್ದಿಗೆ ಫೇಸ್‌ಬುಕ್‌, ಗೂಗಲ್‌ ಹಣ ನೀಡಲಿ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

 

ಹಾಗೆಯೇ ಭಾರತದ  ಕಡೆಯಿಂದ, ಅಮೆರಿಕಾದಲ್ಲಿರುವ ಭಾರತದ ರಾಯಭಾರಿ (Ambassador of India), ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ISRO) ಅಧ್ಯಕ್ಷರು, ದೂರಸಂಪರ್ಕ ಇಲಾಖೆಯ ಕಾರ್ಯದರ್ಶಿ, ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರರು, ದಿ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಮಹಾನಿರ್ದೇಶಕರು ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿಯ ಸಚಿವಾಲಯದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಎರಡು ಕಡೆಯವರು  ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು (emerging technologies), ಸಹ-ಅಭಿವೃದ್ಧಿ ಮತ್ತು ಸಹ ಉತ್ಪಾದನೆ ಮತ್ತು ನಮ್ಮ ಅವಿಷ್ಕಾರಿ ಪರಿಸರ ವ್ಯವಸ್ಥೆಗಳಾದ್ಯಂತ ಸಂಪರ್ಕವನ್ನು ಆಳಗೊಳಿಸುವ ಮಾರ್ಗಗಳಲ್ಲಿ ಹೆಚ್ಚಿನ ಸಹಕಾರಕ್ಕಾಗಿ ಎರಡೂ ಕಡೆಯವರು ಚರ್ಚಿಸಿದರು. ಎಕ್ಸ್‌ಪೋಸ್, ಹ್ಯಾಕಥಾನ್‌ಗಳು ಮತ್ತು ಪಿಚ್ ಸೆಷನ್‌ಗಳ ಮೂಲಕ ಪ್ರಮುಖ ವಲಯಗಳಲ್ಲಿ ಹೊಸ ಆವಿಷ್ಕಾರ ಸ್ಥಾಪಿಸುವ ಅಗತ್ಯವನ್ನು  ಅವರು ಗಮನಿಸಿದರು. ಅಲ್ಲದೇ ಜೈವಿಕ ತಂತ್ರಜ್ಞಾನ (biotechnology), ಸುಧಾರಿತ ವಸ್ತುಗಳು ಮತ್ತು ಅಪರೂಪದ ಭೂಮಿಯ ಸಂಸ್ಕರಣಾ ತಂತ್ರಜ್ಞಾನದ ಕ್ಷೇತ್ರಗಳನ್ನು ಭವಿಷ್ಯದ ಸಹಕಾರಕ್ಕಾಗಿ  ಅವರು ಗುರುತಿಸಿದ್ದಾರೆ.

ಐಸಿಇಟಿ  ಅಡಿಯಲ್ಲಿ ಬರುವ ಕಾರ್ಯವಿಧಾನದ ಮೂಲಕ  ಅಮೆರಿಕಾ (U.S) ಹಾಗೂ ಭಾರತ (India), ಎರಡೂ ದೇಶಗಳಲ್ಲಿ ನಿಯಂತ್ರಕ ಅಡೆತಡೆಗಳು ವ್ಯಾಪಾರ ಮತ್ತು ಪ್ರತಿಭೆ ಚಲನಶೀಲತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಕೆಲಸ ಮಾಡುವ ತಮ್ಮ ಬದ್ಧತೆಯನ್ನು ಒತ್ತಿ ಹೇಳಿದವು.  ಜನವರಿ 30 ರಂದು ಯುಎಸ್-ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್  ಆಯೋಜಿಸಿದ್ದ ದುಂಡುಮೇಜಿನ  ಸಭೆಯ ನಂತರ ಈ ಬೆಳವಣಿಗೆ ಆಗಿದೆ. ಯುಎಸ್ ವಾಣಿಜ್ಯ ಕಾರ್ಯದರ್ಶಿ ಗಿನಾ ರೈಮೊಂಡೋ (Gina Raimondo), ಯುಎಸ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ (Jake Sullivan) ಮತ್ತು ಭಾರತೀಯ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ (Ajit Doval) ಮತ್ತು ಅಮೆರಿಕಾ ಹಾಗೂ ಭಾರತೀಯ ಹಿರಿಯ ಅಧಿಕಾರಿಗಳೊಂದಿಗೆ 40 ಕ್ಕೂ ಹೆಚ್ಚು ಜನರನ್ನು ಈ ಸಭೆ ಒಟ್ಟುಗೂಡಿಸಿತು. 

Follow Us:
Download App:
  • android
  • ios