Asianet Suvarna News Asianet Suvarna News

ಆರೋಗ್ಯ ಕ್ಷೇತ್ರದ ಬಹುದೊಡ್ಡ ಒಪ್ಪಂದಕ್ಕೆ ಭಾರತ ಸಹಿ

ಸಚಿವ ರಾಜೀವ್ ಚಂದ್ರಶೇಖರ್ ಸಮ್ಮುಖದಲ್ಲಿ ಸಿಮೆನ್ಸ್ ಹೆಲ್ತಿನೀಯರ್ಸ್ ಹಾಗೂ ಸೊಸೈಟಿ ಫಾರ್ ಅಪ್ಲೈಡ್ ಮೈಕ್ರೋವೇವ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಆ್ಯಂಡ್ ರಿಸರ್ಚ್ ( ಸಮೀರ್) ನಡುವೆ ಒಡಂಬಡಿಕೆಗೆ ಸಹಿ. 
 

Siemens Healthineers and Sameer signs Indias largest contract in the health sector san
Author
First Published Jan 27, 2023, 5:32 PM IST

ಬೆಂಗಳೂರು (ಜ.27): ಆರೋಗ್ಯ ಕ್ಷೇತ್ರದಲ್ಲಿ ಭಾರತ ತನ್ನ ಈವರೆಗಿನ ಅತೀದೊಡ್ಡ ಒಪ್ಪಂದಕ್ಕೆ ಸಹಿ ಹಾಕಿದೆ. ಕೇಂದ್ರ ಸಚಿವ, ರಾಜೀವ್ ಚಂದ್ರಶೇಖರ್ ಸಮ್ಮುಖದಲ್ಲಿ ಆರೋಗ್ಯ ಕ್ಷೇತ್ರದ ದಿಗ್ಗಜ ಸಂಸ್ಥೆಗಳು ಸಹಿ ಹಾಕಿವೆ. ಇದು ಭಾರತದ ಆರೋಗ್ಯ ಕ್ಷೇತ್ರದಲ್ಲಿ ಈವರೆಗಿನ ಬಹುದೊಡ್ಡ ಒಪ್ಪಂದ ಎಂದು ಹೇಳಲಾಗಿದೆ. ಸಿಮೇನ್ಸ್  ಹಲ್ತಿನಿಯಸ್ ಮತ್ತು ಸಮೀರ್  ಹೆಲ್ತ್ ಕೇರ್ ಟೆಕ್ನಾಲಜಿಸ್ ಸಂಸ್ಥೆಗಳ ನಡುವೆ ಒಪ್ಪಂದ ಏರ್ಪಟ್ಟಿದೆ. ಸಚಿವ ರಾಜೀವ್ ಚಂದ್ರಶೇಖರ್ ಸಮ್ಮುಖದಲ್ಲಿ ಸಿಮೆನ್ಸ್ ಹೆಲ್ತಿನೀಯರ್ಸ್ ಹಾಗೂ ಸೊಸೈಟಿ ಫಾರ್ ಅಪ್ಲೈಡ್ ಮೈಕ್ರೋವೇವ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಆ್ಯಂಡ್ ರಿಸರ್ಚ್ ( ಸಮೀರ್) ನಡುವೆ ಒಡಂಬಡಿಕೆಗೆ ಸಹಿ ಹಾಕಲಾಗಿದೆ. 'ರಾಷ್ಟ್ರದಲ್ಲಿ ಆರೋಗ್ಯ ಕ್ಷೇತ್ರದ ಸಮಗ್ರ ಬೆಳವಣಿಗೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಈ ಕ್ಷೇತ್ರದಲ್ಲಿ ಸಂಶೋಧನೆ, ಹೊಸ ಆವಿಷ್ಕಾರದ ವಿಚಾರದಲ್ಲಿ ಹೆಚ್ಚು ಒತ್ತು ನೀಡಲಾಗುತ್ತಿದೆ.  ಎರಡೂ ಕಂಪನಿಗಳ ತಜ್ಞರು ಸಮನ್ವಯದಿಂದ ದೇಶದಲ್ಲಿ ಎಂಆರ್‌ಐ , ಲೈನರ್ ಅಸಿಲಿರೆಟರ್ಸ್ ತಂತ್ರಜ್ಞಾನದ ಹಂಚಿಕೆ, ಆಧುನಿಕ  ಉತ್ಪನ್ನಗಳ ಉತ್ಪಾದನೆಯಲ್ಲಿ ತೊಡಗಲಿವೆ. ಸರ್ಕಾರದ ವತಿಯಿಂದ ಅತೀ ಕಡಿಮೆ ದರದಲ್ಲಿ ಎಂಆರ್‌ಐ ತಂತ್ರಜ್ಞಾನ ಸಿದ್ಧವಾಗುವಂತೆ ಹಾಗೂ ಜನತೆ ಕಡಿಮೆ ದರದಲ್ಲಿ ಡೈಗ್ನೋಸ್ಟಿಕ್ಸ್‌ ಮಾಡಿಕೊಳ್ಳಲು ಅನುಕೂಲವಾಗುವಂಥ ವ್ಯವಸ್ಥೆ ರೂಪಿಸುವುದು ಈ ಒಡಂಬಡಿಕೆ ಒಳಗೊಂಡಿದೆ' ಎಂದು ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ.

ಮೊಬೈಲ್‌ ಡೇಟಾ ಶುಲ್ಕ ಹೆಚ್ಚಳ ಕಳ​ವ​ಳ​ಕಾ​ರಿ​: ರಾಜೀವ್‌ ಚಂದ್ರಶೇಖರ್‌

'2015 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಡಿಜಿಟಲ್ ಇಂಡಿಯಾ ಘೋಷಣೆ ಬಳಿಕ ದೇಶದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಸೀಮನ್ಸ್‌ ಹಾಗೂ ಸಮೀರ್ ನಡುವಣ ತಂತ್ರಜ್ಞಾನ ವಿಚಾರದಲ್ಲಿ ಅತ್ಯಂತ ಮಹತ್ವದ ಮೈಲಿಗಲ್ಲಾಗಿದೆ. ಕೋವಿಡ್  ಬಳಿಕ ಇದೊಂದು ಆರೋಗ್ಯ ಕ್ಷೇತ್ರದ ಎಲೆಕ್ಟ್ರಾನಿಕ್ ವಿಭಾಗದಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗಲಿದೆ. ಸರ್ಕಾರ ಸ್ಟಾರ್ಟ್ ಅಪ್, ನವ ಆವಿಷ್ಕಾರದ ಸಕಾರಾತ್ಮಕ ವಾತಾವರಣ ಸೃಷ್ಟಿಗೆ ಹೆಚ್ಚು ಆದ್ಯತೆ ‌ನೀಡಿದೆ. ಕ್ಯಾನ್ಸರ್ ಗೆ ಆಧುನಿಕ ತಂತ್ರಜ್ಞಾನದಲ್ಲಿ ಚಿಕಿತ್ಸೆ ದೊರೆಯಲಿದೆ' ಎಂದು ಸೀಮನ್ಸ್‌ ಕಾರ್ಯನಿರ್ವಾಹಕ ನಿರ್ದೇಶಕ ದಿಲೀಪ್ ಮಾನ್ಸೂಲಿ ಹೇಳಿದರು.  ಸಮೀರ್ ಆಡಳಿತ ಮಂಡಳಿಯ ನಿರ್ದೇಶಕ ಡಾ.ಪಿ. ಹನುಮಂತರಾವ್ ಉಪಸ್ಥಿತರಿದ್ದರು.

Follow Us:
Download App:
  • android
  • ios