ಬಾಲಿವುಡ್​ ದಾಖಲೆಗಳನ್ನು ಮುರಿದ 'ದುರಂಧರ್'​ ಚಿತ್ರವು ಪಾಕಿಸ್ತಾನದಲ್ಲಿ ತಲ್ಲಣ ಸೃಷ್ಟಿಸಿದೆ. ಈ ಚಿತ್ರದಿಂದ ಪ್ರೇರಿತರಾಗಿ, ಅಲ್ಲಿನ ಜನರು ಭಾರತದ 'ರಾ' ಏಜೆಂಟರು ತಮ್ಮ ನಡುವೆಯೇ ಇರಬಹುದೆಂಬ ಭಯದಿಂದ, ಭಿಕ್ಷುಕರನ್ನು ಸಹ ಅನುಮಾನದಿಂದ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ದುರಂಧರ್​ ಪಾರ್ಟ್​ 1 ಮತ್ತು ಪಾರ್ಟ್​- 2 ಬಾಲಿವುಡ್​ನ ಎಲ್ಲಾ ದಾಖಲೆಗಳನ್ನು ಉಡಾಯಿಸಿ ನಂಬರ್​ 1 ಸ್ಥಾನಕ್ಕೆ ಏರಿದೆ. ಇದರಲ್ಲಿ ತೋರಿಸಿರೋದು ಎಲ್ಲವೂ ಸುಳ್ಳು ಎಂದು ಪಾಕಿಸ್ತಾನಿಗಳು ಬಿಡಿ, ನಮ್ಮ ಭಾರತದಲ್ಲಿಯೇ ಒಂದಷ್ಟು ವರ್ಗ ಹೇಳುವ ಮೂಲಕ, ತಮ್ಮನ್ನು ತಾವು ಸಮಾಧಾನ ಪಡಿಸಿಕೊಳ್ಳುತ್ತಿವೆ. ಅಷ್ಟಕ್ಕೂ ಸತ್ಯ ಎಂದಿಗೂ ಕಹಿನೇ ಎನ್ನುವುದು ದುರಂಧರ್​ ಮಾಡಿರುವ ದಾಖಲೆ ಸಾಬೀತು ಮಾಡಿದೆ. ಭಾರತದ ಇತಿಹಾಸದಲ್ಲಿನ ಕೆಲವು ಪುರುಷರನ್ನು ಮಹಾನ್​ ಎಂದು ಬಿಂಬಿಸಿ ಪಠ್ಯ ಪುಸ್ತಕಗಳಲ್ಲಿ ಹಲವಾರು ದಶಕಗಳಿಂದ ಮಕ್ಕಳ ತಲೆಯಲ್ಲಿ ತುಂಬಿ, ಸುಳ್ಳೇ ಸತ್ಯ ಎಂದು ನಂಬಿಕೊಂಡು ಬಂದಿರುವವರಿಗೆ ಈಗ ಭಾರತದ ಇತಿಹಾಸದ ಆ ಕರಾಳ ಮುಖಗಳು, ಮಹಾನ್​ ಪುರುಷರ ಸತ್ಯದ ಅನಾವರಣವೂ ಆಗುತ್ತಿದೆ.

ಬ್ಯಾನ್​ ಆದ್ರೂ ದಾಖಲೆ

ದುರಂಧರ್​ ಸಿನಿಮಾ ಪಾಕಿಸ್ತಾನ ಸೇರಿದಂತೆ ಕೆಲವು ಮುಸ್ಲಿಂ ರಾಷ್ಟ್ರಗಳು ಬ್ಯಾನ್​ ಮಾಡಿದ್ದರೂ, ಪಾಕಿಸ್ತಾನದಲ್ಲಿ ದಾಖಲೆಯ ಪ್ರಮಾಣದಲ್ಲಿ ನಕಲಿ ಪ್ರತಿಗಳು ಸೋರಿಕೆಯಾಗಿವೆ ಎಂದ ಮೇಲೆ ತಮ್ಮ ಹಿಂದಿನವರ ಪಾಪದ ಕೃತ್ಯವನ್ನು ನೋಡಲು ಅದೆಷ್ಟು ಮಂದಿ ಉತ್ಸುಕರಾಗಿದ್ದಾರೆ ಎನ್ನುವುದು ಕಾಣಿಸುತ್ತದೆ. ಭಾರತದಲ್ಲಿಯೂ ಇದರ ವಿರುದ್ಧ ಮಾತನಾಡುವವರೇ ಚಿತ್ರ ಬಿಡುಗಡೆಯಾದ ತಕ್ಷಣ ಎಲ್ಲಕ್ಕಿಂತ ಮೊದಲು ಹೋಗಿ ನೋಡಿ ಕಮೆಂಟ್ಸ್​ ಮಾಡುತ್ತಿದ್ದಾರೆ ಅಲ್ಲವೆ, ಇದೂ ಹಾಗೆನೇ.

ಪಾಕಿಗಳ ನಡುಕ

ಅದೇನೇ ಇರಲಿ. ಪಾಕಿಸ್ತಾನದಲ್ಲಿ, ಭಾರತದ ರಾ ಏಜೆಂಟ್​ಗಳು ಯಾವ ರೀತಿಯಲ್ಲಿ ಇರುತ್ತಿದ್ದರು ಎಂದು ಚಿತ್ರ ತೋರಿಸಿದೆ. ಇದೀಗ ಈ ಚಿತ್ರವನ್ನು ನೋಡಿದ ಬಳಿಕ ಅಲ್ಲಿರುವ ಜನರು ಒಬ್ಬರನ್ನೊಬ್ಬರು ನಂಬದ ಸ್ಥಿತಿ ಎದುರಾಗಿದೆಯಂತೆ. ಅದಕ್ಕೆ ತಕ್ಕಂಥ ವಿಡಿಯೋ ಒಂದು ಸೋಷಿಯಲ್​​ ಮೀಡಿಯಾದಲ್ಲಿ ಸಕತ್​ ವೈರಲ್​ ಆಗುತ್ತಿದೆ.

ಭಿಕ್ಷುಕನ ರೂಪದಲ್ಲಿ

ಇದರಲ್ಲಿ ಭಿಕ್ಷುಕನೊಬ್ಬ ಮಲಗಿದ್ದಾಗ, ಅವನನ್ನು ಎಬ್ಬಿಸಿ ಐಡಿ ಕಾರ್ಡ್​ ಎಲ್ಲಾ ಕೇಳಿದ್ದಾರೆ. ಏಕೆಂದರೆ, ಭಾರತದ ರಾ ಏಜೆಂಟ್​ಗಳು ಭಿಕ್ಷುಕರ ವೇಷದಲ್ಲಿ ಇದ್ದ ಸತ್ಯ ಈಗ ಪಾಕಿಗಳಿಗೆ ಗೊತ್ತಾಗಿ ನಡುಗಿ ಹೋಗಿದ್ದಾರೆ. ಈಗಲೂ ಯಾವ ರೂಪದಲ್ಲಿಯಾದರೂ ಭಾರತದ ರಾ ಏಜೆಂಟ್​ಗಳು ಇರಬಹುದು ಎನ್ನುವ ವಾತಾವರಣ ನಿರ್ಮಾಣವಾಗಿದೆ. ತಮ್ಮವರನ್ನೇ ತಾವು ನಂಬದ ಸ್ಥಿತಿಯನ್ನು ತಂದುಕೊಂಡಿದ್ದಾರೆ ಪಾಕಿಸ್ತಾನಿಗಳು. ಇದರ ವಿಡಿಯೋ ವೈರಲ್​ ಆಗುತ್ತಲೇ ತಮಾಷೆಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.