Asianet Suvarna News Asianet Suvarna News

ಸಂವಿಧಾನ ಉಲ್ಲಂಘನೆ: ಅಧಿಕಾರದಿಂದ ಥೈಲ್ಯಾಂಡ್ ಪ್ರಧಾನಿ ಶ್ರೆತ್ತಾ ಥವಿಸಿನ್‌ ಕಿತ್ತೆಸೆದ ನ್ಯಾಯಾಲಯ

ಬಾಂಗ್ಲಾದಲ್ಲಿ ಪ್ರಧಾನಿ ಶೇಕ್ ಹಸೀನಾ  ಹಠಾತ್ ರಾಜೀನಾಮೆ ನೀಡಿ 2 ವಾರ ಕಳೆಯುವ ಮೊದಲೇ ಮತ್ತೊಂದು ಏಷ್ಯಾ ದೇಶ ಥೈಲ್ಯಾಂಡ್‌ನಲ್ಲಿಯೂ ಪ್ರಧಾನಿಯನ್ನೇ ಅಧಿಕಾರದಿಂದ ಕಿತ್ತು ಹಾಕಲಾಗಿದೆ.

After the Bangladesh PM Sheikh Hasina resign now asias another country Thailands pm Srettha Thavisin also fired from power akb
Author
First Published Aug 14, 2024, 3:00 PM IST | Last Updated Aug 14, 2024, 3:24 PM IST

ಬ್ಯಾಂಕಾಕ್: ಬಾಂಗ್ಲಾದಲ್ಲಿ ಪ್ರಧಾನಿ ಶೇಕ್ ಹಸೀನಾ  ಹಠಾಬಾಂಗ್ಲಾದಲ್ಲಿ ಪ್ರಧಾನಿ ಶೇಕ್ ಹಸೀನಾ  ಹಠಾತ್ ರಾಜೀನಾಮೆ ನೀಡಿ 2 ವಾರ ಕಳೆಯುವ ಮೊದಲೇ ಮತ್ತೊಂದು ಏಷ್ಯಾ ದೇಶ ಥೈಲ್ಯಾಂಡ್‌ನಲ್ಲಿಯೂ ಪ್ರಧಾನಿಯನ್ನೇ ಅಧಿಕಾರದಿಂದ ಕಿತ್ತು ಹಾಕಲಾಗಿದೆ.ತ್ ರಾಜೀನಾಮೆ ನೀಡಿ 2 ವಾರ ಕಳೆಯುವ ಮೊದಲೇ ಮತ್ತೊಂದು ಏಷ್ಯಾ ದೇಶ ಥೈಲ್ಯಾಂಡ್‌ನಲ್ಲಿಯೂ ಪ್ರಧಾನಿಯನ್ನೇ ಅಧಿಕಾರದಿಂದ ಕಿತ್ತು ಹಾಕಲಾಗಿದೆ.  ಮಹತ್ವದ ಬೆಳವಣಿಗೆಯೊಂದರಲ್ಲಿ  ಥೈಲ್ಯಾಂಡ್ ಪ್ರಧಾನಿ ಶ್ರೆತ್ತಾ ಥಾವಿಸಿನ್ ಅವರನ್ನು ಅಧಿಕಾರದಿಂತ ಕಿತ್ತೊಗೆಯಲಾಗಿದೆ. ಸಂವಿಧಾನಿಕ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಥೈಲ್ಯಾಂಡ್‌ನ ಸಂವಿಧಾನಿಕ ನ್ಯಾಯಾಲಯ ಪ್ರಧಾನಿ ಶ್ರೆತ್ತಾ ಥಾವಿಸಿನ್ ಅವರ ವಿರುದ್ಧ ಮತ ಹಾಕಿ ಅವರನ್ನು ಅಧಿಕಾರದಿಂದ ಕಿತ್ತೆಸೆದಿದೆ. ಪ್ರಧಾನಿ ಶ್ರೆತ್ತಾ ಥಾವಿಸಿನ್ ಅಪರಾಧ ಹಿನ್ನೆಲೆಯೊಳ್ಳ ವ್ಯಕ್ತಿಯೊಬ್ಬರನ್ನು ಸಚಿವ ದರ್ಜೆಯ ಹುದ್ದೆಗೆ ನೇಮಕ ಮಾಡುವ ಮೂಲಕ ಸಂವಿಧಾನದ ನಿಯಮವನ್ನು ಉಲ್ಲಂಘಿಸಲಾಗಿದೆ ಎಂದು ಈ ಕ್ರಮಕೈಗೊಳ್ಳಲಾಗಿದೆ. 

ಥೈಲ್ಯಾಂಡ್‌ನಲ್ಲಿದೆ ಮಿನಿ ಅಯೋಧ್ಯೆ, ರಾಮ ಹೋಗಿರದ ಜಾಗದಲ್ಲಿ ಮಂದಿರ ನಿರ್ಮಾಣವಾಗಿದ್ದು ಹೀಗೆ?

ಮಹತ್ವದ ಬೆಳವಣಿಗೆಯೊಂದರಲ್ಲಿ ಇಂದು ಥೈಲ್ಯಾಂಡ್‌ನ ಸಾಂವಿಧಾನಿಕ ನ್ಯಾಯಾಲಯ ಪ್ರಧಾನಿ ಶ್ರೆತ್ತಾ ಥಾವಿಸಿನ್ ಅವರನ್ನು ಅನರ್ಹಗೊಳಿಸಲು ಮತ ಚಲಾಯಿಸಿತು.  ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಯನ್ನು ಕ್ಯಾಬಿನೆಟ್ ದರ್ಜೆಗೆ ನೇಮಕ ಮಾಡುವ ಮೂಲಕ ಅವರು ನೈತಿಕ ಮಾನದಂಡಗಳನ್ನು ಉಲ್ಲಂಘಿಸಿದ್ದಾರೆ ಎಂದು ತೀರ್ಪು ನೀಡಿದ ಕೋರ್ಟ್ ಅವರನ್ನು ಕೂಡಲೇ ಮತದಾನ ಮಾಡಿ ವಜಾ ಮಾಡಿದೆ. 5-4 ಮತಗಳೊಂದಿಗೆ ಶ್ರತ್ತಾ ಸಚಿವ ಸಂಪುಟದಲ್ಲಿರು ಎಲ್ಲಾ ಸಚಿವ ಸ್ಥಾನಗಳನ್ನು ಜೊತೆಗೆ ವಜಾಗೊಳಿಸಲಾಗಿದೆ. ರಾಜಕೀಯ ಬದಲಾವಣೆಯ ಈ ಸಮಯದಲ್ಲಿ ಉಪಪ್ರಧಾನಿ ಮತ್ತು ವಾಣಿಜ್ಯ ಸಚಿವ ಫುಮ್ತಾಮ್ ವೆಚಯಾಚೈ ಅವರು ಹಂಗಾಮಿ ಪ್ರಧಾನ ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಾರೆ. 

 

ಸಂಸತ್ತಿನ ಕೆಳಮನೆಯು ಕಳೆದ ವರ್ಷದ ಚುನಾವಣೆಗೆ ಮೊದಲು ಪಕ್ಷಗಳಿಂದ ನಾಮನಿರ್ದೇಶನಗೊಂಡ ಅಭ್ಯರ್ಥಿಗಳಲ್ಲಿ ಯಾರನ್ನಾದರು ಹೊಸ ಪ್ರಧಾನ ಮಂತ್ರಿಯನ್ನು ಆಯ್ಕೆ ಮಾಡುವ ನಿರೀಕ್ಷೆಯಿದೆ. ಥೈಲ್ಯಾಂಡ್ ಪ್ರಧಾನಿ ಹುದ್ದೆಗೆ ನಾಮನಿರ್ದೇಶನಗೊಳ್ಳುವವರು  25 ಕ್ಕಿಂತ ಹೆಚ್ಚು ಸಂಸದರ ಬೆಂಬಲವನ್ನು ಪಡೆಯಬೇಕಾಗುತ್ತದೆ. ಥೈಲ್ಯಾಂಡ್‌ನ ಸಾಂವಿಧಾನಿಕ ನ್ಯಾಯಾಲಯದ ಈ ನಿರ್ಧಾರದಿಂದ ಶ್ರೆತ್ತಾ ಥಾವಿಸಿನ್ ಅಧಿಕಾರಕ್ಕೇರಿ ಒಂದು ವರ್ಷ ತುಂಬುವ ಮೊದಲೇ ಹುದ್ದೆಯಿಂದ ಕೆಳಗಿಳಿಯುವಂತಾಗಿದೆ. ರಾಜಕೀಯ ಹಾಗೂ ಆರ್ಥಿಕ ಅಸ್ಥಿರತೆಯನ್ನು ಎದುರಿಸುತ್ತಿರುವ ಥೈಲ್ಯಾಂಡ್‌ನಲ್ಲಿ ಈಗ ಪ್ರಧಾನಿ ವಜಾದಿಂದ ಉಂಟಾಗುವ ರಾಜಕೀಯ ಬೆಳವಣಿಗೆಯಿಂದ ಅರ್ಥ ವ್ಯವಸ್ಥೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. 

ತನ್ನ ಥೈಲ್ಯಾಂಡ್ ಟ್ರಿಪ್ ಬಗ್ಗೆ ಪತ್ನಿಗೆ ಗೊತ್ತಾಗುತ್ತೆ ಅಂತ ಪಾಸ್ಪೋರ್ಟ್ ಪೇಜ್ ಹರಿದ ವ್ಯಕ್ತಿಯ ಬಂಧನ

Latest Videos
Follow Us:
Download App:
  • android
  • ios