ಅಂಬಾನಿ, ಅದಾನಿ ಬಗ್ಗೆ ರಾಹುಲ್ ಗಾಂಧಿ ಮೌನ ಏಕೆ?: ಮೋದಿ
ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಕಾಂಗ್ರೆಸ್ ನಾಯಕರು ಮೋದಿ ಜೊತೆಗಿನ ಅಂಬಾನಿ ಮತ್ತು ಅದಾನಿ ಸ್ನೇಹ ಹೋಲಿಸಿ ಭಾರೀ ಟೀಕೆ ಮಾಡುತ್ತಲೇ ಬಂದಿದ್ದರು. ಆದರೆ ಈ ಬಗ್ಗೆ ಎಂದಿಗೂ ಪ್ರತಿಕ್ರಿಯೆ ನೀಡದ ಮೋದಿ, ಇದೀಗ ‘ಉಭಯ ಉದ್ಯಮಿಗಳ ಜೊತೆ ರಾಹುಲ್ ಡೀಲ್ ಕುದುರಿಸಿದ್ದಾರಾ?‘ ಎಂದು ಪ್ರಶ್ನಿಸಿರುವುದು ಅಚ್ಚರಿಗೆ ಕಾರಣವಾಗಿದೆ.
ಹೈದರಾಬಾದ್(ಮೇ.09): ‘ಕಳೆದ 5 ವರ್ಷಗಳಿಂದ ಸತತವಾಗಿ ಅಂಬಾನಿ-ಅದಾನಿ ವಿರುದ್ಧ ದಾಳಿ ನಡೆಸುತ್ತಿದ್ದ ಶೆಹಜಾದಾ (ರಾಹುಲ್ ಗಾಂಧಿ), ಇದೀಗ ಅವರ ಮೇಲಿನ ದಾಳಿ ದಿಢೀರ್ ನಿಲ್ಲಿಸಿದ್ದು ಏಕೆ ಎಂಬ ಬಗ್ಗೆ ಕಾಂಗ್ರೆಸ್ ಸ್ಪಷ್ಟಪಡಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಒತ್ತಾಯಿಸಿದ್ದಾರೆ. ಅಲ್ಲದೇ, ‘ಈ ಕುರಿತು ಡೀಲ್ ಏನಾದರೂ ಕುದುರಿದೆಯಾ?’ ಎಂದು ಪ್ರಶ್ನಿಸಿದ್ದಾರೆ.
ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಕಾಂಗ್ರೆಸ್ ನಾಯಕರು ಮೋದಿ ಜೊತೆಗಿನ ಅಂಬಾನಿ ಮತ್ತು ಅದಾನಿ ಸ್ನೇಹ ಹೋಲಿಸಿ ಭಾರೀ ಟೀಕೆ ಮಾಡುತ್ತಲೇ ಬಂದಿದ್ದರು. ಆದರೆ ಈ ಬಗ್ಗೆ ಎಂದಿಗೂ ಪ್ರತಿಕ್ರಿಯೆ ನೀಡದ ಮೋದಿ, ಇದೀಗ ‘ಉಭಯ ಉದ್ಯಮಿಗಳ ಜೊತೆ ರಾಹುಲ್ ಡೀಲ್ ಕುದುರಿಸಿದ್ದಾರಾ?‘ ಎಂದು ಪ್ರಶ್ನಿಸಿರುವುದು ಅಚ್ಚರಿಗೆ ಕಾರಣವಾಗಿದೆ.
ವಿವಾದದ ಬೆನ್ನಲ್ಲೇ ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಯಾಮ್ ಪಿತ್ರೋಡಾ ರಾಜೀನಾಮೆ
ಡೀಲ್ ಏನು?:
ತೆಲಂಗಾಣದ ವೇಮುಲವಾಡದಲ್ಲಿ ಬುಧವಾರ ಬಿಜೆಪಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ‘ಯಾವಾಗ ಚುನಾವಣೆ ಆರಂಭವಾಯಿತೋ ಅಂದಿನಿಂದಲೂ ಇವರು (ಕಾಂಗ್ರೆಸ್) ಅಂಬಾನಿ-ಅದಾನಿ ನಿಂದನೆ ನಿಲ್ಲಿಸಿದ್ದಾರೆ. ಹೀಗಾಗಿ, ಅಂಬಾನಿ- ಅದಾನಿಯಿಂದ ಎಷ್ಟು ಎತ್ತಲಾಯಿತು ಎಂಬುದರ ಬಗ್ಗೆ ಶೆಹಜಾದಾ ಘೋಷಣೆ ಮಾಡಲಿ ಎಂದು ನಾನು ತೆಲಂಗಾಣದ ಈ ನೆಲದಿಂದ ಪ್ರಶ್ನಿಸಲು ಬಯಸುತ್ತೇನೆ. ಟೆಂಪೋ ಲೋಡ್ ತುಂಬಾ ನೋಟು ಕಾಂಗ್ರೆಸ್‌ಗೆ ಸೇರಿತೇ? ರಾತ್ರೋರಾತ್ರಿ ಅಂಬಾನಿ- ಅದಾನಿ ನಿಂದನೆ ನಿಲ್ಲಿಸಲು ಅದ್ಯಾವ ಯಾವ ಒಪ್ಪಂದಕ್ಕೆ ಬರಲಾಗಿದೆ?’ ಎಂದು ಮೋದಿ ಕಾಂಗ್ರೆಸ್ ಮತ್ತು ರಾಹುಲ್‌ಗೆ ಗಂಭೀರ ಪ್ರಶ್ನೆಗಳನ್ನು ಎಸೆದಿದರು.
‘ನಿಜವಾಗಿಯೂ ಇಲ್ಲೇನೋ ಅನುಮಾನಾಸ್ಪದವಾದುದು ನಡೆದಿದೆ. 5 ವರ್ಷಗಳಿಂದ ಅಂಬಾನಿ-ಅದಾನಿ ಟೀಕಿಸಿದವರು ರಾತ್ರೋರಾತ್ರಿ ಅದನ್ನು ನಿಲ್ಲಿಸುತ್ತೀರಿ ಎಂದಾದಲ್ಲಿ ನೀವು (ಕಾಂಗ್ರೆಸ್) ಟೆಂಪೋ ಲೋಡ್ ತುಂಬಾ ಕದ್ದ ಮಾಲು ಸ್ವೀಕರಿಸಿರಬೇಕು. ಈ ಬಗ್ಗೆ ನೀವು ದೇಶ ಜನರಿಗೆ ಉತ್ತರಿಸಲೇಬೇಕು’ ಎಂದು ಮೋದಿ ಒತ್ತಾಯಿಸಿದರು.